ಈ ಶಸ್ತ್ರಚಿಕಿತ್ಸಾ ಕ್ರಮದಲ್ಲಿ ಎದೆಯವರೆಗೂ ಕ್ಷಾಸ್ಥಿ ಅಥವಾ ಎದೆಯ ಎಲುಬಿನ ಮೂಲಕ ದೊಡ್ಡ ಗಾತ್ರದ ಛೇದನವನ್ನು ಮಾಡಿ ಹೃದಯದ ರಕ್ತನಾಳಗಳಲ್ಲಿ ಉಂಟಾಗಿರುವ ತಡೆಗಳನ್ನು ಪತ್ತೆಹಚ್ಚಿ ತೆರವುಗೊಳಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ಪರಿಸ್ಥಿತಿಯನ್ನು ಚಿಕಿತ್ಸೆಗೊಳಪಡಿಸುವಲ್ಲಿ ಅತ್ಯುಚ್ಟ ಮಟ್ಟದ ಪ್ರಕ್ರಿಯೆ ಎಂದು ಪರಿಗಣಿಸಲ್ಪಟ್ಟಿದ್ದರೂ ಎದೆಯ ಗೂಡಿನ ಮೇಲೆ ಛೇದನವನ್ನು ಮಾಡಬೇಕಾಗಿ ಬರುವುದರಿಂದ ಗಣನೀಯ ಪ್ರಮಾಣದ ಅಸೌಖ್ಯಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯದಲ್ಲಿ ಕಂಡುಬರುವ ತಡೆಗಳ ಚಿಕಿತ್ಸೆಗಾಗಿ `ಕನಿಷ್ಠ ಗಾಯದ ಬೈಪಾಸ್‌ ಶಸ್ತ್ರಚಿಕಿತ್ಸೆ'ಯ ಆಯ್ಕೆಯನ್ನು ನೀಡುವ ಪರಿಪಾಠ ಕಂಡುಬರುತ್ತಿದೆ. ಲೆಫ್ಟ್ ಅ್ಯಂಟೀರಿಯರ್‌ಡಿಸೆಂಡಿಂಗ್‌ ಆರ್ಟರಿ ಎಂದು ಕರೆಯಲ್ಪಡುವ ಹೃದಯದ ಮುಂಭಾಗದ ಮೇಲ್ಮೈ ಮೇಲಿರುವ ಪರಿಧಮನಿಯಲ್ಲಿನ ತಡೆಗಳನ್ನು ನಿವಾರಿಸಲು ಇದು ಅತ್ಯುತ್ತಮ ವಿಧಾನವಾಗಿದೆ. ಆದಾಗ್ಯೂ, ಹಿಮ್ಮುಖ ಮೇಲ್ಮೈಯಲ್ಲಿರುವ ಹಾಗೂ ಕೆಳಮೇಲ್ಮೈಯಲ್ಲಿರುವ ಪರಿಧಮನಿಗಳಲ್ಲಿ ಕೈಗೊಳ್ಳಲಾಗುವ ತೆರೆದ ಬೈಪಾಸ್‌ ಶಸ್ತ್ರಚಿಕಿತ್ಸಾ ಕ್ರಮದಷ್ಟು ಉತ್ತಮವಾದ ಪರಿಣಾಮ ಕನಿಷ್ಠ ಗಾಯದ ಶಸ್ತ್ರಚಿಕಿತ್ಸಾ ನಡೆಯಲ್ಲಿ ಕಂಡುಬರಲಾರದು. ಆದ್ದರಿಂದ ವಿಶೇಷವಾಗಿ, ಭಾರತದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳ ಕುರಿತಾಗಿ ಅನುಭವ ಮತ್ತು ಮೂಲಭೂತ ಸೌಕರ್ಯಗಳ ಅಗತ್ಯ ಇನ್ನೂ ಹೆಚ್ಚಾಗಿ ಬೇಕಾಗಿರುವ ಸಂದರ್ಭದಲ್ಲಿ ಬಹುವಿಧ ರಕ್ತನಾಳ ತಡೆಗಳಿಂದ ಕೂಡಿದ ಉಪಶಮನ ಪ್ರಕ್ರಿಯೆಯಲ್ಲಿ ಕನಿಷ್ಠ ಗಾಯದ ಚಿಕಿತ್ಸೆಯ ಫಲಪ್ರದವಾಗುವಿಕೆ ಮತ್ತು ದೀರ್ಘಕಾಲೀನತೆಯ ಕುರಿತಾಗಿ ಇನ್ನೂ ಸಂಪೂರ್ಣವಾಗಿ ಅರಿತುಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ.

ಆದಾಗ್ಯೂ, ಜಾಗತಿಕವಾಗಿ ಈಗ ಹೆಚ್ಚಾಗಿ ಚಾಲನೆಯಲ್ಲಿರುವ ನವೀನ ಮಾದರಿಯ ಮತ್ತು ಪರಿವರ್ತನಕಾರಕ ಚಿಕಿತ್ಸಾ ನಡೆಯುವ ಹೈಬ್ರಿಡ್‌ ತಂತ್ರಗಳನ್ನು ಒಳಗೊಳ್ಳುತ್ತಲಿದೆ. ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ಹೃದಯ ವಿಜ್ಞಾನ ವಿಭಾಗಗಳ ಅಧ್ಯಕ್ಷ ಡಾ. ವಿವೇಕ್‌ ಜವಳಿ ಅವರು ಇತ್ತೀಚೆಗೆ ಡಾ. ಇಂಗ್‌ ಜೆ ಎಂಬವರು 62 ವರ್ಷದ ವ್ಯಾಪಾರಿಯೋರ್ವರಿಗೆ ಕನಿಷ್ಠ ಗಾಯದ ಹೈಬ್ರಿಡ್‌ ಕೊರೊನರಿ ರೀವ್ಯಾಸ್ಕುಲರೈಸೇಶನ್‌ ಎಂಬ ಹೈಬ್ರಿಡ್‌ ಶಸ್ತ್ರಚಿಕಿತ್ಸೆಯನ್ನು ಮಾಡಿ, ಅವರು ಶೀಘ್ರವಾಗಿ ತಮ್ಮನ್ನು ಕಾಡುತ್ತಿದ್ದ ತೊಂದರೆಗಳಿಂದ ಉಪಶಮನ ಹೊಂದಲು ಸಹಾಯ ಮಾಡಿದ್ದಾರೆ.

ಯಾವಾಗಲೂ ಕಾರ್ಯ ನಿಮಿತ್ತ  ಪ್ರವಾಸಗಳಲ್ಲಿ ನಿರತರಾಗಿರುತ್ತಿದ್ದ ಈ ವ್ಯಾಪಾರಿ ಒಂದು ದಿನ ತಮ್ಮ ನಿಯಮಿತ ತಪಾಸಣೆಗಾಗಿ ವೈದ್ಯರಲ್ಲಿ ತೆರಳಿದಾಗ ಹೃದಯದ ಒಂದು ಅಪಧಮನಿಯಲ್ಲಿ ತಡೆಯಿರುವುದು ಪತ್ತೆಯಾಗಿ ಆಶ್ಚರ್ಯಚಕಿತರಾಗಿದ್ದರು. ದೀರ್ಘ ಪರೀಕ್ಷೆಗಳ ನಂತರದಲ್ಲಿ, ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳದಲ್ಲಿ ಬಹುವಿಧ ತಡೆಗಳಿದ್ದುದು ಪತ್ತೆಯಾಗಿತ್ತು. ಕಳೆದ 30 ವರ್ಷಗಳಿಂದಲೂ ತಮ್ಮ ಕುಟುಂಬ ವೈದ್ಯರಾಗಿರುವ ಡಾ. ಎಂ.ಆರ್‌. ಕೃಷ್ಣಮೂರ್ತಿ ಅವರ ಸಲಹೆಯ ಮೇರೆಗೆ ಅವರು ಫೋರ್ಟಿಸ್‌ ಆಸ್ಪತ್ರೆಯ ತಜ್ಞವೈದ್ಯ ಡಾ. ಜವಳಿ ಅವರನ್ನು ಭೇಟಿ ಮಾಡಿದರು.

`ಸಾಧಾರಣವಾಗಿ, ಕೊರೊನರಿ ಆರ್ಟರಿ ರೋಗಗಳಲ್ಲಿ, ರೋಗಿಯ ಹೃದಯದ ಮುಂಭಾಗದಲ್ಲಿರುವ ಅಪಧಮನಿಯಲ್ಲಿ ತಡೆಗಳಿರುವ ಸಂದರ್ಭಗಳಲ್ಲಿ ಬೈಪಾಸ್‌ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಸಾಮಾನ್ಯ ಪದ್ಧತಿ. ಏಕೆಂದರೆ, ಎದೆಯ ಎಲುಬಿನ ಹಿಂಭಾಗದಲ್ಲಿರುವ ಇನ್ನೊಂದು ಅಪಧಮನಿಯನ್ನು ಉಪಯೋಗಿಸಿಕೊಂಡು ಕಸಿ ಮಾಡಬಹುದು. ಎರಡು ಅಪಧಮನಿಗಳಿಗೆ ಮಾಡಲಾಗುವ ಕಸಿಯ ಪರಿಣಾಮ ಅತ್ಯಂತ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಇದಕ್ಕೆ ಸರಿಸಾಟಿಯಾದುದು ಇನ್ನೊಂದಿಲ್ಲ. ಇನ್ನಿತರ ತಡೆಗಳನ್ನು ಸ್ಟೆಂಟುಗಳನ್ನು ಉಪಯೋಗಿಸಿ ಪರಿಣಾಮಕಾರಿಯಾಗಿ ಚಿಕಿತ್ಸೆಗೊಳಪಡಿಸಬಹುದು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರಕ್ತನಾಳಗಳಲ್ಲಿ ಬಹುವಿಧ ತಡೆಗಳನ್ನು ಹೊಂದಿರುವ ರೋಗಿಗಳ ಧಮನಿಗೆ ಕನಿಷ್ಠ ಗಾಯದ ಫಾಸ್ಟ್ ಟ್ರ್ಯಾಕ್‌ ಬೈಪಾಸ್‌ ಶಸ್ತ್ರಚಿಕಿತ್ಸೆ ಮತ್ತು ಇನ್ನುಳಿದ ತಡೆಗಳ ತೆರವಿಗೆ ಸ್ಟೆಂಟುಗಳನ್ನು ಉಪಯೋಗಿಸಿ ಹೈಬ್ರಿಡ್‌ ಚಿಕಿತ್ಸೆ ನೀಡುವುದು ತುಂಬ ಸುಲಭವಾದ, ಕಡಿಮೆ ಘಾಸಿಯಿಂದ ಕೂಡಿದ ಹಾಗೂ ಅತಿ ಶೀಘ್ರವಾಗಿ ಗುಣಮುಖರಾಗುವ ಚಿಕಿತ್ಸಾ ಯೋಜನೆಯಾಗಿದೆ,' ಎಂದು ಡಾ. ಇಂಗ್‌ ಜೆ. ಅವರಿಗೆ ಹೈಬ್ರಿಡ್‌ ಶಸ್ತ್ರಚಿಕಿತ್ಸೆಯನ್ನು ಮಾಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ವಿಜ್ಞಾನ ವಿಭಾಗಗಳ ಅಧ್ಯಕ್ಷ ಡಾ. ವಿವೇಕ್‌ ಜವಳಿ ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ