ಹುಟ್ಟುವ ಮಗುವನ್ನು ಪ್ರಾಣಾಂತಿಕ ರೋಗದಿಂದ ಕಾಪಾಡಬಹುದಾಗಿದೆ. ಬೆಂಗಳೂರಿನ ಸೀಮಾಗೆ ಸಿಸೇರಿಯನ್ ಹೆರಿಗೆಯಾಯಿತು. ಅದಕ್ಕೂ ಮೊದಲು ಆಕೆಗೆ 2 ಸಲ 3ನೇ ಹಾಗೂ 5ನೇ ತಿಂಗಳಲ್ಲಿ ಗರ್ಭಪಾತ ಆಗಿತ್ತು. ಈ ಸಲ ಸುಸೂತ್ರವಾಗಿ ಮಗು ಜನಿಸಿದ್ದು ಆಕೆಯ ಕುಟುಂಬದವರಿಗೆ ನೆಮ್ಮದಿಯ ವಿಷಯವಾಗಿತ್ತು. ಆರು ತಿಂಗಳವರೆಗೂ ಆಕೆ ಮಗುವಿಗೆ ಎದೆಹಾಲು ಕುಡಿಸಿದ್ದಳು. 7ನೇ ತಿಂಗಳಿನಿಂದ ಮಗುವಿಗೆ ಬೇರೆ ಹಾಲು ಕುಡಿಸತೊಡಗಿದಾಗ ವಾಂತಿ ಮತ್ತು ಬೇಧಿಯಾಗತೊಡಗಿತು. ಕ್ರಮೇಣ ಆ ಮಗು ಆಹಾರ ತಿನ್ನುವುದನ್ನೇ ನಿಲ್ಲಿಸಿಬಿಟ್ಟಿತು. ಹೀಗಾಗಿ ಅದರ ಬೆಳವಣಿಗೆಯೇ ನಿಂತುಹೋಯಿತು. ಬೇರೆ ಮಕ್ಕಳ ಹಾಗೆ ಅದಕ್ಕೆ ಮಾತನಾಡಲು, ನಡೆದಾಡಲು ತೊಂದರೆಯಾಗತೊಡಗಿತು. ಇದರ ಜೊತೆಗೆ ಅದು ಸಿಡಿಮಿಡಿಯ ಸ್ವಭಾವದ್ದಾಯಿತು.

ಸೀಮಾಳ ಪತಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ವೈದ್ಯರು ಅದಕ್ಕೆ `ಸಿಟ್ರುಲಿನೆಮಿಯಾ' ಇದೆ ಎಂದು ಹೇಳಿದರು. ಆ ಕಾರಣದಿಂದ ರಕ್ತದಲ್ಲಿ ಅಮೋನಿಯಾ ಪ್ರಮಾಣ ಏರಿಕೆಯಾಗುತ್ತದೆ. ಪ್ರೋಟೀನ್‌ನ ಕೊರತೆಯ ಕಾರಣದಿಂದ ಅದರ ಮೆದುಳಿನ ವಿಕಾಸ ಸ್ಥಗಿತಗೊಳ್ಳುತ್ತದೆ. ಹೀಗಾಗಿ ವೈದ್ಯರು ಆ ಮಗುವಿಗೆ ಸ್ಪೆಷಲ್ ಡಯೆಟ್‌ ಹೇಳಿದರು. ಅದರಲ್ಲಿ ಪ್ರೋಟೀನ್‌ನ ಪ್ರಮಾಣ ಕಡಿಮೆ ಇರುತ್ತದೆ.

ಆದರೆ ಆ ಬಾಲಕಿಯ ತಂದೆತಾಯಿಗಳು ತುಂಬಾ ಗಾಬರಿಗೊಂಡರು. ಒಂದು ವೇಳೆ ಅಮೋನಿಯಾದ ಪ್ರಮಾಣ ಹೆಚ್ಚುತ್ತಾ ಹೋಗಿ  ಆಕೆಯ ಮೆದುಳಿಗೆ ಎಲ್ಲಿ ಹಾನಿಯುಂಟು ಮಾಡಿಬಿಡುತ್ತದೊ ಎಂದು ಹೆದರಿದ್ದರು. ಅವರು ಇಂಟರ್‌ನೆಟ್‌ನಲ್ಲಿ ಈ ಬಗ್ಗೆ ಸಾಕಷ್ಟು ಶೋಧ ನಡೆಸಿದಾಗ, ಈ ರೋಗ ಅತ್ಯಂತ ಕಡಿಮೆ ಸಂಖ್ಯೆಯ ಮಕ್ಕಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದಕ್ಕಿರುವ ಏಕಮಾತ್ರ ಪರಿಹಾರವೆಂದರೆ ಲಿವರ್‌ ಟ್ರಾನ್ಸ್ ಪ್ಲಾಂಟೇಶನ್‌.

ಈ ಕುರಿತಂತೆ ಅವರು ತಜ್ಞ ವೈದ್ಯರ ಬಳಿ ಹೋದಾಗ, ಮಗುವಿಗೆ `ಸಿಟ್ರುಲಿನೆಮಿಯಾ' ಇರುವುದನ್ನು ಖಚಿತಪಡಿಸಿದರು. ಆಗ ಮಗುವಿನ ತಂದೆ ಅದರ ಲಿವರ್‌ ಟ್ರಾನ್ಸ್ ಪ್ಲಾಂಟೇಶನ್‌ಗೆ ತಮ್ಮ ಒಪ್ಪಿಗೆ ಸೂಚಿಸಿದರು.

ಈ ಆಪರೇಶನ್‌ ನಿಜಕ್ಕೂ ಸವಾಲಿನಿಂದ ಕೂಡಿತ್ತು. ಏಕೆಂದರೆ ಅದನ್ನು ಅಷ್ಟು ಕಡಿಮೆ ವಯಸ್ಸಿನ ಮಗುವಿಗೆ ಮಾಡಬೇಕಿತ್ತು. ವೈದ್ಯರು ಮಗುವಿಗೆ ಆಪರೇಶನ್‌ ಮಾಡಿದರು. ಅದು ಯಶಸ್ವಿಯಾಯಿತು. ಈ ಕುರಿತಂತೆ ವೈದ್ಯರು ಹೀಗೆ ಹೇಳುತ್ತಾರೆ, ``ಸಿಟ್ರುಲಿನೆಮಿಯಾ ನವಜಾತ ಶಿಶುಗಳಲ್ಲಿ ಕಂಡುಬರುವ ಒಂದು ಅಪರೂಪದ ಕಾಯಿಲೆ. ಹುಟ್ಟಿದ 3-4 ತಿಂಗಳುಗಳ ಬಳಿಕ ಅದು ಇರುವುದರ ಬಗ್ಗೆ ತಿಳಿಯುತ್ತದೆ. ಅದು ಅಪಾಯಕಾರಿಯಾಗಿ ಪರಿಣಮಿಸಬಹುದು. ಆರಂಭದಲ್ಲಿಯೇ ಈ ರೋಗ ಇರುವುದು ಗೊತ್ತಾಗಿಬಿಟ್ಟರೆ ಮಗುವಿನ ಜೀವ ಕಾಪಾಡಬಹುದು. ಈ ರೋಗದ ಸ್ಥಿತಿಯಲ್ಲಿ ಪ್ರೋಟೀನ್‌ನ್ನು ಪಚನ ಮಾಡಿಕೊಳ್ಳದೇ ಇರುವ ಸ್ಥಿತಿಯಲ್ಲಿ ದೇಹದಲ್ಲಿ ಎಂಜೈಮ್ ನ ಕೊರತೆ ಉಂಟಾಗುತ್ತದೆ. ಈ ಕಾರಣದಿಂದ ಮಗುವಿನ ಬೆಳವಣಿಗೆ ನಿಂತುಹೋಗುತ್ತದೆ.

ಜೀನ್ಸ್ ನಲ್ಲಿ ತೊಂದರೆ ಲಕ್ಷ ತಂದೆ ತಾಯಿಗಳಲ್ಲಿ ಒಬ್ಬರಿಗೆ ಇರುತ್ತದೆ. ಲಿವರ್‌ ಡೊನೇಟ್‌ ಮಾಡುವ ವ್ಯಕ್ತಿಯ ಅಮೋನಿಯಾ ಮಟ್ಟವನ್ನು ಕಂಡುಕೊಂಡೇ ಟ್ರಾನ್ಸ್ ಪ್ಲಾಂಟ್‌ ಮಾಡಲಾಗುತ್ತದೆ. ಹೊಸ ಲಿವರ್‌ ಟ್ರಾನ್ಸ್ ಪ್ಲಾಂಟೇಶನ್ನಿನ ಯಶಸ್ಸಿನ ಪ್ರಮಾಣ ಶೇ. 95ರಷ್ಟು ಮಾತ್ರ ಇರುತ್ತದೆ.`

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ