- ಬೇಗ ಮೊಟ್ಟೆ ಬೇಯಿಸ ಬೇಕಿದ್ದರೆ, ಕುದಿಯುವ ನೀರಿಗೆ 2 ಚಿಟಕಿ ಉಪ್ಪು, 2 ತೊಟ್ಟು ವಿನಿಗರ್‌ ಹಾಕಿ 5 ನಿಮಿಷ ಬೇಯಿಸಿ.  ನಂತರ ಸಿಪ್ಪೆ ತೆಗೆಯಲು ಏರ್‌ಟೈಟ್‌ ಕಂಟೇನರ್‌ಗೆ ಬೆಂದ ಮೊಟ್ಟೆ ಹಾಕಿ ಸ್ವಲ್ಪ ನೀರು ಸೇರಿಸಿ ನಾಲ್ಕೈದು ಬಾರಿ ಕುಲುಕಿದರೆ ಸಿಪ್ಪೆ ಈಝಿಯಾಗಿ ಬರುತ್ತದೆ.

- ಆಲೂ ಚೆನ್ನಾಗಿ ತೊಳೆಯಿರಿ. ಇದನ್ನು ಸಿಪ್ಪೆ ಸಹಿತ ತೆಳು ಬಿಲ್ಲೆಗಳಾಗಿಸಿ. ಒಂದು ಬಟ್ಟಲಿಗೆ ಅರ್ಧ ಕಪ್‌ ಕಡಲೆಹಿಟ್ಟು, ಚಿಟಕಿ ಉಪ್ಪು, ಖಾರ, ಸೋಡ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ, ಈ ಬಿಲ್ಲೆಗಳನ್ನು ಒಂದೊಂದಾಗಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಕಡಿಮೆ ಸಮಯದಲ್ಲಿ ಆಲೂ ಬಜ್ಜಿ ರೆಡಿ!

- ಛೋಲೆ ತಯಾರಿಸುವಾಗ ನೆನೆದ ಕಾಬೂಲ್‌ ಕಡಲೆ ಜೊತೆ ತುಸು ಕಡಲೆಬೇಳೆ, ಓಮ ಹಾಕಿ. ಓಮ ಪಚನಕ್ಕೆ ಸಹಕಾರಿ, ಕಡಲೆಬೇಳೆ ಗ್ರೇವಿ ಗಟ್ಟಿ ಆಗಲು ಸಹಕಾರಿ.

- ಹಬ್ಬದ ದಿನ ಐಟಂ ಜಾಸ್ತಿ ಇರುವಾಗ, ರಾಜ್ಮಾ ನೆನೆಹಾಕಿದ್ದರೆ ಇದನ್ನು ಕುಕ್ಕರ್‌ಗೆ ಹಾಕಿ, ಎಣ್ಣೆ, ಹೆಚ್ಚಿದ ಟೊಮೇಟೊ, ಎಲ್ಲಾ ಡ್ರೈ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನೀರು ಬೆರೆಸಿ ಬೇಯಲು ಇಡಿ. 2 ಸೀಟಿ ಕೂಗಿಸಿ, ಊಟದ ಹೊತ್ತಿಗೆ ಈ ರಾಜ್ಮಾ ಗ್ರೇವಿ ರೆಡಿ!

- ಗ್ರೇವಿ ಗಟ್ಟಿ ಆಗಬೇಕೇ? ಇದಕ್ಕಾಗಿ ಬೇಯಿಸಿ ಮಸೆದ ಆಲೂ, ಒಂದಿಷ್ಟು ಮೊಸರಲ್ಲಿ ಕದಡಿದ ಹುರಿದ ಕಡಲೆಹಿಟ್ಟು, ಗೋಡಂಬಿ ಪೇಸ್ಟ್, ಒಡೆದ ಮೊಟ್ಟೆ ಇತ್ಯಾದಿ ಯಾವುದಾದರೊಂದು ಬಳಸಿಕೊಳ್ಳಿ. 4 ಬೆಂದ ಆಲೂಗಳನ್ನು ಮ್ಯಾಶ್‌ ಮಾಡಿ. ಇದಕ್ಕೆ ಕಿವುಚಿದ 2-3 ಬ್ರೆಡ್‌ ಸ್ಲೈಸ್‌, ಒಂದಿಷ್ಟು ಹೆಚ್ಚಿದ ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಈರುಳ್ಳಿ, ತುಸು ಮೊಸರು ಎಲ್ಲಾ ಸೇರಿಸಿ ಉದ್ದ ಕಟ್‌ಲೆಟ್‌ ತರಹ ಮಾಡಿ ಬೆಳಗ್ಗೆಯೇ ಫ್ರಿಜ್‌ನಲ್ಲಿಟ್ಟುಬಿಡಿ. ಅತಿಥಿಗಳು ಬಂದ ನಂತರ ಇದನ್ನು ಹೊರತೆಗೆದು, ಸ್ವಲ್ಪ ಹೊತ್ತು ರೂಮ್ ಟೆಂಪರೇಚರ್‌ಗೆ ಬರುವಂತೆ ಮಾಡಿ, ಆಮೇಲೆ ಕರಿಯಿರಿ. ಅತಿಥಿಗಳ ಜೊತೆ ಮಾತನಾಡುತ್ತಲೇ ಸಿದ್ಧಪಡಿಸಿ. ಇದಾವಾಗ ರೆಡಿಯಾಯ್ತು ಎಂದು ಅವರು ಬೆರಗಾಗುತ್ತಾರೆ.

- ಪರೋಟ ಸ್ಟಫಿಂಗ್‌ ತುಸು ನೀರಾಗಿದ್ದರೆ ಅದಕ್ಕೆ ತುಸು ಮೈದಾ, ಉಪ್ಪು, ವಾಂಗಿಭಾತ್‌ ಮಸಾಲೆ ಸೇರಿಸಿ. ಪರೋಟಕ್ಕೆ ಹದ ಸರಿ ಹೋಗುತ್ತದೆ.

- ಚಪಾತಿಗೆ ಹಿಟ್ಟು ಕಲಸುವಾಗ 1 ಬಟ್ಟಲು ಹಿಟ್ಟಿಗೆ, ಅರ್ಧ ಬಟ್ಟಲು ನೀರಿನಂತೆ ಲೆಕ್ಕವಿಟ್ಟು ಕಲಸಿ. ಚಿಟಕಿ ಉಪ್ಪು ಸೇರಿಸಿ. ನೀರು ಬೆಚ್ಚಗಿದ್ದರೆ ಉತ್ತಮ.

- ಬ್ರೋಕನ್‌ ವೀಟ್‌, ಇತರೆ ಕಾಳಿನ ನುಚ್ಚು, ರವೆ ಇತ್ಯಾದಿಗಳನ್ನು ಮೊದಲೇ ಚೆನ್ನಾಗಿ ಹುರಿದಿಡಿ. ಆಗ ತಕ್ಷಣ ಉಪಯೋಗಿಸಿಕೊಳ್ಳಲು ಅನುಕೂಲಕರ.

- ಮಾಡಿದ ವ್ಯಂಜನ ಸರ್ವಿಂಗ್‌ ಬೌಲ್‌ಗೆ ಹಾಕಿಕೊಳ್ಳುವ (ಡಿಶ್‌ಔಟ್‌) ಮುನ್ನ, ಅದನ್ನು ತುಸು ರುಚಿ ನೋಡಿ. ಉಪ್ಪು, ಖಾರ, ಹುಳಿ ಯಾವುದೇ ಕಡಿಮೆ ಆಗಿದ್ದರೂ ಅದನ್ನು ಸರಿಪಡಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ