ರೈಸ್‌ ಪುಡ್ಡಿಂಗ್‌

ಸಾಮಗ್ರಿ : 1 ಲೀ. ಗಟ್ಟಿ ಹಾಲು, ಅರ್ಧ ಕಪ್‌ ನೀರಲ್ಲಿ ನೆನೆದ ಅಕ್ಕಿ ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ಡ್ರೈಫ್ರೂಟ್ಸ್ ಚೂರು, ತುಪ್ಪ, ಏಲಕ್ಕಿಪುಡಿ, ಹಾಲಿನ ಕಸ್ಟರ್ಡ್‌.

ವಿಧಾನ : ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ. ಮಂದ ಉರಿ ಮಾಡಿ, ನೆನೆದ ಅಕ್ಕಿ ಹಾಕಿ ಬೇಯಿಸಿ. ಒಂದು ಬಟ್ಟಲು ಬೆಚ್ಚಗಿನ ಹಾಲಿನಲ್ಲಿ ಕಸ್ಟರ್ಡ್‌ ಹಾಕಿ ಕದಡಿರಿ. ಬೇಯುತ್ತಿರುವ ಅನ್ನದ ಮಿಶ್ರಣಕ್ಕೆ ಈ ಕಸ್ಟರ್ಡ್‌ ಪೇಸ್ಟ್, ಬೆಲ್ಲದ ಪುಡಿ ಹಾಕಿ ತಳ ಹಿಡಿಯದಂತೆ ತುಪ್ಪ ಬೆರೆಸಿ ಕೆದಕುತ್ತಿರಿ. ನಂತರ ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ಏಲಕ್ಕಿ ಸೇರಿಸಿ, ಕೆದಕಿ ಕೆಳಗಿಳಿಸಿ. ಬಿಸಿಯಾಗಿ ಸವಿಯಲು ಕೊಡಿ.

ಹೆಸರುಬೇಳೆ ಹಲ್ವಾ

Moong-dal-Halwa

ಸಾಮಗ್ರಿ : ನೀರಲ್ಲಿ ನೆನೆದ 2 ಕಪ್‌ ಹೆಸರುಬೇಳೆ, ಅಷ್ಟೇ ಕಾದಾರಿದ ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ಡ್ರೈಫ್ರೂಟ್ಸ್, ತುಪ್ಪ, ಏಲಕ್ಕಿ ಪುಡಿ, ಹಾಲಲ್ಲಿ ನೆನೆದ ಕೇಸರಿ.

ವಿಧಾನ : ಮೊದಲು ಬೇಳೆ ಮಿಕ್ಸಿಗೆ ಹಾಕಿ ತರಿತರಿಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈಫ್ರೂಟ್ಸ್ ಹುರಿದು ತೆಗೆಯಿರಿ. ಅದಕ್ಕೆ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕೆದಕಿರಿ. ನಂತರ ಇದಕ್ಕೆ ಹಾಲು, ಬೆಲ್ಲ, ಏಲಕ್ಕಿ ಬೆರೆಸಿ ಸತತ ಕೈಯಾಡಿಸಿ. ನಡುನಡುವೆ ತುಪ್ಪ ಬೆರೆಸುತ್ತಿರಿ. ಮಿಶ್ರಣ ಜಿಡ್ಡು ಬಿಟ್ಟುಕೊಳ್ಳುವವರೆಗೂ ಕೈಯಾಡಿಸಿ. ನಂತರ ಕೇಸರಿ, ಡ್ರೈಫ್ರೂಟ್ಸ್ ಬೆರೆಸಿ ಕೆಳಗಿಳಿಸಿ. ಇನ್ನಷ್ಟು ತುಪ್ಪ ಹಾಕಿ ಸವಿಯಲು ಕೊಡಿ.

ಡ್ರೈಫ್ರೂಟ್ಸ್ ಬರ್ಫಿ

Dry-Fruits-barfi

ಸಾಮಗ್ರಿ : ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರ, ಅಖರೋಟ್‌ (ತಲಾ 1-1 ಕಪ್‌), ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ತುಪ್ಪ, ಏಲಕ್ಕಿಪುಡಿ, ಗಸಗಸೆ, ಕೊಬ್ಬರಿ ತುರಿ, ಹುರಿದ ನೈಲಾನ್‌ಎಳ್ಳು.

ವಿಧಾನ : ಮೊದಲು ಡ್ರೈಫ್ರೂಟ್ಸ್ ಮಿಕ್ಸಿಗೆ ಹಾಕಿ ತರಿತರಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಇದಕ್ಕೆ ಪೇಸ್ಟ್ ಹಾಕಿ, ಬೆಲ್ಲದ ಜೊತೆಗೆ ಮಂದ ಉರಿಯಲ್ಲಿ ಕೆದಕಬೇಕು. ತುಪ್ಪ ಬೆರೆಸುತ್ತಾ ಕೈಯಾಡಿಸಿ. ನಂತರ ಉಳಿದೆಲ್ಲ ಸಾಮಗ್ರಿ ಸೇರಿಸಿ ಮೈಸೂರುಪಾಕಿನ ಹದಕ್ಕೆ ಬಂದಾಗ ಕೆಳಗಿಳಿಸಿ ತುಪ್ಪ ಸವರಿದ ತಟ್ಟೆಗೆ ಹರಡಿ, ಆರಿದ ನಂತರ ಬರ್ಫಿ ಕತ್ತರಿಸಿ, ಸವಿಯಲು ಕೊಡಿ.

ಪನೀರ್‌ ಪಾಯಸ

Rice-Pudding

ಸಾಮಗ್ರಿ : 1 ಲೀ. ಗಟ್ಟಿ ಹಾಲು, 2 ಕಪ್‌ ತುರಿದ ಪನೀರ್‌, ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ದೋಸೆ ಹಿಟ್ಟು, ತುಪ್ಪ, ಡ್ರೈಫ್ರೂಟ್ಸ್, ಏಲಕ್ಕಿಪುಡಿ.

ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಕುದಿಸಿರಿ. ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ದೋಸೆ ಹಿಟ್ಟು ಹಾಕಿ ಕೆದಕಬೇಕು. ಇದನ್ನು ಹಾಲಿಗೆ ಬೆರೆಸಿ ಗಟ್ಟಿ ಆಗಿಸಿ. ಇದಕ್ಕೆ ಪನೀರ್‌ ಬೆರೆಸಿ ಸತತ ಕೈಯಾಡಿಸಿ. ನಂತರ ಏಲಕ್ಕಿ, ಬೆಲ್ಲದ ಪುಡಿ ಹಾಕಿ ಮತ್ತೆ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಿರಿ. 5 ನಿಮಿಷದ ನಂತರ ಡ್ರೈಫ್ರೂಟ್ಸ್ ಬೆರೆಸಿ, ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಸವಿಯರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ