ಕ್ಷೀರಾನ್ನ

ಸಾಮಗ್ರಿ : 2 ಕಪ್‌ ಅಕ್ಕಿ, 2 ಕಪ್‌ ಸಕ್ಕರೆ, 1 ಲೀ. ಗಟ್ಟಿ ಹಾಲು. ಹಾಲಲ್ಲಿ ನೆನೆಸಿದ 2-3 ಎಸಳು ಕೇಸರಿ, ತುಸು ಏಲಕ್ಕಿ ಪುಡಿ, 1 ಕಪ್‌ ತುಪ್ಪ, 1 ಕಪ್‌ ತೆಂಗಿನಹಾಲು, ದ್ರಾಕಿ, ಗೋಡಂಬಿ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌).

ವಿಧಾನ : ಮೊದಲು ಪ್ರೆಷರ್‌ ಪ್ಯಾನ್‌ನಲ್ಲಿ ತುಸು ತುಪ್ಪ ಬಿಸಿ ಮಾಡಿ ಗೋಡಂಬಿ ದ್ರಾಕ್ಷಿ  ಹುರಿದು ತೆಗೆಯಿರಿ. ಇದಕ್ಕೆ ಅಕ್ಕಿ ಹಾಕಿ 2 ನಿಮಿಷ ಘಮ್ಮೆನ್ನುವಂತೆ ಕೆದಕಬೇಕು. ಪಕ್ಕದ ಒಲೆಯಲ್ಲಿ ಹಾಲು ಕಾಯಿಸಿ ಅರ್ಧದಷ್ಟು ಹಿಂಗುವಂತೆ ಕುದಿಸಿ ಗಟ್ಟಿ ಮಾಡಿ. ಈಗ ಅಕ್ಕಿಗೆ ಸಕ್ಕರೆ, ಕುದಿಸಿದ ಹಾಲು, ತೆಂಗಿನ ಹಾಲು, ಕೇಸರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಬೆರೆಸಿ, 2 ಸೀಟಿ ಬರುವಂತೆ ಬೇಯಿಸಿ ಆಮೇಲೆ ವೆಯ್ಟ್ ತೆಗೆದ ನಂತರ ದ್ರಾಕ್ಷಿ, ಗೋಡಂಬಿ, ಉಳಿದ ತುಪ್ಪ ಚೆನ್ನಾಗಿ ಬೆರೆಸಿ ಸರ್ವಿಂಗ್‌ ಪ್ಲೇಟ್‌ಗೆ ಹಾಕಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ರೈಸ್ಕ್ರಾಕರ್ಸ್

ಸಾಮಗ್ರಿ : 2 ಬಟ್ಟಲು ಅನ್ನ, ಅರ್ಧ ಕಪ್‌ಹುರಿದು ತರಿ ಮಾಡಿದ ಕಡಲೆಬೀಜ, 2-3 ಹಸಿಮೆಣಸು. 1-2 ಬೆಂದ ಆಲೂ, 2 ಚಮಚ ಆರಾರೂಟ್‌, 2 ಚಿಟಕಿ ಸೋಡ, ಒಂದಿಷ್ಟು  ಹೆಚ್ಚಿದ ಕರಿಬೇವು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಕರಿಯಲು ಎಣ್ಣೆ.

ವಿಧಾನ : ಮಸೆದ ಆಲೂವಿಗೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಚಿತ್ರದಲ್ಲಿರುವಂತೆ ಮಿಶ್ರಣಕ್ಕೆ ಕ್ರಾಕರ್ಸ್‌ ತರಹ ಆಕಾರ ನೀಡಿ. ಆರಾರೋಟ್‌ಗೆ ತುಸು ನೀರು ಬೆರೆಸಿ ಅದರಲ್ಲಿ ಇದನ್ನು ಒಂದೊಂದಾಗಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಪೌಷ್ಟಿಕ ಸೌತೆ ಇಡ್ಲಿ

ಸಾಮಗ್ರಿ : 3 ಕಪ್‌ ಕುಸುಬಲಕ್ಕಿ, 2 ಕಪ್‌ ಉದ್ದಿನಬೇಳೆ, 1 ದೊಡ್ಡ ಎಳೇ ಸೌತೇಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಹಾಲಲ್ಲಿ ನೆನೆಸಿದ ಒಂದಿಷ್ಟು ಬಾದಾಮಿ, ತುಸು ಎಣ್ಣೆ.

ವಿಧಾನ : 2-3 ತಾಸು ಅಕ್ಕಿ, ಬೇಳೆ, ಬೇರೆಯಾಗಿ ನೆನೆಹಾಕಿ. ನಂತರ ರುಬ್ಬಿಕೊಂಡು ಚಿಟಕಿ ಸೋಡ, ಮೆಂತ್ಯಪುಡಿ ಹಾಕಿ ಒಟ್ಟಿಗೆ ಬೆರೆಸಿಡಿ. ಇದಕ್ಕೆ ಸಿಪ್ಪೆ ಹೆರೆದು ನೀಟಾಗಿ ತುರಿದ ಸೌತೆ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇಡೀ ರಾತ್ರಿ ನೆನೆಯಲು ಬಿಡಿ. ಹಾಲಲ್ಲಿ ಬಾದಾಮಿ ನೆನೆಸಿಡಿ. ಮಾರನೇ ದಿನ ಎಂದಿನಂತೆ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, 1-1 ಸೌಟು ಹಿಟ್ಟು ತುಂಬಿಸಿ, ಮೇಲೆ 1-1 ಬಾದಾಮಿ ಸಿಗಿಸಿ, ಹಬೆಯಲ್ಲಿ ಹದನಾಗಿ ಬೇಯಿಸಿ. ಬಿಸಿ ಬಿಸಿಯಾದ ಪೌಷ್ಟಿಕ ಸೌತೆ ಇಡ್ಲಿಗೆ ತುಪ್ಪ ಹಾಕಿ, ಕಾಯಿಚಟ್ನಿ ಅಥವಾ ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ