ದೇಹವನ್ನು ಆರೋಗ್ಯದಿಂದಿಟ್ಟುಕೊಳ್ಳಲು ಮಸಾಜ್‌ ಅತ್ಯವಶ್ಯ. ನಿಮಗೆ ಯಾವಾಗಲಾದರೂ ದಣಿವಿನ ಅನುಭೂತಿ ಉಂಟಾದರೆ ಆಗ ಮಸಾಜ್‌ ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ತಕ್ಷಣವೇ ಎನರ್ಜಿ ಬರುತ್ತದೆ. ಮಸಾಜ್‌ ಒಂದು ಔಷಧಿಯ ಹಾಗೆ ಕೆಲಸ ಮಾಡುತ್ತದೆ. ಮಸಾಜ್‌ನಿಂದ ತನುಮನ ಅರಳುತ್ತದೆ. ಹಾಗೆಂದೇ ಇತ್ತೀಚೆಗೆ `ಮಸಾಜ್‌ ಥೆರಪಿ' ಒಂದು ಟ್ರೆಂಡ್‌ಆಗುತ್ತಿದೆ.

ತಲೆಯ ಮಸಾಜ್

ತಲೆಯ ಮಸಾಜ್‌ನಿಂದ ತಲೆ ನೋವು ಹಾಗೂ ಒತ್ತಡದಿಂದ ನಿರಾಳತೆ ದೊರಕುತ್ತದೆ. ಕೂದಲು ದಟ್ಟ ಹಾಗೂ ಉದ್ದವಾಗಿ ಬೆಳೆಯಲು ಅವಕಾಶ ದೊರಕುತ್ತದೆ. ತಲೆಗೆ ಎಣ್ಣೆ ಹಾಕಿ ಬೆರಳಿನಿಂದ ಒತ್ತುತ್ತ ನಿಧಾನವಾಗಿ ಮಸಾಜ್‌ ಮಾಡಿ. ಕುತ್ತಿಗೆಯ ಸಮೀಪ ಬೆರಳುಗಳನ್ನು ವೃತ್ತಾಕಾರದಲ್ಲಿ ತಿರುಗಿಸುತ್ತ ಮಸಾಜ್‌ ಮಾಡಿ ಹಾಗೂ ಹಣೆಯ ಕೂದಲಿನ ತನಕ ಬನ್ನಿ.

ಮೃದು ಹಾಗೂ ಕಾಂತಿಯುತ ಕೂದಲಿಗಾಗಿ ವಾರದಲ್ಲಿ ಕನಿಷ್ಠ 1 ಸಲ ಉಗುರು ಬೆಚ್ಚಗಿನ ತೈಲದಿಂದ ಇಡೀ ತಲೆಯನ್ನು ಮಸಾಜ್ ಮಾಡಿ ಬಳಿಕ ಬಿಸಿನೀರಿನಲ್ಲಿ ಟವೆಲ್ ಅದ್ದಿ ತಲೆಗೆ ಹಬೆ ಕೊಡಿ. ನೀವು ಮಸಾಜ್‌ಗೆ ಯಾವುದೇ ಬಗೆಯ ತೈಲ ಉಪಯೋಗಿಸಬಹುದು. ಮಸಾಜ್‌ ಬಳಿಕ ಶ್ಯಾಂಪೂವಿನಿಂದ ತಲೆ ಸ್ವಚ್ಛಗೊಳಿಸಿಕೊಳ್ಳಿ.

ಕೈಗಳ ಮಸಾಜ್

ಮೃದು ಹಾಗೂ ಸುಂದರ ಕೈಗಳಿಗಾಗಿ ಕೋಲ್ಡ್ ಕ್ರೀಮ್ ಅಥವಾ ಬಾಡಿ ಲೋಶನ್‌ನಿಂದ ದಿನ ಸ್ನಾನ ಮಾಡುವುದು ಮತ್ತು ಮನೆ ಕೆಲಸವೆಲ್ಲ ಮುಗಿದ ಬಳಿಕ ಕೈಗಳ ಮಸಾಜ್‌ ಮಾಡಿ.

ವಾರದಲ್ಲಿ 1 ದಿನ ಆಲಿವ್ ‌ಆಯಿಲ್ ನ್ನು ಬಿಸಿ ಮಾಡಿಕೊಂಡು ಅದರಿಂದ ಕೈಗಳ ಮಸಾಜ್‌ ಮಾಡಿಕೊಳ್ಳಿ.

ಎಣ್ಣೆಯಿಂದ ಮಸಾಜ್‌ ಮಾಡಿಕೊಳ್ಳುವಾಗ ಒಂದು ಕೈಯಿಂದ ನಿಮ್ಮ ಇನ್ನೊಂದು ಕೈಯನ್ನು ಎಳೆದುಕೊಳ್ಳಿ. ಹೀಗೆ ಮಾಡುವುದರಿಂದ ಕೈಗಳ ದಣಿವು ನಿವಾರಣೆಯಾಗುತ್ತದೆ.

ಕುತ್ತಿಗೆಯ ಮಸಾಜ್

ಕುತ್ತಿಗೆಯನ್ನು ಸುಕ್ಕುಗಳಿಂದ ರಕ್ಷಿಸಲು ಮಸಾಜ್‌ ಅತ್ಯವಶ್ಯ. ಹೀಗಾಗಿ ಸ್ನಾನ ಮಾಡಿದ ಬಳಿಕ ನಿಯಮಿತವಾಗಿ ಮಾಯಿಶ್ಚರೈಸರ್‌ನಿಂದ ಕುತ್ತಿಗೆಯನ್ನು ಮಸಾಜ್‌ ಮಾಡಿ.

ಕುತ್ತಿಗೆಯ ಹಿಂಭಾಗ ಮತ್ತು ಮುಂಭಾಗದ ಕಪ್ಪು ಕಲೆಯನ್ನು ಹೋಗಲಾಡಿಸಲು ಪ್ರತಿದಿನ ಹಸಿಹಾಲಿನಿಂದ ಮಸಾಜ್‌ಮಾಡಿ.

ಕಾಲುಗಳ ಮಸಾಜ್

kyo-jaruri-hai-masaj-2 (1)

ಒಂದುವೇಳೆ ಹಿಮ್ಮಡಿ ಒಡೆದಿದ್ದರೆ ಒಂದಿಷ್ಟು ಗುಲಾಬಿಜಲದಲ್ಲಿ 5-6 ಹನಿ ನಿಂಬೆರಸ ಹಾಕಿಕೊಂಡು ಮಸಾಜ್‌ ಮಾಡಿಕೊಳ್ಳಿ. ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ಅರಿಶಿನ ಹಾಕಿಕೊಂಡು ಕೂಡ ಮಸಾಜ್‌ ಮಾಡಬಹುದು.

ರಾತ್ರಿ ಹೊತ್ತು ಆಲಿಲ್ ‌ಆಯಿಲ್ ‌ಬಿಸಿ ಮಾಡಿಕೊಂಡು ಮಸಾಜ್‌ ಮಾಡಿಕೊಳ್ಳಿ.

ಕಾಲುಗಳ ಮಸಾಜ್‌ ಮಾಡುವ ಸಮಯದಲ್ಲಿ ಕೈಗಳನ್ನು ಕೆಳಭಾಗದಿಂದ ಮೇಲ್ಭಾಗದತ್ತ ತೆಗೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ ರಕ್ತಚಲನೆ ಸಮರ್ಪಕವಾಗಿ ನಡೆಯುತ್ತದೆ ಹಾಗೂ ತ್ವಚೆಯ ಶುಷ್ಕತೆ ನಿವಾರಣೆಯಾಗುತ್ತದೆ.

ಕಾಲು ಮತ್ತು ತೊಡೆಗಳಲ್ಲಿ ನೋವುಂಟಾದರೆ ಮಸಾಜ್‌ಗಿಂತ ಬೇರೆ ಉಪಾಯ ಮತ್ತೊಂದಿಲ್ಲ. ನಿಯಮಿತವಾಗಿ ಮಾಡುವ ಮಸಾಜ್‌ನ ವ್ಯತ್ಯಾಸ ನಿಮಗೆ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ.

ಕ್ರೀಮ್ ಅಥವಾ ಲೋಶನ್‌ನಿಂದ ಮಸಾಜ್‌ ಮಾಡುವಾಗ ಬೆರಳುಗಳನ್ನು ಗೋಲಾಕಾರದಲ್ಲಿ ಸುತ್ತಿಸಿ. ಆದರೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳಿ.

ಬಾದಾಮಿ ಎಣ್ಣೆಯಲ್ಲಿ ನಿಂಬೆರಸ ಬೆರೆಸಿ ಅದರಿಂದ ಮುಖದ ಮಸಾಜ್‌ ಮಾಡಿ. 15 ನಿಮಿಷದ ಬಳಿಕ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.

ಕಣ್ಣುಗಳ ಕೆಳಭಾಗದಲ್ಲಿ ಕಪ್ಪುಕಲೆಗಳು ಇದ್ದರೆ, ತಾಜಾ ಕೆನೆಯಿಂದ ಮೃದುವಾಗಿ ಮಸಾಜ್‌ ಮಾಡಿ. ಇದರಿಂದ ಚರ್ಮಕ್ಕೆ ಸಾಕಷ್ಟು ಲಾಭವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ