ಬೀಟ್ ರೂಟ್ ಹಲ್ವಾ ವಿತ್ ಐಸ್ ಕ್ರೀಂ
ಸಾಮಗ್ರಿ : 1 ಕಿಲೋ ಮಧ್ಯಮ ಗಾತ್ರದ ಬೀಟ್ ರೂಟ್, 300 ಗ್ರಾಂ ಸಿಹಿ ಖೋವಾ, 700 ಗ್ರಾಂ ಸಕ್ಕರೆ, 250 ಗ್ರಾಂ ತುಪ್ಪ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 1 ಕಪ್), ತುಸು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್, ರುಚಿಗೆ ತಕ್ಕಷ್ಟು ವೆನಿಲಾ ಐಸ್ ಕ್ರೀಂ, ಕೊಬ್ಬರಿ ತುರಿ.
ವಿಧಾನ : ಮೊದಲು ಬೀಟ್ ರೂಟ್ ಸಿಪ್ಪೆ ಹೆರೆದು ಕುಕ್ಕರ್ ನಲ್ಲಿ 1 ಸೀಟಿ ಬರುವಂತೆ ಹಾಲಲ್ಲಿ ಇಡಿಯಾಗಿ ಬೇಯಿಸಿ. ಕೆಳಗಿಳಿಸಿ, ಆರಿದ ನಂತರ ನೀಟಾಗಿ ತುರಿದಿಡಿ. ದಪ್ಪ ತಳದ ಬಾಣಲೆಯಲ್ಲಿ ಮೊದಲು ಅರ್ಧ ಸೌಟು ತುಪ್ಪ ಬಿಸಿ ಮಾಡಿ ದ್ರಾಕ್ಷಿ ಗೋಡಂಬಿಗಳನ್ನು ಹುರಿದು ತೆಗೆಯಿರಿ. ನಂತರ ಅದಕ್ಕೆ ಮತ್ತಷ್ಟು ತುಪ್ಪ ಹಾಕಿ, ತುರಿದ ಬೀಟ್ ರೂಟ್ ಸೇರಿಸಿ ಹದನಾಗಿ ಬಾಡಿಸಿ. ಅದು ತುಸು ಡ್ರೈ ಆದಾಗ, ಇದಕ್ಕೆ ಸಕ್ಕರೆ, ಮಸೆದ ಖೋವಾ ಸೇರಿಸಿ ಮತ್ತೆ ಕೈಯಾಡಿಸಿ. 5 ನಿಮಿಷ ಬಿಟ್ಟು ಏಲಕ್ಕಿಪುಡಿ, ಎಸೆನ್ಸ್, ಗೋಡಂಬಿಗಳನ್ನು ಸೇರಿಸಿ ಕೆದಕಿ ಕೆಳಗಿಳಿಸಿ. ಇದನ್ನು ಸರ್ವಿಂಗ್ ಬಟ್ಟಲಿಗೆ ಹಾಕಿ, ಜೊತೆಗೆ ಐಸ್ ಕ್ರೀಂ ಸಹಿತ ಸರ್ವ್ ಮಾಡಿ.
ಫ್ರೋಝನ್ ಫಿರನಿ ಕೇಕ್
ಸಾಮಗ್ರಿ : 2 ಲೀ ಹಾಲು, 500 ಗ್ರಾಂ ಮಸೆದ ಖೋವಾ, 300 ಗ್ರಾಂ ಬೆಲ್ಲದ ಪುಡಿ, 1 ಕಪ್ ಡ್ರೈ ಫ್ರೂಟ್ಸ್, ಅಗತ್ಯವಿದ್ದಷ್ಟು ಅಕ್ಕಿ ಹಿಟ್ಟು, ತುಪ್ಪ, ಏಲಕ್ಕಿ ಪುಡಿ, ಕೋಕೋ ಪೌಡರ್, ಅಲಂಕರಿಸಲು ಒಂದಿಷ್ಟು ಸೀಡ್ಲೆಸ್ ದಾಳಿಂಬೆ ಹರಳು.
ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಕೈಯಾಡಿಸುತ್ತಾ ಅರ್ಧದಷ್ಟು ಹಿಂಗುವವರೆಗೂ ಕುದಿಸಬೇಕು. ನಂತರ ಅಕ್ಕಿ ಹಿಟ್ಟು ಬೆರೆಸಿ ಮತ್ತೆ 5-6 ನಿಮಿಷ ಕೈಯಾಡಿಸಿ. ನಂತರ ಮಂದ ಉರಿ ಮಾಡಿಕೊಂಡು ಇದಕ್ಕೆ ಮಸೆದ ಖೋವಾ, ಬೆಲ್ಲದ ಪುಡಿ, ಕೋಕೋ ಪೌಡರ್, ನಂತರ ತುಪ್ಪ ಹಾಸಿ ನಿಧಾನವಾಗಿ ಕೈಯಾಡಿಸಿ. ಆಮೇಲೆ ಇದಕ್ಕೆ ಏಲಕ್ಕಿ ಪುಡಿ, ಎಸೆನ್ಸ್, ದ್ರಾಕ್ಷಿ ಗೋಡಂಬಿಗಳನ್ನು ಹಾಕಿ ಮತ್ತಷ್ಟು 5 ನಿಮಿಷ ಕೆದಕಬೇಕು. ಕೆಳಗಿಳಿಸಿ, ಚೆನ್ನಾಗಿ ಆರಿದ ನಂತರ ನಿಮ್ಮಿಷ್ಟದ ಅಚ್ಚಿಗೆ ಹಾಕಿ, ಫ್ರಿಜ್ ನಲ್ಲಿರಿಸಿ 180 ಡಿಗ್ರಿ ತಾಪಮಾನದಲ್ಲಿ ಸೆಟ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಅಚ್ಚಿನಿಂದ ಪ್ಲೇಟಿಗೆ ರವಾನಿಸಿ, ಅದರ ಮೇಲೆ ದಾಳಿಂಬೆ ಹರಳಿನಿಂದ ಅಲಂಕರಿಸಿ, ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ, ಸವಿಯಲು ಕೊಡಿ.
ಗುಲಾಬಿ ಹಲ್ವಾ
ಸಾಮಗ್ರಿ : 1 ಕಿಲೋ ತಾಜಾ ಗುಲಾಬಿ ದಳಗಳು, 2 ಲೀ. ಗಟ್ಟಿ ಹಾಲು, 2 ಕಪ್ ಮಸೆದ ಖೋವಾ, 4-5 ಚಮಚ ಕೋಕೋನಟ್ ಪೌಡರ್, 1-2 ಕಪ್ ಸಕ್ಕರೆ, 2 ಕಪ್ ಗೋಡಂಬಿ ತರಿ (ತುಪ್ಪದಲ್ಲಿ ಹುರಿದು ತರಿ ಮಾಡಿ), ಅರ್ಧ ಕಪ್ ಸೂರ್ಯಕಾಂತಿ ಬೀಜ, ತುಸು ಏಲಕ್ಕಿ ಪುಡಿ, ರೋಸ್ ಎಸೆನ್ಸ್, ಧಾರಾಳ ತುಪ್ಪ.