ಆಲೂ ಸಬ್ಬಕ್ಕಿಯ ಕ್ರೋಕ್ಯೂಟೀಸ್

ಸಾಮಗ್ರಿ : 250 ಗ್ರಾಂ ಆಲೂಗಡ್ಡೆ, 100 ಗ್ರಾಂ ಸಬ್ಬಕ್ಕಿ, ಅರ್ಧ ಚಮಚ ಜೀರಿಗೆ, 2 ಚಮಚ ಹೆಚ್ಚಿದ ಶುಂಠಿ, 1 ದೊಡ್ಡ ಚಮಚ ಹೆಚ್ಚಿದ ಹಸಿಮೆಣಸು, 2-3 ಚಮಚ ಕಾರ್ನ್‌ಫ್ಲೋರ್‌, 1 ಕಪ್‌ ಬ್ರೆಡ್‌ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ.

ವಿಧಾನ : ಹಿಂದಿನ ರಾತ್ರಿ ಸಬ್ಬಕ್ಕಿ ನೆನೆಹಾಕಿಡಿ. ಮಾರನೆ ಬೆಳಗ್ಗೆ ಇದು ಮೃದುವಾಗುವಂತೆ ಬೇಯಿಸಿ. ಇದನ್ನು ಸೋಸಿಕೊಂಡು ಸಬ್ಬಕ್ಕಿ ಬೇರ್ಪಡಿಸಿ. ಆಲೂ ಶುಚಿಗೊಳಿಸಿ, ಒರೆಸಿ, ಬೇಕ್‌ ಮಾಡಿ. ಇದರ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಇದಕ್ಕೆ ಉಪ್ಪು, ಖಾರ, ಮಸಾಲೆ, ಹೆಚ್ಚಿದ ಪದಾರ್ಥ, ಬೆಂದ ಸಬ್ಬಕ್ಕಿ ಎಲ್ಲಾ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಇದರ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ಮಧ್ಯದಲ್ಲಿ ರಂಧ್ರ ಮಾಡಿ ತುಸು ಚಟ್ನಿ ತುಂಬಿಸಿ ಅದನ್ನು ಚಪ್ಪಟೆಗೊಳಿಸಿ. ಕಾರ್ನ್‌ಫ್ಲೋರ್‌ಗೆ ಚಿಟಕಿ ಉಪ್ಪು ಬೆರೆಸಿ ಬೋಂಡ ಹದಕ್ಕೆ ನೀರು ಬೆರೆಸಿ ಹಿಟ್ಟು ಕಲಸಿ. ಅದರಲ್ಲಿ ಚಪ್ಪಟೆ ಆಕಾರ ಅದ್ದಿ, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ  ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಕಾಯಿ ಚಟ್ನಿ, ಸಲಾಡ್‌ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಡಂಪ್‌ಲಿಂಗ್ಸ್

ಸಾಮಗ್ರಿ : 200 ಗ್ರಾಂ ಕಾರ್ನ್‌, 150 ಗ್ರಾಂ ಬದನೆ, 150 ಗ್ರಾಂ ಹೆಸರುಕಾಳು, 1 ಈರುಳ್ಳಿ, 2 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು. 2 ಚಿಟಕಿ ಜೀರಿಗೆ ಪುಡಿ, 4-5 ಚಮಚ ತುರಿದ ಚೀಸ್‌, ತುಸು ಖಾರ, ಗರಂಮಸಾಲ, ಚಾಟ್‌ಮಸಾಲ, ಉಪ್ಪು, ಕರಿಯಲು ಎಣ್ಣೆ.

ವಿಧಾನ : ಮೊದಲು ಹೆಸರುಕಾಳನ್ನು 2-3 ತಾಸು ನೆನೆಸಿ, ತಾಜಾ ಕಾರ್ನ್‌ ಜೊತೆ ರುಬ್ಬಿಕೊಳ್ಳಿ. ಇದಕ್ಕೆ ಉಳಿದ ಪದಾರ್ಥ ಹೆಚ್ಚಿಹಾಕಿ, ಎಲ್ಲವನ್ನೂ ಸೇರಿಸಿ ಪಕೋಡ ಹಿಟ್ಟಿನಂತೆ ಮಿಶ್ರಣ ಕಲಸಿಡಿ. ಕಾದ ಎಣ್ಣೆಯಲ್ಲಿ ತುಸು ಮಿಶ್ರಣ ಹಾಕುತ್ತಾ ಪಕೋಡ ತರಹ ಕರಿಯಿರಿ.  ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

3 ಇನ್‌ ಒನ್‌

ಸಾಮಗ್ರಿ : ಶುಚಿಗೊಳಿಸಿ ಸಣ್ಣಗೆ ಹೆಚ್ಚಿದ ಹೂಕೋಸು, ಹಸಿರು ಎಲೆಕೋಸು, ಬೀಟ್‌ ರೆಡ್ (ಮೆರೂನ್‌) ಎಲೆಕೋಸು (ತಲಾ 200 ಗ್ರಾಂ), 2 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, 1 ಕಪ್‌ ಕಡಲೆಹಿಟ್ಟು, 1 ಕಪ್‌ ಹುಳಿಮೊಸರು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಹಸಿ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಅರ್ಧ ಚಮಚ ಜೀರಿಗೆ, ಕರಿಯಲು ಎಣ್ಣೆ.

ವಿಧಾನ : ಅಗತ್ಯದ ಎಲ್ಲಾ ಪದಾರ್ಥ ಹೆಚ್ಚಿಕೊಂಡು ಕಡಲೆಹಿಟ್ಟು, ಉಪ್ಪು, ಖಾರ, ಜೀರಿಗೆ ಮೊಸರು ಎಲ್ಲಾ ಸೇರಿಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದರಿಂದ ಚೂರು ಚೂರೇ ಮಿಶ್ರಣ ಹಾಕುತ್ತಾ, ಹೊಂಬಣ್ಣ ಬರುವಂತೆ ಪಕೋಡ ಕರಿಯಿರಿ. ಚಿತ್ರದಲ್ಲಿರುವಂತೆ ಇದನ್ನು ಅಲಂಕರಿಸಿ ಬಿಸಿ ಬಸಿಯಾಗಿ ಪುದೀನಾ ಅಥವಾ ಹುಳಿಸಿಹಿ ಚಟ್ನಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ