ಕ್ರೀಂ ಚೀಸ್ಟೋನ್ಸ್

ಸಾಮಗ್ರಿ : 4-5 ಸ್ಪ್ರಿಂಗ್‌ ರೋಲ್ ಶೀಟ್ಸ್, 150 ಗ್ರಾಂ ಪನೀರ್‌, 1-2 ಹೆಚ್ಚಿದ ಈರುಳ್ಳಿ, ಹಸಿಮೆಣಸು, 4-4 ಚಮಚ ಫ್ರೆಶ್‌ ಕ್ರೀಂ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಹೆಚ್ಚಿದ ಪದಾರ್ಥಗಳಿಗೆ ಮಸೆದ ಪನೀರ್‌, ಕ್ರೀಂ, ಉಪ್ಪು, ಮೆಣಸು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಸ್ಪ್ರಿಂಗ್‌ ರೋಲ್ ಶೀಟ್ಸ್ ಗೆ ಈ ಮಿಶ್ರಣವನ್ನು ಸಮಾನವಾಗಿ ತುಂಬಿಕೊಳ್ಳಿ, ಅದನ್ನು ಸುರುಳಿ ಸುತ್ತಿಡಿ. ಇದರ ಮೇಲೆ ಬೆಣ್ಣೆ ಹಚ್ಚಿಡಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 7-8 ನಿಮಿಷ ಹದನಾಗಿ ಬೇಕ್‌ ಮಾಡಿ. ತಿರುವಿ ಹಾಕಿ ಮತ್ತೆ 3-4 ನಿಮಿಷ ಬೇಕ್‌ ಮಾಡಿ ಹೊರತೆಗೆಯಿರಿ. ಚಿತ್ರದಲ್ಲಿರುವಂತೆ ಟೊಮೇಟೊ ಕೆಚಪ್‌/ಸಾಸ್‌ ಜೊತೆ ಅಲಂಕರಿಸಿ ಸವಿಯಲು ಕೊಡಿ.

ಪೊಟೇಟೋ ಚಿಪ್ಸ್ ಚೀಸ್ಬೌಲ್

ಸಾಮಗ್ರಿ : 2 ಪ್ಯಾಕೆಟ್‌ ಆಲೂ ಚಿಪ್ಸ್, 4-4 ಚಮಚ ತುರಿದ ಚೀಸ್‌, ಹೆಚ್ಚಿದ ಈರುಳ್ಳಿ, 2-2 ಚಮಚ ಹೆಚ್ಚಿದ ಕ್ಯಾಪ್ಸಿಕಂ, ಟೊಮೇಟೊ ಸಾಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪಿಜ್ಜಾ ಸೀಸನಿಂಗ್‌.

ವಿಧಾನ : ಚಿತ್ರದಲ್ಲಿರುವಂತೆ ಒಂದು ಟ್ರೇನಲ್ಲಿ ಮೊದಲು ಚಿಪ್ಸ್ ಹರಡಿಕೊಳ್ಳಿ. ಇದರ ಮೇಲೆ ತುರಿದ ಚೀಪ್ಸ್, ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಅದರ ಮೇಲೆ ಉಳಿದ ಪದಾರ್ಥ ಉದುರಿಸಿ, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಚೀಸ್‌ ಕರಗುವವರೆಗೂ ಬೇಕ್ ಮಾಡಿ, ಬಿಸಿಯಾಗಿ ಸವಿಯಲು ಕೊಡಿ.

ಸೋರೆಕಾಯಿ ಸ್ಪೈಸಿ

ಸಾಮಗ್ರಿ : 1 ಸಣ್ಣ ಎಳೆ ಸೋರೆಕಾಯಿ, 1 ಕಪ್‌ ಮೈದಾ, 2-2 ಚಮಚ ಕಾರ್ನ್‌ ಫ್ಲೋರ್‌, ಬ್ರೆಡ್‌ ಕ್ರಂಬ್ಸ್, ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮಿಕ್ಸ್ಡ್ ಹರ್ಬ್ಸ್, ಟೊಮೇಟೊ ಚಿಲೀ ಸಾಸ್‌, ಕರಿಯಲು ಎಣ್ಣೆ.

ವಿಧಾನ : ಸೋರೆಕಾಯಿ ಸಿಪ್ಪೆ ಹೆರೆದು, ಬಿಲ್ಲೆಗಳಾಗಿ ಹೆಚ್ಚಿಡಿ. ಮೈದಾ, ಕಾರ್ನ್‌ ಫ್ಲೋರ್‌, ಉಪ್ಪು, ಖಾರ ಸೇರಿಸಿ, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಲ್ಲಿ ಸೋರೆ ಬಿಲ್ಲೆಗಳನ್ನು ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದನ್ನು ಟ್ರೇನಲ್ಲಿ ಜೋಡಿಸಿಕೊಂಡು ಮೇಲೆ ತುರಿದ ಚೀಸ್‌, ಹರ್ಬ್ಸ್ ಉದುರಿಸಿ. ಚಿತ್ರದಲ್ಲಿರುವಂತೆ ಟೊಮೇಟೊ ಚಿಲೀ ಸಾಸ್‌ ಜೊತೆ ಸವಿಯಲು ಕೊಡಿ.

ಸ್ಪೈಸಿ ಆ್ಯಪಲ್ ಪಕೋಡಾ

ಸಾಮಗ್ರಿ : 1 ಕಪ್‌ ವೋಟ್ಸ್ ಪೌಡರ್‌, 4 ಚಮಚ ಕಾರ್ನ್‌ ಫ್ಲೋರ್‌, 1 ದೊಡ್ಡ ಸೇಬು, 1-2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಗರಂ ಮಸಾಲ, ದಾಲ್ಚಿನ್ನಿ ಪುಡಿ, ಕರಿಯಲು ಎಣ್ಣೆ.

ವಿಧಾನ : ವೋಟ್ಸ್ ಗೆ ಕಾರ್ನ್‌ ಫ್ಲೋರ್‌, ಉಪ್ಪು, ಮೆಣಸು, ದಾಲ್ಚಿನ್ನಿ, ಗರಂ ಮಸಾಲ, ಹೆಚ್ಚಿನ ಹಸಿ ಮೆಣಸು ಎಲ್ಲಾ ಸೇರಿಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಲ್ಲಿ ಹೆಚ್ಚಿದ ಒಂದೊಂದೇ ಸೇಬಿನ ಸ್ಲೈಸ್‌ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಟೊಮೇಟೊ ಕೆಚಪ್‌ ಜೊತೆ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ