ಯಾವಾಗಲೂ ಹೆವಿ ಜ್ಯೂವೆಲರಿ ಧರಿಸುವ ಅಭ್ಯಾಸ ಹೊಂದಿದ್ದ ದೀಪಾಗೆ ಇದ್ದಕ್ಕಿದ್ದಂತೆ ತನ್ನ ಇಯರ್‌ ಲೋಬ್ಸ್ ಸೀಳುವ ಹಂತ ತಲುಪಿದಾಗ ಮತ್ತೆ ತನ್ನ ಕಿವಿಗಳಲ್ಲಿ ಜ್ಯೂವೆಲರಿ ಧರಿಸಲು ಸಾಧ್ಯವಾಗುವಂತೆ ಕಿವಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದೆಂದು ತಿಳಿಯಲಿಲ್ಲ.

ಅತ್ತ ದೀಪಾಳ ಅಕ್ಕನ ಮಗಳು ಇಯರ್‌ ರಿಂಗ್ಸ್ ತೊಟ್ಟು ಎಲ್ಲೋ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಳ್ಳರು ಅವಳ ರಿಂಗ್ಸ್ ನ್ನು ಕಿತ್ತುಕೊಂಡು ಓಡಿದರು. ಅದರಿಂದ ಕಿವಿಯ ಲೋಬ್ಸ್ ಮಧ್ಯದಲ್ಲೇ ಕತ್ತರಿಸಿ ಹೋಯಿತು.

ಹಾಗೆ ನೋಡಿದರೆ ಈ ಸಮಸ್ಯೆ ಕಿವಿಗಳಲ್ಲಿ ದೊಡ್ಡ ದೊಡ್ಡ ಟಾಪ್ಸ್ ಅಥವಾ ಜುಮಕಿಗಳನ್ನು ಧರಿಸಿರುವ ಮಹಿಳೆಯರಿಗೇ ಹೆಚ್ಚಾಗುತ್ತದೆ. ಅದರಿಂದ ಈ ಮಹಿಳೆಯರ ಕಿವಿಯ ರಂಧ್ರ ನಿಧಾನವಾಗಿ ದೊಡ್ಡದಾಗಲು ಶುರುವಾಗುತ್ತದೆ. ಇದರರ್ಥ ನೀವು ಜ್ಯೂವೆಲರಿ ಧರಿಸಲೇಬಾರದು ಎಂದಲ್ಲ. ಆದರೆ ನಿಮ್ಮ ಕಿವಿಗಳು ಕತ್ತರಿಸಿ ಹೋಗುವುದರಿಂದ ಪಾರಾಗಲು ನೀವು ಕಿವಿಯಲ್ಲಿ ಭಾರವಾದ ಜ್ಯೂವೆಲರಿ ಧರಿಸಬೇಡಿ ಮತ್ತು ರಾತ್ರಿ ಮಲಗುವಾಗ ಕಿವಿಯೋಲೆಗಳನ್ನು ಬಿಚ್ಚಿಡಲು ಮರೆಯಬೇಡಿ. ಜೊತೆಗೆ 2 ಗೇಜ್‌ಗಿಂತ ಹೆಚ್ಚು ಜ್ಯೂವೆಲರಿಯನ್ನು ಧರಿಸಬೇಡಿ.

ಲೋಬ್ಸ್ ಸರಿಪಡಿಸುವ ಟೆಕ್ನಿಕ್

ಕಿವಿಗಳ ಲೋಬ್ಸ್ ಸರಿಪಡಿಸುವ ಟೆಕ್ನಿಕ್‌ನ್ನು ಇಯರ್‌ ಲೋಬಿಂಗ್‌ ಎನ್ನುತ್ತಾರೆ. ಇಯರ್‌ ಲೋಬಿಂಗ್‌ ಒಂದು ಸಾಮಾನ್ಯ ಪ್ರಕ್ರಿಯೆ. ಇದನ್ನು ಮಾಡುವ ಮೊದಲು ಸಾಮಾನ್ಯವಾಗಿ ಆ ಭಾಗವನ್ನು ಮರಗಟ್ಟಿಸಲಾಗುತ್ತದೆ. ಕತ್ತರಿಸಿದ ಕಿವಿಯ ಭಾಗವನ್ನು ಹಿಂದಿನಿಂದ ಸೇರಿಸಿ ಹೊಲಿಗೆ ಹಾಕುತ್ತಾರೆ. ಅದಕ್ಕಾಗಿ ತ್ವಚೆಯ ಊತಕಗಳಲ್ಲಿ ತೆಳುವಾಗಿ ಕತ್ತರಿಸಿದ ಗುರುತನ್ನೂ ಹಾಕಲಾಗುತ್ತದೆ. ಊತಕಗಳಿಗೆ ಹಾಗೂ ಕಿವಿಗಳಿಗೆ ಸರಿಯಾದ ಶೇಪ್‌ ಕೊಡಲು ಹೀಗೆ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಗೆ 15 ನಿಮಿಷ ಹಿಡಿಯುತ್ತದೆ. ಇಯರ್‌ ಲೋಬಿಂಗ್‌ ಮಾಡಿಸಿದ ನಂತರ ಹಗುರವಾಗಿ ನೋವಿನ ಅನುಭವ ಆಗುತ್ತದೆ. ಅದಕ್ಕೆ ಪೇನ್‌ಕಿಲ್ಲರ್‌ ಕೊಡುತ್ತಾರೆ.

7 ದಿನಗಳ ನಂತರ ಸ್ವಿಚ್‌ ತೆಗೆಯಲಾಗುತ್ತದೆ. ನಂತರ ತ್ವಚೆಯನ್ನು ಕೋಮಲವಾಗಿ ಮಾಡಲು ಕೆಲವು ವಾರಗಳವರೆಗೆ ಯಾವುದಾದರೂ ಮಾಯಿಶ್ಚರೈಸರ್‌ ತೆಗೆದುಕೊಂಡು ಕೈಗಳಿಂದ ಹಗುರವಾಗಿ ಮಸಾಜ್‌ ಮಾಡಲು ಸಲಹೆ ನೀಡಲಾಗುತ್ತದೆ. ಅದರಿಂದ ಲೋಬ್ಸ್ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಸರ್ಜರಿಯ ನಂತರ ಕಿವಿಗಳನ್ನು ಇನ್ಛೆಕ್ಷನ್‌ನಿಂದ ರಕ್ಷಿಸಲು ದಿನಕ್ಕೆ 3 ಬಾರಿ ನೀರು ಮತ್ತು ಸೋಪ್‌ನಿಂದ ಸ್ವಚ್ಛಗೊಳಿಸಲು ಹೇಳಲಾಗುತ್ತದೆ.

ಗಮನಿಸಲು ಯೋಗ್ಯ ವಿಷಯ

ಇಯರ್‌ ಲೋಬಿಂಗ್‌ ಮಾಡಿಸಿದ ನಂತರ ಅಲ್ಲಿ ಕೆಂಪಾಗಿ ಊತ ಬಂದರೆ, ಕಿವಿಯನ್ನು ಮುಟ್ಟಿದರೆ, ನೋವಾದರೆ ಅಥವಾ ಕೀವು ತುಂಬಿಕೊಂಡರೆ ಹೈಡ್ರೋಜನ್‌ ಪೆರಾಕ್ಸೈಡ್‌ನಿಂದ ಅಥವಾ ಆಲ್ಕೋಹಾಲ್ ಯುಕ್ತ ಯಾವುದಾದರೂ ಆ್ಯಂಟಿಸೆಪ್ಟಿಕ್‌ನಿಂದ ಸ್ವಚ್ಛಗೊಳಿಸಿ. ಅದರ ಮೇಲೆ ಆ್ಯಂಟಿಬಯಾಟಿಕ್‌ ಕ್ರೀಂ ಹಚ್ಚಲು ಮರೆಯದಿರಿ. ಇಯರ್‌ ಲೋಬಿಂಗ್‌ ಸಂಪೂರ್ಣವಾಗಿ ಸರಿಹೋಗುವವರೆಗೆ ಅದರಲ್ಲಿ ಯಾವುದೇ ರೀತಿಯ ಜ್ಯೂವೆಲರಿ ಧರಿಸಬೇಡಿ. ಇಯರ್‌ ಲೋಬಿಂಗ್‌ ಟ್ರೀಟ್‌ಮೆಂಟ್‌ನ 48 ಗಂಟೆಗಳ ನಂತರ ಗಾಯ ಇದ್ದರೆ, ನಿಮಗೆ ಜ್ವರ ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.

- ಬಿ. ಗಾಯತ್ರಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ