ನವಜಾತ ಶಿಶುವಿನ ತ್ವಚೆ ಅತ್ಯಂತ ಮೃದುವಾಗಿರುತ್ತದೆ. ಜೊತೆಗೆ ಸಂವೇದನಾಶೀಲ ಕೂಡ ಆಗಿರುತ್ತದೆ. ಸೋಪ್‌, ಡಿಟರ್ಜೆಂಟ್‌, ಆಯಿಲ್ ‌ಪೌಡರ್‌ ಮತ್ತು ಬಟ್ಟೆ ಇವುಗಳಲ್ಲಿನ ರಾಸಾಯನಿಕ ಅಂಶಗಳು ಕಂದನ ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಅವುಗಳಿಂದಾಗಿ ಮಗುವಿನ ತ್ವಜೆಗೆ ಉರಿತ, ಡ್ರೈನೆಸ್‌, ರಾಶೆಸ್‌ ಸಮಸ್ಯೆಗಳು ಆಗಬಹುದು. ಅದೇ ರೀತಿ ಮಗುವಿಗೆ ಸುವಾಸನಾಯುಕ್ತ ಬೇಬಿ ಪ್ರಾಡಕ್ಟ್ಸ್ ಕೂಡ ಬಳಸದಿರಿ. ಮಗುವಿನ ತ್ವಚೆಯನ್ನು ಮೃದುವಾಗಿಡಲು ಈ ಕೆಳಕಂಡ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ಸ್ನಾನ ಮಾಡಿಸುವುದು : ಹುಟ್ಟಿದ ಮೊದಲ ತಿಂಗಳು ಮಗುವಿಗೆ ವಾರದಲ್ಲಿ 3-4 ಸಲ ಸ್ಪಾಂಜ್‌ ಬಾಥ್‌ ಮಾಡಿಸಿ. ಹಾಲು ಕುಡಿಸಿದ ಬಳಿಕ ಮಗುವಿನ ಬಾಯಿಯನ್ನು ಚೆನ್ನಾಗಿ ಒರೆಸಿ. ಡೈಪರ್‌ ಬದಲಿಸಿದ ಬಳಿಕ ಸ್ಪಾಂಜ್‌ ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. 2ನೇ ತಿಂಗಳಿನಲ್ಲಿ ಮಗುವಿಗೆ ಸಾಧಾರಣ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಮೈಲ್ಡ್ ಸೋಪ್‌, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್ ಮುಂತಾದವುಗಳ ಬಳಕೆ ಮಾಡಲೇ ಬೇಡಿ. ಅವು ಮಗುವಿನ ಸಂವೇದನಾಶೀಲ ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಸ್ನಾನ ಮಾಡಿಸಿದ ಬಳಿಕ ಮೃದುವಾದ ಟವೆಲ್ ‌ನಿಂದ ನಿಧಾನವಾಗಿ ಒರೆಸಿ.

ಪೌಡರ್ಹೇಗೆ ಲೇಪಿಸಬೇಕು? : ಪುಟ್ಟ ಶಿಶುಗಳಿಗಾಗಿಯೇ ತಯಾರಿಸಲಾದ ಟ್ಯಾಲ್ಕಮ್ ಪೌಡರ್‌ ನ್ನೇ ಬಳಸಿ. ಸುವಾಸನಾಯುಕ್ತ, ರಾಸಾಯನಿಕ ಮಿಶ್ರಣವುಳ್ಳ ಪೌಡರ್‌ ಲೇಪಿಸಬೇಡಿ. ಡೈಪರ್‌ ಏರಿಯಾದಲ್ಲಿ ಪೌಡರ್‌ ಹಾಕಬೇಡಿ.

ಮಸಾಜ್‌ : ನವಜಾತ ಹಾಗೂ ಚಿಕ್ಕ ಮಕ್ಕಳ ಚರ್ಮ ಅತ್ಯಂತ ಸೂಕ್ಷ್ಮ. ಹೀಗಾಗಿ ಮಸಾಜ್‌ ಮಾಡುವ ಮುನ್ನ ಹೇಗೆ ಮಾಡಬೇಕು, ಯಾವ ತೆರನಾದ ಆಯಿಲ್ ‌ಬಳಸಬೇಕು, ಎಷ್ಟು ನಿಮಿಷಗಳ ಕಾಲ ಮಸಾಜ್‌ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಅದರ ಜೊತೆ ಜೊತೆಗೆ ಯಾವ ಸಂದರ್ಭದಲ್ಲಿ ಮಸಾಜ್‌ ಮಾಡಬಾರದು ಎನ್ನುವುದನ್ನೂ ತಿಳಿದುಕೊಂಡಿರುವುದೂ ಕೂಡ ಒಳ್ಳೆಯದು. ಮಗುವಿನ ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಸಾಜ್‌ ನ ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದು.

ಮಸಾಜ್‌ ನ ಸಾಮಾನ್ಯ ವಿಧಿವಿಧಾನಗಳನ್ನೇ ಅನುಸರಿಸಿ. ಆದರೆ ರಾಸಾಯನಿಕಗಳನ್ನು ಬಳಸಿದ ಆಯಿಲ್ ‌ಬಳಸಬೇಡಿ. ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮಕ್ಕಳ ಎಳೆಯ ತ್ವಚೆಗೆ ಉತ್ತಮ. ಮಗುವನ್ನು ದೊಡ್ಡ ಟವೆಲ್ ಮೇಲೆ ಮಲಗಿಸಿ ಮಸಾಜ್ ಮಾಡಿ.

ಡೈಪರ್ಮತ್ತು ನ್ಯಾಪಿ : ಮಗುವಿಗೆ ನ್ಯಾಪಿ ಖರೀದಿಸುವಾಗ ಅದರ ಗಾತ್ರ ಹಾಗೂ ಹೀರಿಕೊಳ್ಳುವ ಶಕ್ತಿಯ ಬಗ್ಗೆ ಗಮನಿಸಿ. ಅದರ ಫ್ಯಾಬ್ರಿಕ್‌ ಮಗುವಿನ ಸಂವೇದನಾಶೀಲ ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡಬಾರದು.

ಹವಾಮಾನ ಯಾವುದೇ ಆಗಿರಲಿ, ಕಾಟನ್‌ ಅಥವಾ ಲಿನಿನ್‌ ನ್ಯಾಪಿ ಸೂಕ್ತವಾಗಿರುತ್ತದೆ. ಉತ್ತಮ ಗುಣಮಟ್ಟದ ಡಿಸ್ಪೋಸೆಬಲ್ ನ್ಯಾಪಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿ 3-4 ಗಂಟೆಗೊಮ್ಮೆ ನ್ಯಾಪಿ ಬದಲಿಸಬೇಕು, ಹೆಚ್ಚೆಂದರೆ 6 ಗಂಟೆ ನ್ಯಾಪಿಯನ್ನು ಎಷ್ಟು ಬೇಗ ಬದಲಿಸುತ್ತೀರೊ, ಸೋಂಕು ತಗುಲುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ.

ಕಾಟನ್‌ ನ್ಯಾಪಿಗಳು ಮಗುವನ್ನು ಶುಷ್ಕ ಮತ್ತು ಕಂಫರ್ಟೆಬಲ್ ಆಗಿ ಇಡಬಲ್ಲವು. ಇವು ಮೃದು ಮೈಕ್ರೊಫೈಬರ್‌ ನಿಂದ ತಯಾರಿಸಲಾಗಿದ್ದು, ಅವುಗಳ ಹೀರಿಕೊಳ್ಳುವ ಸಾಮರ್ಥ್ಯ ಚೆನ್ನಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ