ಸೌತೆ ಡಿಲೈಟ್

ಸಾಮಗ್ರಿ : 4 ಸೌತೇಕಾಯಿ, 50 ಗ್ರಾಂ ಪನೀರ್‌, ಅರ್ಧ ಕಪ್‌ ಕೆನೆಮೊಸರು, ಒಂದಿಷ್ಟು ಉದ್ದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಚಾಟ್‌ಮಸಾಲ, ಪುಡಿಮೆಣಸು, ನಿಂಬೆರಸ, ತುರಿದ ಬೀಟ್‌ರೂಟ್‌, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಸೌತೇಕಾಯಿ ಸಿಪ್ಪೆ ಹೆರೆದು, ಉದ್ದಕ್ಕೆ 2 ಭಾಗವಾಗಿಸಿ. ಮಧ್ಯದ ಬೀಜ ಭಾಗ ತೆಗೆದು ದೋಣಿಯಾಕಾರ ಬರುವಂತೆ ಟೊಳ್ಳಾಗಿಸಿ. ಇದಕ್ಕೆ ಬೇರೆಲ್ಲ ಸಾಮಗ್ರಿ ತುಂಬಿಸಿ, ಮೇಲೆ ಉಪ್ಪು, ಮೆಣಸು, ಮಸಾಲ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಸಲಾಡ್‌ ಸರ್ವ್‌ ಮಾಡಿ.

ತೆಂಗಿನ ಇಡ್ಲಿ

ಸಾಮಗ್ರಿ : 2 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ರವೆ, 1 ತೆಂಗಿನಕಾಯಿಯ ತುರಿ, 1 ಸಣ್ಣ ಚಮಚ ಈನೋಸಾಲ್ಟ್, 2 ಚಿಟಕಿ ಅರಿಶಿನ, ತುಸು ಉಪ್ಪು, 1 ಕಪ್‌ ಹುಳಿ ಮೊಸರು, ಒಗ್ಗರಣೆಗಾಗಿ ಎಣ್ಣೆ, ಕರಿಬೇವು, ಸಾಸುವೆ, ಜೀರಿಗೆ, ಉದ್ದಕ್ಕೆ ಸೀಳಿದ 4 ಹಸಿಮೆಣಸು, 1 ಸಣ್ಣ ಚಮಚ ಸಕ್ಕರೆ, 1 ಹೋಳು ನಿಂಬೆರಸ.

ವಿಧಾನ : ಕಡಲೆಹಿಟ್ಟಿಗೆ ಹುರಿದ ರವೆ, ಉಪ್ಪು, ತೆಂಗಿನ ತುರಿ, ಈನೋ, ಮೊಸರು ಬೆರೆಸಿ ಇಡ್ಲಿ ಹಿಟ್ಟು ಕಲಸಿಡಿ. ಇದನ್ನು 1 ಗಂಟೆ ಕಾಲ ಹಾಗೇ ಬಿಡಿ. ನಂತರ ಇಡ್ಲಿ ಸ್ಟ್ಯಾಂಡ್‌ಗೆ ಜಿಡ್ಡು ಸವರಿ ಇದರಿಂದ ಇಡ್ಲಿ ತಯಾರಿಸಿ. ಆಮೇಲೆ ಒಗ್ಗರಣೆ ರೆಡಿ ಮಾಡಿ, ತಟ್ಟೆಗಳಲ್ಲಿ ಜೋಡಿಸಿದ ಇಡ್ಲಿಗಳ ಮೇಲೆ ಇದನ್ನು ಹರಡಿ, ಸಕ್ಕರೆ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಮೇಲೆ ಮತ್ತೆ ತೆಂಗು ಉದುರಿಸಿ ತಕ್ಷಣ ಸವಿಯಲು ಕೊಡಿ.

ಮಲ್ಟಿಗ್ರೇನ್‌ ಪೀನಟ್‌ ಢೋಕ್ಲಾ

ಸಾಮಗ್ರಿ : 2 ಕಪ್‌ ಮಲ್ಟಿಗ್ರೇನ್‌ ಆಟಾ, 1 ಕಪ್‌ ಕಡಲೆಹಿಟ್ಟು, ಅರ್ಧರ್ಧ ಕಪ್‌ ಕಡಲೆಬೀಜದ ತರಿ, ಸೋರೆ ತುರಿ, 2 ಕಪ್‌ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಹಸಿಮೆಣಸಿನ ಪೇಸ್ಟ್, 2 ಚಿಟಕಿ ಅರಿಶಿನ. ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ಉದ್ದಕ್ಕೆ ಹೆಚ್ಚಿದ ಹಸಿಮೆಣಸು, ತುಸು ಈನೋ ಸಾಲ್ಟ್.

ವಿಧಾನ : ಆಟಾ, ಕಡಲೆಹಿಟ್ಟು, ಕಡಲೆಬೀಜ, ಸೋರೆತುರಿ, ಉಪ್ಪು, ಮೊಸರು ಬೆರೆಸಿ ಇಡ್ಲಿ ಹಿಟ್ಟು ಕಲಸಿ 2 ಗಂಟೆ ನೆನೆಯಲು ಬಿಡಿ. ನಂತರ ಇಡ್ಲಿ ಸ್ಚಾಂಡ್‌ಗೆ ಜಿಡ್ಡು ಸವರಿ ಇದರಿಂದ ಇಡ್ಲಿ ತಯಾರಿಸಿ. ಆಮೇಲೆ ಚೌಕಾಕಾರವಾಗಿ ಕತ್ತರಿಸಿ. (ತಟ್ಟೆ ಇಡ್ಲಿ ವಿಧಾನ ಅನುಸರಿಸಿದರೆ ಇನ್ನೂ ಸುಲಭ) ನಂತರ ಒಗ್ಗರಣೆ ರೆಡಿ ಮಾಡಿ, ಈ ಚೌಕ (ಢೋಕ್ಲಾ)ಗಳ ಮೇಲೆ ಹರಡಿ, ಮೇಲೆ ಈನೋ ಉದುರಿಸಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಬ್ರೆಡ್‌ ಸ್ಪ್ರೌಟ್‌ ಉಪ್ಪಿಟ್ಟು

ಸಾಮಗ್ರಿ : 8-10 ಬ್ರೌನ್‌ ಬ್ರೆಡ್‌ ಸ್ಲೈಸ್‌, 1 ಕಪ್‌ ಬೆಂದ ಮೊಳಕೆ ಕಟ್ಟಿದ ಹೆಸರುಕಾಳು, 1 ಈರುಳ್ಳಿ, 2 ಹಸಿಮೆಣಸು, 1 ಟೊಮೇಟೊ, 2 ಚಿಟಿಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ನಿಂಬೆರಸ, ಅರ್ಧ ಕಪ್‌ ಹುರಿದು ತರಿ ಮಾಡಿದ ಕಡಲೆಬೀಜ, ಅರ್ಧ ಸೌಟು ಎಣ್ಣೆ, ಒಂದಿಷ್ಟು ಕೊ.ಸೊಪ್ಪು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ