ಹರ್ಬಲ್ ಕಾರ್ನ್
ಸಾಮಗ್ರಿ : 2 ಅಮೆರಿಕನ್ ಕಾರ್ನ್, 75 ಗ್ರಾಂ ಬೆಣ್ಣೆ, ಒಂದಿಷ್ಟು ಪಾರ್ಸ್ಲೆ, ಓರಿಗೆನೊ, ಬೆಸಿಲ್, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು.
ವಿಧಾನ : ಒಂದು ಬಟ್ಟಲಿಗೆ ಹೆಚ್ಚಿದ ಪಾರ್ಸ್ಲೆ, ಓರಿಗೆನೋ, ಬೆಸಿಲ್, ಉಪ್ಪು, ಮೆಣಸು ಸೇರಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕಾರ್ನ್ ಹಾಕಿ ಕೆದಕಬೇಕು. ಇದರ ಮೇಲೆ ರೆಡಿ ಇರುವ ಹರ್ಬ್ಸ್ ಹಾಕಿ, ಮಂದ ಉರಿಯಲ್ಲಿ ಕಾರ್ನ್ ಕೆದಕಬೇಕು. ಚಿತ್ರದಲ್ಲಿರುವಂತೆ ಅದರ ಮೇಲೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.
ಪೇರ್ ಪ್ಲೇಟ್
ಸಾಮಗ್ರಿ : 1 ಪೇರ್ ಹಣ್ಣು, ಅರ್ಧ ಕಪ್ ಮಿಕ್ಸ್ಡ್ ಫ್ರೂಟ್ ಜೂಸ್, 1 ಚಮಚ ನಿಂಬೆರಸ, 1 ಕಪ್ ಸೋಡ, ಅಗತ್ಯವಿದ್ದಷ್ಟು ಐಸ್‌ಕ್ಯೂಬ್ಸ್.
ವಿಧಾನ : ಪೇರ್ ಹಣ್ಣನ್ನು ತೆಳು ಸ್ಲೈಸ್ ಮಾಡಿ 5 ನಿಮಿಷ ಫ್ರೀಝರ್‌ನಲ್ಲಿಡಿ. ಒಂದು ಗ್ಲಾಸ್‌ಗೆ ಮೊದಲು ಮಿಕ್ಸ್ಡ್ ಫ್ರೂಟ್ ಜೂಸ್ ಹಾಕಿಡಿ. ನಂತರ ಇದನ್ನು ಐಸ್ ಕ್ಯೂಬ್ಸ್ ನಿಂದ ತುಂಬಿಸಿ. ಆಮೇಲೆ ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಪೇರ್ ಸ್ಲೈಸ್ ತೇಲಿಬಿಡಿ. ಸೋಡ ಬೆರೆಸಿ ಚಿಲ್ ಸರ್ವ್ ಮಾಡಿ.
ಬ್ರೌನಿ ಟ್ರಫ್
ಸಾಮಗ್ರಿ : 30 ಗ್ರಾಂ ಬ್ರೌನಿ ವಾಲ್‌ನಟ್, 10 ಗ್ರಾಂ ಚಾಕಲೇಟ್, 1 ಚಮಚ ಕ್ರೀಂ, 25 ಗ್ರಾಂ ವೆನಿಲಾ ಐಸ್ ಕ್ರೀಂ.
ವಿಧಾನ : ಚಾಕಲೇಟ್ ಕ್ರೀಂ ಬೆರೆಸಿ ಸ್ಮೂದ್ ಚಾಕಲೇಟ್ ಸಾಸ್ ತಯಾರಿಸಿ. ಬ್ರೌನಿ ವಾಲ್‌ನಟ್ ಸಣ್ಣದಾಗಿ ತುಂಡರಿಸಿ. ಒಂದು ಪುಡಿಂಗ್ ಗ್ಲಾಸ್‌ಗೆ ತುಸು ಬ್ರೌನಿ ತುಂಡು ಹಾಕಿಡಿ. ಇದರ ಮೇಲೆ ಒಂದು ಸ್ಕೂಪ್ ವೆನಿಲಾ ಐಸ್ ಕ್ರೀಂ ಹಾಕಿ, ಚಾಕಲೇಟ್ ಸಾಸ್‌ನಿಂದ ಟಾಪಿಂಗ್ ಮಾಡಿ. ಮತ್ತೊಮ್ಮೆ ಇದೇ ತರಹ ಪದರ ಬರುವಂತೆ ಮಾಡಿ, ಚಾಕಲೇಟ್ ಸಾಸ್‌ನಿಂದ ಕವರ್ ಮಾಡಿ ಸವಿಯಿರಿ.
ಬೆಲ್ಜಿಯಂ ವೇಫ್ಸ್
ಸಾಮಗ್ರಿ : 150 ಗ್ರಾಂ ಗೋಧಿಹಿಟ್ಟು, 50 ಗ್ರಾಂ ಮೈದಾ, 2 ಮೊಟ್ಟೆ, ಅರ್ಧ ಸಣ್ಣ ಚಮಚ ಬೇಕಿಂಗ್ ಪೌಡರ್, 1 ಕಪ್ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಉಪ್ಪು, ಎಸೆನ್ಸ್ ಅಗತ್ಯವಿದ್ದಷ್ಟು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಬೀಟ್ ಮಾಡಿಕೊಳ್ಳಿ. ಇದಕ್ಕೆ ಸಕ್ಕರೆ, ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು, ಮೈದಾ, ತುಸು ಎಣ್ಣೆ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ತುಸು ಹಾಲು, ವೆನಿಲಾ ಎಸೆನ್ಸ್ ಬೆರೆಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಈಗ ವೇಫ್ ಟ್ರೇಗೆ (ರೆಡಿಮೇಡ್ ಲಭ್ಯ) ಜಿಡ್ಡು ಸವರಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದನ್ನು ಹಿಟ್ಟಿಗೆ ಅದ್ದಿ, ಎಣ್ಣೆಯಲ್ಲಿ ಅದ್ದಬೇಕು. ಚಿತ್ರದಲ್ಲಿರುವಂತೆ ತಯಾರಾದ ವೇಫ್ಸ್ ಗೆ, ನಿಮ್ಮ ಇಷ್ಟದ ಐಸ್‌ಕ್ರೀಂ ಹಾಕಿ ಸವಿಯಲು ಕೊಡಿ.
ಸ್ಟ್ರಾಬೆರಿ ಲಾಲಾ ಕೇಕ್
ಸಾಮಗ್ರಿ : ಬೆಣ್ಣೆ ಸಕ್ಕರೆ (ಅರ್ಧರ್ಧ ಕಪ್), 3 ಮೊಟ್ಟೆ, ಅಗತ್ಯವಿದ್ದಷ್ಟು ಸ್ಟ್ರಾಬೆರಿ ಐಸ್‌ಕ್ರೀಂ, 100 ಗ್ರಾಂ ಮೈದಾ, 2-3 ಹನಿ ವೆನಿಲಾ ಎಸೆನ್ಸ್, 25 ಗ್ರಾಂ ಸ್ಟ್ರಾಬೆರಿ ಜ್ಯಾಂ, ತುಸು ಉಪ್ಪು.