ಇಂದಿನ ಧಾವಂತದ ಜೀವನದಲ್ಲಿ ಎಲ್ಲಕ್ಕೂ ಹೆಚ್ಚಿನ ಪರಿಣಾಮ ಮುಂಜಾನೆ ಉಪಾಹಾರದ ಮೇಲೆ ಬೀಳುತ್ತದೆ. ನಗರ ಪ್ರದೇಶಗಳಲ್ಲಿ ಶೇ.40 ರಷ್ಟು ಜನರು ಮುಂಜಾನೆ ಉಪಾಹಾರ ಮಾಡದೆಯೇ ಮನೆಯಿಂದ ಹೊರಡುತ್ತಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು.

ಮುಂಜಾನೆ ಉಪಾಹಾರ ದೇಹಕ್ಕೆ ಶೇ.25 ರಷ್ಟು ಶಕ್ತಿ ಸಂದಾಯ ಮಾಡುತ್ತದೆ. ಉಪಾಹಾರ ಸೇವಿಸದಿದ್ದರೆ ಬೊಜ್ಜು, ಗ್ಯಾಸ್ ತೊಂದರೆ ಉಂಟಾಗಬಹುದು. ಆರೋಗ್ಯಕರ ಉಪಾಹಾರ ದೇಹಕ್ಕೆ ಕೇವಲ ಶಕ್ತಿಯನ್ನಷ್ಟೇ ಅಲ್ಲ, ವಿಟಮಿನ್‌ ಮತ್ತು ಕಬ್ಬಿಣಾಂಶವನ್ನೂ ದೊರಕಿಸಿ ಕೊಡುತ್ತದೆ.

ಉಪಾಹಾರದಲ್ಲಿ ಕಬ್ಬಿಣಾಂಶದ ಮಹತ್ವ

ಆರೋಗ್ಯಕರ ಉಪಾಹಾರದಲ್ಲಿ ನೀವು ಏನನ್ನು ತಿನ್ನುತ್ತೀರಿ ಎನ್ನುವುದು ಬಹಳ ಮಹತ್ವದ್ದಾಗಿರುತ್ತದೆ. ಮುಂಜಾನೆಯ ಪ್ರಥಮ ಆಹಾರ ಸೇವನೆಯಿಂದಲೇ ದೇಹದ ಚಯಾಪಚಯ ಕ್ರಿಯೆ, ಅದರ ಮುಖಾಂತರ ಅಗತ್ಯ ಪೋಷಕಾಂಶಗಳು ದೇಹದ ಬೇರೆ ಬೇರೆ ಭಾಗಗಳಿಗೆ ತಲುಪುತ್ತವೆ.

ಮುಂಜಾನೆ ಉಪಾಹಾರ ಸೇವನೆ ಮಾಡದೇ ಇರುವುದು ಅಥವಾ ಸೂಕ್ತವಲ್ಲದ ಆಹಾರ ಸೇವನೆ ಮಾಡುವವರಲ್ಲಿ ಬಹು ಬೇಗ ನಿಶ್ಶಕ್ತಿ ಕಂಡುಬರುತ್ತದೆ. ಕಣ್ಣಿನ ಆಸುಪಾಸು ಕಪ್ಪು ವರ್ತುಲಗಳು ಉಂಟಾಗುವಂತಹ ಸಾಮಾನ್ಯ ಲಕ್ಷಣಗಳು ಗೋಚರಿಸುತ್ತವೆ.

ಮಹಿಳೆಯರ ಪೋಷಣೆಗೆ ಸಂಬಂಧಪಟ್ಟ ದೈಹಿಕ ಅಗತ್ಯಗಳನ್ನು ಪೂರೈಸಲು ಕಬ್ಬಿಣಾಂಶ ಅತ್ಯಂತ ಮುಖ್ಯವಾಗಿದೆ. ಇದರ ಸರಿಯಾದ ಪ್ರಮಾಣವನ್ನು ಕಾಯ್ದುಕೊಂಡು ಹೋಗಲು ಕಬ್ಬಿಣಾಂಶಯುಕ್ತ ಉಪಾಹಾರ ಸೇವನೆ ಮಾಡುವುದು ಎಲ್ಲಕ್ಕೂ ಒಳ್ಳೆಯ ಉಪಾಯ.

ಜಾಗತಿಕ ಪೋಷಕಾಂಶ ವರದಿ 2016ರ ಪ್ರಕಾರ, ಕಬ್ಬಿಣಾಂಶದ ಕೊರತೆಯ ಕಾರಣದಿಂದ ಮಹಿಳೆಯರಲ್ಲಿ ರಕ್ತಹೀನತೆ ಉಂಟಾಗುವ ಪ್ರಕರಣಗಳಲ್ಲಿ 180 ದೇಶಗಳ ಪಟ್ಟಿಯಲ್ಲಿ ಭಾರತ 170ನೇ ಸ್ಥಾನದಲ್ಲಿದೆ.

ಎಷ್ಟು ಪ್ರಮಾಣ ಅತ್ಯಗತ್ಯ?

ಒಬ್ಬ ವ್ಯಕ್ತಿಗೆ ಕಬ್ಬಿಣಾಂಶದ ಪ್ರಮಾಣ ಎಷ್ಟು ಅಗತ್ಯವಿದೆ ಎನ್ನುವುದು ವಯಸ್ಸು, ಲಿಂಗ ಹಾಗೂ ಆರೋಗ್ಯವನ್ನು ಅವಲಂಬಿಸಿದೆ. ಶಿಶುಗಳಿಗೆ ಹಾಗೂ ಮಕ್ಕಳಿಗೆ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿ ಬೇಕು. ಏಕೆಂದರೆ ಅವರ ದೇಹ ಬೆಳವಣಿಗೆಯಾಗುತ್ತಿರುತ್ತದೆ. ಎರಡನೆಯದು, ಅವರ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಹೀಗಾಗಿ ಅವರಿಗೆ ಸೋಂಕು ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

48 ವರ್ಷದ ಮಕ್ಕಳಿಗೆ ಪ್ರತಿದಿನ 10 ಮಿಲಿ ಗ್ರಾಂ, 9-13 ವರ್ಷದವರಿಗೆ ಪ್ರತಿದಿನ 8 ಮಿಲಿ ಗ್ರಾಂ, 14-50 ವರ್ಷದವರಿಗೆ ಪ್ರತಿದಿನ 18 ಮಿಲಿ ಗ್ರಾಂ, 14-50 ವರ್ಷದ ಪುರುಷರಿಗೆ ಪ್ರತಿದಿನ 8 ಮಿಲಿ ಗ್ರಾಂ, 50ಕ್ಕೂ ಅಧಿಕ ವಯಸ್ಸಿನ ಮಹಿಳೆಯರಿಗೆ ಪ್ರತಿದಿನ 8 ಮಿಲಿಗ್ರಾಂ ಕಬ್ಬಿಣಾಂಶದ ಅವಶ್ಯಕತೆ ಇರುತ್ತದೆ. ಗರ್ಭಿಣಿಯರಿಗೆ ಕಬ್ಬಿಣಾಂಶದ ಹೆಚ್ಚಿನ ಅವಶ್ಯಕತೆ ಇರುತ್ತದೆ. ಈ ಅವಧಿಯಲ್ಲಿ ಕಬ್ಬಿಣಾಂಶದ ಪ್ರಮಾಣ ಪ್ರತಿ ದಿನಕ್ಕೆ 10-20 ಮಿಲಿಗ್ರಾಂನ ಹೆಚ್ಚಳವಾಗುತ್ತದೆ.

ಕಬ್ಬಿಣಾಂಶದ ಕೊರತೆಯ ಲಕ್ಷಣಗಳು

ಕೆಂಪು ರಕ್ತ ಕಣದಲ್ಲಿ ಕಂಡುಬರುವ ಹಿಮೋಗ್ಲೋಬಿನ್‌ನ ನಿರ್ಮಾಣಕ್ಕೆ ಕಬ್ಬಿಣಾಂಶದ ಅತಿ ಅಗತ್ಯವಿದೆ. ಹಿಮೋಗ್ಲೋಬಿನ್‌ ದೇಹದ ಬೇರೆ ಬೇರೆ ಅಂಗಗಳಿಗೆ ಸೂಕ್ತ ರೀತಿಯಲ್ಲಿ ಆಮ್ಲಜನಕ ತಲುಪಿಸುತ್ತದೆ, ಕಬ್ಬಿಣಾಂಶದ ಕೊರತೆ ಇದ್ದಲ್ಲಿ ಅವು ದಣಿಯುತ್ತವೆ.

ದೇಹದಲ್ಲಿ ಹಿಮೋಗ್ಲೋಬಿನ್‌ನ ನಿರ್ಮಾಣ ಪ್ರಕ್ರಿಯೆ ನಿಧಾನಗೊಂಡರೆ ರಕ್ತದ ಕೊರತೆ ಉಂಟಾಗುತ್ತದೆ. ಅದರಿಂದಾಗಿ ಸ್ವಲ್ಪ ಕೆಲಸ ಮಾಡಿದರೂ ದಣಿವು ಉಂಟಾಗುತ್ತದೆ. ಮೆಟ್ಟಿಲು ಹತ್ತುವಾಗ ಏದುಸಿರು ಬರುತ್ತದೆ, ಹೃದಯದ ಗತಿ ಏರುಪೇರಾಗುತ್ತದೆ, ತಲೆನೋವು, ಗಮನ ಕೇಂದ್ರೀಕರಿಸಲು ಆಗದೇ ಇರುವಂತಹ ಸಮಸ್ಯೆ, ಮಾಂಸಖಂಡಗಳಲ್ಲಿ ನೋವು ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ