ಸ್ಟೀಮ್ಡ್ ಪರೋಟ

ಸಾಮಗ್ರಿ : 2 ಕಪ್‌ ಗೋದಿಹಿಟ್ಟು, 2 ಈರುಳ್ಳಿ, 1 ಕಪ್‌ ಕಡಲೆಬೇಳೆ, 2-3 ಹಸಿಮೆಣಸು, 2-2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು ಖಾರ ಛೋಲೆ ಮಸಾಲೆ 2 ಸೌಟು ರೀಫೈಂಡ್ ಎಣ್ಣೆ.

ವಿಧಾನ : ಗೋದಿಹಿಟ್ಟು, ಉಪ್ಪು, ನೀರು ಬೆರೆಸಿ ಮೃದುವಾದ ಹಿಟ್ಟು ಕಲಸಿಡಿ. ಇದಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಹಿಂದಿನ ರಾತ್ರಿ ನೆನೆಹಾಕಿದ ಕಡಲೆಬೇಳೆಯನ್ನು ಮಾರನೇ ದಿನ ಕುಕ್ಕರ್‌ನಲ್ಲಿ ಬೇಯಿಸಿ ಆರಲು ಬಿಡಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸಮೇತ ರುಬ್ಬಿಕೊಳ್ಳಿ. ನೆನೆದ ಹಿಟ್ಟಿಗೆ ಇನ್ನಷ್ಟು ತುಪ್ಪ ಬೆರೆಸಿ ಮತ್ತೆ ನಾದಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ ಲಟ್ಟಿಸಿ. ಇದರ ಮಧ್ಯೆ 3-4 ಚಮಚ ರುಬ್ಬಿದ ಮಿಶ್ರಣ ಇರಿಸಿ, ಅದನ್ನು ಪೂರ್ತಿ ಕವರ್‌ ಮಾಡಿ, ತುಪ್ಪ ಸವರಿ, ಹಿಟ್ಟು ಉದುರಿಸಿ, ಮತ್ತೆ ಲಟ್ಟಿಸಿ. ಈ ರೀತಿ ಎಲ್ಲ ಪರೋಟ ತಯಾರಿಸಿಕೊಂಡು, ಕುದಿವ ನೀರಿಗೆ ಹಾಕಿ ಬೇಯಿಸಿ. ನಂತರ ಜೋಪಾನವಾಗಿ ಅವನ್ನು ಹೊರತೆಗೆದು, ಬಟ್ಟೆಯ ಮೇಲೆ ಹರಡಿ ತೇವಾಂಶ ಹಿಂಗಿಸಿ. ನಂತರ ಒಂದೊಂದಾಗಿ ಇವನ್ನು ಹೆಂಚಿಗೆ ಹಾಕಿ, ರೀಫೈಂಡ್‌ ಎಣ್ಣೆ ಬಿಡುತ್ತಾ, ಎರಡೂ ಬದಿ ಬೇಯಿಸಿ. ಬಿಸಿ ಬಿಸಿ ಪರೋಟಾವನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಸೀಮೆಗೆಡ್ಡೆ ಸ್ಪೆಷಲ್

Cookry-10

ಸಾಮಗ್ರಿ : 250 ಗ್ರಾಂ ಸೀಮೆಗೆಡ್ಡೆ, 2-3 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಖಾರ, ಗರಂಮಸಾಲ, ಪುಡಿಮೆಣಸು, ಧನಿಯಾಪುಡಿ ಒಣಶುಂಠಿ ಪುಡಿ, 2 ಚಿಟಕಿ ಅರಿಶಿನ, 1 ಕಪ್‌ ಟೊಮೇಟೊ ಪೇಸ್ಟ್, ಒಗ್ಗರಣೆಗೆ ಸಾಸುವೆ, ಜೀರಿಗೆ, ಲವಂಗ,  ಏಲಕ್ಕಿ ಪಲಾವ್ ಎಲೆ, ಕರಿಯಲು ಎಣ್ಣೆ, ಹೆಚ್ಚಿದ 2 ಈರುಳ್ಳಿ ಬೆಳ್ಳುಳ್ಳಿ.

ವಿಧಾನ : ಮೊದಲು ಸೀಮೆಗೆಡ್ಡೆಯನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ಆರಿದ ಮೇಲೆ ಸಿಪ್ಪೆ ಸುಲಿದು, ಗುಂಡಗೆ ಹೆಚ್ಚಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿಯಬೇಕು. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ಆಮೇಲೆ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಒಂದೊಂದಾಗಿ ಎಲ್ಲಾ ಮಸಾಲೆ, ಉಪ್ಪು ಸೇರಿಸುತ್ತಾ ಕೈಯಾಡಿಸಿ. ಗ್ರೇವಿ ತುಸು ಗಟ್ಟಿ ಎನಿಸಿದರೆ ಅರ್ಧ ಕಪ್‌ ನೀರು ಬೆರೆಸಿ ಕುದಿಸಬೇಕು. ಕೊನೆಯಲ್ಲಿ ಕರಿದ ಸೀಮೆಗೆಡ್ಡೆ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಇದನ್ನು ಬಿಸಿ ಬಿಸಿಯಾಗಿ ಪರೋಟ ಜೊತೆ ಸವಿಯಲು ಕೊಡಿ.

ಪನೀರ್‌ ಬಟಾಣಿ ಟೋಸ್ಟ್

Cookry-3 - Copy

ಸಾಮಗ್ರಿ : 5-6 ಬ್ರೆಡ್‌ ಸ್ಲೈಸ್‌, ಅರ್ಧ ಕಪ್‌ ಬೆಂದ ಬಟಾಣಿ, 150 ಗ್ರಾಂ ಪನೀರ್‌, 2-3 ಹಸಿ ಮೆಣಸಿನಕಾಯಿ, 2 ಈರುಳ್ಳಿ, ಒಂದಿಷ್ಟು ಹಿಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಗರಂಮಸಾಲ ಚಾಟ್‌ ಮಸಾಲ, 2-3 ಚಮಚ ತುಪ್ಪ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ