ಕೆಮಿಕಲ್ಸ್ ಬೆರೆತ ಹೇರ್‌ ಕೇರ್‌ ಉತ್ಪನ್ನಗಳ ಸತತ ಬಳಕೆಯಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ. ಅಂಥ ಸಮಯದಲ್ಲಿ ಕೆಮಿಕಲ್ಸ್ ಬೆರೆತಿರುವ ಇಂಥ ಹೇರ್‌ ಕೇರ್‌ ಉತ್ಪನ್ನಗಳನ್ನು ಬಳಸಲೇಬಾರದು. ಹೀಗಿರುವಾಗ ಕೂದಲಿನ ನೈಸರ್ಗಿಕ ಚಿಕಿತ್ಸೆಗಾಗಿ  ಆ್ಯರೋಮಾಥೆರಪಿ ಎಲ್ಲಕ್ಕೂ ಉತ್ತಮ ಆಯ್ಕೆ ಎನಿಸುತ್ತದೆ.

ಕೂದಲಿನ ಅತಿ ದೊಡ್ಡ ಶತ್ರು ಎಂದರೆ ಡ್ಯಾಂಡ್ರಫ್‌. ಹಾಗಿರುವಾಗ ಈ ತಲೆಹೊಟ್ಟು ಅಂದರೇನೆಂದು ಮೊದಲು ತಿಳಿಯೋಣ. ನಮ್ಮ ಭುಜಗಳ ಮೇಲೆ ಆಗಾಗ ಉದುರುವ ಈ ಹೊಟ್ಟು, ಅಸಲಿಗೆ ಶ್ಯಾಂಪೂನಿಂದ ಸರಿಯಾಗಿ ತಲೆಗೂದಲನ್ನು ತೊಳೆಯದೆ ಇರುವುದರಿಂದ ಆಗಿರುವಂಥದು. ಇದರ ಅರ್ಥ ಅಸಲಿಗೆ ಹೊಟ್ಟು ಎಂಬುದು ಬ್ಯಾಕ್ಟೀರಿಯಲ್ ಸೋಂಕಿನ ಒಂದು ಪ್ರಕಾರವಾಗಿದೆ. ಇದು ಹೆಚ್ಚಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಇದು ಬೇಸಿಗೆಯಲ್ಲೂ ಹಾಜಾರಾಗುತ್ತದೆ. ಈ ಸೋಂಕಿನ ಚಿಕಿತ್ಸೆಗೆ ಕನಿಷ್ಠ 6-12 ತಿಂಗಳು ಬೇಕು. ಕೂದಲು ತೊಳೆಯಲು ಬಿಸಿ ನೀರು ಬಳಸಿದಷ್ಟೂ ಇದರ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಸಾಧ್ಯವಾದಷ್ಟೂ ತಣ್ಣೀರನ್ನೇ ಬಳಸಿ.

ಸಾಮಾನ್ಯವಾಗಿ ಕೆಮಿಕಲ್‌ಯುಕ್ತ ಶ್ಯಾಂಪೂ ತಲೆಗೂದಲಿಗೆ ಒಳ್ಳೆಯದೆಂದು ಭಾವಿಸುತ್ತೇವೆ, ಆದರೆ ಅದು ನಿಜವಲ್ಲ. ಶ್ಯಾಂಪೂ ಬದಲು ಸೋಪು ಬಳಸುವುದೇ ಉತ್ತಮ, ಏಕೆಂದರೆ ಶ್ಯಾಂಪೂವಿಗೆ ಹೋಲಿಸಿದಾಗ ಇದು ಸುಲಭವಾಗಿ ತಲೆಯಿಂದ ದೂರಾಗುತ್ತದೆ. ವಿಭಿನ್ನ ಕೆಮಿಕಲ್ಸ್ ಬೆರೆತ ಶ್ಯಾಂಪೂ ಬಳಕೆಯನ್ನು ಆದಷ್ಟೂ ನಿಲ್ಲಿಸಿ. ಸಲ್ಫೇಟ್ ರಹಿತ ಡಿಟರ್ಜೆಂಟ್‌ ಬೇಸ್ಡ್ ಇರುವಂಥ ಶ್ಯಾಂಪೂವನ್ನೇ ಬಳಸಬೇಕು. ಅದು ಪ್ಯಾರಾಬೆನ್‌ ಪ್ರಿಝರ್ವೇಟಿವ್ಸ್ನಿಂದಲೂ ಮುಕ್ತವಾಗಿರಬೇಕು.

ಗಮನಿಸಿ

ತಲೆಗೆ ಶ್ಯಾಂಪೂ ಬಳಸಿದ ನಂತರ ಅದನ್ನು ಚೆನ್ನಾಗಿ ತೊಳೆಯದಿದ್ದರೆ ನಿಮ್ಮ ಕೂದಲಿನ ಹೊಳಪು, ಸೌಂದರ್ಯ ಕುಂದುತ್ತದೆ. ಕೂದಲನ್ನು ಸರಿಯಾದ ಆಕಾರದಲ್ಲಿ ಇಟ್ಟುಕೊಳ್ಳಲು, ಆಗಾಗ ಎಣ್ಣೆ ಹಚ್ಚುವುದನ್ನು ಮರೆಯಬೇಡಿ. ಇದಕ್ಕಾಗಿ ಅಗತ್ಯವಾಗಿ ಕೊಬ್ಬರಿ ಎಣ್ಣೆ ಬಳಸಿರಿ. ಚಳಿಗಾಲ, ಮಳೆಗಾಲ, ಬೇಸಿಗೆ ಯಾವುದೇ ಇರಲಿ, ಕೊಬ್ಬರಿ ಎಣ್ಣೆ ಬಳಸುವುದನ್ನು ತಪ್ಪಿಸಬೇಡಿ.

ತಲೆಹೊಟ್ಟು ತಲೆಬುರುಡೆಯ (ಸ್ಕಾಲ್ಪ್) ಮೇಲ್ಪದರದ ಚರ್ಮದಿಂದ ಏಳುತ್ತದೆ, ಆದ್ದರಿಂದ ಕೂದಲನ್ನು ನಿಯಮಿತವಾಗಿ ಆರೈಕೆ ಮಾಡಿ. ಆ್ಯರೋಮಾಥೆರಪಿ ಮಾಡುವುದರಿಂದ ತ್ವಚೆಯ ರೋಮರಂಧ್ರಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ :

ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಅದು ಹೆಚ್ಚು ಸಶಕ್ತಗೊಳ್ಳುತ್ತದೆ, ಜೊತೆಗೆ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕಾಗಿ ನಿಮಗೆ ಸಮರ್ಪಕ ಟೆಕ್ನಿಕ್‌ಮತ್ತು ಸಮಯದ ಮಾಹಿತಿ ಇರಬೇಕು. ಎಷ್ಟೋ ಮಹಿಳೆಯರು ಬೆಳಗ್ಗೆ ತಲೆಗೆ ಎಣ್ಣೆ ಹಚ್ಚಲು ಬಯಸುತ್ತಾರೆ. ಆದರೆ ಇದು ಸರಿಯಲ್ಲ. ಹೀಗಾಗಿ ಬೆಳಗ್ಗೆ ತಲೆಗೆ ಎಣ್ಣೆ ಹಚ್ಚಲು ಹೋಗಬೇಡಿ. ನೀವು ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸಲು, ಅದನ್ನು ಉದ್ದ ಬೆಳೆಸಲು, ಅಕಾಲಿಕ ನರೆ ತಪ್ಪಿಸಲು, ಸೀಳುತುದಿಯ ಕೂದಲಿನಿಂದ ಮುಕ್ತಿ ಬಯಸಿದರೆ...

ರಾತ್ರಿ ಹೊತ್ತು ತಲೆಗೆ ಎಣ್ಣೆ ಹಚ್ಚುವುದೇ ಸೂಕ್ತ! ಮಾರನೇ ಬೆಳಗ್ಗೆ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಣ್ಣೆಯನ್ನು ತಲೆಗೂದಲಿನ ಬುಡಕ್ಕೆ ಅಂದರೆ ನೇರವಾಗಿ ತಲೆಬುರುಡೆಗೆ ಒತ್ತಬೇಕು.

ಕೊಬ್ಬರಿ ಎಣ್ಣೆ ತಲೆಗೂದಲಿಗೆ ನಿಜಕ್ಕೂ ಬಹೂಪಯೋಗಿ. ಕೊಬ್ಬರಿ ಎಣ್ಣೆ ಹಚ್ಚಿದ ನಂತರ, ಟವೆಲ್‌ನ್ನು ಬಿಸಿ ನೀರಿನಲ್ಲಿ ಅದ್ದಿ, ಗಟ್ಟಿಯಾಗಿ ತಲೆಗೆ ಕಟ್ಟಿ, ಅದರ ಹಬೆ ತಲೆಗೆ 15-20 ನಿಮಿಷ ಚಿಕಿತ್ಸೆ ನೀಡುವಂತಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ