ನಿಮಗೆ ಯಾವುದಾದರೂ ವಸ್ತುವಿನ ಆಗತ್ಯವಿದ್ದಾಗ ತಕ್ಷಣ ಸಿಗುವಂತಿರಲಿ ಎಂಬ ಉದ್ದೇಶದಿಂದ ನೀವು ಹ್ಯಾಂಡ್‌ಬ್ಯಾಗ್‌ನಲ್ಲಿ  ನಿಮಗೆ ಬೇಕಾಗುವ ಬಗೆಬಗೆಯ ವಸ್ತುಗಳನ್ನು ಇರಿಸಿರುತ್ತೀರಿ. 

ಹೌದು, ನಿಮ್ಮ ಪರ್ಸ್‌ನಲ್ಲಿ ಬಗೆಬಗೆಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ ಮತ್ತು ನಿಮ್ಮನ್ನು ಕಾಯಿಲೆಗೆ ಗುರಿಪಡಿಸುತ್ತವೆ!

ಒಂದು ಸಂಶೋಧನೆಯ ಪ್ರಕಾರ ಶೇ.90ಕ್ಕಿಂತ ಹೆಚ್ಚು ಹ್ಯಾಂಡ್‌ಬ್ಯಾಗ್‌ಗಳಲ್ಲಿ ಬ್ಯಾಕ್ಟೀರಿಯಾ ಅಂಕುರಿಸುತ್ತವೆ. ಅಡುಗೆಮನೆ, ಬಾತ್‌ರೂಮ್ ಗಳಿಗೆ ಹೋಲಿಸಿದರೆ, ಪರ್ಸ್‌ ಗಳಲ್ಲೇ ಆರೋಗ್ಯಕ್ಕೆ ಅಪಾಯಕಾರಿಯಾದ ಬ್ಯಾಕ್ಟೀರಿಯಾ ಬೆಳೆಯುತ್ತವೆ ಎಂಬುದಾಗಿ ಸಂಶೋಧನೆಗಳಿಂದ ತಿಳಿದುಬಂದಿದೆ.

ಜನರಲ್ ಅಡ್ವಾನ್ಸ್ ಬಯೋ ಮೆಡಿಕಲ್‌ನ ದೃಷ್ಟಾಂತದ ಮೇರೆಗೆ ಡೇಲಿವೇರ್‌, ಮಹಿಳೆ ಮತ್ತು ಪುರುಷರಿಬ್ಬರಲ್ಲೂ ಸಾಂಕ್ರಾಮಿಕ ರೋಗ ಹರಡಲು ಮುಖ್ಯ ಕಾರಣ ಅವರ ಪರ್ಸ್‌ಗಳೇ ಆಗಿವೆ, ಎಂದು ಹೇಳುತ್ತದೆ. ಸಂಶೋಧನೆಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರ ಪರ್ಸ್‌ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತವೆ. ಕೇವಲ ಶೇ.2ರಷ್ಟು ಮಹಿಳೆಯರು ಮಾತ್ರ ತಿಂಗಳಿಗೊಮ್ಮೆ ತಮ್ಮ ಪರ್ಸ್‌ಗಳನ್ನು ಚೊಕ್ಕಟಗೊಳಿಸುತ್ತಾರೆ. ಉಳಿದಂತೆ ಶೇ.81 ಮಹಿಳೆಯರು ಎಂದೂ ತಮ್ಮ ಪರ್ಸ್‌ನ್ನು ಖಾಲಿ ಮಾಡುವುದೇ ಇಲ್ಲ. ಇತ್ತೀಚೆಗೆ ಕಾಯಿಲೆಗಳು ಹೆಚ್ಚುತ್ತಿವೆ. ಆದ್ದರಿಂದ ನೀವು ಆರೋಗ್ಯವಾಗಿರಬೇಕೆಂದರೆ ಮರೆಯದೆ ನಿಮ್ಮ ಹ್ಯಾಂಡ್‌ಬ್ಯಾಗ್‌ನ್ನು ಚೊಕ್ಕಟಗೊಳಿಸಿ. ಅದರಲ್ಲಿ ಅಗತ್ಯ ವಸ್ತುಗಳನ್ನಷ್ಟೇ ಇಡಿ ಮತ್ತು ಅವುಗಳನ್ನು ಒಂದು ಕ್ರಮವಾದ ರೀತಿಯಲ್ಲಿಡಿ.

ಹ್ಯಾಂಡ್‌ಬ್ಯಾಗ್‌ನ ಸ್ವಚ್ಛತೆ

ಬೆಚ್ಚಗಿನ ನೀರಿಗೆ ಲಿಕ್ವಿಡ್‌ ಸೋಪ್‌ ಅಥವಾ ಶ್ಯಾಂಪೂ ಸೇರಿಸಿ ಹ್ಯಾಂಡ್‌ಬ್ಯಾಗ್‌ನ ಹೊರ ಭಾಗವನ್ನು ಚೊಕ್ಕಟಗೊಳಿಸಿ. ಇದರಿಂದ ಹೊರಭಾಗದ ಕೊಳೆ ಹೋಗುತ್ತದೆ.

- ಹ್ಯಾಂಡ್‌ಬ್ಯಾಗ್‌ನ್ನು ಸ್ವಚ್ಛಗೊಳಿಸಲು ಅಥವಾ ಅದರ ಮೇಲಿನ ಕಲೆ ತೆಗೆಯಲು ವಿನಿಗರ್‌ ಅಥವಾ ಯಾವುದೇ ಸ್ಟೇನ್‌ ರಿಮೂವರ್‌ ಬಳಸಬೇಡಿ, ಅವುಗಳಲ್ಲಿರುವ ಕೆಮಿಕಲ್ಸ್ ನಿಂದ ಬಣ್ಣ ಕೆಡುವ ಸಂಭವವಿರುತ್ತದೆ.

- ಮೃದುವಾದ ಬಟ್ಟೆ ಬಳಸಿ ಲೆದರ್‌ ಪರ್ಸ್‌ನ್ನು ಸ್ವಚ್ಛಗೊಳಿಸಿ. ಇದಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಉಪಯೋಗಿಸಬಹುದು.

- ಹ್ಯಾಂಡ್‌ಬ್ಯಾಗ್‌ನ್ನು ಆ್ಯಂಟಿ ಬ್ಯಾಕ್ಟೀರಿಯಲ್ ಜೆಲ್‌ನಿಂದ ಸ್ವಚ್ಛಗೊಳಿಸಿ.

- ಬ್ಯಾಗ್‌ನ ಮೂಲೆಗಳನ್ನು ಸ್ವಚ್ಛಗೊಳಿಸಲು ಟೂತ್‌ಪಿಕ್‌ ಬಳಸಿ.

- ಬ್ಯಾಗ್‌ನ್ನು ಚೊಕ್ಕಟಗೊಳಿಸಿದ ಕೂಡಲೇ ಅದರಲ್ಲಿ ಸಾಮಾನುಗಳನ್ನಿಡಬೇಡಿ. ಕೊಂಚ ಹೊತ್ತು ಗಾಳಿಯಾಡಿದ ನಂತರವೇ ಇಡಿ.

ಹೀಗೆ ಮಾಡಬೇಡಿ

ಹ್ಯಾಂಡ್‌ಬ್ಯಾಗ್‌ನಲ್ಲಿ ಮೇಕಪ್‌ ಸಾಮಗ್ರಿಗಳನ್ನು ತುಂಬಿಸಬೇಡಿ. ನಿಮ್ಮ ನಿತ್ಯ ಬಳಕೆಗೆ ಬೇಕಾಗುವಷ್ಟನ್ನು ಮಾತ್ರ ಒಂದು ಪೌಚ್‌ನಲ್ಲಿ ಹಾಕಿ ಇಟ್ಟುಕೊಳ್ಳಿ, ಆಗ ಅವುಗಳನ್ನು ಚೊಕ್ಕಟಗೊಳಿಸಲು ಸುಲಭವಾಗುತ್ತದೆ.

- ಆಹಾರ ವಸ್ತುಗಳನ್ನು, ಮುಖ್ಯವಾಗಿ ಪ್ಯಾಕೆಟ್‌ ಬಿಚ್ಚಿರುವುದನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಡಿ. ಅದರಿಂದ ಇರುವೆಗಳು ಬ್ಯಾಗ್‌ನೊಳಗೆ ಬರಬಹುದು.

- ಬ್ಯಾಗ್‌ನ್ನು ಅಲ್ಲಿ ಇಲ್ಲಿ ಇಡಬೇಡಿ. ಬ್ಯಾಕ್ಟೀರಿಯಾ ಹೆಚ್ಚಾಗಿರುವ ಸ್ಥಳದಲ್ಲಂತೂ ಇಡಲೇಬೇಡಿ.

- ಹ್ಯಾಂಡ್‌ಬ್ಯಾಗ್‌ನ್ನು ಡಸ್ಟ್ ಬಿನ್‌ ಮಾಡಬೇಡಿ. ಕೆಲವು ಮಹಿಳೆಯರು ತ್ಯಾಜ್ಯ ವಸ್ತುಗಳನ್ನೂ ಸಹ ಹ್ಯಾಂಡ್‌ಬ್ಯಾಗ್‌ನಲ್ಲೇ ತುಂಬಿಸಿಕೊಂಡು ತಿರುಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಇದನ್ನು ಗಮನಿಸಿ

- ವಾಟರ್‌ಪ್ರೂಫ್‌ ಬ್ಯಾಗ್‌ನ್ನೇ ಕೊಂಡುಕೊಳ್ಳಿ. ಇಲ್ಲವಾದರೆ ಮಳೆ ಬಿದ್ದಾಗ ಒಳಗಿನ ವಸ್ತುಗಳೆಲ್ಲ ಒದ್ದೆಯಾಗುತ್ತವೆ. ಅದರಿಂದಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ.

- ಬ್ಯಾಗ್‌ ಕೊಳ್ಳುವಾಗ ಸ್ಟ್ರಿಪ್ಸ್ ಗಮನಿಸಿ, ಏಕೆಂದರೆ ಅವು ಭುಜದ ಮಾಂಸಖಂಡಗಳ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಮೃದುವಾದ ಮತ್ತು ಅಗಲವಾದ ಸ್ಟ್ರಿಪ್ಸ್ ಉಳ್ಳ ಬ್ಯಾಗ್‌ನ್ನೇ ಖರೀದಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ