ಕೊರೋನಾ ಮಹಾಮಾರಿಯು ವಿಶ್ವದೆಲ್ಲೆಡೆಯ ಜನರನ್ನು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಒತ್ತಾಯಿಸುತ್ತಿದೆ. ಪ್ರತಿಯೊಬ್ಬರೂ ಇಮ್ಯುನಿಟಿ ಬೂಸ್ಟರ್‌ ಸಾಮಗ್ರಿಗಳನ್ನು ತಮ್ಮ ಡಯೆಟ್‌ನ ಭಾಗವಾಗಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಹೆಚ್ಚಿನ ಭಾರತೀಯರು ಸಸ್ಯಾಹಾರಿಗಳು ಹಾಗೂ ಅಳೆದೂ ಸುರಿದೂ ಎಚ್ಚರಿಕೆಯ ಪ್ರಮಾಣದ ಆಹಾರ ಸೇವಿಸುವರು. ಆದರೆ ಫುಡ್‌ ಗ್ಲೋಬಲೈಸೇಶನ್‌ನ ಈ ಯುಗದಲ್ಲಿ ಅವರ ಆಹಾರಾಭ್ಯಾಸದ ಒಂದು ಭಾಗ ಫಾಸ್ಟ್ ಫುಡ್‌ ಆಗಿಹೋಗಿದೆ. ಹೀಗಿರುವಾಗ ಆರೋಗ್ಯ ಮತ್ತು ಇಮ್ಯುನಿಟಿಗಾಗಿ ಕೇವಲ ಆಹಾರವನ್ನಷ್ಟೇ ಅವಲಂಬಿಸುವ ಬದಲು, ನೈಸರ್ಗಿಕ ಗುಣಗಳಿಂದ ಸಮೃದ್ಧವಾಗಿರುವ ವಸ್ತುಗಳಾದ ಚ್ಯವನ್‌ ಪ್ರಾಶ್‌ ಇತ್ಯಾದಿಗಳನ್ನು ಸಹ ನಿಮ್ಮ ಆರೋಗ್ಯಕರ ಆಹಾರ ಸೇವನೆಯ ಒಂದು ಭಾಗವಾಗಿಸಿಕೊಳ್ಳಿ. ಆಗ ಲೈರಸ್‌ ಮತ್ತು ಬ್ಯಾಕ್ಟೀರಿಯಾದೊಂದಿಗೆ ಹೋರಾಡುವ ನಿಮ್ಮ ಶಕ್ತಿ ಎರಡುಪಟ್ಟು ಹೆಚ್ಚುತ್ತದೆ.

ಏನಿದರ ಲಾಭಗಳು?

ಸಾಮಾನ್ಯವಾಗಿ ಜನ ಚ್ಯವನ್‌ ಪ್ರಾಶ್‌ನ್ನು ಚಳಿಗಾಲದಲ್ಲಷ್ಟೇ ಸೇವಿಸುತ್ತಾರೆ, ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭಗಳಿವೆ ಎಂದರೆ, ಯಾವುದೇ ಋತುವಿನಲ್ಲಾದರೂ ಇದನ್ನು ಸೇವಿಸಬಹುದು. ಚ್ಯವನ್‌ ಪ್ರಾಶ್‌ ಕಾಮನ್‌ ಯಾ ಅಲರ್ಜಿ ಕಾರಣದ ಕೋಲ್ಡ್ ಫ್ಲೂ ವಿರುದ್ಧ ಹೋರಾಡಲು ನಿಮ್ಮ ಇಮ್ಯುನಿಟಿಯನ್ನು ಇನ್ನಷ್ಟು ಸ್ಟ್ರಾಂಗ್‌ ಮಾಡುತ್ತದೆ. ಇದರ ತಯಾರಿಯಲ್ಲಿ ಬೆಟ್ಟದ ನೆಲ್ಲಿಕಾಯಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ವಿಟಮಿನ್‌ `ಸಿ'ಯ ಮೂಲ ಸ್ರೋತ.

ಆದರೆ, ಚ್ಯವನ್‌ ಪ್ರಾಶ್‌ ತಯಾರಿಕೆಗಾಗಿ ನೆಲ್ಲಿಯನ್ನು ಒಣಗಿಸಿ, ಸುಡುವ ಪ್ರಕ್ರಿಯೆಯಲ್ಲಿ ಅದು ಹಲವು ಹಂತಗಳನ್ನು ದಾಟಬೇಕಾಗುತ್ತದೆ. ಆದರೂ ಇದರಲ್ಲಿನ ವಿಟಮಿನ್‌ ಸಿ ತನ್ನ ಪ್ರಭಾವವನ್ನು ಎಳ್ಳಷ್ಟೂ ಕಳೆದುಕೊಳ್ಳುವುದಿಲ್ಲ.

ನೆಲ್ಲಿ ಜೊತೆ ಇದರಲ್ಲಿ ದೇಶಿ ತುಪ್ಪ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಕೇಸರಿ ಹಾಗೂ ಆಯ್ದ ಹಲವು ಆಯುರ್ವೇದದ ಗಿಡಮೂಲಿಕೆಗಳು ತುಂಬಿರುತ್ತವೆ. ಈ ಎಲ್ಲಾ ಘಟಕಗಳಿಗೂ ಬಹಳ ಲಾಭಕಾರಿ ಅಂಶಗಳಿವೆ. ಇದರಿಂದ ಇಮ್ಯುನಿಟಿ ಸ್ಟ್ರಾಂಗ್‌ ಆಗುವುದಲ್ಲದೆ ಶ್ವಾಸಕೋಶ, ಹೃದಯ, ಬುದ್ಧಿಶಕ್ತಿ ಕೂಡ ಎಷ್ಟೋ ಚುರುಕಾಗುತ್ತದೆ. ಇದರಲ್ಲಿ ಜೇನುತುಪ್ಪ ಸಹ ಬ್ಯಾಲೆನ್ಸ್ಡ್ ಪ್ರಮಾಣದಲ್ಲಿ ಬೆರೆತಿರುತ್ತದೆ. ಜೇನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆ ಜೊತೆಗೆ ಗಂಟಲಿನ ಬೇನೆಗಳನ್ನು ನಿವಾರಿಸುತ್ತದೆ. ಮೇಲಿನ ಅಂಶಗಳ ಬ್ಯಾಲನ್ಸ್ಡ್ ಮಿಶ್ರಣ, ಚರ್ಮ ಮತ್ತು ಕೂದಲಿಗೆ ಹೆಚ್ಚು ಲಾಭಕಾರಿ.

ಚ್ಯವನ್‌ ಪ್ರಾಶ್‌ ಪಚನ ಕ್ರಿಯೆಯನ್ನು ಸಹ ಚುರುಕಾಗಿಸುತ್ತದೆ. ಇದು ಲಿವರ್‌ ಮತ್ತು ಕರುಳನ್ನು ಸ್ಟ್ರಾಂಗ್‌ಗೊಳಿಸಿ, ಅದರ ಪ್ರಕ್ರಿಯೆಯನ್ನು ರಿಪೇರಿಗೊಳಿಸುವಲ್ಲಿಯೂ ಮುಂದು. ಪಚನಶಕ್ತಿ ಚುರುಕಾಗಿಸುವುದರಿಂದ ಲಿವರ್‌ ಕ್ಯಾನ್ಸರ್‌ ಇತ್ಯಾದಿಗಳ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

ಹೇಗೆ ಸೇವಿಸುವುದು?

ಇದರ ಸೇವನೆಯನ್ನು ಯಾವ ವಯಸ್ಸಿನವರಾದರೂ ಮಾಡಬಹುದು, ಆದರೆ ತೀರಾ ಚಿಕ್ಕ ಮಕ್ಕಳಿಗೆ ಇದರ ಸೇವನೆ ಬೇಡ. ವಯಸ್ಕರು 1-1 ಚಮಚ ಚ್ಯವನ್‌ ಪ್ರಾಶ್‌ವನ್ನು ಹಾಲಿನೊಂದಿಗೆ ಸೇವಿಸಬಹುದು. ಮಧುಮೇಹಿಗಳು, ಗರ್ಭವತಿಯರು ವೈದ್ಯರ ಸಲಹೆ ಪಡೆದು ನಂತರವೇ ಇದನ್ನು ಸೇವಿಸತಕ್ಕದ್ದು. ಒಂದು ವೇಳೆ ಹುಳಿ ಪದಾರ್ಥ ಅಥವಾ ಹುರಿದ ಕರಿದ ಮಸಾಲೆಯುಕ್ತ ಆಹಾರ ಸೇವಿಸಿದಂದು, ಆ ದಿನ ಇದನ್ನು ಸೇವಿಸದಿರುವುದೇ ಸರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ