ಬಹಳಷ್ಟು ಮಕ್ಕಳು ಊಟ ತಿಂಡಿಯ ಬಗ್ಗೆ ಬಹಳಷ್ಟು ಚ್ಯೂಸಿ ಆಗಿರುತ್ತಾರೆ. ಆ ಆಹಾರ ಎಷ್ಟೇ ಆರೋಗ್ಯಕರವಾಗಿದ್ದರೂ ಅವರಿಗೆ ಜಂಕ್‌ಫುಡ್‌ ಇಷ್ಟವಾಗುತ್ತದೆ. ಮಕ್ಕಳ ಈ ಇಷ್ಟದ ಕುರಿತಂತೆ ಪೋಷಕರಿಗೆ ಬಹಳಷ್ಟು ಆತಂಕವಾಗುತ್ತದೆ. ಏಕೆಂದರೆ ಮಕ್ಕಳ ಈ ವಯಸ್ಸು ಅವರ ಬೆಳವಣಿಗೆಗೆ ಮಹತ್ವದ್ದಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಸೂಕ್ತ ಪೋಷಣೆ ದೊರಕದೇ ಹೋದರೆ ಅವರ ದೈಹಿಕ ಮಾನಸಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತದೆ. ಅದೇ ಮುಂದೆ ಹಲವು ರೋಗಗಳಿಗೂ ಕಾರಣವಾಗುತ್ತದೆ. ಮಕ್ಕಳಿಗೆ ಸೂಕ್ತ ಪೋಷಕಾಂಶ ಕೊಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅವರಿಗೆ ಕೊಡುವ ಆಹಾರದಲ್ಲಿ ಹಾಲಿನ ಉತ್ಪನ್ನ, ಬೇಳೆ, ಮೊಟ್ಟೆ, ಕಾಳು, ಬೀನ್ಸ್ ಮುಂತಾದವು ಸೇರಿರಲಿ.

ಕಾರ್ಬೋ ಹೈಡ್ರೇಟ್ಸ್ : `ಕಟ್‌ ದಿ ಕಾರ್ಬ್ಸ್ ಇನ್‌ ಯುವರ್‌ ಡಯೆಟ್‌' ಇದು ಇಂದಿನ ಟ್ರೆಂಡ್‌ ಆಗಿದೆ. ಆದರೆ ಒಂದು ಸಂಗತಿ ನಿಮ್ಮ ನೆನಪಿನಲ್ಲಿರಲಿ. ಬೆಳೆಯುತ್ತಿರುವ ಮಕ್ಕಳಿಗೆ ಸೂಕ್ತ ಎನರ್ಜಿ ಹಾಗೂ ಕ್ಯಾಲೋರಿಗಳ ವಿಶೇಷ ಅವಶ್ಯಕತೆ ಇರುತ್ತದೆ. ಅದು ಕಾರ್ಬೋಹೈಡ್ರೇಟ್ಸ್ ನಿಂದ ದೊರಕುತ್ತದೆ. ಕೊಬ್ಬು ಮತ್ತು ಪ್ರೋಟೀನ್‌ಗಳ ನೆರವಿನಿಂದಲೇ ನಮ್ಮ ದೇಹದಲ್ಲಿ ಊತಕಗಳ ನಿರ್ಮಾಣ ಹಾಗೂ ಅವುಗಳ ದುರಸ್ಥಿ ಕಾರ್ಯ ನಡೆಯುತ್ತಿರುತ್ತದೆ. ಕಾರ್ಬೋಹೈಡ್ರೇಟ್ಸ್ ಯುಕ್ತ ಆಹಾರಗಳೆಂದರೆ ಬ್ರೆಡ್‌, ಆಲೂಗಡ್ಡೆ, ಹಸಿರು ಬಟಾಣಿ, ಬ್ರೌನ್‌ ರೈಸ್‌, ಕಾಳುಗಳು, ರಾಜ್ಮಾ, ಬಾಳೆಹಣ್ಣು ಮುಂತಾದವು. ಈ ವಯಸ್ಸಿನಲ್ಲಿ ಅವರ ಡಯೆಟ್‌ನಿಂದ ಕಾರ್ಬೋಹೈಡ್ರೇಟ್‌ ಕೊರತೆಯ ಬಗ್ಗೆ ಯೋಚಿಸಬೇಡಿ.

ಫ್ಯಾಟ್ಸ್ : ಸಾಮಾನ್ಯವಾಗಿ ಫ್ಯಾಟ್ಸ್ ಅಂದರೆ ಕೊಬ್ಬಿನ ಬಗ್ಗೆ ಪ್ರಸ್ತಾಪ ಬಂದಾಗ ಅದು ಅವರ ದೇಹಕ್ಕೆ ಹಾನಿಕರ ಎಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಅದನ್ನು ಅವರ ಆಹಾರದಿಂದ ತೆಗೆದು ಹಾಕಲು ಯೋಚಿಸುತ್ತೇವೆ. ಏಕೆಂದರೆ ಎಲ್ಲ ಬಗೆಯ ಫ್ಯಾಟ್‌ಗಳು ದೇಹಕ್ಕೆ ಹಾನಿಕರ ಆಗಿರುವುದಿಲ್ಲ. ನೀವು ನಿಮ್ಮ ಮಕ್ಕಳಿಗೆ ಗುಡ್‌ ಫ್ಯಾಟ್‌ ಕೊಡಿ, ಏಕೆಂದರೆ ಅವು ಅವರ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀವಕೋಶಗಳ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬು ಮಕ್ಕಳ ದೇಹದಲ್ಲಿ ಸುಲಭವಾಗಿ ಸಂಗ್ರಹಗೊಂಡು ಅಗತ್ಯವಿದ್ದಾಗ ದೇಹಕ್ಕೆ ಅದನ್ನು ಬಳಸಿಕೊಳ್ಳಲು ನೆರವಾಗುತ್ತದೆ. ನೀವು ಅದಕ್ಕಾಗಿ ಮಗುವಿಗೆ ಹಾಲಿನ ಉತ್ಪನ್ನ, ಕಾಳು, ಒಮೇಗಾ-3 ಫ್ಯಾಟಿ ಆ್ಯಸಿಡ್‌ಯುಕ್ತ ಆಹಾರಗಳು, ಮೀನು, ಮಾಂಸ ಇತ್ಯಾದಿ ಕೊಡಿ.

ಕ್ಯಾಲ್ಶಿಯಂ : ಮಕ್ಕಳಿಗೆ ಕ್ಯಾಲ್ಶಿಯಂ ಹಲ್ಲುಗಳು ಮತ್ತು ಮೂಳೆಗಳ ನಿರ್ಮಾಣಕ್ಕೆ ಅತ್ಯವಶ್ಯ. ಜೊತೆಗೆ ಇದು ಸ್ನಾಯುಗಳು ಮತ್ತು ಹೃದಯದ ಚಟುವಟಿಕೆಗಳಿಗೂ  ಅತ್ಯವಶ್ಯಕ. ಅದು ಚಯಾಪಚಯ ಕ್ರಿಯೆಯನ್ನು ಸಮರ್ಪಕಾಗಿ ನೆರವೇರಿಸಲು ಅತ್ಯವಶ್ಯಕ ಎಂದು ಭಾವಿಸಲಾಗಿದೆ. ಹೀಗಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸೂಕ್ತ ಪ್ರಮಾಣದಲ್ಲಿ ಕ್ಯಾಲ್ಶಿಯಂ ಕೊಡುವುದು ಅತ್ಯವಶ್ಯ. ಕ್ಯಾಲ್ಶಿಯಂಯುಕ್ತ ಆಹಾರ ಪದಾರ್ಥಗಳೆಂದರೆ ಹಾಲು, ಮೊಸರು, ಪನೀರ್‌, ಸೋಯಾ, ಹಸಿರು ತರಕಾರಿ, ಕಾಳು ಹಾಗೂ ಧಾನ್ಯ ಇತ್ಯಾದಿಗಳನ್ನು ಅವರ ಆಹಾರದಲ್ಲಿ ಸೇರಿಸಿ.

 

ಕಬ್ಬಿಣಾಂಶ : ದೇಹದಲ್ಲಿ ರಕ್ತ ರೂಪುಗೊಳ್ಳಲು ಕಬ್ಬಿಣಾಂಶ ಬೇಕೇಬೇಕು. ಅದು ಇಡೀ ದೇಹಕ್ಕೆ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತದೆ. ಮಕ್ಕಳ ದೇಹದಲ್ಲಿ ಕಬ್ಬಿಣಾಂಶದ ಪೂರೈಕೆಯಿಂದ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಅದಕ್ಕಾಗಿ ನೀವು ಮಕ್ಕಳಿಗೆ ಕಾಳು, ಬೀನ್ಸ್, ಕಾಯಿ, ಹಸಿರು ಸೊಪ್ಪುಗಳನ್ನು ಕೊಡಿ. ಈ ಆಹಾರ ಪದಾರ್ಥಗಳು ಮಕ್ಕಳ ದೇಹದ ಕಬ್ಬಿಣಾಂಶದ ಕೊರತೆ ನೀಗಿಸುವ ಕೆಲಸ ಮಾಡುತ್ತವ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ