ಸೀಮಾಳ ಮದುವೆಯಾಗಿ 7 ವರ್ಷವಾಗಿತ್ತು. ಆದರೂ ಆಕೆಗೆ ಮಗುವಾಗಿರಲಿಲ್ಲ. ಆಕೆಯ ಗಂಡ ಮೋಹನ್‌ ಅವಳನ್ನು `ಬಂಜೆ' ಎಂದು ಕರೆದು ದಿನ ಅವಳನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದ. ವೈದ್ಯರ ಪರೀಕ್ಷೆಯಿಂದ ಸೀಮಾ ತಾಯಿಯಾಗುವ ಸಾಧ್ಯತೆ ಇದೆಯೆಂದು ತಿಳಿದು ಬಂದಿತ್ತು.

ಸೀಮಾಳ ಪತಿ ಮೋಹನ್‌ ಮಾತ್ರ ಎಂದೂ ತನ್ನನ್ನು ತಾನು ಪರೀಕ್ಷೆಗೊಳಪಡಿಸಲಿಲ್ಲ. ಆದರೆ ಅವನು ಸೀಮಾಳಿಗೆ ಕಷ್ಟ ಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅದೊಂದು ದಿನ ಪತಿಯ ದೈನಂದಿನ ಕಾಟಕ್ಕೆ ಬೇಸತ್ತು ಸೀಮಾ ಗಂಡನೊಂದಿಗೆ ಜಗಳವಾಡಿಬಿಟ್ಟಳು. ಈ ಪ್ರಕರಣ ಪೊಲೀಸ್‌ ಠಾಣೆಗೆ ಹಾಗೂ ಅಲ್ಲಿಂದ ಮುಂದೆ ನ್ಯಾಯಾಲಯದ ಕಟಕಟೆಯವರೆಗೂ ಹೋಗಿ ತಲುಪಿತು. ದೈನಂದಿನ ಅಪಮಾನ ಹಾಗೂ ಮಾನಸಿಕ ಹಿಂಸೆಗೆ ಪ್ರತಿಯಾಗಿ ಅವಳು ಗಂಡನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದಳು.

ಡಾ. ಸಂಧ್ಯಾ ಹೀಗೆ ಹೇಳುತ್ತಾರೆ, ಬಂಜೆತನಕ್ಕೆ ಸ್ತ್ರೀ-ಪುರುಷ ಇಬ್ಬರಲ್ಲಿ ಯಾರೊಬ್ಬರೂ ಕಾರಣವಾಗಿರಬಹುದು. ಸಮಾಗಮದ ಸಮಯದಲ್ಲಿ ಪುರುಷನ ವೀರ್ಯಾಣು ಸ್ತ್ರೀಯ ಅಂಡಾಣುವಿನ ಜೊತೆ ಮಿಲನಾಗುವುದನ್ನೇ `ಗರ್ಭಧಾರಣೆ' ಎಂದು ಕರೆಯುತ್ತಾರೆ.

ಅದೆಷ್ಟೋ ಸಲ ಪರಿಪಕ್ವ ಅಂಡಾಣು ಗರ್ಭಕೋಶದ ತನಕ ತಲುಪುದೇ ಇಲ್ಲ. ಆ ಕಾರಣದಿಂದಾಗಿಯೇ ಮಹಿಳೆ ಗರ್ಭ ಧರಿಸುವುದಿಲ್ಲ.

ಒಮ್ಮೊಮ್ಮೆ ಸಿಫಲಿಸ್‌, ಗನೋರಿಯಾ, ಟಿ.ಬಿ., ಹಿಮೋಗ್ಲೋಬಿನ್‌ ಕೊರತೆ ಇವು ಅಂಡಾಣು ಗರ್ಭಕೋಶದ ತನಕ ತಲುಪದೇ ಇರಲು ಅಡ್ಡಿಯಾಗಿ ಪರಿಣಮಿಸುತ್ತವೆ.

ಪುರುಷನ ವೀರ್ಯಾಣು ಅತ್ಯಂತ ದುರ್ಬಲವಾಗಿರುವುದು ಅಥವಾ ವೀರ್ಯನಾಳ ಮುಚ್ಚಿದ್ದರೆ ಈ ಕಾರಣದಿಂದಲೂ ಮಹಿಳೆ ಗರ್ಭಧಾರಣೆಯಿಂದ ವಂಚಿತಳಾಗುತ್ತಾಳೆ.

ಪುರುಷರ ಸಮಸ್ಯೆ

ಪುರುಷರ ಈ ತೆರನಾದ ಸಮಸ್ಯೆಗೆ ಮುಖ್ಯ ಕಾರಣಗಳೆಂದರೆ, ಬೊಜ್ಜು, ಹೃದ್ರೋಗ, ಮಧುಮೇಹ, ಕ್ಷಯ, ಗನೋರಿಯಾ ರೋಗಗಳು. ಈ ಕಾರಣಗಳಿಂದಾಗಿ ವೀರ್ಯಾಣು ನಾಳ ಬಂದ್‌ ಆಗುತ್ತದೆ ಅಥವಾ ಎಷ್ಟೋ ಸಲ ಅದು ಸಂಕುಚನಗೊಳ್ಳುತ್ತದೆ. ಈ ಕಾರಣದಿಂದಾಗಿ ವೀರ್ಯಾಣು ವೀರ್ಯದ ದಾರಿಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.

ಅಪಘಾತದ ಸಂದರ್ಭದಲ್ಲಿ ಅಂಡಕೋಶಕ್ಕೆ ಪೆಟ್ಟು ತಗುಲುವುದು, ಅಂಡಕೋಶದ ರೋಗ ಮತ್ತು ಥೈರಾಯ್ಡ್ ಗ್ರಂಥಿಯ ರೋಗ ಅಂತಃಸ್ರಾವದ ಗ್ರಂಥಿಗಳ ಕಾರ್ಯಸಾಮರ್ಥ್ಯ ಹಾಗೂ ಚಲನೆಯ ಕೊರತೆಯುಂಟಾಗುತ್ತದೆ. ಅದರಿಂದಾಗಿ ತಂದೆಯಾಗದಿರುವ ಸಮಸ್ಯೆ ಉತ್ಪನ್ನವಾಗುತ್ತದೆ.

ಬೇರೆ ಕಾರಣಗಳು

ಹುಟ್ಟು ವಿಕೃತಿಗಳ ಕಾರಣದಿಂದ ಅಂಡಗ್ರಂಥಿ ಮತ್ತು ಗುಪ್ತಾಂಗದ ಬೆಳವಣಿಗೆ ಆಗದಿರುವುದು. ವೀರ್ಯಾಣುವಿನ ಕೊರತೆ ಅಂದರೆ ಪರಿಪೂರ್ಣ ರೂಪದಲ್ಲಿ ನಿರ್ಮಾಣವಾಗದಿರುವುದು ಹಾಗೂ ವೀರ್ಯದ ಮುಖಾಂತರ ವೃಷಣ ಕೋಶದಲ್ಲಿ ಪ್ರವೇಶಿಸದಿರುವುದು.

ಸಮಾಗಮ ಕ್ರಿಯೆಯ ಬಗ್ಗೆ ಪರಿಪೂರ್ಣ ಜ್ಞಾನ ಇಲ್ಲದೆ ಇರುವುದು. ಈ ಕಾರಣದಿಂದಾಗಿ ಪತ್ನಿಯ ಜೊತೆ ಸೂಕ್ತ ರೀತಿಯಲ್ಲಿ ಸಮಾಗಮ ಹೊಂದದೇ ಇರುವುದು.

ಸಮಾಗಮದ ಸಮಯದಲ್ಲಿ  ಗುಪ್ತಾಂಗದಲ್ಲಿ ನಿಮಿರಿನ ಕೊರತೆಯ ಕಾರಣದಿಂದ ವೀರ್ಯ ಒಳಕ್ಕೆ ಪ್ರವೇಶಿಸದೇ ಇರುವುದು.

ಅಧಿಕ ಧೂಮಪಾನ ಹಾಗೂ ಮದ್ಯಸೇವನೆ.

ಚಿಕಿತ್ಸೆ ಏನು?

ಡಾ. ಸಂಧ್ಯಾ ಹೇಳುವುದೇನೆಂದರೆ, ಪುರುಷರ ಸಮಸ್ಯೆಗಳಿಗೆ ಉಪಾಯ ಕಂಡುಕೊಳ್ಳುವುದು ಈಗ ಸುಲಭವಾಗಿದೆ. ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಚಿಕಿತ್ಸೆಯ ವಿಧಾನಗಳೆಂದರೆ :

ಮಧುಮೇಹ, ರಕ್ತದೊತ್ತಡಕ್ಕೆ ಪರಿಹಾರ ಹಾಗೂ ದೌರ್ಬಲ್ಯ ಮತ್ತು ರಕ್ತದ ಕೊರತೆಯನ್ನು ನೀಗಿಸುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ