ಕೆಲವರು ಬಿಸಿಲಿನ ಕಾಟ ಸಹಿಸಲಾಗದೆಂದು ಸನ್‌ಗ್ಲಾಸಸ್‌ ಆರಿಸಿಕೊಂಡರೆ, ಮತ್ತೆ ಹಲವರು ಸ್ಟೈಲ್‌ಗಾಗಿ ಆರಿಸುತ್ತಾರೆ. ಇನ್ನುಳಿದವರು ತಮ್ಮ ವರ್ಕ್‌ಪ್ಲೇಸ್‌ಗೆ ತಕ್ಕಂತೆ ಕಂಗಳನ್ನು ಸುರಕ್ಷಿತವಾಗಿರಿಸಲು ಹೀಗೆ ಮಾಡುತ್ತಾರೆ. ಆದರೆ ಬಹಳ ಕಡಿಮೆ ಜನ ಮಾತ್ರವೇ ತಮ್ಮ ಮುಖದ ಆಕಾರ ನೆನಪಿಟ್ಟುಕೊಂಡು ಸೂಕ್ತ ಕನ್ನಡಕ ಕೊಳ್ಳುತ್ತಾರೆ.

ಸಾಮಾನ್ಯವಾಗಿ ಜನ, ಸನ್‌ಗ್ಲಾಸಸ್‌ನ್ನು ಅಂಗಡಿಯ ಕನ್ನಡಿಯಲ್ಲಿ ನೋಡಿ, 2-3 ಸಲ ಗಮನಿಸಿಕೊಂಡು ತಮ್ಮನ್ನು ತಾವು ತೃಪ್ತಿಯಾಗಿ ನೋಡಿಕೊಂಡು ನಂತರ ಸನ್‌ಗ್ಲಾಸಸ್‌ ಖರೀದಿಸುತ್ತಾರೆ. ಅಂದರೆ ಇವರುಗಳಿಗೆ ಸನ್‌ಗ್ಲಾಸಸ್‌ ಆಯ್ಕೆ ಎಂದರೆ ಒಂದು ತ್ವರಿತ ಪ್ರಕ್ರಿಯೆ. ಆದರೆ ನಿಮಗೆ ನಿಮ್ಮ ಮುಖದ ಆಕಾರದ ಬಗ್ಗೆ ಮಾಹಿತಿ ಇದ್ದರೆ, ಖಂಡಿತಾ ನೀವು ನಿಮ್ಮ ಮುಖಕ್ಕೆ ಒಪ್ಛುವ ಬೆಟರ್‌ ಗ್ಲಾಸಸ್‌ ಕೊಳ್ಳುತ್ತೀರಿ. ಆಗ ಇಂಥ ಕನ್ನಡಕ ನಿಮ್ಮನ್ನು ಗುಂಪಿನಲ್ಲಿ ಪ್ರತ್ಯೇಕವಾಗಿ ಗುರುತಿಸುವಂತೆ ಮಾಡುತ್ತದೆ.

ನಿಮ್ಮ ಮುಖ ಸಣ್ಣದು, ಉದ್ದನೆಯದು ಅಥವಾ ಚೌಕಾಕಾರವಾಗಿದೆಯೇ? ನೀವು ಸನ್‌ ಗ್ಲೌಸಸ್‌ ಕೊಳ್ಳುವಾಗ ಇವುಗಳ ಕಡೆ ಗಮನಹರಿಸುತ್ತೀರಾ? ನೀವು ನಿಮ್ಮ ಮುಖಕ್ಕೆ ತಕ್ಕಂತೆ ಯಾವ ರೀತಿಯಲ್ಲಿ ಬೆಟರ್‌ ಸನ್‌ಗ್ಲಾಸಸ್‌ ಆರಿಸಲು ಸಾಧ್ಯ?

ಬನ್ನಿ, ವಿವರವಾಗಿ ತಿಳಿಯೋಣ :

ಸನ್‌ಗ್ಲಾಸಸ್‌ ಹೇಗಿರಬೇಕು?

ನೀವು ನಿಮ್ಮ ಮುಖದ ಕುರಿತಾಗಿ ಒಂದಿಷ್ಟು ಮಾಹಿತಿ ಇರಿಸಿಕೊಳ್ಳಿ. ಅದಕ್ಕೆ ತಕ್ಕಂತೆ ಕನ್ನಡಕ ಆರಿಸಿ. ಇದರಿಂದ ಖಂಡಿತಾ ನಿಮ್ಮ ಆಕರ್ಷಣೆ 4 ಪಟ್ಟು ಹೆಚ್ಚುತ್ತದೆ. ಇಂಥ ಗ್ಲಾಸಸ್‌ ನಿಮ್ಮ ಮುಖದ ಆಕಾರಕ್ಕೆ ಅನುರೂಪವಾಗಿ ಒಂದು ಸಾಲಿಡ್‌ ಬ್ಯಾಲೆನ್ಸ್ ಒದಗಿಸುತ್ತದೆ.

ಉದಾ : ಯಾವ ಯುವತಿಯ ಮುಖ ಗುಂಡಗಿದೆಯೋ, ಅವಳ ಕನ್ನಡಕ ಮುಖದ ಗೋಲಾಕಾರದ ಭಾಗವನ್ನು ಕವರ್‌ ಮಾಡುವಂತಿರಬೇಕು. ಅದು ಬಿಟ್ಟು ಮುಖದಿಂದ ಜಾರಿ ಬೀಳುವಂತೆ ಇರಬಾರದು ಅಥವಾ ಮುಖದಲ್ಲೇ ಹುದುಗಿ ಹೋಗಿರುವಂತೆಯೂ ಇರಬಾರದು. ಅದೇ ಮತ್ತೊಂದು ಕಡೆ, ಯಾವ ಯುವತಿಯ ಮುಖ ಸಣ್ಣಗಿದೆಯೋ ಅವಳು ದೊಡ್ಡ ಸೈಜಿನ ಗ್ಲಾಸಸ್‌ ಬಳಸಲೇಬಾರದು. ಏಕೆಂದರೆ ಇದರಿಂದ ಅವಳ ಮುಖ ಮುಚ್ಚಿ ಹೋದಂತೆ ಆಗುತ್ತದೆ. ಸಾಮಾನ್ಯವಾಗಿ ಏವಿಯೇಟರ್‌ ಉದ್ದ ಮುಖದ ಆಕಾರಕ್ಕೆ ಅಧಿಕ ಆಕರ್ಷಕ ಎನಿಸುತ್ತದೆ. ಯಾರ ಮುಖಚಹರೆ ಅನುಪಾತಕ್ಕೆ ಪೂರಕವೋ ಅಂಥವರಿಗೆ ಚೌಕ ಅಥವಾ ಆಯತಾಕಾರದ ಸನ್‌ಗ್ಲಾಸಸ್‌ ಸೂಕ್ತವಾಗಿ ಇರುತ್ತದೆ.

ಗೋಲಾಕಾರದ ಮುಖ

ನಿಮ್ಮ ಮುಖ ಗುಂಡಗಿದೆಯೇ? ಹಾಗಿದ್ದರೆ ನಿಮಗೆ ಎಲ್ಲಕ್ಕಿಂತ ಬೆಟರ್‌ ಆಪ್ಶನ್‌ ಎಂದರೆ ಆಯತಾಕಾರದ ಫ್ರೇಮಿನ ಗ್ಲಾಸಸ್‌ ಆರಿಸುವುದಾಗಿದೆ. ಇದು ಅಂಥವರಿಗೆ ಚೆನ್ನಾಗಿ ಹೊಂದುತ್ತದೆ. ಇಷ್ಟು ಮಾತ್ರವಲ್ಲ, ಇಂಥ ಆಕಾರದ ಗ್ಲಾಸಸ್‌ ಧರಿಸಿದವರ ಮುಖ ಮತ್ತಷ್ಟು ತೆಳ್ಳಗೆ ಕಾಣಿಸುತ್ತದೆ. ಇದರಿಂದ ಧರಿಸಿದವರ ಮುಖದ ಆಕರ್ಷಣೆ ಹೆಚ್ಚುತ್ತದೆ. ಹೀಗಾಗಿ ಗೋಲಾಕಾರದ ಮುಖವುಳ್ಳವರು, ಆ್ಯಂಗಲ್ಡ್ ಫ್ರೇಮ್ ಗ್ಲಾಸಸ್‌ನ್ನೇ ಆರಿಸಬೇಕು. ಇದು ಅವರ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಆಯತಾಕಾರದ ಮುಖ

ಇಂಥ ಮುಖವುಳ್ಳವರು ರಿವಿಲಿಸ್ ಏವಿಯೇಟರ್‌ ಫ್ರೇಮನ್ನೇ ಆರಿಸಬೇಕು. ಇದು ಅಂಥವರಿಗೆ ಬೆಟರ್‌ ಆಯ್ಕೆ ಆಗಿದೆ. ಇದು ಉದ್ದ ಮುಖವನ್ನು ಚಿಕ್ಕದಾಗಿ, ವ್ಯಾಪಕವಾಗಿಯೂ ತೋರಿಸುತ್ತದೆ. ಗೋಲಾಕಾರದ ಫ್ರೇಮ್ ವುಳ್ಳ ಸನ್‌ಗ್ಲಾಸಸ್‌ ಸಹ ಇಂಥವರಿಗೆ ಚೆನ್ನಾಗಿ ಒಪ್ಪುತ್ತದೆ. ಇದರಿಂದ ಅವರ ಮುಖ ಮತ್ತಷ್ಟು ಉದ್ದಕ್ಕೆ ಆಕರ್ಷಕವಾಗಿ ಕಾಣಿಸುತ್ತದೆ.

ಚೌಕಾಕಾರದ ಮುಖ

ಈ ತರಹದ ಆಕಾರವುಳ್ಳ ಮುಖದವರ ದವಡೆ ಭಾಗ ಬಹಳ ಸದೃಢವಾಗಿರುತ್ತದೆ. ಇವರ ಹಣೆಯೂ ಅಗಲ. ಇಂಥವರಿಗೆ ಗೋಲಾಕಾರ ಅಥವಾ ಅಂಡಾಕಾರದ ಫ್ರೇಮ್ ವುಳ್ಳ ಗ್ಲಾಸಸ್‌ ಸೂಟ್‌ ಆಗುತ್ತದೆ. ಇದು ಮುಖದ ಆಕಾರದ ಏರಿಳಿತಗಳನ್ನು ಸಮಾಪ್ತಿಗೊಳಿಸಿ, ಮುಖಕ್ಕೆ ಚೆನ್ನಾಗಿ ಹೊಂದುವಂತೆ ಕೂರುತ್ತದೆ.

ಹೃದಯದ ಆಕಾರದ ಮುಖ

ಇಂಥವರ ಹಣೆ ಅಗಲ ಹಾಗೂ ದವಡೆ ಭಾಗ ತೆಳು ಆಗಿರುತ್ತದೆ. ಇಂಥ ಆಕಾರವುಳ್ಳವರು, ಗ್ಲಾಸಸ್‌ನ ಮೇಲ್ಭಾಗ ಅಗಲ ಇದ್ದು, ಕೆಳ ಭಾಗ ನ್ಯಾರೋ ಇರುವಂಥ ಗ್ಲಾಸಸ್‌ನ್ನೇ ಆರಿಸಿಕೊಳ್ಳಬೇಕು. ಹೃದಯದಾಕಾರದ ಮುಖವುಳ್ಳ ಮಂದಿಗೆ ಕ್ಯಾಟ್‌ ಐ ಫ್ರೇಮ್ ಹೆಚ್ಚು ಒಪ್ಪುತ್ತದೆ. ಇಂಥವರು ಎಂದೂ ಏವಿಯೇಟರ್‌ ಕೊಳ್ಳಬಾರದು. ಏಕೆಂದರೆ ಅದು ಇವರ ಮುಖದ ಆಕಾರಕ್ಕೆ ಹೋಲದೆ ವಿಕಾರ ಮಾಡಿಬಿಡುತ್ತದೆ

ಅಂಡಾಕಾರದ ಮುಖ

ಈ ತರಹದ ಆಕಾರವುಳ್ಳವರಿಗೆ ಎಲ್ಲಾ ಬಗೆಯ ಗ್ಲಾಸಸ್‌ ಹೊಂದುತ್ತವೆ! ಏಕೆಂದರೆ ಇಂಥ ಶೇಪ್‌ಗೆ ಎಲ್ಲಾ ಬಗೆಯ ಸನ್‌ಗ್ಲಾಸಸ್‌ ಫಿಟ್‌ ಆಗುತ್ತವೆ. ಇಂಥವರು ಒಂದು ಆಯತಾಕಾರದ ಫ್ರೇಮ್, ಒಂದು ರೆಟ್ರೋ ಸ್ಕ್ವೇರ್‌ ಫ್ರೇಮ್, ಏವಿಯೇಟರ್‌ ಯಾ ಸ್ಪೋರ್ಟಿ ಸನ್‌ಗ್ಲಾಸಸ್‌ ಹೀಗೆ ಎಂಥ ಬಗೆಯನ್ನಾದರೂ ಆರಿಸಿಕೊಳ್ಳಬಹುದು.

– ಆರ್‌. ನಳಿನಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ