ಇಂದು ಮಹಿಳೆಯು ಸಾಮಾಜಿಕ, ಆರ್ಥಿಕ, ರಾಜಕೀಯ, ಕಾನೂನು ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ಹೆಜ್ಜೆಯಿರಿಸಿದ್ದಾಳೆ. ಎಲ್ಲೆಡೆಯೂ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ. ಆದರೆ ಅವಳು ತನ್ನ ದೇಹಾರೋಗ್ಯದ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಿನಿಮಾ ತಾರೆಯರ ಫಿಟ್‌ನೆಸ್‌ ಟ್ರೇನರ್‌ ಎಂದು ಹೆಸರಾಗಿರುವ ಸೆಲೆಬ್ರಿಟಿ ನ್ಯೂಟ್ರಿಶನಿಸ್ಟ್ ರಜತಾ ದಿವಾಕರ್‌ ಹೀಗೆ ಹೇಳುತ್ತಾರೆ, “ನಿಮ್ಮ ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ, ಬೆನ್ನು ಅಥವಾ ಶರೀರದ ಬೇರೆ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೆ, ಅದು ಸಾಮಾನ್ಯವೆಂದು ಭಾವಿಸಬೇಡಿ. ನೀವು ಸಂಪೂರ್ಣ ಆರೋಗ್ಯವಂತರಾದರೆ ಇಂತಹ ನೋವು ಬರುವಂತೆಯೇ ಇಲ್ಲ.”

ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ರಜತಾ ದಿವಾಕರ್‌ ಈ ರೀತಿಯಾಗಿ ವಿವರಿಸುತ್ತಾರೆ.

ಆರೋಗ್ಯಕ್ಕೆ ಒಳ್ಳೆಯ ಊಟ ಅಗತ್ಯ. ಆದ್ದರಿಂದ ಮಹಿಳೆಯರು ತಮ್ಮ ಅಜ್ಜಿಯರು ತಯಾರಿಸುತ್ತಿದ್ದಂತಹ ತಿನಿಸುಗಳನ್ನು ತಿನ್ನಬೇಕು.

ನಿಮಗೆ ಇಷ್ಟವಾದುದನ್ನು ತಿನ್ನಿ. ಏಕೆಂದರೆ ಪೂರ್ತಿ ಮನಸ್ಸಿನಿಂದ ತಿಂದ ಆಹಾರ ನಿಮಗೆ ಸಕಾರಾತ್ಮಕವಾಗಿ ಪೋಷಣೆ ನೀಡುತ್ತದೆ.

ಪ್ಯಾಕ್ಡ್ ಫುಡ್ ನಿಂದ ದೂರವಿರಿ. ಅವುಗಳಲ್ಲಿರುವ ಪ್ರಿಸರ್ವೇಟಿವ್ ನಿಮಗೆ ಹಾನಿಯುಂಟು ಮಾಡುತ್ತವೆ.

ಮನೆಯಲ್ಲಿ ಮಾಡಿದ ತುಪ್ಪ ಬಹಳ ಒಳ್ಳೆಯದು. ದಿನ 3 ರಿಂದ 5 ಚಮಚ ತುಪ್ಪ ತಿನ್ನಿರಿ.

ಆಯಾ ಕಾಲದಲ್ಲಿ ದೊರೆಯುವ ಹಣ್ಣು ತರಕಾರಿಗಳನ್ನು ಅಗತ್ಯವಾಗಿ ಸೇವಿಸಿ.

ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳನ್ನು ಅಡುಗೆಗೆ ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗುತ್ತದೆ.

ಕ್ಯಾಲೋರಿ ಅಳತೆಯ ಮೇಲೆ ಊಟ ಮಾಡದೆ, ನಿಮ್ಮ ಹಸಿವಿಗೆ ತಕ್ಕಂತೆ ಊಟ ಮಾಡಿ. ಓವರ್‌ ಈಟಿಂಗ್‌ ಬೇಡ. ಆದರೆ ಹಸಿವನ್ನು ಅಡಗಿಸಿಕೊಂಡರೆ ನಿಮಗೆ ಫಿಟ್‌ನೆಸ್‌ ಇರುವುದಿಲ್ಲ.

ಊಟ ಮಾಡುವಾಗ ಟಿ.ವಿ., ಫೋನ್‌, ಲ್ಯಾಪ್‌ಟಾಪ್‌ನಿಂದ ದೂರವಿರಿ.

ನೀವು ವರ್ಕಿಂಗ್‌ ವುಮನ್‌ ಆಗಿದ್ದರೆ ನಿಮಗೆ ಸಮತೋಲನ ಆಹಾರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸೀಸನ್‌ಗೆ ಅನುಸಾರವಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.

ಪ್ರತಿ 2-3 ಗಂಟೆಗಳಿಗೊಮ್ಮೆ ಏನಾದರೂ ತಿನ್ನಿರಿ. ಸಾಯಂಕಾಲ ಸತತ 4-6 ಗಂಟೆ ಸಮಯ ಹಸಿವನ್ನು ಮುಚ್ಚಲು ಪ್ರಯತ್ನಿಸಬೇಡಿ. ಆ ಸಮಯದಲ್ಲಿ ಕಾಫಿ ಟೀ ಬದಲು ಹೊಟ್ಟೆ ತುಂಬಿಸುವಂತಹ ಲಘು ಉಪಾಹಾರ ಅಥವಾ ಹಣ್ಣುಗಳನ್ನು ತಿನ್ನಿರಿ. ಆದರೆ ಕರಿದ ತಿಂಡಿ ಅಥವಾ ಜಂಕ್‌ಫುಡ್‌ ದೂರವಿರಿಸಿ.

ಪೀರಿಯಡ್ಸ್ ನಲ್ಲಿ ಎಚ್ಚರಿಕೆ

ಈ ಕಾಲದಲ್ಲಿ ಶರೀರದ ಯಾವುದೇ ಭಾಗದಲ್ಲಿ ನೋವು ಉಂಟಾಗುವುದು ಸಾಮಾನ್ಯ ವಿಷಯವಲ್ಲ. ನಿಮ್ಮ ಶರೀರದಲ್ಲಿ ಕ್ಯಾಲ್ಶಿಯಂನ ಕೊರತೆಯಿಂದಾಗಿ ನೋವು ಕಾಣಿಸುತ್ತದೆ. ನಿಮಗೂ ನೋವಿನ ತೊಂದರೆಯಿದ್ದರೆ, ವೈದ್ಯರನ್ನು ಸಂಪರ್ಕಿಸಿ ಕ್ಯಾಲ್ಶಿಯಂ ಮತ್ತು ವಿಟಮಿನ್‌ `ಬಿ’ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಿ.

ನಿತ್ಯ ವ್ಯಾಯಾಮ ಮಾಡುವುದರಿಂದಲೂ ಈ ತೊಂದರೆಯಿಂದ ಮುಕ್ತರಾಗಬಹುದು.

ಈ ದಿನಗಳಲ್ಲಿ ಲಘು ಆಹಾರ ಸೇವಿಸಿ. ಹೆಚ್ಚಿನ ಆಹಾರವನ್ನು ಜೀರ್ಣಿಸಲು ಶರೀರಕ್ಕೆ ತೊಂದರೆಯಾಗುತ್ತದೆ. ಪೀರಿಯಡ್ಸ್ ನಲ್ಲಿ ಶರೀರದೊಳಗಿನ ಭಾಗಗಳಿಗೂ ವಿಶ್ರಾಂತಿಯ ಅಗತ್ಯವಿರುತ್ತದೆ.

ಯುವತಿಯರ ಗಮನಕ್ಕೆ

ಸಾಧಾರಣವಾಗಿ ಯುವತಿಯರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಕೊಡುತ್ತಾ ಆರೋಗ್ಯವನ್ನು ಅಲಕ್ಷಿಸುತ್ತಾರೆ. ತೂಕ ಕಡಿಮೆ ಮಾಡುವುದಕ್ಕಿಂತ ಆರೋಗ್ಯವಾಗಿರುವುದು ಮುಖ್ಯ.

ದಿನ ನಿತ್ಯ ವ್ಯಾಯಾಮ ಮಾಡಿ. ಚಿಕ್ಕ ವಯಸ್ಸಿನಿಂದಲೂ ವ್ಯಾಯಾಮ ಮಾಡುವುದರಿಂದ ನಿಮಗೆ ವಯಸ್ಸಾದಂತೆ ಎದುರಾಗುವ ತೊಂದರೆಗಳು ನಿಮ್ಮನ್ನು ಬಾಧಿಸುವುದಿಲ್ಲ. ನಿಮಗೆ ನೈಟ್‌ ಪಾರ್ಟಿಯ ಅಭ್ಯಾಸವಿದ್ದರೆ, ಅದನ್ನು ವಾರಕ್ಕೆ ಒಂದು ಸಲಕ್ಕೆ ಸೀಮಿತಗೊಳಿಸಿ. ಉಳಿದ ದಿನಗಳಲ್ಲಿ  ಚೆನ್ನಾಗಿ ನಿದ್ರಿಸುವ ಅಭ್ಯಾಸ ಮಾಡಿಕೊಳ್ಳಿ.

ಜಿಮ್ ಹೋಗುವವರಿಗಾಗಿ ಆಹಾರ

ನೀವು ಜಿಮ್ ಮಾಡುವಿರಾದರೆ ಜಿಮ್ ಗೆ ಹೋಗುವ 15-20 ನಿಮಿಷ ಮೊದಲು ಹಣ್ಣು ತಿನ್ನಿ. ಇದರಿಂದ ಶರೀರದಲ್ಲಿ ಶಕ್ತಿ ತುಂಬುತ್ತದೆ ಮತ್ತು ಡೀಹೈಡ್ರೇಶನ್‌ ಆಗುವುದಿಲ್ಲ.

ಜಿಮ್ ನಿಂದ ಬಂದ ನಂತರ ಬನಾನಾ ಶೇಕ್‌ ಕುಡಿಯಿರಿ. ಇದು ನಿಮಗೆ ಶಕ್ತಿ ನೀಡುತ್ತದೆ.

ಜಿಮ್ ನಿಂದ ಬಂದ 1 ಗಂಟೆಯ ನಂತರ ಹೊಟ್ಟೆ ತುಂಬ ಊಟ ಮಾಡಿ ಚಪಾತಿ, ಪಲ್ಯ, ಬೇಳೆಯುಕ್ತ ಆಹಾರ ಅಗತ್ಯ.

ಮಹಿಳೆಯು ಕುಟುಂಬದ ಆಧಾರಸ್ತಂಭವಾಗಿರುತ್ತಾಳೆ. ಆದ್ದರಿಂದ ಅವಳು ತನ್ನ ಆರೋಗ್ಯವನ್ನು ಖಂಡಿತ ನಿರ್ಲಕ್ಷಿಸಬಾರದು.

 – ತೃಪ್ತಿ ಪಿ.ಕೆ.

ಫಿಟ್‌ ಆಗಿದ್ದುಕೊಂಡು ನಕಾರಾತ್ಮಕತೆಯನ್ನು ಸಕಾರಾತ್ಮಕತೆಯಾಗಿ ಬದಲಿಸಿ

ರಂಜನಾಳಿಗೆ 10 ವರ್ಷಕ್ಕೂ ಹಿಂದೆ ಮದುವೆಯಾಗಿದ್ದು  ಅವಳಿಗೆ 9 ವರ್ಷ ವಯಸ್ಸಿನ ಮಗನಿದ್ದಾನೆ. ತನ್ನ ಗೃಹಕೃತ್ಯದ ನಡುವೆಯೂ ಅವಳು ವರ್ಕ್‌ಔಟ್‌ ಮಾಡಲು ಬಿಡುವು ಮಾಡಿಕೊಳ್ಳುತ್ತಾಳೆ. ಜೊತೆಗೆ ಸಮತೋಲನ ಆಹಾರವನ್ನೂ ಸೇವಿಸುತ್ತಾಳೆ. ಇದರಿಂದಾಗಿ ಅವಳು ಇಂದು ಬಹಳ ಸುಂದರವಾಗಿ ಕಾಣಿಸುತ್ತಾಳೆ.

ರಂಜನಾಳ ಪ್ರಕಾರ ಮಹಿಳೆ ತನಗೆ ಭಾವನಾತ್ಮಕವಾಗಿ ಸಮಾಧಾನ ಕೊಡುವಂತಹ ಕೆಲಸವನ್ನು ಮಾಡಬೇಕು. ಇದಕ್ಕೆ ಟೈಮ್ ಮ್ಯಾನೇಜ್‌ಮೆಂಟ್‌ ಅಗತ್ಯ. ಆಗ ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನಹರಿಸಬಹುದು.

ಕುಟುಂಬದ ಜಾಬ್ದಾರಿಯನ್ನು ನಿಭಾಯಿಸಲು ಮಹಿಳೆ ಶಾರೀರಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಶಕ್ತಿಶಾಲಿಯಾಗಿರಬೇಕು. ವ್ಯಾಯಾಮ ಮಾಡುವುದರಿಂದ ನಿಮ್ಮ ನಕಾರಾತ್ಮಕ ವಿಚಾರಗಳನ್ನು ಸಕಾರಾತ್ಮಕವಾಗಿ ಬಗೆಹರಿಸಿಕೊಳ್ಳಬಹುದು ಎಂದು ರಂಜನಾ ಹೇಳುತ್ತಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ