ನಾವು ಪ್ರತಿನಿತ್ಯ ಹಲವು ರಾಸಾಯನಿಕ ಪದಾರ್ಥಗಳ ಸಂಪರ್ಕಕ್ಕೆ ಬರುತ್ತೇವೆ. ಅವು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. ಡಿಟಾಕ್ಸಿಫಿಕೇಶನ್‌ ಮುಖಾಂತರ ಆ ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರ ಹಾಕಿ ದೇಹವನ್ನು ಒತ್ತಡಮುಕ್ತಗೊಳಿಸಬಹುದು. ಈ ಕೆಳಕಂಡ ಅಂಶಗಳು ದೇಹದಲ್ಲಿ ಜಮೆಗೊಳ್ಳುತ್ತಿರುತ್ತವೆ.

ವಾಯು ಮಾಲಿನ್ಯ ಪಸರಿಸುವ ಕಾರ್ಖಾನೆಗಳು ಹಾಗೂ ವಾಹನಗಳಿಂದ ಹೊರಹೊಮ್ಮುವ ಹೊಗೆ.

ಫುಡ್‌ ಪ್ರಿಸರ್‌ವೇಟಿವ್‌, ಅಡಿಟಿವ್‌ ಮತ್ತು ಸ್ವೀಟ್‌ನರ್‌ಗಳಿಂದ.

ಹೇರ್‌ ಡೈ, ಪರ್ಫ್ಯೂಮ್, ಸ್ವಚ್ಛತೆಯ ಕೆಲಸಗಳಲ್ಲಿ ಬಳಸಲ್ಪಡುವ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಪ್ರಿಸರ್‌ವೇಟಿವ್‌ ಅಥವಾ ರಾಸಾಯನಿಕಗಳಿರುತ್ತವೆ. ಅವು ದೇಹಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ.

ಕುಡಿಯುವ ನೀರಿನಲ್ಲಿರುವ ಹೆವಿ ಮೆಟಲ್ಸ್.

ಮದ್ಯ, ಸಿಗರೇಟ್‌ನ ಹೊಗೆ ಹಾಗೂ ಮಾದಕ ದ್ರವ್ಯಗಳು.

ಡಿಟಾಕ್ಸಿಫಿಕೇಶನ್‌ನ ಮಹತ್ವ

ನಮ್ಮ ದೇಹ ನಿರಂತರವಾಗಿ ವಿಷಕಾರಿ ಘಟಕಗಳನ್ನು ಹೊರಹಾಕಲು ಪ್ರಯತ್ನ ಪಡುತ್ತಲೇ ಇರುತ್ತದೆ. ಆದರೆ ಆಹಾರ ಸೇವನೆಯ ಕೆಲವು ತಪ್ಪು ಪದ್ಧತಿಗಳು, ಮದ್ಯ, ಕೆಫಿನ್‌, ಮಾದಕ ದ್ರವ್ಯಗಳ ಸೇವನೆ, ಒತ್ತಡ, ಮಾಲಿನ್ಯ.... ಇಂದಿನ ಆಧುನಿಕ ಜೀವನದ ಮುಖ್ಯ ಭಾಗವೇ ಆಗಿಹೋಗಿದೆ.

ನಾವು ಎಷ್ಟೇ ಆರೋಗ್ಯಕರ ಆಹಾರ ಸೇವನೆ ಮಾಡಬಹುದು. ಲೈಫ್‌ಸ್ಟೈಲ್‌ ಬಗ್ಗೆ ಗಮನ ಕೊಡಬಹುದು. ಬಾಹ್ಯ ಕಾರಣಗಳ ಪರಿಣಾಮ ನಮ್ಮ ದೇಹದ ಮೇಲೆ ಆಗಿಯೇ ಆಗುತ್ತದೆ. ಇದರಿಂದ ನಮ್ಮ ದೇಹದ ಶಕ್ತಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಅದರ ಒತ್ತಡ ದೇಹದ ಮೇಲೆ ಹೆಚ್ಚುತ್ತಾ ಹೋದಂತೆ ಅದು ಸರಿಯಾಗಿ ಕೆಲಸ ಮಾಡದು ಹಾಗೂ ಅದು ರೋಗಗಳ ಕಪಿಮುಷ್ಟಿಗೆ ಸಿಲುಕುತ್ತದೆ.

ಡಿಟಾಕ್ಸ್ ಹೇಗೆ?

ದೇಹವನ್ನು ವಿಷಕಾರಕ ಘಟಕಗಳಿಂದ ದೂರಗೊಳಿಸುವ ಹಲವು ವಿಧಾನಗಳಿವೆ. ಅದಕ್ಕೆ ಹೆಚ್ಚೇನೂ ಖರ್ಚು ಆಗದು.

ಆಹಾರ : ಪಚನಕ್ರಿಯೆಯ ಮೇಲೆ ಒತ್ತಡ ತರುವ ಆಹಾರಗಳ ಸೇವನೆ ಬೇಡ. ಹಣ್ಣುಗಳಲ್ಲಿ ನೈಸರ್ಗಿಕ ಶರ್ಕರ ಅಂದರೆ ಫ್ರಕ್ಟೋಸ್‌ ಇರುತ್ತದೆ. ನಾರಿನಂಶವುಳ್ಳ ಆಹಾರ ಸೇವಿಸಿ. ಬ್ರೌನ್‌ ರೈಸ್‌, ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸಿ. ಬೀಟ್‌ರೂಟ್‌, ಮೂಲಂಗಿ, ಆರ್ಟಿಚೋಕ್‌, ಎಲೆಕೋಸು, ಬ್ರೋಕ್ಲಿ ಮುಂತಾದವು ವಿಷಕಾರಿ ಘಟಕಗಳನ್ನು ಹೊರಹಾಕಲು ನೆರವಾಗುತ್ತವೆ. ವಿಟಮಿನ್‌ `ಸಿ'ಯನ್ನು ಧಾರಾಳವಾಗಿ ಸೇವಿಸಿ. ಅದು ದೇಹದಲ್ಲಿ ಗ್ಲೂಟೆಥಿಯಾನ್‌ನ್ನು ತಯಾರಿಸುತ್ತದೆ. ದೇಹದಲ್ಲಿನ ವಿಷಕಾರಿ ಘಟಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಮಿನರಲ್‌ಯುಕ್ತ ನೀರು ಸೇವಿಸಿ : ನೀರು ದೇಹಕ್ಕೆ ಬೇಕಾಗುವ ಮಿನರಲ್ ಕೊಡುತ್ತದೆ. ನಿಮ್ಮ ಕುಡಿಯುವ ನೀರನ್ನು ಪರಿಶೀಲಿಸಿ. ಅದರಲ್ಲಿ ಹೆವಿ ಮೆಟಲ್ಸ್ ಇಲ್ಲ ತಾನೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಲ್ಲಿಯಿಂದ ಬರುವ ನೀರು ಹಳೆಯ ಪೈಪ್‌ಗಳ ಮುಖಾಂತರ ಬರುತ್ತದೆ. ಅದರಲ್ಲಿ ಹೆವಿ ಮೆಟಲ್ಸ್ ಇರುತ್ತವೆ. ಇದರ ಹೊರತಾಗಿ ಮನೆಯಲ್ಲಿಯೇ ಕೆಲವು ಡಿಟಾಕ್ಸ್ ಡ್ರಿಂಕ್ಸ್ ತಯಾರಿಸಿಕೊಳ್ಳಬಹುದು. ನಿಂಬೆ, ಪುದೀನಾ, ಗ್ರೀನ್‌ ಟೀ ಮುಂತಾದವು.

ವ್ಯಾಯಾಮ : ದಿನ ವ್ಯಾಯಾಮ ಮಾಡುವುದರಿಂದ ದೇಹದ ವಿಷಕಾರಿ ಅಂಶ ಹೊರಹೋಗುತ್ತದೆ. ವ್ಯಾಯಾಮದ ಸಂದರ್ಭದಲ್ಲಿ ಬೆವರು ಬರುತ್ತದೆ. ಲಿಪೊಲೈಸಿಸ್‌ ಅಂದರೆ ಫ್ಯಾಟ್‌ ಟಿಶ್ಯೂ ಬರ್ನ್‌ ಆಗುವ ಪ್ರಕಿಯೆ ವೇಗ ಪಡೆದುಕೊಳ್ಳುತ್ತದೆ. ಫ್ಯಾಟ್‌ ಟಿಶ್ಯೂವಿನಲ್ಲಿರುವ ವಿಷಕಾರಿ ಘಟಕಗಳು ಹೊರ ಹೋಗಲು ಆರಂಭಿಸುತ್ತದೆ. ಇದರಿಂದ ರಕ್ತ ಪ್ರವಾಹ ಹೆಚ್ಚುತ್ತದೆ. ಲಿವರ್‌ ಮತ್ತು ಕಿಡ್ನಿ ತನಕ ಹೆಚ್ಚು ಆಮ್ಲಜನಕ ತಲುಪುತ್ತದೆ ಮತ್ತು ವಿಷಕಾರಿ ಘಟಕಗಳು ಫಿಲ್ಟರ್‌ ಆಗಿ ಹೊರಗೆ ಹೋಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ