ಅಣಬೆ ಕಟ್ಲೆಟ್

ಸಾಮಗ್ರಿ  : 1 ಕಪ್‌ ಹೆಚ್ಚಿದ ಅಣಬೆ, ಅರ್ಧ ಸೌಟು ಆಲಿವ್ ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಅರ್ಧ ಕಪ್‌ ಪನೀರ್‌ ತುಂಡು, ಬೇಯಿಸಿ ಮಸೆದ 1-2 ಆಲೂ, ಅರ್ಧ ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ಜೀರಿಗೆ ಪುಡಿ, ಕರಿಯಲು ಎಣ್ಣೆ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಅಣಬೆ ಬೇಯಿಸಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ಇದಕ್ಕೆ ಬೆಂದ ಅಣಬೆ ಹಾಕಿ ಬಾಡಿಸಿ, ಆಮೇಲೆ ಮಸೆದ ಆಲೂ ಕಡಲೆಹಿಟ್ಟು ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಂಡು, ವಡೆಗಳಾಗಿ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಚಾಟ್‌ ಟಾಕೋಸ್‌

ಸಾಮಗ್ರಿ : 5-6 ಟಾಕೋ ಶೆಲ್ಸ್, ಬೇಯಿಸಿ ಮಸೆದ 2 ಮಧ್ಯಮ ಗಾತ್ರದ ಆಲೂ, 1 ದೊಡ್ಡ ಈರುಳ್ಳಿ, ಅರ್ಧ ಕಪ್‌ ಬೆಂದ ಕಾರ್ನ್‌, 2 ಟೊಮೇಟೊ, ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, 1 ಕಪ್‌ ಕಡೆದ ಹುಳಿಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಜೀರಿಗೆ ಪುಡಿ, ಚಾಟ್‌ಮಸಾಲ, ಗರಂಮಸಾಲ, ಅಲಂಕರಿಸಲು ಲೆಟ್ಯೂಸ್‌ ಲೀವ್ಸ್.

ಹುಣಿಸೆ ಚಟ್ನಿ

2- 3  ಚಮಚ ಹುಣಿಸೆ ಕಿವುಚಿದ ಗಟ್ಟಿರಸ, ರುಚಿಗೆ ತಕ್ಕಷ್ಟು ಜೀರಿಗೆ ಪುಡಿ, ಬೆಲ್ಲ, ಉಪ್ಪು, ಖಾರ, ಹೆಚ್ಚಿದ ಕೊ.ಸೊಪ್ಪು. ಎಲ್ಲವನ್ನೂ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ.

ಹಸಿರು ಚಟ್ನಿ

ಸಾಮಗ್ರಿ : ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 4-5 ಎಸಳು ಬೆಳ್ಳುಳ್ಳಿ, ತುಸು ಹೆಚ್ಚಿದ ಶುಂಠಿ, ಹುರಿಗಡಲೆ, ಹಸಿಮೆಣಸು, ಜೀರಿಗೆ ಪುಡಿ, ತುಸು ಬೆಲ್ಲ, ಚಾಟ್‌ ಮಸಾಲ, ನಿಂಬೆರಸ ಎಲ್ಲವನ್ನೂ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ.

ವಿಧಾನ : ಒಂದು ದೊಡ್ಡ ಬೇಸಿನ್‌ಗೆ ಮಸೆದ ಆಲೂ, ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಬೆಂದ ಕಾರ್ನ್‌, ಉಪ್ಪು, ಮೆಣಸು, ತುಸು ಹಸಿರು ಚಟ್ನಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣವನ್ನು ಪ್ರತಿ ಟ್ಯಾಕೋ ಶೆಲ್‌ಗೆ ತುಂಬಿಸಿ, ಮೇಲೆ 1-1 ಚಮಚ ಮೊಸರು, ಹಸಿರು, ಹುಣಿಸೆ ಚಟ್ನಿ ಹಾಕಿಡಿ. ಇದರ ಮೇಲೆ ಚಾಟ್‌ಮಸಾಲ, ಗರಂಮಸಾಲ, ಜೀರಿಗೆ ಪುಡಿ ಉದುರಿಸಿ ಚಿತ್ರದಲ್ಲಿರುವಂತೆ ಲೆಟ್ಯೂಸ್‌ ಎಲೆಗಳಿಂದ ಅಲಂಕರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ