ಕ್ರೀಮ್ಡ್ ಪಾಸ್ತಾ ವಿತ್‌ ಬ್ರೋಕ್ಲಿ

ಸಾಮಗ್ರಿ : ಪಾಸ್ತಾ, ಸಣ್ಣಗೆ ಹೆಚ್ಚಿದ ಬ್ರೋಕ್ಲಿ, ಸೋಯಾ ಹಾಲು (ತಲಾ 1-1 ಕಪ್‌), 2 ಚಮಚ ಬೆಣ್ಣೆ, 1 ಚಮಚ ಕಾರ್ನ್‌ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಈರುಳ್ಳಿ ಪೇಸ್ಟ್, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಟೊಮೇಟೊ, ಅಲಂಕರಿಸಲು ಫ್ರೆಶ್‌ ಕ್ರೀಂ.

ವಿಧಾನ : ಮೊದಲು ಬಿಸಿ ನೀರಿಗೆ ಪಾಸ್ತಾ ಹಾಕಿ ಬೇಯಿಸಿ, ನೀರು ಬಸಿದು ಬೇರೆ ಮಾಡಿ. ಅದೇ ನೀರಲ್ಲಿ ಬೇರೆಯಾಗಿ ಬ್ರೋಕ್ಲಿಯನ್ನು ಲಘುವಾಗಿ ಬೇಯಿಸಿ. ಹಿಂದಿನ ರಾತ್ರಿ ಸೋಯಾ ನೆನೆಹಾಕಿ ಬೆಳಗ್ಗೆ ಮಿಕ್ಸಿಗೆ ಹಾಕಿ, ರುಬ್ಬಿಕೊಂಡು ಅದರ ಹಾಲು ಸಿದ್ಧಪಡಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ  ಒಂದಿಷ್ಟು ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ/ಶುಂಠಿ ಪೇಸ್ಟ್, ಟೊಮೇಟೊ, ಉಪ್ಪು, ಮೆಣಸು ಹಾಕಿ ಬಾಡಿಸಿ. ನಂತರ ಹಾಲಲ್ಲಿ  ಕದಡಿದ ಕಾರ್ನ್‌ಫ್ಲೋರ್‌, ಸೋಯಾ ಹಾಲು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ಪಾಸ್ತಾ ಬ್ರೋಕ್ಲಿ ಮಿಶ್ರಗೊಳಿಸಿ. ಕೆಳಗಿಳಿಸಿದ ಮೇಲೆ ಫ್ರೆಶ್‌ ಕ್ರೀಂ ಬೆರೆಸಿ ಬಿಸಿಯಾಗಿ ಸವಿಯಲು ಕೊಡಿ.

ಆರೆಂಜ್‌ ಪುಡ್ಡಿಂಗ್‌

Cookry-10 - Copy

ಸಾಮಗ್ರಿ : 8-10 ಕಿತ್ತಳೆ ಹಣ್ಣು, 1 ಬೆಂದ ಆಲೂಗಡ್ಡೆ, ಅರ್ಧ ಕಪ್‌ ಪುಡಿಸಕ್ಕರೆ, ಒಂದಿಷ್ಟು ಕಿತ್ತಳೆ ಕುಸುಮೆಗಳು, 2 ಚಿಟಕಿ ಆರೆಂಜ್ ಎಸೆನ್ಸ್.

ವಿಧಾನ : ಮೊದಲು ಜೂಸರ್‌ ನೆರವಿನಿಂದ ಕಿತ್ತಳೆ ರಸ ಸಿದ್ಧಪಡಿಸಿ. ಬೆಂದ ಆಲೂ ಸಿಪ್ಪೆ ಸುಲಿದು, ಒಂದಿಷ್ಟೂ ಗಂಟಾಗದಂತೆ ಅದನ್ನು ಮಸೆಯಿರಿ. ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿಕೊಂಡು, ಆಲೂ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಆರೆಂಜ್‌ ಜೂಸ್‌ ಬೆರೆಸಿ, ಸತತ ಕೈಯಾಡಿಸುತ್ತಾ ಕುದಿಸಬೇಕು. ನಂತರ ಕಿತ್ತಳೆಯ ಕುಸುಮೆಗಳನ್ನೂ ಸೇರಿಸಿ ಸಾಕಷ್ಟು ಗಟ್ಟಿಯಾಗುವವರೆಗೂ ಕೈಯಾಡಿಸಬೇಕು. ಆಮೇಲೆ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. 2-3 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ. ಹಿಂದಿನ ರಾತ್ರಿ ತಯಾರಿಸಿ, ಇಡೀ ರಾತ್ರಿ ಫ್ರಿಜ್‌ನಲ್ಲಿರಿಸಿ ಮಾರನೇ ದಿನ ಸವಿದರೆ ಚೆಂದ!

ಪಾಲಕ್‌ ರೋಲ್ಸ್

Cookry-1 - Copy

ಸಾಮಗ್ರಿ : 1 ಬಟ್ಟಲು ಬೆಂದ ಪಾಲಕ್‌ ಸೊಪ್ಪು, 1 ಕಪ್‌ ಮೈದಾ, 2-2 ಚಮಚ ತುರಿದ ಚೀಸ್‌ ಕರಗಿದ ಬೆಣ್ಣೆ, 2 ಈರುಳ್ಳಿ, 2 ಟೊಮೇಟೊ, 250 ಗ್ರಾಂ ತುರಿದ ಪನೀರ್‌, ಸಣ್ಣಗೆ ಹೆಚ್ಚಿದ 2 ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.

ವಿಧಾನ : ಮೊದಲು ಬೆಂದ ಪಾಲಕ್‌ ಸೊಪ್ಪನ್ನು ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಒಂದು ಬೇಸನ್ನಿಗೆ ಈ ಮಿಶ್ರಣ, ಮೈದಾ, ಕರಗಿದ ತುಸು ಬೆಣ್ಣೆ, ತುರಿದ ಚೀಸ್‌, ಉಪ್ಪು, ಮೆಣಸು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಬೇಕಿಂಗ್‌ ಟಿನ್ನಿಗೆ ಜಿಡ್ಡು ಸವರಿ ಅದರ ಮೇಲೆ ಬಟರ್‌ ಪೇಪರ್‌ ಹರಡಿಕೊಳ್ಳಿ. ಇದರ ಮೇಲೆ ಸಮನಾಗಿ ಬರುವಂತೆ ಪಾಲಕ್‌ ಮಿಶ್ರಣ ಹರಡಿರಿ. ಇದನ್ನು 10 ನಿಮಿಷ 200 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ. ಹೊರತೆಗೆದ ನಂತರ ಇದನ್ನು ತಿರುವಿಹಾಕಿ, ತಕ್ಷಣ ಮೇಲ್ಭಾಗದ ಪೇಪರ್‌ನ್ನು ಎಚ್ಚರಿಕೆಯಿಂದ ತೆಗೆದುಬಿಡಿ. ಇದರ ಮೇಲೆ ಕ್ಯಾಪ್ಸಿಕಂ ಪಲ್ಯ ಹರಡಿಕೊಂಡು ನೀಟಾಗಿ ರೋಲ್ ಮಾಡಿ. ಚಿತ್ರದಲ್ಲಿರುವಂತೆ ಅದನ್ನು ಚಾಕುವಿನಿಂದ ಕತ್ತರಿಸಿ, ಸೌತೆ ಸುರುಳಿಗಳೊಂದಿಗೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ