ಮುಂದಿನ 2030ರ ಹೊತ್ತಿಗೆ ಡಯಾಬಿಟೀಸ್‌ ಮೆಲಟಿಸ್‌ (ಮಧುಮೇಹ) ಭಾರತದ ಸುಮಾರು 7.94 ಕೋಟಿಗೂ ಹೆಚ್ಚು ಮಂದಿಯನ್ನು ಪ್ರಭಾವಿತಗೊಳಿಸಲಿದೆ. ಚೀನಾದ 4.23 ಕೋಟಿ, ಅಮೆರಿಕಾದ 3.03 ಕೋಟಿ ಜನ ಇದರಿಂದ ಹಿಂಸೆಗೆ ಒಳಪಡಲಿದ್ದಾರೆ. ಈ ರೋಗ ಹೀಗೆ ದೇಶವಿಡೀ ಪ್ರಜೆಗಳನ್ನು ಆಕ್ರಮಿಸಲು ಹಲವಾರು ಕಾರಣಗಳಿವೆ. ಅಂದರೆ...... ಜನಸಂಖ್ಯೆ, ನಗರೀಕರಣ, ಸ್ಥೂಲತೆ, ಆರಾಮದಾಯಕ ಲೈಫ್‌ಸ್ಟೈಲ್‌ ಇತ್ಯಾದಿ.

ಡಯಾಬಿಟೀಸ್‌ಗೆ ಒಳಗಾದವರು ಸದಾ ಈ ಕಾರಣಗಳಿಗಾಗಿ ಕೊರಗುತ್ತಾರೆ. ಅಂದರೆ ಮುಂದೊಂದು ದಿನ ಅವರ ಕಂಗಳ ದೃಷ್ಟಿ ಹೋಗಬಹುದು, ಅವರ ಕಾಲು, ಪಾದ ಕತ್ತರಿಸಬೇಕಾದೀತು, ಕಿಡ್ನಿ ಫೇಲ್ಯೂರ್‌, ಮ್ಯಾಸಿವ್‌ ಹಾರ್ಟ್‌ ಅಟ್ಯಾಕ್‌ ಇತ್ಯಾದಿ.

ಯ ಜನತೆಯಲ್ಲೇ ಹೆಚ್ಚುತ್ತಿರುವ ಪ್ರಕರಣಗಳು

ಭಾರತದಲ್ಲಿ 22-30ರ ವಯಸ್ಸಿನ ಯುವಜನರ ಜನಸಂಖ್ಯೆ ಹೆಚ್ಚು. ಕಲ್ಲೂ ಕರಗಿಸಿಕೊಳ್ಳುವಂಥ ವಯಸ್ಸಿದು, ಆದರೆ ಈ ಯುವಜನತೆ ರೂಢಿಸಿಕೊಂಡಿರುವ ಜೀವನಶೈಲಿಯಿಂದಾಗಿ ಇವರ ಮೇಲೆ ಹಲವು ರೋಗಗಳು ದಾಳಿ ಇಡುತ್ತವೆ.

ಭಾರತವನ್ನು ಮಧುಮೇಹದ ರಾಜಧಾನಿ ಎಂದೇ ಹೇಳಲಾಗುತ್ತದೆ. ಅಸಲಿಗೆ ಯುವಜನತೆ ಅನಾರೋಗ್ಯಕರ ಆಹಾರ ಕ್ರಮದಿಂದ ಸ್ಥೂಲತೆಗೆ ತುತ್ತಾಗುತ್ತಾರೆ. ಇದರಿಂದ ಇವರು ಮಧುಮೇಹ ಮತ್ತಿತರ ಕಾರ್ಡಿಯೋವ್ಯಾಸ್ಕ್ಯುಲರ್‌ ಸಮಸ್ಯೆಗಳಿಗೆ ಬೇಗ ಗುರಿಯಾಗುತ್ತಾರೆ. ಹಿಂದೆಲ್ಲ ಈ ರೋಗ 45+ನವರಿಗೆ ಮಾತ್ರ ಬರುತ್ತಿತ್ತು, ಈಗ 25+ನವರಿಗೂ ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಪಾಶ್ಚಾತ್ಯ ಜೀವನಶೈಲಿಯ ಅಂಧಾನುಕರಣೆ.

ವಯಸ್ಸಾಗಿದ್ದರೂ ಫಿಟ್‌ ಆಗಿರಿ

ಸೋಂಕಿನ ಅಪಾಯ

ತುಸು ಮಾತ್ರ ಗಾಯವಾದರೂ ತ್ವಚೆಗೆ ಉಂಟಾಗುವ ಅಪಾಯಕಾರಿ ಸೋಂಕಿಗೆ ಸೆಲ್ಯುಲೈಟಿಸ್‌ ಎನ್ನುತ್ತಾರೆ. ನಿಮಗೆ ಡಯಾಬಿಟೀಸ್‌ ಇದ್ದರೆ, ನಿಮ್ಮ ಚರ್ಮದ ಕುರಿತು ಹೆಚ್ಚು ಎಚ್ಚರಿಕೆ ವಹಿಸಿ. ಏಕೆಂದರೆ ಬ್ಲಡ್‌ ಗ್ಲೂಕೋಸ್‌ ಲೆವೆಲ್‌ ಅಧಿಕವಾಗಿದ್ದರೆ, ಸೋಂಕು ಬೇಗ ಆಗುವ, ಹರಡುವ ಅಪಾಯವಿದೆ.

ಸೆಲ್ಯುಲೈಟಿಸ್‌ ಒಂದು ಗಂಭೀರ ಸೋಂಕು. ಇದು ತ್ವಚೆಯ ಒಳಗೂ ಹರಡುತ್ತಾ, ಅದರ ಒಳಗಿನ ಕೊಬ್ಬಿನ ಪದರಕ್ಕೂ ತಗುಲುತ್ತದೆ. ಸಾಮಾನ್ಯವಾಗಿ ಜನ ಸೆಲ್ಯುಲೈಟಿಸ್‌ನ್ನೇ ಸೆಲ್ಯುಲೈಟ್‌ ಎಂದುಕೊಳ್ಳುತ್ತಾರೆ. ಅಸಲಿಗೆ ಇವೆರಡೂ ಬಿಲ್‌ಕುಲ್‌ ಬೇರೆ ಬೇರೆ. ಸೆಲ್ಯುಲೈಟಿಸ್‌ ಎಂದರೆ ಕೊಬ್ಬಿನ ಪದರದ ಒಳ ಪದರವಾದ ಡರ್ಮಿಸ್‌ ಮತ್ತು ತ್ವಚೆಯ ಒಳಭಾಗದ ಟಿಶ್ಯುವಿನ ಒಂದು ಬ್ಯಾಕ್ಟೀರಿಯಲ್ ಸೋಂಕಾಗಿದೆ. ಆದರೆ ಸೆಲ್ಯುಲೈಟ್‌, ತ್ವಚೆಯ ಒಳಭಾಗದಲ್ಲಿ ಕೊಬ್ಬು ಜಮೆಗೊಳ್ಳುವುದರಿಂದ ಆಗುತ್ತದೆ. ಸೆಲ್ಯುಲೈಟಿಸ್‌ನ ಎಲ್ಲಕ್ಕಿಂತ ದೊಡ್ಡ ಹಿಂಸೆ ಎಂದರೆ, ಅದನ್ನು ಸರಿಯಾದ ಸಮಯದಲ್ಲೇ ವಾಸಿ ಮಾಡಿಕೊಳ್ಳದಿದ್ದರೆ, ದೇಹವಿಡೀ ಬೇಗ ವ್ಯಾಪಿಸುತ್ತದೆ. ಈ ಕಾರಣದಿಂದ ನಮ್ಮ ಟಿಶ್ಯು ಬೇಗನೇ ಹಾನಿಗೊಳಗಾಗುತ್ತದೆ ಇದರ ಬ್ಯಾಕ್ಟೀರಿಯಾ ರಕ್ತನಾಳಗಳ ಮುಖಾಂತರ ಹರಡುತ್ತವೆ.

ಸೆಲ್ಯುಲೈಟಿಸ್‌ನಿಂದ ಸುರಕ್ಷತೆ 

ತ್ವಚೆಗೆ ನಷ್ಟ ಉಂಟು ಮಾಡುವಂಥ ಕಠಿಣಕರ ಮತ್ತು ಅಧಿಕ ಕೆಲಸಗಳನ್ನು ಮಾಡಬೇಡಿ. ಯಾವ ಕೆಲಸದಿಂದ ನಿಮಗೆ ಸುಸ್ತು ಅನಿಸುವುದಿಲ್ಲವೋ ಅಂಥದ್ದನ್ನೇ ಮಾಡಿ. ಎಲ್ಲಕ್ಕಿಂತಲೂ ಮಹತ್ವಪೂರ್ಣವಾದುದು ಎಂದರೆ, ಬ್ಲಡ್‌ ಶುಗರ್‌ ಲೆವೆಲ್‌ ಸದಾ ಬ್ಯಾಲೆನ್ಸ್ಡ್ ಆಗಿರುವಂತೆ ನೋಡಿಕೊಳ್ಳಿ. ಇದು ಹೆಚ್ಚಿತು ಎಂದರೆ ದೇಹದ ಇಮ್ಯೂನ್‌ ಸಿಸ್ಟಂ ನಿಶ್ಚಿತ ರೂಪದಲ್ಲಿ ದುರ್ಬಲಗೊಳ್ಳುತ್ತದೆ. ದೇಹದ ಯಾವ ಭಾಗಕ್ಕೆ ಗಾಯವಾದರೂ ಅದು ಬೇಗ ಗುಣವಾಗದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ