ಎಂಡೊಮೆಟ್ರೋಸಿಸ್‌ ಗರ್ಭಾಶಯಕ್ಕೆ ಸಂಬಂಧಪಟ್ಟ ಒಂದು ಸಮಸ್ಯೆ. ಈ ಸಮಸ್ಯೆ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತದೆ. ಏಕೆಂದರೆ ಗರ್ಭ ಧರಿಸಲು ಹಾಗೂ ಮಗುವಿಗೆ ಜನ್ಮ ನೀಡುವುದಕ್ಕೆ ಗರ್ಭಕೋಶ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಮಹಿಳೆಯರಲ್ಲಿ ಈ ಸಮಸ್ಯೆ ಗಂಭೀರವಾಗಿದ್ದರೆ, ಅದು ಬೇರೆ ಅಂಗಗಳ ಮೇಲೂ ತನ್ನ ದುಷ್ಪ್ರಭಾವ ಬೀರುತ್ತದೆ.

ಆಧುನಿಕ ಔಷಧಿ ಹಾಗೂ ಚಿಕಿತ್ಸಾ ಪದ್ಥತಿಗಳು ನೋವು ಹಾಗೂ ಬಂಜೆತನದಿಂದ ಮುಕ್ತಿ ದೊರಕಿಸಿಕೊಡುತ್ತವೆ. ಎಂಡೊಮೆಟ್ರೋಸಿಸ್‌ನ ಅರ್ಥ ಅದಕ್ಕೆ ತುತ್ತಾದ ಮಹಿಳೆಯರು ಗರ್ಭ ಧರಿಸುವುದೇ ಇಲ್ಲ ಎಂದಲ್ಲ, ಆ ಸಮಸ್ಯೆ ಇರುವ ಕಾರಣದಿಂದ ಗರ್ಭ ಧರಿಸುವಲ್ಲಿ ತೊಂದರೆಯಾಗುತ್ತದೆ.

ಏನಿದು ಎಂಡೊಮೆಟ್ರೋಸಿಸ್‌?

ಎಂಡೊಮೆಟ್ರೋಸಿಸ್‌ ಗರ್ಭಕೋಶದ ಆಂತರಿಕ ಪದರದ ಮೇಲೆ ಜೀವಕೋಶಗಳು ಅಸಾಮಾನ್ಯ ರೀತಿಯಲ್ಲಿ ಬೆಳೆಯುತ್ತವೆ. ಈ ಜೀವಕೋಶಗಳು ಗರ್ಭಕೋಶದ ಹೊರಭಾಗಕ್ಕೂ ತಮ್ಮ ಬೆಳವಣಿಗೆ ಪ್ರಕ್ರಿಯೆ ಮುಂದುವರಿಸಿದಾಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಈ ಪ್ರಕ್ರಿಯೆಯನ್ನು `ಎಂಡೊಮೆಟ್ರೋಸಿಸ್‌' ಎಂದು ಹೇಳಲಾಗುತ್ತದೆ.

ಈ ಇಂಪ್ಲಾಂಟ್ಸ್ ಸಾಮಾನ್ಯವಾಗಿ ಅಂಡಕೋಶ, ಫೆಲೋಪಿಯನ್‌ ಟ್ಯೂಬ್‌, ಗರ್ಭಕೋಶದ ಹೊರ ಪದರದ ಮೇಲೆ ಅಥವಾ ಕರುಳು ಇಲ್ಲಿ ಪೆಲ್ವಿಕ್‌ ಕುಹರದ ಪದರದ ಮೇಲೆ ಕಂಡುಬರುತ್ತವೆ. ಅವು ವೆಜೈನಾ, ಸರ್ವಿಕ್ಸ್ ಮತ್ತು ಬ್ಲ್ಯಾಡರ್‌ ಮೇಲೂ ಕಂಡುಬರಬಹುದು. ಬಹಳಷ್ಟು ಕಡಿಮೆ ಪ್ರಕರಣಗಳಲ್ಲಿ ಎಂಡೊಮೆಟ್ರೋಸಿಸ್‌ ಪೆಲ್ವಿಕ್ಸ್ ನ ಹೊರಗೆ ಲಿವರ್‌ ಮೇಲೆ ಅಥವಾ ಶ್ವಾಸಕೋಶ ಇಲ್ಲಿ ಮೆದುಳಿನ ಆಸುಪಾಸು ಸಹ ಕಂಡುಬರಬಹುದು.

ಎಂಡೊಮೆಟ್ರೋಸಿಸ್ಗೆ ಏನು ಕಾರಣ?

ಎಂಡೊಮೆಟ್ರೋಸಿಸ್‌ ಮಹಿಳೆಯರಿಗೆ ಸಂತಾನೋತ್ಪತ್ತಿಯ ಅವಧಿಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಇದರ ಹೆಚ್ಚಿನ ಪ್ರಕರಣಗಳು 25-35 ವರ್ಷದ ಮಹಿಳೆಯರಲ್ಲಿ ಕಂಡುಬರುತ್ತವೆ. ಆದರೆ ಎಷ್ಟೋ ಸಲ 10-11 ವರ್ಷದ ಹುಡುಗಿಯರಲ್ಲೂ ಈ ಸಮಸ್ಯೆ ಉಂಟಾಗಬಹುದು. ಮುಟ್ಟಂತ್ಯಗೊಂಡ ಮಹಿಳೆಯರಲ್ಲಿ ಇದರ ಸಮಸ್ಯೆ ಬಹಳ ಕಡಿಮೆ.

ವಿಶ್ವದಲ್ಲಿ ಅನೇಕ ಕೋಟಿ ಮಹಿಳೆಯರು ಈ ಸಮಸ್ಯೆಗೆ ತುತ್ತಾಗಿದ್ದಾರೆ. ಯಾವ ಮಹಿಳೆಯರು ಗಂಭೀರ ಪೆಲ್ವಿಕ್‌ ಪೇನ್‌ನಿಂದ ಬಳಲುತ್ತಿರುತ್ತಾರೊ, ಅವರಲ್ಲಿ ಶೇ.80ರಷ್ಟು ಜನರು ಎಂಡೊಮೆಟ್ರೋಸಿಸ್‌ ರೋಗಗ್ರಸ್ತರಾಗಿರುತ್ತಾರೆ.

ಇದರ ವಾಸ್ತವ ಕಾರಣ ತಿಳಿದುಬಂದಿಲ್ಲ. ಹಲವು ಅಧ್ಯಯನಗಳಿಂದ ತಿಳಿದು ಬಂದ ಸಂಗತಿಯೆಂದರೆ, ಯಾವ ಮಹಿಳೆಯರ ಬಾಡಿ ಮಾಸ್‌ ಇಂಡೆಕ್ಸ್ (ಬಿಎಂಐ) ಕಡಿಮೆ ಇರುತ್ತೋ ಅಂತಹ ಮಹಿಳೆಯರಲ್ಲಿ ಎಂಡೊಮೆಟ್ರೋಸಿಸ್‌ ಸಮಸ್ಯೆ ಅಧಿಕವಾಗಿರುತ್ತದೆ. 35ರ ಬಳಿಕ ತಾಯಿಯಾಗುವವರಲ್ಲಿ ಅಥವಾ ಎಂದೂ ತಾಯಿಯಾಗದ ಮಹಿಳೆಯರಲ್ಲೂ ಕೂಡ ಈ ಸಮಸ್ಯೆ ಕಾಣಿಸಬಹುದು. ಇದರ ಹೊರತಾಗಿ ಋತುಚಕ್ರ ಬಹುಬೇಗ ಶುರುವಾಗಿ ಮುಟ್ಟು ತಡವಾಗಿ ನಿಲ್ಲುತ್ತೊ ಅಂಥವರಲ್ಲೂ ಇದರ ಅಪಾಯ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆನುವಂಶೀಯತೆ ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಲಕ್ಷಣಗಳು

ಹೆಚ್ಚಿನ ಮಹಿಳೆಯರಲ್ಲಿ ಎಂಡೊಮೆಟ್ರೋಸಿಸ್‌ನ ಲಕ್ಷಣಗಳು ಗೋಚರಿಸುವುದೇ ಇಲ್ಲ. ಆದರೆ ಯಾವ ಲಕ್ಷಣಗಳು ಗೋಚರಿಸುತ್ತವೋ ಅದರಲ್ಲಿ ಪ್ರಮುಖವಾದವುಗಳೆಂದರೆ ಋತುಸ್ರಾದ ಸಂದರ್ಭದಲ್ಲಿ ಅತಿಯಾದ ನೋವು, ಋತುಚಕ್ರ ಅಥವಾ ಅಂಡ ಬಿಡುಗಡೆಯ ಸಮಯದಲ್ಲಿ ಪೆಲ್ವಿಕ್‌ ಪೇನ್‌ ಎಂಡೊಮೆಟ್ರೋಸಿಸ್‌ನ ಒಂದು ಲಕ್ಷಣವಾಗಿದೆ. ಆದರೆ ಇದು ಸಾಮಾನ್ಯ ಮಹಿಳೆಯರಲ್ಲೂ ಆಗಬಹುದು. ಈ ನೋವಿನ ತೀವ್ರತೆ ಪ್ರತಿ ತಿಂಗಳೂ ಬದಲಾಗಬಹುದು. ಬೇರೆ ಬೇರೆ ಮಹಿಳೆಯರಲ್ಲಿ ಬೇರೆ ಬೇರೆ ರೀತಿ ಗೋಚರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ