ನಾವು ಆಹಾರದಲ್ಲಿ ಗಿಡ ಮೂಲಿಕೆ ಅಥವಾ ಗ್ರೀನ್‌ ಹರ್ಬ್ಸ್ ನ್ನು ಬಳಸುತ್ತೇವೆ. ಇವು ನಮ್ಮ ಆಹಾರಕ್ಕೆ ಸುವಾಸನೆಯನ್ನಷ್ಟೇ ನೀಡುವುದಿಲ್ಲ. ಅದರ ರುಚಿಯನ್ನು ಕೂಡ ಹೆಚ್ಚಿಸುತ್ತವೆ. ಇದರ ಹೊರತಾಗಿ ಈ ಗಿಡಮೂಲಿಕೆಗಳು ಹಲವು ರೋಗಗಳಿಂದ ನಮಗೆ ರಕ್ಷಣೆಯನ್ನೂ ನೀಡುತ್ತವೆ. ಯಾವ ಗಿಡಮೂಲಿಕೆಗಳಿಂದ ನಮಗೆ ಯಾವ ರೀತಿಯ ವಾಭವಿದೆ ಎಂದು ತಿಳಿದುಕೊಳ್ಳುವ ಅಗತ್ಯವಿದೆ.

ಪಲಾವ್ ಎಲೆ

ಲವಂಗದೆಲೆ ಅಥವಾ ಪಲಾವ್ ‌ಎಲೆಯನ್ನು ನಾವು ಆಹಾರ ತಯಾರಿಕೆಯಲ್ಲಿ ಬಳಸುತ್ತೇವೆ. ಪಲಾವ್‌, ಬಿರಿಯಾನಿ, ಸೂಪ್‌, ಸೀಫುಡ್‌ಗಳಲ್ಲಿ ರುಚಿಗಾಗಿ ಇದನ್ನು ಬಳಸಲಾಗುತ್ತದೆ.

ಲವಂಗದೆಲೆಗಳನ್ನು ನೀರಿನಲ್ಲಿ ಕುದಿಸಿದ ಬಳಿಕ, ಆ ನೀರಿನಲ್ಲಿ ಬಟ್ಟೆ ಅದ್ದಿ ಎದೆಯ ಮೇಲೆ ಇಟ್ಟುಕೊಳ್ಳುವುದರಿಂದ ಚೆಸ್ಟ್ ಇನ್‌ಫೆಕ್ಷನ್‌, ಫ್ಲ್ಯೂ, ಶೀತ ನೆಗಡಿ, ಕ್ಷಯ ಮುಂತಾದ ರೋಗಗಳಿದ್ದವರಿಗೆ ಸಾಕಷ್ಟು ಹಿತ ಎನಿಸುತ್ತದೆ. ಏಟು ಬಿದ್ದಾಗ, ಉಳುಕಿದಾಗ, ಊತ ಬಂದಾಗ, ಬೆನ್ನು ನೋವಿದ್ದಾಗ ಲವಂಗದೆಲೆಯ ಎಣ್ಣೆಯಿಂದ ಮಸಾಜ್‌ ಮಾಡಿದರೆ ನೋವಿನಿಂದ ಸಾಕಷ್ಟು ನಿರಾಳತೆ ದೊರಕುತ್ತದೆ.

ಪಚ್ಚಕರ್ಪೂರದ ಎಲೆ

ಇದು ಅತ್ಯಂತ ಚಿಕ್ಕ ಗಾತ್ರದ ಗಿಡವಾಗಿರುತ್ತದೆ. ಇದರ ಎಲೆಗಳು ಉದ್ದ ಹಾಗೂ ಮೃದುವಾಗಿರುತ್ತವೆ. ವಿಜಿಟೆಬಲ್ ಸೂಪ್‌, ಸಾಸ್‌ ಮುಂತಾದವುಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಟೊಮೇಟೊ ಹಾಗೂ ಚೀಸ್‌ ಸಲಾಡ್‌ ಹೊರತಾಗಿ ಚೀಸ್ ಆಮ್ಲೆಟ್‌ ಮತ್ತು ಪಿಜ್ಜಾದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ. ರೋಸ್ಟೆಡ್‌ ಚಿಕನ್‌ ಹಾಗೂ ಫಿಶ್‌ಗೆ ಸುವಾಸನೆ ನೀಡಲು ಕೂಡ ಇದನ್ನು ಬಳಸಲಾಗುತ್ತದೆ. ಹಲವು ದೇಶಗಳಲ್ಲಿ ಪಿಜ್ಜಾವನ್ನು ಗಾರ್ನಿಶ್‌ ಮಾಡಲು ಕರ್ಪೂರದ ಎಲೆಗಳನ್ನು ಬಳಸಲಾಗುತ್ತದೆ.

ಹಸಿವು ಹೆಚ್ಚಿಸಲು ಇದರ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಇತ್ತೀಚಿನ ಕೆಲವು ಸಂಶೋಧನೆಗಳು ಕರ್ಪೂರದ ಎಲೆಗಳ ಸೇವನೆ ನೆನಪಿನ ಶಕ್ತಿ ಹೆಚ್ಚಿಸಲು ಕಾರಣವಾಗುತ್ತವೆ ಎಂದು ಹೇಳಿವೆ. ಗಂಟಲು ಕಿರಿಕಿರಿ ಋತುಚಕ್ರವನ್ನು ನಿಯಮಿತಗೊಳಿಸುವಿಕೆ, ಒತ್ತಡ, ಖಿನ್ನತೆ ಕಡಿಮೆಗೊಳಿಸುವಲ್ಲೂ ಪಚನಕ್ರಿಯೆ ಸುಗಮಗೊಳಿಸಲು ಇದು ನೆರವಾಗುತ್ತದೆ  ಎಂದು ಹೇಳಲಾಗಿದೆ.

ಮುಟ್ಟಂತ್ಯದ ಕಾರಣ ಮಹಿಳೆಯರಿಗೆ ವಿಪರೀತ ಬೆವರು ಬರುತ್ತಿದ್ದರೆ, ಕರ್ಪೂರದ ಎಲೆ ಹಾಕಿ ಮಾಡಿದ ಚಹಾವನ್ನು ದಿನಕ್ಕೆ ಹಲವು ಸಲ ಕುಡಿಯುವುದರಿಂದ ಸಾಕಷ್ಟು ಒಳ್ಳೆಯ ಪರಿಣಾಮ ಕಂಡುಬರುತ್ತದೆ. ಇದರ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಉಸಿರಿನ ದುರ್ವಾಸನೆಗೆ ಸಂಬಂಧಪಟ್ಟ ತೊಂದರೆಗಳಲ್ಲದೆ ಕ್ಷಯ ಹಾಗೂ ಕಫದ ನಿವಾರಣೆ ಆಗುತ್ತದೆ.

ತುಳಸಿ

ಇದರ ಎಲೆಗಳು ರುಚಿಯಲ್ಲಿ ತೀಕ್ಷ್ಣವಾಗಿರುತ್ತವೆ. ಸಲಾಡ್‌, ಸೂಪ್‌, ಪಾಸ್ತಾ ಮತ್ತು ಸಾಸ್‌ನಲ್ಲಿ ಇದನ್ನು ಬಳಸಲಾಗುತ್ತದೆ.

ತುಳಸಿ ಸೇವನೆಯಿಂದ ಹಲವು ಆರೋಗ್ಯ ಲಾಭಗಳು ದೊರೆಯುತ್ತವೆ. ಹಸಿವನ್ನು ಹೆಚ್ಚಿಸುತ್ತದೆ, ಹೊಟ್ಟೆ ಕೆಟ್ಟಿದ್ದರೆ ಇದು ಸುಧಾರಣೆ ಮಾಡುವಲ್ಲಿ ನೆರವಾಗುತ್ತದೆ. ಚೀನಾದ ಔಷಧಿಗಳಲ್ಲಿ ಇದನ್ನು ಕಿಡ್ನಿಯ ತೊಂದರೆ ಹಾಗೂ ಒಸಡಿನ ಅಲ್ಸರ್‌ಗಾಗಿ ಬಳಸಲಾಗುತ್ತದೆ. ಉಸಿರಿನ ದುರ್ವಾಸನೆಗೆ ಸಂಬಂಧಪಟ್ಟ ತೊಂದರೆಗಳಲ್ಲದೆ ಕ್ಷಯ ಹಾಗೂ ಕಫದ ತೊಂದರೆಯಲ್ಲೂ ಇದು ಲಾಭಕರವಾಗಿದೆ.

ಪಾರ್ಸ್ಲೆ

ಇದು ಗಾಢ ಹಸಿರುವರ್ಣದ್ದಾಗಿದ್ದು, ಪ್ರತಿಯೊಂದು ಬಗೆಯ ಸಲಾಡ್‌ನಲ್ಲೂ ಉಪಯೋಗಿಸಲಾಗುತ್ತದೆ. ಸೂಪ್‌ ಗಾರ್ನಿಶ್‌ಮಾಡುವುದಿರಲಿ, ಫಿಶ್‌ ಕರಿಯನ್ನು ಗಾರ್ನಿಶ್‌ ಮಾಡುವುದಿರಲಿ ಇದನ್ನು ಬಳಸಲಾಗುತ್ತದೆ. ಇದನ್ನು ಹೆಚ್ಚು ಬೇಯಿಸಬಾರದು. ಏಕೆಂದರೆ ಇದು ತನ್ನ ಬಣ್ಣ ಹಾಗೂ ಸತ್ವ ಕಳೆದುಕೊಳ್ಳುತ್ತದೆ. ಪಾರ್ಸ್ಲೆಯ ತೈಲದಲ್ಲಿ ಔಷಧೀಯ ಗುಣವಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ