ಗೃಹಿಣಿಯರಿಗೆ ಪ್ರತಿದಿನ ಏನಾದರೂ ಒಂದು ಹೊಸ ರುಚಿ ಮಾಡದಿದ್ದರೆ ಅಡುಗೆ ಸರಿಹೋಗದು. ದಿನೇದಿನೇ ಅದೇ ಸಾಂಬಾರ್‌, ಪಲ್ಯ, ಗೊಜ್ಜು ಸವಿದ ಮನೆ ಮನೆಮಂದಿ ಗೊಣಗುಟ್ಟುವುದು ನೋಡಿ ಏನಪ್ಪ ಹೊಸದಾಗಿ ಹವಣಿಸುವುದು ಎಂದು ಪೇಚಾಡುತ್ತಾರೆ. ಅದರಲ್ಲೂ ಮಕ್ಕಳ ಟಿಫನ್‌ಬಾಕ್ಸಿಗೆ ಏನನ್ನು ಹಾಕಿ ಕಳುಹಿಸಿ ಕೊಡುವುದು ಎಂಬುದಂತೂ ಯಕ್ಷಪ್ರಶ್ನೆ. ಏನು ಕಳಿಸಿದರೂ, ಅರ್ಧ ವಾಪಸ್‌ ಬರುವುದನ್ನು ನೋಡಿ ರೋಸಿಹೋಗಿರುತ್ತಾರೆ.

ಇದಕ್ಕೆಲ್ಲ ಉತ್ತಮ ಪರಿಹಾರ ನೀಡಲೆಂದೇ ಇತ್ತೀಚೆಗೆ ಬೆಂಗಳೂರು ಟೇಸ್ಟಿ ಬೈಟ್ಸ್ ತಂಡ ಉತ್ತಮ ಗುಣಮಟ್ಟದ ಅಡುಗೆ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ನೇರವಾಗಿ ಪಾಲ್ಗೊಳ್ಳುವಂತೆ ಬೆಂಗಳೂರಿನ ಗೃಹಿಣಿಯರಿಗೆ ಸೂಚಿಸಲಾಗಿತ್ತು. ಅತ್ಯಂತ ರುಚಿಕರ, ಶುಚಿಯಾದ ವಿಧಾನದಲ್ಲಿ ತಯರಾದ ಈ ಹೊಸ ಹೊಸ ವ್ಯಂಜನಗಳು, ನೋಡುತ್ತಿದ್ದಂತೆ ಗೃಹಿಣಿಯರಿಗೆ ಸುಲಭವಾಗಿ ಗ್ರಹಿಸುವಂತಿತ್ತು. ಕೇವಲ ನೋಡಲು, ಮಾಡಲು, ಸವಿಯಲು ಸುಖಕರವಾದರೆ ಸಾಕೇ? ಅದು ಅಷ್ಟೇ ಆರೋಗ್ಯಕರ ಹಾಗೂ ಪೌಷ್ಟಿಕರ ಆಗಿರುವುದೂ ಮುಖ್ಯ. ಹೀಗಾಗಿ ನಗರದ ಖ್ಯಾತ ಮಹಿಳಾ ಶೆಫ್‌ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಂತ ಹಂತಾಗಿ ವ್ಯಂಜನದ ಕುರಿತು ವಿವರಿಸುತ್ತಾ, ಅದನ್ನು ನೀಟಾಗಿ ಮಾಡಿ ತೋರಿಸಿದರು. ಆ ಬಗೆಗಿನ ಎಲ್ಲಾ ವಿವರಗಳನ್ನೂ ನೀಡಿ, ಗೃಹಿಣಿಯರ ಸಂದೇಹಗಳನ್ನೂ ನಿವಾರಿಸಿದರು.

ಈ ಕಾರ್ಯಕ್ರಮ ಕೇವಲ ಕೆಲವೇ ಆಯ್ದ ಮಂದಿಗೆ ಸೀಮಿತವಾದರೆ ಸಾಕೇ? ಹೀಗಾಗಿಯೇ ಟೇಸ್ಟಿ ಬೈಟ್ಸ್ ತಂಡ ಈ ಕಾರ್ಯಕ್ರಮವನ್ನು ಬೆಂಗಳೂರು ಮಾತ್ರವಲ್ಲದೆ, ವಿಶಾಲ ಕರ್ನಾಟಕ, ಅದರಾಚೆಗೂ ತಲುಪುವಂತೆ ವೈಸ್‌ ಕಾನ್‌ಸೆಪ್ಟ್ ಜೊತೆಗೂಡಿ TV 5 ಚಾನೆಲ್‌ ಮೂಲಕ, ಕಿರುತೆರೆಯಲ್ಲಿ ಪ್ರತಿ ಶನಿವಾರ, ಭಾನುವಾರ ಮಧ್ಯಾಹ್ನ 1.30ಕ್ಕೆ ಪ್ರಸಾರಗೊಳಿಸುತ್ತಿದೆ.

ಬೆಂಗಳೂರಿನ ನಾಗರಬಾವಿ ಮೆಟ್ರೋ ಹೋಟೆಲ್‌ನಲ್ಲಿ ಅದ್ಧೂರಿ ವೇದಿಕೆಯೊಂದಿಗೆ, ತುಂಬಿದ ಮಹಿಳಾ ವೀಕ್ಷಕರೆದುರು ಪ್ರದರ್ಶಿಸಲಾದ ಈ ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರು ಜಾರ್ಜಿ ಕೆ., ಸಹ ನಿರ್ದೇಶಕ ನಟ ಸುಂದರ್‌, ಮೀಡಿಯಾ ಹೆಡ್‌ ಜಿ. ನಬೀನಾ ಹಾಗೂ ಇಡೀ ಕಾರ್ಯಕ್ರಮವನ್ನು ರಸವತ್ತವಾಗಿ ಬಣ್ಣಿಸಿದವರು ಕಿರುತೆರೆ ಖ್ಯಾತಿಯ ವೀಣಾ ಸುಂದರ್.

ಕೇವಲ ಅಡುಗೆ ಮಾಡುವುದು, ಅದನ್ನು ನೋಡಿ ಆನಂದಿಸಿದರೆ ಸಾಕೇ? ಅದರ ಹಿಂದಿನ ಆರೋಗ್ಯ, ಪೌಷ್ಟಿಕತೆಯ ಅರಿವು ಮೂಡಿಸಲೆಂದೇ ಇದಕ್ಕಾಗಿ ವಿಶೇಷ ವೈದ್ಯರು ಆಗಮಿಸಿದ್ದರು. ಬೆಂಗಳೂರು ವಿ.ವಿ.ಪುರಂನ ಮೆಡ್‌ಕೇರ್‌ ಹಾಸ್ಪಿಟಲ್‌ನ  ಕಾರ್ಡಿಯಾಲಜಿ, ಆನ್‌ಕಾಲಜಿ,  ಪ್ಲಾಸ್ಟಿಕ್‌  ಕಾಸ್ಮೆಟಿಕಟ್ಸ್, ವ್ಯಾಸ್ಕ್ಯುಲಾರ್‌ ಸರ್ಜರಿ, ಯೂರಾಲಜಿ, ಹೇರ್‌ ಟ್ರಾನ್ಸ್ ಪ್ಲಾಂಟೇಶನ್‌, ಸೈಕಿಯಾಟ್ರಿ, ಬರ್ನ್ಸ್ ಮುಂತಾದ ವಿವಿಧ ವಿಭಾಗಗಳ ನುರಿತ ವೈದ್ಯಕೀಯ ತಂಡ ಗೃಹಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಾವು ನಿತ್ಯ ಜೀವನದಲ್ಲಿ ವಹಿಸಬೇಕಾದ ಎಚ್ಚರಿಕೆ, ಆಹಾರ ಕ್ರಮ ಇತ್ಯಾದಿಗಳ ಬಗ್ಗೆ ತಿಳಿಸಿಕೊಟ್ಟರು.

ಸಾಮಾನ್ಯವಾಗಿ ಅತಿ ಒತ್ತಡದಲ್ಲಿ, ಆತಂಕದಲ್ಲಿ ಕೆಲಸ ಮಾಡುವುದು, ಗಡಿಬಿಡಿಯ ಚಟುವಟಿಕೆ ನಗರ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಡಯಾಬಿಟೀಸ್‌, ಬಿ.ಪಿ ಇಲ್ಲದ ಮನೆಗಳಿಲ್ಲ ಅಂತಾಗಿದೆ. ಹೃದಯಾಘಾತ ಆದ ತಕ್ಷಣ ಅದು ಹಾರ್ಟ್‌ ಅಟ್ಯಾಕ್‌ ಅಥವಾ ಫೇಲ್ಯೂರ್‌ ಇರಬಹುದೇ ಎಂದು ಮನೆಯವರು ಗಾಬರಿಗೊಳ್ಳುತ್ತಾರೆ. ಎದೆಬಡಿತ ಹೆಚ್ಚಾಗಿ, ಮೈಯೆಲ್ಲ ಬೆವೆತು ರೋಗಿ ಕುಸಿಯಬಹುದು. ಮಧುಮೇಹಿಗಳಲ್ಲಿ ಹೀಗೆ ಆಗದೆಯೂ ಇರಬಹುದು. ಮುಖ್ಯವಾಗಿ ಗಂಡಸರಿಗಿಂತ ಮುಟ್ಟು ನಿಂತ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ 15-20% ಹೆಚ್ಚಾಗುತ್ತದೆ. ಈಸ್ಟ್ರೋಜೆನ್‌ ಮಟ್ಟ ಅವರಲ್ಲಿ ಕಡಿಮೆ ಆಗುವುದೇ ಇದಕ್ಕೇ ಕಾರಣ. ವೈದ್ಯರು ವಿವರಣೆ ನೀಡುತ್ತಿದ್ದಂತೆ ನಡುನಡುವೆ ಗೃಹಿಣಿಯರು ತಮ್ಮ ಸಂದೇಹ ನಿವಾರಣೆ ಸಹ ಮಾಡಿಕೊಳ್ಳುತ್ತಿದ್ದರು. ವೆಜ್‌ ಅಥವಾ ನಾನ್‌ವೆಜ್‌ ಯಾವುದು ಒಳ್ಳೆಯದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಅತಿ ಆದರೆ ಯಾವುದೂ ಒಳ್ಳೆಯದಲ್ಲ ಎಂದರು. ಅತಿಯಾದ ಹುರಿದ ಕರಿದ ಪದಾರ್ಥ, ರೆಡ್‌ಮೀಟ್‌ ಬದಲು ವೈಟ್‌ ಮೀಟ್‌, ಹಿತಮಿತವಾದ ಬೆಂದ ಪದಾರ್ಥ, ತಾಜಾ ತರಕಾರಿ, ಸಲಾಡ್‌, ಫಿಶ್‌ ಒಳ್ಳೆಯದು. ಇದೇ ತರಹ ಸ್ಟೆಂಟ್‌ ಹಾಕಿಸಿಕೊಂಡ ಹೃದ್ರೋಗಿಗಳೂ ಸಹ ತಮ್ಮ ಶುಗರ್‌, ಬಿ.ಪಿ., ಕೊಲೆಸ್ಟ್ರಾಲ್ ಮಟ್ಟಗಳನ್ನು ಸದಾ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರಬೇಕು. ಸಕಾಲದಲ್ಲಿ ನುರಿತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಔಷಧಿ ಸೇವಿಸಿ, ಲಘು ವ್ಯಾಯಾಮ, ವಾಕಿಂಗ್‌ ಇತ್ಯಾದಿ ರೂಢಿಸಿಕೊಳ್ಳಬೇಕು. ಅತಿಯಾದ ಸ್ಥೂಲಕಾಯ ನಿವಾರಣೆ ಬಲು ಮುಖ್ಯ ಎಂದರು. ಹಾಗೆಯೇ ಆಹಾರದ ಮೂಲಕ ಕ್ಯಾನ್ಸರ್‌ ತಡೆಗಟ್ಟಲು ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಜಾ ಹಸಿರು ತರಕಾರಿ, ಮೊಳಕೆಕಾಳು, ವೈಟ್‌ ಮೀಟ್‌ ಇರಲಿ. ಗಂಡಸರಲ್ಲಿ ಅನ್ನನಾಳದ ಕ್ಯಾನ್ಸರ್‌, ಲಿವರ್‌ ಕ್ಯಾನ್ಸರ್‌ ಇರುವಂತೆ ಹೆಂಗಸರಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚು. ಸ್ತನದಲ್ಲಿ ಗಂಟು ಕಾಣಿಸಿದ ತಕ್ಷಣ ವೈದ್ಯರ ಬಳಿ ಹೋಗಿ ಶೀಘ್ರ ತಪಾಸಣೆ ಮಾಡಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ