ಗರ್ಭ ಧರಿಸುವುದು ಯಾವುದೇ ಮಹಿಳೆಗೆ ಹೆಮ್ಮೆಯ ಸಂಗತಿ. ಇದೇ ಅವಳಿಗೆ ಜಗತ್ತಿನ ಅತ್ಯುತ್ತಮ ಖುಷಿ ನೀಡುವ ಸಂಗತಿ ಕೂಡ ಹೌದು. ನೀವು ಗರ್ಭ ಧರಿಸಿದಾಗ ನಡೆಸಲಾಗುವ ಪ್ರೀನೇಟ್ ಟೆಸ್ಟ್ ಅಂದರೆ ಪ್ರಸವ ಪೂರ್ವ ಪರೀಕ್ಷೆಗಳು ನಿಮ್ಮ ಹಾಗೂ ನಿಮ್ಮ ಗರ್ಭದಲ್ಲಿರುವ ಕಂದಮ್ಮನ ಆರೋಗ್ಯದ ಮಾಹಿತಿ ನೀಡುತ್ತವೆ.
ಭ್ರೂಣದ ಆರೋಗ್ಯಕ್ಕೆ ತೊಂದರೆಯಾಗಬಹುದಾದ ಯಾವುದೇ ಸಮಸ್ಯೆಯಿದ್ದರೂ ಪರೀಕ್ಷೆಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಉದಾಹರಣೆಗೆ ಸೋಂಕು, ಹುಟ್ಟುವ ತೊಂದರೆಗಳು ಅಥವಾ ಆನುವಂಶಿಕ ರೋಗಗಳು ಇತ್ಯಾದಿ. ಈ ಪರೀಕ್ಷೆ ಫಲಿತಾಂಶಗಳು ಮಗು ಹುಟ್ಟುವ ಮುಂಚೆಯೇ ಆರೋಗ್ಯ ಸಂಬಂಧಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.
ಅಂದಹಾಗೆ ಪ್ರಸವ ಪೂರ್ವ ಪರೀಕ್ಷೆಗಳು ಅತ್ಯಂತ ಉಪಯುಕ್ತ ಎಂದು ಸಾಬೀತಾಗುತ್ತವೆ. ಆದರೆ ಆ ಫಲಿತಾಂಶಗಳನ್ನು ಹೇಗೆ ವ್ಯಾಖ್ಯಾನಿಸ ಬೇಕು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿರುತ್ತದೆ.
ಪಾಸಿಟಿವ್ ಟೆಸ್ಟ್ ನ ಅರ್ಥ
ಯಾವಾಗಲೂ ಹುಟ್ಟುವ ಮಗುವಿಗೆ ಯಾವುದೇ ಹುಟ್ಟುವ ಕಾಯಿಲೆಗಳು ಇಲ್ಲ ಅಂತಲ್ಲ. ವೈದ್ಯರೊಂದಿಗೆ ಈ ಕುರಿತಂತೆ ಸಮಾಲೋಚನೆ ನಡೆಸಿ. ಫಲಿತಾಂಶ ದೊರೆತ ಬಳಿಕ ಎಲ್ಲಕ್ಕೂ ಮೊದಲು ಏನು ಮಾಡಬೇಕು ಎಂಬುದು ನಿಮಗೆ ಗೊತ್ತಿರಬೇಕು.
ವೈದ್ಯರು ಎಲ್ಲ ಗರ್ಭಿಣಿಯರಿಗೆ ಪ್ರಸವ ಪೂರ್ವ ಪರೀಕ್ಷೆಗಳನ್ನು ನಡೆಸಲು ಸೂಚಿಸುತ್ತಾರೆ. ಕೆಲವು ಮಹಿಳೆಯರಲ್ಲಿ ಆನುವಂಶಿಕ ರೋಗಗಳ ಪತ್ತೆಗಾಗಿ ಬೇರೆ ಕೆಲವು ಸ್ಕ್ರೀನಿಂಗ್‌ಟೆಸ್ಟ್ ನಡೆಸಲು ಸಲಹೆ ನೀಡುತ್ತಾರೆ.
5 ನಿಯಮಿತ ಟೆಸ್ಟ್ ಗಳು
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಾಡುವ ಕೆಲವು ನಿಯಮಿತ ಟೆಸ್ಟ್ ಗಳು ನೀವು ಪರಿಪೂರ್ಣ ಆರೋಗ್ಯವಾಗಿದ್ದೀರಿ ಎಂಬುದನ್ನು ಖಾತ್ರಿಪಡಿಸುತ್ತವೆ. ವೈದ್ಯರು ನಿಮ್ಮ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಿ ಕೆಲವು ಪರಿಸ್ಥಿತಿಗಳನ್ನು ಕಂಡುಕೊಳ್ಳುತ್ತಾರೆ ಅವುಗಳೆಂದರೆ :
ಹಿಮೊಗ್ಲೋಬಿನ್ (ಎಚ್‌ಬಿ)
ಬ್ಲಡ್ ಶುಗರ್ (ಎಫ್ ಅಂಡ್ ಪಿಪಿ)
ಬ್ಲಡ್ ಗ್ರೂಪ್ ಟೆಸ್ಟ್
ವೈರಲ್ ಮಾರ್ಕರ್ ಟೆಸ್ಟ್
ಬ್ಲಡ್ ಪ್ರೆಶರ್
ನೀವು ಗರ್ಭ ಧರಿಸಲು ಯೋಚಿಸುತ್ತಿದ್ದಲ್ಲಿ, ವೈದ್ಯರು ನಿಮಗೆ ಫಾಲಿಕ್ ಆ್ಯಸಿಡ್ ಸಪ್ಲಿಮೆಂಟ್ಸ್ ಸೇವಿಸಲು ಸೂಚಿಸುತ್ತಾರೆ. ನೀವು ಆರೋಗ್ಯವಂತರಾಗಿದ್ದು, ಚೆನ್ನಾಗಿ ಆಹಾರ ಸೇವನೆ ಮಾಡುತ್ತಿದ್ದರೂ ಸಹ ಈ ಸಪ್ಲಿಮೆಂಟ್ಸ್ ತೆಗೆದುಕೊಳ್ಳಲು ಹೇಳಬಹುದು. ವಿಟಮಿನ್`ಬಿ' ಸಪ್ಲಿಮೆಂಟ್ ಮತ್ತು ಕ್ಯಾಲ್ಶಿಯಂ ಸಪ್ಲಿಮೆಂಟ್ಸ್ ಎಲ್ಲ ಗರ್ಭಿಣಿಯರಿಗೆ, ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಸೇವಿಸಲು ಹೇಳಲಾಗುತ್ತದೆ. ಅವನ್ನು ಸೇವಿಸುವ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.
ಇತರೆ ಟೆಸ್ಟ್ ಗಳು
ಸ್ಕ್ಯಾನಿಂಗ್ : ಅಲ್ಟ್ರಾಸೌಂಡ್ ನಿಮ್ಮ ಕಂದನ ಹಾಗೂ ನಿಮ್ಮ ಒಳ ಅಂಗಗಳ ಚಿತ್ರಗಳನ್ನು ಸೆರೆಹಿಡಿಯಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ. ನಿಮ್ಮ ಗರ್ಭಾವಸ್ಥೆ ಸಾಮಾನ್ಯವಾಗಿದ್ದರೆ, ನಿಮಗೆ 2-3 ಸಲ ಇದನ್ನು ಮಾಡಿಸಬೇಕಾಗುತ್ತದೆ. ಆರಂಭದಲ್ಲಿ ಆಂತರಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ಮಾಡಲಾಗುತ್ತದೆ. ಎರಡನೇ ಬಾರಿಗೆ 18-20ನೇ ವಾರದಲ್ಲಿ ಮಗುವಿನ ಬೆಳವಣಿಗೆ ಹೇಗಿದೆ ಎಂದು ತಿಳಿದುಕೊಳ್ಳಲು ಈ ಟೆಸ್ಟ್ ಮಾಡಲಾಗುತ್ತದೆ.
ಜೆನೆಟಿಕ್ ಟೆಸ್ಟ್ : ಪ್ರೀನೇಟ್ ಜೆನೆಟಿಕ್ ಟೆಸ್ಟ್ ಆನುವಂಶಿಕ ರೋಗದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವವರಿಗೆ ಮಾಡಿಸಲಾಗುತ್ತದೆ. ಅದನ್ನು ಕೆಳಕಂಡ ಪರಿಸ್ಥಿತಿಗಳಲ್ಲಿ ಮಾಡಬೇಕಾಗುತ್ತದೆ.