ಪಟಾಕಿ ಉರಿಯುವುದನ್ನು ನೋಡಲು ಚೆನ್ನಾಗಿರುತ್ತದೆ. ಆದರೆ ಅವನ್ನು ಹಚ್ಚುವವರು ಹಾಗೂ ಅದರ ಸಮೀಪ ಇರುವವರಿಗೆ ಅಪಾಯ ತಪ್ಪಿದ್ದಲ್ಲ. ಪ್ರತಿವರ್ಷ ಪಟಾಕಿಗಳ ಸಿಡಿತದಿಂದಾಗಿ ಸಾವಿರಾರು ಜನ ಸುಟ್ಟಗಾಯಕ್ಕೊಳಗಾಗಿ ಆಸ್ಪತ್ರೆಗೆ ಬರುತ್ತಾರೆ. ಅವರಲ್ಲಿ ಹೆಚ್ಚಿನವರು 15 ವರ್ಷಕ್ಕಿಂತ ಕೆಳಗಿನ ಮಕ್ಕಳಾಗಿರುತ್ತಾರೆ.

ತಿಳಿದೋ ತಿಳಿಯದೆಯೋ ಉಂಟಾಗುವ ಇಂತಹ ದುರ್ಘಟನೆಗಳಿಂದಾಗಿ ದೀಪಾವಳಿ ಕಿರಿಕಿರಿಯಾಗುತ್ತದೆ. ಒಮ್ಮೊಮ್ಮೆ ಇಂತಹ ದುರ್ಘಟನೆಗಳಿಂದ ಸಾವು ಸಂಭವಿಸುತ್ತದೆ.

ಮಕ್ಕಳು ಪಟಾಕಿ ಹೊಡೆಯುತ್ತಿರುವಾಗ ಪೋಷಕರು ಅವರನ್ನು ಅಗತ್ಯವಾಗಿ ಗಮನಿಸಬೇಕು. ಶಾಲೆಗಳಲ್ಲೂ ಈ ಬಗ್ಗೆ ಮಕ್ಕಳನ್ನು ಎಚ್ಚರಿಸಬೇಕು.

ಇದಲ್ಲದೆ, ಕೊಂಚ ಗಮನಕೊಟ್ಟರೆ ಹಾಗೂ ಕೊಂಚ ಜಾಗ್ರತೆ ವಹಿಸಿದರೆ ಪಟಾಕಿಗಳಿಂದ ಸುಟ್ಟುಕೊಳ್ಳುವ ಸಂಭಾವ್ಯತೆ ಸಾಕಷ್ಟು ಮಟ್ಟಿಗೆ ನಿವಾರಣೆಯಾಗುತ್ತವೆ.

ಪಟಾಕಿಯ ಹಾವಳಿಯಿಂದ ಮಕ್ಕಳನ್ನು ರಕ್ಷಿಸಲು ಬ್ರ್ಯಾಂಡೆಡ್‌ ಪಟಾಕಿಗಳನ್ನೇ ಕೊಳ್ಳಿರಿ. ಪಟಾಕಿ ಹಚ್ಚುವಾಗ ಜಾಗ್ರತೆಯಿಂದಿರಿ.

ಇದಲ್ಲದೆ ಒಂದು ವೇಳೆ ಮನೆ ಅಥವಾ ಸುತ್ತಮುತ್ತಲಲ್ಲಿ ಇಂತಹ ದುರ್ಘಟನೆಯುಂಟಾದರೆ ಕೂಡಲೇ ಗಾಯಾಳುವಿಗೆ ಚಿಕಿತ್ಸೆ ನೀಡಲು ಮನೆಯಲ್ಲಿ ಪ್ರಥಮ ಚಿಕಿತ್ಸೆ ಕಿಟ್‌ ಅಂದರೆ ಫಸ್ಟ್ ಏಡ್‌ ಬಾಕ್ಸ್ ಖಂಡಿತಾ ಬೇಕು. ಅದರಲ್ಲಿ ಅಗತ್ಯದ ಬೇಸಿಕ್‌ ವಸ್ತುಗಳನ್ನು ಇಟ್ಟುಕೊಂಡಿರಬೇಕು.

ಯಾವುದೇ ಕಾಯಿಲೆ ಅಥವಾ ಗಾಯಗೊಂಡ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ನಿಮ್ಮ ಬಳಿ ಒಂದು ಒಳ್ಳೆಯ ಫಸ್ಟ್ ಏಡ್‌ ಕಿಟ್‌ ಇದ್ದರೆ ಅಗತ್ಯ ಬಂದಾಗ ಕೂಡಲೇ ಸಹಾಯ ಮಾಡಬಹುದು. ಸಣ್ಣಪುಟ್ಟ ಗಾಯಗಳಾದಾಗ ಗಾಯಾಳುವನ್ನು ಸುಲಭವಾಗಿ ಮ್ಯಾನೇಜ್‌ ಮಾಡಬಹುದು. ದುರ್ಘಟನೆ ಅಷ್ಟೊಂದು ಭಯಂಕರವಲ್ಲದಿದ್ದರೆ ಗಾಯಾಳುವನ್ನು ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ವರೆಗೂ ಒಯ್ಯುವ ಅಗತ್ಯವಿಲ್ಲ.

ಪ್ರಥಮ ಚಿಕಿತ್ಸೆಯಿಂದ ಮುಂದಿನ ಚಿಕಿತ್ಸೆಗೂ ಸುಲಭವಾಗುತ್ತದೆ. ಏಕೆಂದರೆ ತಕ್ಷಣವೇ ಸರಿಯಾಗಿ ಗಮನಿಸಿಕೊಂಡರೆ ಗಾಯಾಳುವಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಬಹುದು.

ಒಂದು ಬೇಸಿಕ್‌ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಯಾವ ಯಾವ ವಸ್ತುಗಳು ಅಗತ್ಯವಾಗಿ ಇರಬೇಕೆಂದು ತಿಳಿಯೋಣ.

ಸಣ್ಣ ಕಿಟ್‌ ಅಥವಾ ಗಾಯದಿಂದ ರಕ್ತ ಹರಿಯುವುದನ್ನು ತಡೆಯಲು ಸೆ್ಟರೈ್‌ಗಾರ್‌.

ಸೋಂಕನ್ನು ತಡೆಯಲು ಒಂದು ಸ್ಟಿರೈಲ್ ಕ್ರೀಂ.

ಸ್ಟಿರೈಲ್ ‌ಬ್ಯಾಂಡೇಜ್‌. ಇದು ಬೇರೆ ಬೇರೆ ಸೈಜ್‌ಗಳಲ್ಲಿ ಬರುವುದರಿಂದ ಬೇರೆ ಬೇರೆ ರೀತಿಯ ಕಟ್‌ಗಳಿಗೆ ಹಾಕಲು ಉಪಯುಕ್ತ.

ಅಲರ್ಜಿ ಹಾಗೂ ದುಂಬಿ ಇತ್ಯಾದಿ ಕೀಟಗಳ ಕಡಿತದಿಂದಾಗುವ ನವೆ, ಕೆರೆತ ಇತ್ಯಾದಿಗಳ ಶಮನಕ್ಕೆ ಹೈಡ್ರೋಕಾರ್ಟಿಜನ್‌ಕ್ರೀಂ.

ಆರೋಗ್ಯದ ರಕ್ಷಣೆಗಾಗಿ ಡಿಸ್ಪೋಸೆಬಲ್ ಗ್ಲೌಸುಗಳು. ಅದರಿಂದ ಕಾಯಿಲೆ ಅಥವಾ ಸೋಂಕು ತಡೆಗಟ್ಟಬಹುದು.

ಉರಿತದಿಂದ ಪಾರಾಗಲು ಕೋಲ್ಡ್ ಕಂಪ್ರೆಸ್‌.

ಪೇನ್‌ ಕಿಲ್ಲರ್‌ ಅಂದರೆ ನೋವು ನಿವಾರಕ ಔಷಧಿ.

ಆ್ಯಂಟಿ ಸೆಪ್ಟಿಕ್‌ ವೈಪ್ಸ್ ನ ಪ್ಯಾಕೆಟ್‌. ಅದರಿಂದ ಕತ್ತರಿಸಿದ ಜಾಗವನ್ನು ಸ್ವಚ್ಛಗೊಳಿಸಬಹುದು.

ರೋಲರ್‌ ಬ್ಯಾಂಡೇಜ್‌. ಅದರಿಂದ ಡ್ರೆಸಿಂಗ್‌ ಸರಿಯಾದ ಜಾಗದಲ್ಲಿ ಸದೃಢವಾಗಿರುತ್ತದೆ. ಅದು ಒತ್ತುತ್ತಿದ್ದು ಎಳೆತಕ್ಕೆ ಸಪೋರ್ಟ್ ಮಾಡುತ್ತದೆ.

ಬ್ಯಾಂಡೇಜ್‌ ಅಥವಾ ಗಾರ್‌ನ್ನು ಸುರಕ್ಷಿತವಾಗಿಡಲು ಬಟ್ಟೆಯ ಪಟ್ಟಿ.

ಜ್ವರ ಬಂದರೆ, ಉಷ್ಣವನ್ನು ತಿಳಿದುಕೊಳ್ಳಲು ಓವರ್‌ ಥರ್ಮಾಮೀಟರ್‌.

ಡಯೇರಿಯಾಗಾಗಿ ಒಂದು ಓವರ್‌ ದಿ ಕೌಂಟರ್‌ ಔಷಧಿ.

ಒಣಗಿದ ಹಾಗೂ ತಂಪಾದ ಜಾಗದಲ್ಲಿ ನಿಮ್ಮ ಕಿಟ್‌ನ್ನು ಒಳಗಿಟ್ಟು ಲಾಕ್‌ ಮಾಡಿ. ಮಕ್ಕಳಿಂದ ದೂರ ಇಡಿ. ಅದನ್ನು ಬಹಳಷ್ಟು ಜನ ತಮ್ಮ ಕಾರಿನಲ್ಲಿ ಎಮರ್ಜೆನ್ಸಿಗಾಗಿ ಸಣ್ಣ ಫಸ್ಟ್ ಏಡ್‌ ಕಿಟ್‌ ಇಟ್ಟುಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ