ಮಹಿಳೆಯರು ಗಂಡ ಮತ್ತು ಮಕ್ಕಳನ್ನು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ, ಆದರೆ ತಮ್ಮನ್ನು ತಾವು ಅಲಕ್ಷಿಸುತ್ತಾರೆ. ಯೌವನಾವಸ್ಥೆಯನ್ನು ಎಲ್ಲರೂ ಅನುಭವಿಸುತ್ತಾರೆ. ಆದರೆ 40ರ ಹೊಸ್ತಿಲು ತಲುಪಿದಾಗ ತಿಳಿವಳಿಕೆಯಿಂದ ವರ್ತಿಸಬೇಕು. ಈ ವಯಸ್ಸಿನಲ್ಲಿ ಫಿಟ್ ಆಗಿರಲು ನಿಮಗೆ 20 ಉಪಾಯಗಳನ್ನು ಹೇಳುತ್ತೇವೆ. ಇವುಗಳಲ್ಲಿ ಕೆಲವು ನಿಮಗೆ ತಿಳಿದಿರಬಹುದು. ಆದರೆ ಕೆಲವಂತೂ ನಿಮಗೆ ಖಂಡಿತಾ ಹೊಸದು. ನಿಧಾನವಾಗಿ ಇವನ್ನು ನಿಮ್ಮ ಲೈಫ್ ಸ್ಟೈಲ್‌ನ ಭಾಗವನ್ನಾಗಿ ಮಾಡಿಕೊಂಡರೆ ನೀವು ಬಹಳಷ್ಟು ಸಮಸ್ಯೆಗಳಿಂದ ಪಾರಾಗಬಹುದು.
ಕ್ಯಾಲ್ಶಿಯಂ ಮತ್ತು ಐರನ್‌ನ ಲಾಭ ಪಡೆಯಿರಿ : ಭಾರತೀಯ ಮಹಿಳೆಯರಲ್ಲಿ ಐರನ್ ಮತ್ತು ಕ್ಯಾಲ್ಶಿಯಂನ ಕೊರತೆ ಸಾಮಾನ್ಯವಾಗಿ ಕಂಡುಬರುತ್ತದೆ. ಇವರೆಡನ್ನೂ ಚೆಕ್ ಮಾಡಿಸಿ ಆಹಾರದಲ್ಲಿ ಇವೆರಡರ ಪ್ರಮಾಣ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಅವುಗಳ ಮಾತ್ರೆ ತೆಗೆದುಕೊಳ್ಳಲು ಮರೆಯದಿರಿ.
ಆರೋಗ್ಯದ ಬಟ್ಟಲು : ಕಾಫಿ ನಮ್ಮ ಗೆಳೆಯ. ಅದರಲ್ಲಿರುವ ಕೆಫೀನ್ ಫ್ಯಾಟ್‌ನ್ನು ಎನರ್ಜಿ ಆಗಿ ಬದಲಿಸುವಲ್ಲಿ ಉತ್ತೇಜಿಸುತ್ತದೆ. ಈ ಕಾರ್ಯವನ್ನು ಗ್ರೀನ್ ಟೀ ಕೂಡ ಚೆನ್ನಾಗಿ ಮಾಡುತ್ತದೆ. ಆದ್ದರಿಂದ ಇವೆರಡನ್ನೂ ನಿಮ್ಮ ಗೆಳೆಯರನ್ನಾಗಿ ಮಾಡಿಕೊಳ್ಳಿ.
ವೇಟ್ ಟ್ರೇನಿಂಗ್ ಮಾಡಿ : ನೀವು ಹಿಂದೆ ಎಂದಾದರೂ ಜಿಮ್ ಗೆ ಹೋಗಿದ್ದರೂ, ಹೋಗದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ. ಈಗ ಮಾಂಸಖಂಡಗಳು ಬಲಹೀನವಾಗುತ್ತವೆ. ವೇಟ್ ಟ್ರೇನಿಂಗ್ ಅನ್ನು ಸದೃಢಗೊಳಿಸುತ್ತದೆ. ಇದರಿಂದ ಹಲವು ಲಾಭಗಳಿವೆ.
ಜಿಮ್ ಗೆ ಹೋಗಲಾಗದಿದ್ದರೆ ಮನೆಯಲ್ಲೇ ಇದರ ವ್ಯವಸ್ಥೆ ಮಾಡಿಕೊಳ್ಳಿ.
ಶೆಡ್ಯೂಲ್ ಬದಲಾಯಿಸಿ : ಒಂದು ವೇಳೆ ನೀವು ಯೋಗ ಮಾಡುತ್ತಿದ್ದರೆ ಅಥವಾ ಪ್ರವಾಸಕ್ಕೆ ಹೊರಟಿದ್ದರೆ ಈ ಶೆಡ್ಯೂಲ್‌ನಲ್ಲಿ ಕೊಂಚ ಬದಲಾವಣೆ ಮಾಡಿ. ಹೆಲ್ತ್ ಸ್ಪೆಶಲಿಸ್ಟ್ ರ ಸಲಹೆ ಪಡೆದು ಇನ್ನಷ್ಟು ವಿಷಯಗಳನ್ನು ಸೇರಿಸಿ. ಕೆಲವನ್ನು ಮಾಡುವುದನ್ನು ನಿಲ್ಲಿಸಿ. ಪ್ರವಾಸದ ಸಮಯವನ್ನೂ ಬದಲಿಸುವುದಿದ್ದರೆ ಬದಲಿಸಿ.
ಸಪ್ಲಿಮೆಂಟ್‌ಗಳ ಉಪಯೋಗ : ಈ ವಯಸ್ಸಿನಲ್ಲಿ ನಿಮಗೆ ನಿಮ್ಮ ಕೀಲುಗಳು ಹಾಗೂ ಮೂಳೆಗಳ ಬಗ್ಗೆ ಹೆಚ್ಚು ಚಿಂತೆಯಾಗುತ್ತದೆ. ಕ್ಯಾಲ್ಶಿಯಂ ಬಗ್ಗೆ ನಾವು ಹೇಳಿದ್ದೇವೆ. ನೀವು ವಿಟಮಿನ್ `ಡಿ', `ಸಿ', `ಇ' ಬಗ್ಗೆ ಗಮನಕೊಡಿ. ವಿಟಮಿನ್ `ಸಿ' ಮತ್ತು `ಇ' ಯನ್ನು ಒಟ್ಟಿಗೆ ತೆಗೆದುಕೊಳ್ಳಿ. ಎಕ್ಸರ್‌ಸೈಜ್ ಮಾಡುವುದಿದ್ದರೆ ಅದಕ್ಕೆ 1 ಗಂಟೆ ಮುಂಚೆ ಡಾಕ್ಟರ್‌ರೊಂದಿಗೆ ಮಾತಾಡಿ ಸಪ್ಲಿಮೆಂಟ್‌ಆರಿಸಿಕೊಳ್ಳಿ.
ಪೋಶ್ಚರ್ ಗಮನಿಸಿ : ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಗಲು, ಕುತ್ತಿಗೆ ಮತ್ತು ಸೊಂಟದ ನೋವು ಹೆಚ್ಚಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಕುಳಿತುಕೊಳ್ಳುವುದು ಹಾಗೂ ನಿದ್ರಿಸುವ ವಿಧಾನಗಳಲ್ಲಿ ಅಸಂಬದ್ಧತೆ. ಇದರ ಬಗ್ಗೆ ಗಮನ ಕೊಟ್ಟು ಹೇಗೆ ಕೂರುವುದು, ಹೇಗೆ ಮಲಗಿಕೊಳ್ಳುವುದು ಎಂಬ ಬಗ್ಗೆ ಫಿಸಿಯೋ ಥೆರಪಿಸ್ಟ್ ರೊಂದಿಗೆ ಮಾತನಾಡಿ.
ಬದಲಾವಣೆಗೆ ಸಿದ್ಧರಾಗಿ : ಬದಲಾವಣೆಗೆ ನಿಮ್ಮನ್ನು ಸಿದ್ಧಗೊಳಿಸಿ. ಲೇಖನ ಓದುವುದು ಹಾಗೂ ಬರೀ ಯೋಚಿಸಿದರೆ ಏನೂ ಆಗುವುದಿಲ್ಲ. ಆರೋಗ್ಯವಾಗಿರಬೇಕಿದ್ದರೆ ಸಂಕಲ್ಪ ಮಾಡಿ. ಆರಂಭದಲ್ಲಿ ಜನ ಅಡ್ಡ ಬಾಯಿ ಹಾಕುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಳ್ಳಬೇಡಿ. `ನಾನು ಮಾಡುತ್ತೇನೆ,' `ನಾನು ಮಾಡಲು ಬಯಸುತ್ತೇನೆ' ಎನ್ನುವ ಬದಲು `ನಾನು ಮಾಡುತ್ತಿದ್ದೇನೆ' `ನಾನು ಹೋಗುತ್ತಿದ್ದೇನೆ,' ಎಂಬ ಶಬ್ದಗಳನ್ನು ಉಪಯೋಗಿಸಿ.