ಇನ್ನರ್ ವೇರ್‌ನಲ್ಲಿ ಬ್ರಾ ದೇಹದ ತ್ವಚೆಗೆ ಹೊಂದಿಕೊಂಡಿರುವ ಅಂತವರ್ಸ್ತ್ರವಾಗಿದೆ. ಇದು ಎಂತಹ ಒಂದು ಉಡುಪೆಂದರೆ ಬ್ರೆಸ್ಟ್ ನ ಸುರಕ್ಷತೆಯೊಂದಿಗೆ ಸೌಂದರ್ಯವನ್ನೂ ಕೊಡುತ್ತದೆ. ಇದು ಸರಿಯಾಗಿಲ್ಲದಿದ್ದರೆ ಪೋಸ್ಚರ್ ಹಾಳಾಗುತ್ತದೆ. ಅದರ ನೇರ ಪರಿಣಾಮ ಆರೋಗ್ಯದ ಮೇಲೆ ಬೀಳುತ್ತದೆ. ಬೆಂಗಳೂರಿನ ಬ್ರೈಡಲ್ ವೇರ್‌ನ ಸ್ಪೆಶಲಿಸ್ಟ್ ಸಂದೀಪ್ ಹೀಗೆ ಹೇಳುತ್ತಾರೆ, ``ಹೇಳಲು ಸಂಕೋಚವಾದರೂ ನಮ್ಮ ದೇಶದಲ್ಲಿ ಸುಮಾರು ಶೇ.75ರಷ್ಟು ಮಹಿಳೆಯರು ತಪ್ಪು ಸೈಜ್‌ನ ಬ್ರಾ ಧರಿಸುತ್ತಾರೆ. ಅವರಿಗೆ ತಮ್ಮ ಸರಿಯಾದ ಅಳತೆ ತಿಳಿಯುವುದೇ ಇಲ್ಲ. ಸರಿಯಾದ ಸೈಜ್‌ನ ಬ್ರಾ ಧರಿಸದೇ ಇದ್ದುದರ ಪರಿಣಾಮವನ್ನು ಶರೀರ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ, ಟೈಟ್ ಬ್ರಾ ಧರಿಸುವುದರಿಂದ ಬ್ರೆಸ್ಟ್ ನ ಸೂಕ್ಷ್ಮ ಟಿಶ್ಶೂಗಳು ಮುರುಟಿ ಹೋಗುತ್ತವೆ ಹಾಗೂ ಅವಕ್ಕೆ ಹಾನಿಯುಂಟಾಗುತ್ತದೆ.
``ಏಕೆಂದರೆ ಬ್ರೆಸ್ಟ್ ನಲ್ಲಿ ಮೂಳೆಗಳು ಇರುವುದಿಲ್ಲ. ಬೆನ್ನಿನ ಭಾಗದಲ್ಲಿ ಬಳುಕುವಿಕೆಯೂ ನಿಂತುಹೋಗುತ್ತದೆ. ಟೈಟ್ ಸ್ಟ್ರಾಪ್ಸ್ ನಿಂದಾಗಿ ಭುಜಗಳು, ಕುತ್ತಿಗೆ ಹಾಗೂ ಬೆನ್ನಿನಲ್ಲಿ ನೋವುಂಟಾಗುತ್ತದೆ. ಜೊತೆಗೆ ಮಾಂಸಖಂಡಗಳಲ್ಲೂ ಎಳೆತ ಉಂಟಾಗುತ್ತದೆ.''
ಇಂದಿಗೂ ಮಹಿಳೆಯರು ಒಂದಕ್ಕಿಂತ ಒಂದು ಚೆಂದದ ಬಟ್ಟೆಗಳನ್ನು ಕೊಂಡು ಧರಿಸುತ್ತಾರೆ. ಆದರೆ ಬ್ರಾ ವಿಷಯದಲ್ಲಿ ನಿರ್ಲಕ್ಷ್ಯತನ ತೋರುತ್ತಾರೆ. ಅದಂತೂ ಒಳಗೆ ಅಡಗಿರುತ್ತದೆ. ಯಾವುದು ತೆಗೆದುಕೊಂಡರೆ ಏನು ಎಂದುಕೊಳ್ಳುತ್ತಾರೆ. ಸರಿಯಾದ ಅಳತೆಯ ಬ್ರಾ ಮತ್ತು ಪ್ಯಾಂಟಿ ಧರಿಸುವುದರಿಂದ ಆರೋಗ್ಯ ಸರಿಯಾಗಿಟ್ಟುಕೊಳ್ಳಬಹುದು.
ಸ್ಪಾಂಡಿಲೈಟಿಸ್ನಿಂದ ರಕ್ಷಣೆ
ಸಾಮಾನ್ಯವಾಗಿ ಮಹಿಳೆಯರು ಭುಜಗಳ ಮೇಲೆ ಒತ್ತಡ ಹೇರುವಂತಹ ಬ್ರಾ ಅಂದರೆ ಟೈಟ್ ಸ್ಟ್ರಾಪ್ ಇರುವ ಬ್ರಾ ಧರಿಸುತ್ತಾರೆ. ಅದರಿಂದಾಗಿ ಅನೇಕ ಬಾರಿ ತಲೆಯಲ್ಲಿ, ಭುಜಗಳಲ್ಲಿ, ಕುತ್ತಿಗೆಯಲ್ಲಿ ಹಾಗೂ ಬೆನ್ನಿನಲ್ಲಿ ಮಾಂಸಖಂಡಗಳ ಎಳೆತದಿಂದ ನೋವುಂಟಾಗುತ್ತದೆ. ಟೈಟ್ ಸ್ಟ್ರಾಪ್‌ನಿಂದಲೇ ಸ್ಪಾಂಡಿಲೈಟಿಸ್ ಉಂಟಾಗುತ್ತದೆ. ಆದ್ದರಿಂದ ಬ್ರಾದ ಸ್ಟ್ರಾಪ್ಸ್ ಹೆಚ್ಚು ಬಿಗಿಯಾಗಿರಬಾರದು. ಸಾಮಾನ್ಯವಾಗಿ ಕಾಟನ್ ಬ್ರಾಗಳಲ್ಲಿ ಹಾಗಿರುತ್ತದೆ. ಅಂತಹ ಬ್ರಾದ ಸ್ಟ್ರಾಪ್ಸ್ ನಿಂದ ಭುಜಗಳ ಮೇಲೆ ಗಾಯಗಳಾಗುವ ಭಯ ಇರುತ್ತದೆ. ಒಳ್ಳೆಯ ಕಂಪನಿಯ ಸಾಫ್ಟ್ ಕಾಟನ್ ಬ್ರಾ ತೆಗೆದುಕೊಳ್ಳಿ. ಅದಲ್ಲದೆ ಬ್ರಾದಲ್ಲಿ ಪ್ಲಾಸ್ಟಿಕ್ ಸ್ಟ್ರಾಪ್ಸ್ ಇದ್ದರೆ ಅದರಿಂದ ತ್ವಚೆಗೆ ಇರಿಟೇಶನ್ ಆಗುವುದಿಲ್ಲವೆಂದು ಖಾತ್ರಿಪಡಿಸಿಕೊಳ್ಳಿ.
ಪೀರಿಯಡ್ಗೆ ಮುಂಚೆ ಸ್ತನಗಳಲ್ಲಿ ನೋವಿನಿಂದ ಮುಕ್ತಿ
ಅನೇಕ ಮಹಿಳೆಯರು ಮತ್ತು ಹುಡುಗಿಯರಿಗೆ ಪೀರಿಯಡ್‌ಗೆ ಮುಂಚೆ ಸ್ತನಗಳಲ್ಲಿ ನೋವಿರುತ್ತದೆ. ಅದರಿಂದಾಗಿ ಅವರು ಸಡಿಲವಾದ ದೊಡ್ಡ ಸೈಜ್‌ನ ಬ್ರಾ ಧರಿಸುತ್ತಾರೆ. ಆಗ ಧರಿಸಿದ ವಸ್ತ್ರದ ಸೌಂದರ್ಯ ಕಡಿಮೆಯಾಗುತ್ತದೆ. ಜೊತೆಗೆ ನೋವು ಆಗುತ್ತಿರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾಡೆಲ್ ಫ್ಯಾಬ್ರಿಕ್‌ನಿಂದ ತಯಾರಾದ ಬ್ರಾ ಮಾರುಕಟ್ಟೆಗೆ ಬಂದಿದೆ. ಇದನ್ನು ಮಿನಿಮೈಸರ್ ಬ್ರಾ ಎನ್ನುತ್ತಾರೆ. ಇದನ್ನು ಧರಿಸುವುದರಿಂದ ಸ್ತನಗಳಲ್ಲಿ ಉಂಟಾಗುವ ನೋವಿನಿಂದ ಮುಕ್ತಿ ಸಿಗುತ್ತದೆ. ಜೊತೆಗೆ ದಿನವಿಡೀ ಉಂಟಾಗುವ ನೋವೇ ತಿಳಿಯುವುದಿಲ್ಲ. ಇದು ಮಾಡೆಲ್ ಬ್ಯಾಂಬೂನಿಂದ ತೆಗೆದ ಎಳೆಗಳಿಂದ ತಯಾರಾದ ಫ್ಯಾಬ್ರಿಕ್ ಆಗಿದೆ.
ಫೀಡಿಂಗ್ ಬ್ರಾ
ಫೀಡ್ ಮಾಡುವ ತಾಯಂದಿರ ಸಮಸ್ಯೆಯೆಂದರೆ ಮಗುವಿಗೆ ತಾಯಿ ಹಾಲು ಕುಡಿಸಲು ಬ್ರಾ ಹುಕ್ ಬಿಡಿಸಬೇಕಾಗುತ್ತದೆ. ಅನೇಕ ಮಹಿಳೆಯರು ಅಂತಹ ಪರಿಸ್ಥಿತಿಯಲ್ಲಿ ಬ್ರಾ ಧರಿಸುವುದೇ ಇಲ್ಲ. ಅದರಿಂದಾಗಿ ಸ್ತನಗಳು ಕುರೂಪಗೊಳ್ಳುತ್ತವೆ. ಅನೇಕ ಬಾರಿ ಜೋತು ಬೀಳುತ್ತವೆ. ಈಗ ಕಪ್‌ಗಳ ಮೇಲೆ ಒಂದು ಹೆಚ್ಚುವರಿ ಪದರ ಇರುತ್ತದೆ. ಅದು ಬ್ರೆಸ್ಟ್ ನ್ನು ಕವರ್ ಮಾಡುತ್ತದೆ. ಕಪ್ಸ್ ನ ನಿಪ್ಪಲ್ ಭಾಗ ತೆರೆದಿರುತ್ತದೆ. ಅಗತ್ಯ ಬಂದಾಗ ಮೇಲಿನ ಪದರವನ್ನು ಸರಿಸಿ ಆರಾಮವಾಗಿ ಮಗುವಿಗೆ ಫೀಡ್ ಮಾಡಬಹುದು.