ಸ್ಪೆಷಲ್ ಟೇಸ್ಟಿ ಮಿನಿ ಇಡ್ಲಿ

ಮೂಲ ಸಾಮಗ್ರಿ : ರೆಡಿಮೇಡ್‌ ಇಡ್ಲಿ ಹಿಟ್ಟು 1 ಕಪ್‌, ಅರ್ಧ ಕಪ್‌ ಹುಳಿ ಮೊಸರು, ತುಸು ಉಪ್ಪು, ಖಾರ, 1 ಸಣ್ಣ ಪ್ಯಾಕೆಟ್‌ ಈನೋ, ಒಂದಿಷ್ಟು ತೆಂಗಿನ ತುರಿ.

ಒಗ್ಗರಣೆಗಾಗಿ : ತುಸು ಎಣ್ಣೆ, ಸಾಸುವೆ, ಜೀರಿಗೆ, ಹೆಚ್ಚಿದ ಹಸಿ ಮೆಣಸು, ಕರಿಬೇವು, ಕೊ.ಸೊಪ್ಪು.

ವಿಧಾನ : ಮನೆಯಲ್ಲೇ ಇಡ್ಲಿ ಹಿಟ್ಟು ರೆಡಿ ಮಾಡಿ. ಸಮಯ ಸಾಲದಿದ್ದರೆ ರೆಡಿಮೇಡ್‌ ಹಿಟ್ಟು ಅಥವಾ ಮಿಕ್ಸ್ಡ್ ಪ್ಯಾಕೆಟ್‌ ತಂದು ಮೊಸರು, ಈನೋ, ಉಪ್ಪು, ತುಸು ಖಾರ ಹಾಕಿ ಗಟ್ಟಿ ಇಡ್ಲಿ ಹಿಟ್ಟು ಸಿದ್ಧಪಡಿಸಿ. ಒಲೆ ಮೇಲೆ ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದನ್ನು ಈ ಹಿಟ್ಟಿಗೆ ಬೆರೆಸಿ, 1-2 ತಾಸು ನೆನೆಯಲು ಬಿಡಿ. ನಂತರ ಬಟನ್‌ ಇಡ್ಲಿ ಅಥವಾ ಮಿನಿ ಇಡ್ಲಿ ಸ್ಟ್ಯಾಂಡಿಗೆ ಎಣ್ಣೆ ಸವರಿ ಸಣ್ಣ ಸಣ್ಣ ಇಡ್ಲಿ ಮಾಡಿ. ಹಬೆಯಾಡುತ್ತಿರುವಂತೆ ಇದರ ಮೇಲೆ ತುಪ್ಪ, ಚಟ್ನಿಪುಡಿ ಉದುರಿಸಿ. ಕಾಯಿ ಚಟ್ನಿ, ಸಾಂಬಾರ್‌ ಜೊತೆ ಸವಿಯಿರಿ.

ಸ್ಪೆಷಲ್ ಮಸಾಲೆ ವಡೆ

ಸಾಮಗ್ರಿ : ಅರ್ಧ ಕಪ್‌ ನೆನೆಸಿದ ಕಡಲೇಬೇಳೆ, 1-2 ಈರುಳ್ಳಿ, 3-4 ಹಸಿ ಮೆಣಸು, 1 ತುಂಡು ಶುಂಠಿ, 3-4 ಎಸಳು ಬೆಳ್ಳುಳ್ಳಿ, ಬೇಳೆಯಲ್ಲಿ ಅರ್ಧದಷ್ಟು ರವೆ ಇಡ್ಲಿ ಮಿಕ್ಸಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.

ವಿಧಾನ : ನೆನೆಸಿದ ಕಡಲೇಬೇಳೆಯನ್ನು ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಪದಾರ್ಥ ಉಳಿದೆಲ್ಲ ಸಾಮಗ್ರಿ ಸೇರಿಸಿ (ತುಸುವೇ ನೀರು ಚಿಮುಕಿಸಿ) ಗಟ್ಟಿಯಾಗಿ ಕಲಸಿಡಿ. ಅಂಗೈ ಮೇಲೆ ಜಿಡ್ಡು ಸವರಿ ಇದರಿಂದ ವಡೆ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಕರಿಯಿರಿ. ಬಿಸಿಬಿಯಾಗಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಉಪ್ಪಿಟ್ಟು ಮಿಕ್ಸ್ ಡೋಕ್ಲಾ

Majedar-snacks-B

ಸಾಮಗ್ರಿ : 1 ಕಪ್‌ ರೆಡಿಮೇಡ್‌ ಉಪ್ಪಿಟ್ಟಿನ ಮಿಕ್ಸ್, ಅರ್ಧ ಕಪ್‌ ಹುಳಿ ಮೊಸರು, 1 ಸಣ್ಣ ಚಮಚ ಈನೋ ಫ್ರೂಟ್‌ ಸಾಲ್ಟ್, ತುಸು ಉಪ್ಪು.

ಒಗ್ಗರಣೆ ಸಾಮಗ್ರಿ : ತುಸು ಎಣ್ಣೆ, 2-3 ಹಸಿ ಮೆಣಸು (ಉದ್ದಕ್ಕೆ ಸೀಳಿದ್ದು), ಸಾಸುವೆ, ಜೀರಿಗೆ, ಕರಿಬೇವು, ಇಂಗು, ಹೆಚ್ಚಿದ ಕೊ.ಸೊಪ್ಪು.

ವಿಧಾನ : ರೆಡಿಮೇಡ್‌ ಮಿಕ್ಸ್ ಗೆ ಮೊಸರು, ಉಪ್ಪು, ಈನೋ, ತುಸು ಬಿಸಿ ನೀರು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದನ್ನು ಅರ್ಧ ಗಂಟೆ ಕಾಲ ನೆನೆಯಲು ಬಿಡಿ. ನಂತರ ಇಡ್ಲಿ ತಟ್ಟೆಗೆ ಜಿಡ್ಡು ಸವರಿ ಹಬೆಯಲ್ಲಿ ಇದನ್ನು ಬೇಯಿಸಿ. ಬಿಸಿ ಇರುವಾಗಲೇ ಚೌಕಾಕಾರವಾಗಿ ಕತ್ತರಿಸಿ, ಇದಕ್ಕೆ ಒಗ್ಗರಣೆ ಕೊಡಿ. ಜೊತೆಗೆ ಕಾಯಿ ಚಟ್ನಿ ಇರಲಿ.

ಪೊಟೇಟೊ ಚಂಕ್ಸ್ ವಿತ್ವಡೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ