ಕ್ಯಾಪ್ಸಿಕಂ ಕರಿಶ್ಮಾ

ಸಾಮಗ್ರಿ : 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 1 ಸಣ್ಣ ತುಂಡು ಶುಂಠಿ, ಒಗ್ಗರಣೆಗೆ ಎಣ್ಣೆ, ಸಾಸುವೆ,ಜೀರಿಗೆ, ಕರಿಬೇವು, 1-1 ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ವಿನಿಗರ್‌, ಟೊಮೇಟೊ ಸಾಸ್‌, ಚೀಸ್‌.

ವಿಧಾನ : ಎಲ್ಲವನ್ನೂ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಬೆಳ್ಳುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಟೊಮೇಟೊ ಸಾಸ್‌, ಉಪ್ಪು, ಮೆಣಸು, ವಿನಿಗರ್‌ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ. ಇಳಿಸುವ ಮುನ್ನ ಕರಗಿದ ಚೀಸ್‌ ಬೆರೆಸಿ, ಬಿಸಿಬಿಸಿಯಾಗಿ ಅನ್ನ, ಚಪಾತಿ, ಪರೋಟಾಗಳೊಂದಿಗೆ ಸವಿಯಿರಿ.

ಓಟ್ಸ್ ದೋಸೆ ಸ್ಟಫ್ಡ್ ಟೋಫು

DSC_8598

ಮೂಲ ಸಾಮಗ್ರಿ : 2 ಕಪ್‌ ಗೋದಿಹಿಟ್ಟು, ಅರ್ಧ ಕಪ್‌ ಓಟ್ಸ್, 1 ಚಮಚ ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ), 2 ಕಪ್‌ ಟೋಫು, 2 ಚಮಚ ಆಲಿವ್ ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ ಆಲಿವ್ಸ್ (ಸೂಪರ್‌ ಬಜಾರ್‌ಗಳಲ್ಲಿ ಲಭ್ಯ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ ಚಾಟ್‌ ಮಸಾಲ.

ಹೂರಣ ಸಾಮಗ್ರಿ : 1 ಕಪ್‌ ಟೋಫು (ಸಣ್ಣಗೆ ಹೆಚ್ಚಿದ್ದು) 2 ಚಮಚ  ಆಲಿವ್ ‌ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಆಲಿವ್ಸ್ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ.

ವಿಧಾನ : ನೆನೆಹಾಕಿದ ಟೋಫುವನ್ನು  ಸಣ್ಣಗೆ ಹೆಚ್ಚಿಡಿ. ಒಂದು ಚಿಕ್ಕ ಬಾಣಲೆಯಲ್ಲಿ ಆಲಿವ್ ‌ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಆಲಿವ್ಸ್, ಟೊಮೇಟೊ ಇತ್ಯಾದಿಗಳನ್ನು ಒಂದೊಂದಾಗಿ ಹಾಕಿ ಬಾಡಿಸಿ ಕೊನೆಯಲ್ಲಿ ಟೋಫು ಹಾಕಿ ಬೇಗ ಬೇಗ ಕೈಯಾಡಿಸಿ. ಉಪ್ಪು ಖಾರ ಸೇರಿಸಿ ಕೆದಕಿ ಕೆಳಗಿಳಿಸಿ. ಇದೀಗ ಹೂರಣ ರೆಡಿ.

ಗೋದಿಹಿಟ್ಟಿಗೆ ಓಟ್ಸ್, ಚಿಟಕಿ ಉಪ್ಪು, ನೀರು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಇದನ್ನು ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಕಾವಲಿಗೆ 1-1 ಸೌಟು ಹಿಟ್ಟು ಹೊಯ್ದು, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಈ ದೋಸೆ ಕೆಳಗಿಳಿಸಿದ ಮೇಲೆ ಅದಕ್ಕೆ 2-3 ಚಮಚ ಟೋಫು ಹೂರಣ ಹರಡಿ, ದೋಸೆ ರೋಲ್ ‌ಮಾಡಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ