ಫೋರ್ಟಿಸ್‌ ಹಾಸ್ಪಿಟಲ್ಸ್ ನಲ್ಲಿ ಇತ್ತೀಚೆಗೆ `ಮಹಿಳಾ ದಿನ’ದ ಆಚರಣೆಯ ಸಂದರ್ಭದಲ್ಲಿ, ಸ್ತ್ರೀರೋಗ ತಜ್ಞರು ಮಾತನಾಡುತ್ತಾ, ಪ್ರತಿಯೊಬ್ಬ ಮಹಿಳೆಯ ಆಂತರಿಕ ದೇಹರಚನೆ ವಿಭಿನ್ನವಾಗಿರುತ್ತದೆ. ಆದ್ದರಿಂದ ಈ ಕುರಿತು ಹೆಚ್ಚಿನ ಹೊಟ್ಟೆನೋವು ಇತ್ಯಾದಿ ಸಂದೇಹ ಕಾಡಿದಾಗ ಕೂಡಲೇ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದೊಂದೇ ಸುಲಭ ಮಾರ್ಗ, ಇದಕ್ಕಾಗಿ ಹೆದರಬೇಕಿಲ್ಲ, ಸರ್ಜರಿಯ ಅಗತ್ಯ ಇಲ್ಲ ಎಂದರು.

ಗರ್ಭಕೋಶದಲ್ಲಿ ಕಾಣಿಸಿಕೊಳ್ಳುವ ಈ ಫೈಬ್ರಾಯಿಡ್‌ ಗಡ್ಡೆಗಳು, ಕ್ಯಾನ್ಸರ್‌ ಗಡ್ಡೆಗಳಂತಲ್ಲದೆ ಬೇರೆಯಾಗಿರುತ್ತವೆ. ಇವು ಮಾಂಸಲ ಅಂಗಾಂಶಗಳಿಂದ ಬೆಳೆದು ಬಂದು, ಇತ್ತೀಚೆಗೆ ಒಂದು ಸಾಧಾರಣ ವಿಷಯವಾಗಿ ಗುರುತಿಸಲ್ಪಟ್ಟಿದೆ. ಐವರಲ್ಲಿ ಒಬ್ಬ ಮಹಿಳೆಗೆ ಗರ್ಭಾವಸ್ಥೆಯ ಕಾಲದಲ್ಲಿ ಇದು ಕಂಡುಬರುತ್ತದೆ. ಬಹುತೇಕ ಮಹಿಳೆಯರಿಗೆ ಇದರ ಇರುವಿಕೆಯೂ ಗೊತ್ತಾಗುವುದಿಲ್ಲ. ಏಕೆಂದರೆ ಈ ಫೈಬ್ರಾಯಿಡ್ಸ್ ಯಾವುದೇ ಲಕ್ಷಣಗಳನ್ನು ತೋರಿಸಿಕೊಳ್ಳುವುದಿಲ್ಲ. ಕ್ರಮೇಣ ಇವು ಬಲಿತುಹೋದಾಗ, ಮುಂದೆ ಬಂಜೆತನಕ್ಕೆ ದಾರಿ ಮಾಡಿಕೊಡಬಹುದು.

ಇತ್ತೀಚೆಗೆ ಫೋರ್ಟಿಸ್‌ ಹಾಸ್ಪಿಟಲ್ಸ್ ಗೆ ರೆಗ್ಯುಲರ್‌ ಹೆಲ್ತ್ ಚೆಕಪ್‌ಗೆಂದು ಬಂದಿದ್ದ ನವವಿವಾಹಿತೆ ಸಾರಾ ಅವರಿಗೆ, ತಮ್ಮ ಗರ್ಭಕೋಶದಲ್ಲಿ ಇಂಥ ಗಡ್ಡೆಗಳಿರುವ ವಿಷಯ ತಿಳಿಯಿತು.“ಇದರ ಕುರಿತಾಗಿ ನನಗೆ ಯಾವ ಲಕ್ಷಣಗಳೂ ಕಂಡುಬರಲಿಲ್ಲ. ನೋವು, ರಕ್ತಸ್ರಾವ ಏನೂ ಇರಲಿಲ್ಲ. ನಾನು ಮಾಮೂಲಿಯಾಗಿಯೇ ಕೆಲಸ ಮಾಡಿಕೊಂಡಿದ್ದೆ. ಇದರ ತಪಾಸಣೆ ಆದನಂತರ, ನಾನು ಬೇರೆ ಬೇರೆ ವೈದ್ಯರ ಸಲಹೆಗಳನ್ನೂ ಪಡೆದೆ. ಕೆಲವರು ಇದನ್ನು ಸರ್ಜರಿ ಮೂಲಕ ತೆಗೆಸಿಬಿಡುವುದೇ ಒಳ್ಳೆಯದೆಂದರು. ಇನ್ನೂ ಮಕ್ಕಳಾಗದ, 6 ತಿಂಗಳ ಹಿಂದಷ್ಟೇ ಮದುವೆಯಾದ ನಾನು ಅದಕ್ಕೆ ಸಿದ್ಧಳಿರಲಿಲ್ಲ.

“ಕೊನೆಗೆ ಗೆಳತಿಯ ಸಲಹೆ ಮೇರೆಗೆ ಫೋರ್ಟಿಸ್‌ ಹಾಸ್ಪಿಟಲ್ಸ್ಗೆ ಬಂದೆ. ಇಲ್ಲಿನ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ. ಮನೀಷಾ ಸಿಂಗ್‌ನನ್ನನ್ನು ಸಂಪೂರ್ಣ ಪರೀಕ್ಷಿಸಿ ಸರ್ಜರಿ ಬೇಡವೆಂದು ತಿಳಿಸಿದರು, ನನಗಂತೂ ಜೀವ ಬಂದ ಹಾಗಾಯಿತು,” ಎನ್ನುತ್ತಾರೆ ಸಾರಾ.

ಡಾ. ಮನೀಷಾ ಈ ಕುರಿತು, “ಸಾರಾ ವಿಷಯದಲ್ಲಿ ಯಾವ ಗಡ್ಡೆಗಳೂ ಫೆಲೋಪಿಯನ್‌ ಟ್ಯೂಬ್ಸ್ ನ್ನು ಬ್ಲಾಕ್‌ ಮಾಡಿರಲಿಲ್ಲ ಅಥವಾ ಮೂತ್ರಕೋಶಕ್ಕೂ ಅಡ್ಡಿ ಉಂಟು ಮಾಡುತ್ತಿರಲಿಲ್ಲ. ಆದ್ದರಿಂದ ಇದು ಬಂಜೆತನಕ್ಕೆ ಕಾರಣವಾಗುವ ಸಮಸ್ಯೆ ಆಗಿರಲಿಲ್ಲ. ಹೀಗಾಗಿ ಆಕೆಗೆ ಸರ್ಜರಿ ಬೇಡವೆಂದು ಸೂಚಿಸಿ, ಔಷಧಿಗಳಿಂದಲೇ ಗಡ್ಡೆ ಕರಗುವಂತೆ ಮಾಡಿದೆವು. ಜೊತೆಗೆ IVF ನಂಥ ಕ್ಲಿಷ್ಟಕರ ಪದ್ಧತಿಗಳಿಂದ ಸಂತಾನ ಪಡೆಯು ಬದಲು, ಸಹಜ ಹೆರಿಗೆಯಾಗಲಿ ಎಂದು ಸೂಚಿಸಿದೆ,” ಎಂದು ಹೇಳುತ್ತಾರೆ.

ಸಾರಾ ಈಗ 38 ವಾರಗಳ ಗರ್ಭಿಣಿ. ಆಕೆ ಡಾ. ಮನೀಷಾರ ಸಲಹೆಯಿಂದ ಸಂತಸಗೊಂಡಿದ್ದರು, “ನಾನು ಸಹಜವಾಗಿ ಗರ್ಭವತಿಯಾದೆ. ಫೈಬ್ರಾಯಿಡ್ಸ್ ನನ್ನ ಗರ್ಭಾವಸ್ಥೆಗೆ ಅಡ್ಡಿಯಾಗದಂತೆ ಫೋರ್ಟಿಸ್‌ ಹಾಸ್ಪಿಟಲ್ಸ್ ನ ವೈದ್ಯ ತಂಡ ನನ್ನನ್ನು ರಕ್ಷಿಸಿತು,” ಎಂದು ಕೃತಜ್ಞತೆ ಸಲ್ಲಿಸುತ್ತಾರೆ.

ಡಾ. ಮನೀಷಾ ಮತ್ತೆ ಹೇಳುವುದೆಂದರೆ, ಪ್ರತಿಯೊಬ್ಬ ಮಹಿಳೆಯನ್ನೂ ಫೈಬ್ರಾಯಿಡ್‌ ವಿಷಯದಲ್ಲಿ ಬೇರೆ ಬೇರೆಯಾಗಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಮುಖ್ಯವಾಗಿ ಚಿಕಿತ್ಸೆ ರೋಗಿಯ ವಯಸ್ಸು, ದೇಹಪ್ರಕೃತಿ, ರೋಗ ಲಕ್ಷಣ, ಫೈಬ್ರಾಯಿಡ್‌ನ ಉಲ್ಬಣ ಸ್ಥಿತಿ, ಎಂಥ ಬಗೆ, ರೋಗಿ ಗರ್ಭಿಣಿಯೇ ಅಥವಾ ಮುಂದೆ ಆಕೆಗೆ ಮಕ್ಕಳಾಗುತ್ತದೆಯೇ….. ಇತ್ಯಾದಿ ಎಲ್ಲವನ್ನೂ ಗಮನಿಸಬೇಕಾಗುತ್ತದೆ.

ಇದು ಉಂಟಾಗುವಿಕೆಗೆ ಮೂಲಕಾರಣ ಇನ್ನೂ ಅಸ್ಪಷ್ಟವಾಗಿಯೇ ಇದೆ. ಅವುಗಳ ಬೆಳವಣಿಗೆ ಈಸ್ಟ್ರೋಜನ್‌ ಹಾರ್ನೋನ್‌ಗೆ ಸಂಬಂಧಿಸಿದೆ. ಕೆಲವು ಬಹಳ ಸಣ್ಣವು, ಕೆಲವಂತೂ ಅತ್ಯಧಿಕವಾಗಿ ಬೆಳೆದು ಹಲವು ಕಿಲೋ ತೂಗಬಹುದು.

ಫೈಬ್ರಾಯಿಡ್‌ ಇರುವಿಕೆಯ ಲಕ್ಷಣ

ಮುಟ್ಟಿನ ಅವಧಿಗೆ ಮುಂಚೆಯೇ ರಕ್ತಸ್ರಾ.

ಮುಟ್ಟಿನ ದಿನಗಳಲ್ಲಿ ಅತ್ಯಧಿಕ ರಕ್ತಸ್ರಾವ, ಒಮ್ಮೊಮ್ಮೆ ರಕ್ತದ ಗರಣೆ ಸಹ ಬೀಳಬಹುದು.

ಎಂದಿಗಿಂತ ಹೆಚ್ಚಿನ ದಿನಗಳ ರಕ್ತಸ್ರಾವ.

ಮತ್ತೆ ಮತ್ತೆ ಮೂತ್ರ ವಿಸರ್ಜನೆಯ ತೊಂದರೆ.

ಮುಟ್ಟಿನ ದಿನಗಳಲ್ಲಿ ಅತ್ಯಧಿಕ ಹೊಟ್ಟೆನೋವು.

ಕಿಬ್ಬೊಟ್ಟೆಯಲ್ಲಿ ಹೆಚ್ಚಿನ ಒತ್ತಡದ ಅನುಭವ.

ಸಮಾಗಮದ ಮಧ್ಯೆ ನೋವು.

ಕೆಲವು ಮಹಿಳೆಯರಲ್ಲಿ ಅಧಿಕ ಫೈಬ್ರಾಯಿಡ್‌ಗಳ ಕಾರಣ, ಅವು ಗರ್ಭಕೋಶ ತುಂಬಿಕೊಂಡು ಹಿಂಸೆ ಎನಿಸಬಹುದು. ರಾಧಾರ ವಿಷಯದಲ್ಲಿ ಹೀಗೆ ಆಯಿತು. ಮಧ್ಯವಯಸ್ಸಿನ ರಾಧಾಗೆ ಮದುವೆಯಾಗಿ 7 ವರ್ಷಗಳಾಗಿತ್ತು, ಮಗು ಇರಲಿಲ್ಲ. ಆಕೆಗೆ ಅತ್ಯಧಿಕ ರಕ್ತಸ್ರಾವ ಆಗುತ್ತಿತ್ತು. ಗರ್ಭಕೋಶ ಉಬ್ಬರಿಸಿ, ಗರ್ಭವತಿಯಂತೆ ಕಾಣುತ್ತಿದ್ದರು. ಹಲವು ವೈದ್ಯರ ಸಲಹೆಯ ಪ್ರಕಾರ ಆಕೆ ಹಿಸ್ಟೆರೆಕ್ಟಮಿ ಮಾಡಿಸಿಕೊಳ್ಳಬೇಕಿತ್ತು. ಕೊನೆಗೆ ಆಕೆ ಫೋರ್ಟಿಸ್‌ ಹಾಸ್ಪಿಟಲ್ಸ್ ಗೆ ಬಂದರು.

“ಆಕೆಗೆ ಹಿಸ್ಟೆರೆಕ್ಟಮಿ ಬೇಕಿರಲಿಲ್ಲ, ಮುಂದೆ ಮಗು ಆಗಬಹುದೆಂಬ ಆಸೆಯಲ್ಲಿದ್ದರು. ನಮ್ಮ ತಪಾಸಣೆಯ ಪ್ರಕಾರ ಆಕೆಗೆ 17 ಗಡ್ಡೆಗಳಿದ್ದು, ಗರ್ಭಕೋಶದ ತುಂಬ ಹರಡಿದ್ದವು. ಆಕೆಯ ಬಂಜೆತನಕ್ಕೆ ಅದುವೇ ಕಾರಣ. ನಾವು ಸರ್ಜರಿ ಮೂಲಕ ಎಲ್ಲಾ ಗಡ್ಡೆಗಳನ್ನೂ ತೆಗೆದು, ಗರ್ಭಕೋಶ ಸ್ವಸ್ಥವಾಗುವಂತೆ ಮಾಡಿದೆವು. ಕೆಲವು ತಿಂಗಳ ನಂತರ ಆಕೆಗೆ ಗರ್ಭ ಧರಿಸುವ ಎಲ್ಲಾ ಲಕ್ಷಣಗಳಿವೆ,” ಎನ್ನುತ್ತಾರೆ ಡಾ. ಮನೀಷಾ.

ಯಾರಿಗೆ ಗರ್ಭಕೋಶದಲ್ಲಿನ ಗಡ್ಡೆಗಳನ್ನು ತೆಗೆದ ನಂತರ ಮಕ್ಕಳಾಗುವುದಿಲ್ಲವೋ ಅಂಥರಿಗೆ IVF ಚಿಕಿತ್ಸೆ ಮೂಲಕ ಸಂತಾನಪ್ರಾಪ್ತಿ ಆಗುವಂತೆ ಮಾಡುತ್ತಾರೆ.

ಸುಶೀಲಾಗೆ ಇದೇ ಸಮಸ್ಯೆ. ಆಕೆಯ ಗರ್ಭಕೋಶದ ಗಡ್ಡೆಗಳು ಅತ್ಯಧಿಕ ರಕ್ತಸ್ರಾವದಿಂದ ಅವರಿಗೆ ಹೆಚ್ಚಿನ ತೊಂದರೆ ಕೊಡುತ್ತಿದ್ದವು. ಆಕೆಗೆ ಈಗಾಗಲೇ ಒಂದು ಮಗುವಿತ್ತು. ಮತ್ತೊಂದು ಮಗುವಿಗಾಗಿ ಆಕೆ ಹಂಬಲಿಸುತ್ತಿದ್ದರು.

“ಮಯೋಮೆಕ್ಟಮಿ ವಿಧಾನದಿಂದ ಆಕೆಯ ಗರ್ಭಕೋಶದಲ್ಲಿದ್ದ 12ಕ್ಕೂ ಹೆಚ್ಚಿನ ಗಡ್ಡೆಗಳನ್ನು ತೆಗೆದೆವು. ಅದಾದ ನಂತರ 2ನೇ ಮಗುವಿಗಾಗಿ ಅವರು ಪ್ರಯತ್ನಿಸಿದರು, ಅದು ಯಶಸ್ವಿಯಾಗಲಿಲ್ಲ. ಒಂದು ಅಲ್ಚ್ರಾಸೌಂಡ್‌ ಸ್ಕ್ಯಾನಿಂಗ್‌ ನಿಂದ ಆಕೆ ಮತ್ತೆ ಹೊಸ ಗಡ್ಡೆಗಳನ್ನು ಹೊಂದಿರುವುದು ಗೊತ್ತಾಯಿತು. ಈ ಬಾರಿ ಮತ್ತೆ ಸರ್ಜರಿ ಮೂಲಕ ಅದನ್ನು ತೆಗೆಯುವ ಹಾಗಿರಲಿಲ್ಲ. ಅವರ ಗರ್ಭಕೋಶದ ಸ್ಥಿತಿ ನಾಜೂಕಾಗಿತ್ತು. ನಂತರ ಆಕೆಗೆ IVF ವಿಧಾನದ ಮೂಲಕ ಗರ್ಭ ನಿಲ್ಲುವಂತೆ ಆರೈಕೆ ಮಾಡಿದೆವು,” ಎನ್ನುತ್ತಾರೆ ಡಾ. ಮನೀಷಾ.

ಫೈಬ್ರಾಯಿಡ್‌ ನಿವಾರಣೆಗೆ ಚಿಕಿತ್ಸೆ

ಡ್ರಗ್ಸ್ ಮತ್ತು ಹಾರ್ಮೋನ್‌ ಥೆರಪಿ ಮೂಲಕ ತಗ್ಗಿಸಬಹುದು.

ಯೂಟರಿನ್‌ ಆರ್ಟರಿ ಎಂಬೊಲೈಸೇಷನ್‌ ಮೂಲಕ ಫೈಬ್ರಾಯಿಡ್‌ಗೆ ರಕ್ತಸಂಚಾರ ಆಗದಂತೆ ತಡೆಯೊಡ್ಡಿ, ಅವು ಅಲ್ಲೇ ನಾಶವಾಗುವಂತೆ ಮಾಡುವುದು.

ಮಯೋಮೆಕ್ಟಮಿ ವಿಧಾನದಿಂದ ಫೈಬ್ರಾಯಿಡ್ಸ್ ನ್ನು ಸಂಪೂರ್ಣ ಹೊರತೆಗೆದು, ಗರ್ಭಕೋಶದ ಫಲವತ್ತತೆ ಉಳಿಸಿಕೊಂಡು, ರೋಗಿ ಮತ್ತೆ ತಾಯಿಯಾಗುವಂತೆ ಮಾಡಬಹುದಾಗಿದೆ.

ಬೇರೆಲ್ಲ ಚಿಕಿತ್ಸೆಗಳೂ ಫಲಕಾರಿ ಆಗದಿದ್ದಾಗ, ಹಿಸ್ಟೆರೆಕ್ಟಮಿ ಎಂಬ ಇನ್‌ವೇಸಿವ್ ‌ಸರ್ಜರಿ ಮೂಲಕ ಉಲ್ಬಣಾವಸ್ಥೆ ತಲುಪಿರುವ ಗಡ್ಡೆಗಳನ್ನು ಸಂಪೂರ್ಣವಾಗಿ ನಾಶಪಡಿಸಬಹುದು.

ಹೆಚ್ಚಿನ ವಿರಗಳಿಗಾಗಿ ಸಂಪರ್ಕಿಸಿ : ಕ್ರಿಯೇಷನ್ಸ್, ಫೋರ್ಟಿಸ್‌ ಹಾಸ್ಪಿಟಲ್ಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 076.

ಫೋನ್‌: 9663367253

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ