ನೀವು ಎಂಗೇಜ್‌ಮೆಂಟ್‌ ಸೆರೆಮನಿಯಿಂದ ರಿಸೆಪ್ಶನ್‌ ಪಾರ್ಟಿಯವರೆಗೂ ನಿಮ್ಮ ಲುಕ್ಸ್ ನ್ನು ಡಿಫರೆಂಟ್‌ ಆಗಿ ಇರಿಸಿಕೊಳ್ಳಲು ಬಯಸಿದರೆ, ನಿಮ್ಮ ಹೇರ್‌ಸ್ಟೆಲ್‌ನಲ್ಲಿ ಹೆಚ್ಚಿನ ಕ್ರಿಯೇಟಿವಿಟಿ ತರಬೇಕು. ಹೇರ್‌ಸ್ಟೈಲ್ ‌ಎಕ್ಸ್ ಪರ್ಟ್ಸ್ ಈ ಕುರಿತು ನೀಡಿರುವ ಮಾಹಿತಿಗಳು ಹೀಗಿವೆ.

ಸೈಡ್ಮೆಸಿ ಲುಕ್ಸ್ಟೈಲ್ ‌: ಕೂದಲಿನಲ್ಲಿ ಬಾಚಣಿಗೆಯಾಡಿಸಿ, ಹಿಂಬದಿಯ ತುದಿಯ ಕೂದಲಿನಿಂದ 1-1 ಸೆಕ್ಷನ್‌ ತೆಗೆದುಕೊಂಡು ಮತ್ತೊಂದು ಸೈಡ್‌ನಲ್ಲಿ ಪಿನ್‌ನಿಂದ ಸಣ್ಣ ಸಣ್ಣ ಸೆಕ್ಷನ್‌ಗಳಿಂದ ಟ್ವಿಸ್ಟ್ ಮಾಡುತ್ತಾ ಪಿನ್‌ಅಪ್‌ ಮಾಡಿ. ಹೀಗೆಯೇ ಹಿಂಬದಿಯ ಕೂದಲಿಗೂ ಮಾಡಿ. ನಂತರ ಸ್ಪ್ರೇ ಮಾಡಿ, ಫ್ಲವರ್‌ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

ಫ್ರೆಂಚ್ರೋಲ್ ಸ್ಟೈಲ್ ‌: ಇಡೀ ಕೂದಲನ್ನು ಚೆನ್ನಾಗಿ ಬಾಚಿ ಹದಗೊಳಿಸಿ, ಇಯರ್‌ ಟು ಇಯರ್‌ ಕೂದಲಿನ ಒಂದು ಸೆಕ್ಷನ್‌ಬೇರ್ಪಡಿಸಿ, ಈ ಸೆಕ್ಷನ್‌ನಿಂದಲೇ ಕೂದಲನ್ನು ವಿಂಗಡಿಸಿ 1-1 ಸೆಕ್ಷನ್‌ ಮಾಡಿ. ನಂತರ ಅದನ್ನು ಬ್ಯಾಕ್‌ ಕೋಂಬಿಂಗ್‌ ಮಾಡುತ್ತಾ ಸ್ಪ್ರೇ ಮಾಡಿ. ನಂತರ ಈ ಜೊಂಪೆ ಕೂದಲನ್ನೇ ಎತ್ತರದ ಪಫ್‌ ಮಾಡಿ, ಅದನ್ನು ಪಿನ್‌ನಿಂದ ಸೆಟ್‌ ಮಾಡಿ. ಈಗ ಹಿಂಬದಿಯ ಕೂದಲಿನಲ್ಲಿ ಚೆನ್ನಾಗಿ ಬಾಚಣಿಗೆಯಾಡಿಸಿ, ಅದನ್ನು ಫ್ರೆಂಚ್‌ ರೋಲ್ ‌ಸ್ಟೈಲ್‌ನಲ್ಲಿ ಮತ್ತೊಂದು, ಪಿನ್‌ನಿಂದ ಸೆಟ್‌ ಮಾಡಿ. ಉಳಿದ ಕೂದಲನ್ನು ಫ್ರೆಂಚ್‌ರೋಲ್‌ಗೆ ಹಾಕಿ, ಯೂ ಪಿನ್‌ ಅಳವಡಿಸಿ, ಸ್ಪ್ರೇ ಮಾಡಿ.

ಈಗ ಹಿಂಬದಿಯ ಫ್ರೆಂಚ್‌ ರೋಲ್ ಜಡೆ ಮೇಲೆ ಡ್ರೆಸ್‌ಗೆ ಹೊಂದುವ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಅಳವಡಿಸಿ, ಹೇರ್‌ಸ್ಟೈಲ್ ಡೆಕೋರೇಟ್‌ ಮಾಡಿ.

ಪೋನಿ ವಿತ್ಫ್ರೆಂಚ್ಸ್ಟೈಲ್ : ಕೂದಲನ್ನು  ಇಯರ್‌ ಟು ಇಯರ್‌ ವಿಂಗಡಿಸಿ, ಹಿಂಬದಿಯ ಕೂದಲಿನಿಂದ ಪೋನಿ ಮಾಡಿಕೊಳ್ಳಿ. ಈಗ ಪೋನಿಯ ಕೂದಲನ್ನು ಬ್ಯಾಕ್‌ ಕೋಂಬಿಂಗ್‌ ಮಾಡಿ. ನಂತರ ಸಾಫ್ಟ್ ಸ್ಟಫಿಂಗ್‌, ಪೋನಿಯ ತುದಿಗೆ ಅದನ್ನು ಸುತ್ತಿಕೊಳ್ಳುತ್ತಾ, ಮೇಲಿನವರೆಗೂ ಕೊಂಡುಹೋಗಿ ಹಾಗೂ ಪಿನ್‌ನಿಂದ ಸೆಟ್‌ ಮಾಡಿ. ಈಗ ಸ್ಟಫಿಂಗ್‌ ಮೇಲೆ ಸುತ್ತಾದ ಕೂದಲನ್ನು ಬೆರಳುಗಳಿಂದ ಚೆನ್ನಾಗಿ ಹರಡಿ, ದೂರದಿಂದ ಸ್ಪ್ರೇ ಮಾಡಿ. ಈಗ ಮುಂಭಾಗದ ಇಯರ್‌ ಟು ಇಯರ್‌ ಕೂದಲಿನ ಎರಡೂ ಬದಿಗಳನ್ನು ಫ್ರೆಂಚ್‌ ಸ್ಟೈಲ್‌‌ನಲ್ಲಿ ಸೆಟ್‌ ಮಾಡಿ, ಪಿನ್‌ ಅಳವಡಿಸಿ.

ಈಗ ಫ್ರೆಂಚ್‌ ಸ್ಟೈಲ್‌‌ನ ಮತ್ತೊಂದು ಕೃತಕ ಕೇಶಭೂಷಣ ಅಳವಡಿಸಿ ಮತ್ತು ಇನ್ನೊಂದು ಫ್ರೆಂಚ್‌ ಸ್ಟೈಲ್‌ನತ್ತ ಹೊಳೆಹೊಳೆಯುವ ಸ್ಟೋನ್‌ಯುಕ್ತ ಬ್ರೋಚ್‌ ಆ್ಯಕ್ಸೆಸರೀಸ್‌ ಅಳವಡಿಸುವ ಮುನ್ನ ಕೂದಲನ್ನು ಸೆಟ್‌ ಮಾಡಲು ಸ್ಪ್ರೇ ಮಾಡಿ ಆಮೇಲೆ ಆ್ಯಕ್ಸೆಸರೀಸ್‌ಅಳವಡಿಸಿ.

ಫಿನಿಶಿಂಗ್ಫ್ರೆಂಚ್ರೋಲ್ ‌: ಕೂದಲನ್ನು ಚೆನ್ನಾಗಿ ಬಾಚಿದ ನಂತರ ಒಂದು ಬದಿಗೆ ಬೈತಲೆ ತೆಗೆಯಿರಿ. ಈಗ ಒಂದು ಸೈಡ್‌ನ ಕೂದಲಿನಿಂದ ಪೋನಿ ಮಾಡಿ. ಈಗ ಪೋನಿಯ 30% ಕೂದಲನ್ನು ತೆಗೆದುಕೊಂಡು ಉಳಿದ ಕೂದಲನ್ನು ಪೋನಿಯ ಮೇಲೆಯೇ ಸುತ್ತಿಕೊಂಡು, ನೆಟ್‌ ಹಾಕಿ, ಪಿನ್‌ನಿಂದ ಸೆಟ್‌ ಮಾಡಿ. ಉಳಿದ ಕೂದಲನ್ನು ಒಳಭಾಗಕ್ಕೆ ಬ್ಯಾಕ್‌ ಕೋಂಬಿಂಗ್‌ ಮಾಡಿ, ಅದನ್ನು ಪೋನಿಯಲ್ಲಿ ಸುತ್ತಿಕೊಳ್ಳಿ. ಮುಂಭಾಗದಲ್ಲಿ ಉಳಿದ ಕೂದಲನ್ನು ಬ್ಯಾಕ್‌ ಕೋಂಬಿಂಗ್‌ ಮಾಡಿ ಪಫ್‌ ಮಾಡಿಬಿಡಿ. ಈಗ ಇಡೀ ಹೇರ್‌ಸ್ಟೈಲ್ ಮೇಲೆ ಸ್ಪ್ರೇ ಮಾಡಿ. ನಂತರ ಬ್ಯೂಟಿಫುಲ್ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ