ನ್ಯೂಟ್ರಿಶನ್‌ನಿಂದ ತುಂಬಿ ಹೋಗಿರುವ ಕಡಲೆಹಿಟ್ಟು ನಮ್ಮ ದೈನಂದಿನ ವ್ಯಂಜನಗಳಾದ ಪಕೋಡ, ಜುಣಕ, ಬೋಂಡ, ಬಜ್ಜಿ, ಡೋಕ್ಲಾ, ದಿಢೀರ್‌ ದೋಸೆ...... ಇತ್ಯಾದಿಗಳ ರುಚಿ ಸೊಗಸಾಗಿಸುವುದಲ್ಲದೆ, ಗ್ರಾಮ್ ಫ್ಲೋರ್‌ ಎನಿಸಿರುವ ಇದು ನಮ್ಮ ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಷ್ಟೇ ಮುಖ್ಯ ಎಂಬುದು ನಿಮಗೆ ಗೊತ್ತೇ? ಇದು ಪ್ರೋಟೀನಿನ ಭಂಡಾರವೇ ಆಗಿದ್ದು, ಆರೋಗ್ಯದ ದೃಷ್ಟಿಯಿಂದ ಅತ್ಯಧಿಕ ಲಾಭಕಾರಿ ಆಗಿದೆ. ಇದು ಕೇವಲ ನಮ್ಮ ದೇಹಕ್ಕೆ ಆಂತರಿಕವಾಗಿ ಲಾಭ ಒದಗಿಸುವುದಲ್ಲದೆ, ಚರ್ಮಕ್ಕೆ ಹೊಳೆಹೊಳೆಯುವ ಕಾಂತಿ ನೀಡುತ್ತದೆ. ಅಂದ್ರೆ ಇದು ನಿಮಗೆ ಆಂತರಿಕ ಹಾಗೂ ಬಾಹ್ಯ ಎರಡೂ ರೂಪದಲ್ಲಿ ಉಪಕಾರ ಮಾಡುವುದರಿಂದ, ನಾವೇಕೆ ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಬಳಸಬೇಕೆಂದು ನೋಡೋಣವೇ? :

ದೇಹ ತೂಕ ನಿಯಂತ್ರಿಸಲು ವರ್ಕ್‌ ಫ್ರಂ ಹೋಂ ಕಾರಣ ನಮ್ಮ ಜೀವನ ಶೈಲಿ (ಅದರಲ್ಲೂ ಹೆಚ್ಚಾಗಿ ಚಳಿಗಾಲದಲ್ಲಿ) ಸೋಮಾರಿತನದತ್ತ ಹೆಚ್ಚು ವಾಲುತ್ತಿದೆ. ಹೀಗಾಗಿ ನಮ್ಮ ಆರೋಗ್ಯದ ಕಡೆ ಮೊದಲಿಗಿಂತ 2 ಪಟ್ಟು ಹೆಚ್ಚಾಗಿ ಕಾಳಜಿ ವಹಿಸಬೇಕಾಗಿದೆ. ಹೀಗಾಗಿ ನಮ್ಮ ಆಹಾರ ತಜ್ಞರ ಸಲಹೆ ಎಂದರೆ, ನೀವು ನಿಮ್ಮ ದೇಹತೂಕ ನಿಯಂತ್ರಿಸ ಬಯಸಿದರೆ, ನೀವು ನಿಮ್ಮ ಆಹಾರದಲ್ಲಿ ಹೈ ಫೈಬರ್‌ರಿಚ್‌ ಪ್ರೋಟೀನ್‌ ಡಯೆಟ್‌ ಸೇವಿಸಬೇಕು, ಇದರಿಂದ ನಿಮ್ಮ ದೇಹದ ಅಗತ್ಯಗಳು ಪೂರೈಸುವುದಲ್ಲದೆ ಹಾಗೂ ಬಹಳ ಹೊತ್ತಿನವರೆಗೂ ನಿಮಗೆ ಹಸಿವು ಆಗಬಾರದು, ಏಕೆಂದರೆ ಮಾಂಸಖಂಡಗಳನ್ನು ಸರಿಯಾಗಿ ಮೇಂಟೇನ್‌ ಮಾಡಲು ಈ ರಿಚ್‌ ಪ್ರೋಟೀನ್‌ ಅತ್ಯಂತ ಅವಶ್ಯಕ ಎನಿಸಿದೆ.

ಹೀಗಾಗಿ ಕಡಲೆಹಿಟ್ಟು ಹೈ ಫೈಭರ್‌, ರಿಚ್‌ ಪ್ರೋಟೀನ್‌ ಸ್ರೋತವಾಗಿರುವುದರಿಂದ, ನೀವು ದೇಹ ತೂಕ ನಿಯಂತ್ರಿಸಬೇಕಾದರೆ, ವೇಗವಾಗಿ ಅದನ್ನು ಕಂಟ್ರೋಲ್ ಮಾಡುವ ಕೆಲಸ ಮಾಡುತ್ತದೆ. `ಯುನೈಟೆಡ್‌ ಸ್ಟೇಟ್ಸ್ ಡಿಪಾರ್ಟ್‌ಮೆಂಟ್‌ ಆಫ್‌ ಅಗ್ರಿಕಲ್ಚರ್‌' ಸಮೀಕ್ಷೆಯ ಪ್ರಕಾರ, 100 ಗ್ರಾಂ ಕಡಲೆಹಿಟ್ಟಿನಲ್ಲಿ 32 ಗ್ರಾಂ ಪ್ರೋಟೀನ್‌ ಮತ್ತು 11 ಗ್ರಾಂ  ಫೈಬರ್‌ ಇದೆ. ಜೊತೆಗೆ  ಇದರಲ್ಲಿ  ಕೊಲೆಸ್ಟ್ರಾಲ್, ಉತ್ತಮ ಕಬ್ಬಿಣಾಂಶಗಳೂ ಇವೆ. ಇದು ಆರೋಗ್ಯಪರ ಆಹಾರಕ್ಕೆ ಅತ್ಯಗತ್ಯ ಬೇಕು.

ಡಯಾಬಿಟಿಕ್‌ ಫ್ರೆಂಡ್ಲಿ

ನೀವು ಮಧುಮೇಹ ಪೀಡಿತರೆ ಅಥವಾ ಆನುವಂಶಿಕವಾಗಿ ಈ ರೋಗ ನಿಮ್ಮ ಕುಟುಂಬದಲ್ಲಿ ಸಾಗಿಬಂದಿದ್ದರೆ, ಅಗತ್ಯವಾಗಿ ನಿಮ್ಮ ಡಯೆಟ್‌ನಲ್ಲಿ ನೀವು ಕಡಲೆಹಿಟ್ಟನ್ನು ಬೆರೆಸಿಕೊಳ್ಳಲೇ ಬೇಕು. ಏಕೆಂದರೆ ಇದರಲ್ಲಿ ಕಾಂಪ್ಲೆಕ್ಸ್ ಕಾರ್ಬೊಹೈಡ್ರೇಟ್ಸ್, ಲೋ ಗ್ಲೈಸೆಮಿಕ್‌ ಇಂಡೆಕ್ಸ್ ಇದ್ದು. ಇದು ಮಧುಮೇಹಿಗಳಿಗೆ ವರದಾನವೆಂದೇ ತಿಳಿಯಲಾಗಿದೆ. ಜೊತೆಗೆ ಇದರಲ್ಲಿ ಮೆಗ್ನೀಶಿಯಂ, ನಾರಿನಂಶ ಹೇರಳವಾಗಿರುವುದರಿಂದ, ದೇಹದಲ್ಲಿ ಇನ್‌ಸ್ಯುಲಿನ್‌ ರೆಸ್ಪಾನ್ಸ್ ನ್ನು ಹೆಚ್ಚಿಸುತ್ತದೆ. ಏಕೆಂದರೆ ದೇಹದಲ್ಲಿ ಮೆಗ್ನಿಶಿಯಂ ಪ್ರಮಾಣ ಬಹಳ ಕಡಿಮೆ ಆದಾಗ, ಪ್ಯಾಂಕ್ರಿಯಾಸ್‌ ಅಗತ್ಯದ ಪ್ರಮಾಣದಷ್ಟು ಇನ್‌ಸ್ಯುಲಿನ್‌ ಉತ್ಪಾದಿಸುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್‌ ಪ್ರಮಾಣ ಹೆಚ್ಚುತ್ತದೆ. ಆದರೆ ಕಡಲೆಹಿಟ್ಟು ಇದನ್ನು ಸುಲಭವಾಗಿ ನಿಯಂತ್ರಿಸಬಲ್ಲದು.

ಹೃದಯದ ಆರೋಗ್ಯಕ್ಕೂ ಲಾಭಕಾರಿ

ಭಾರತದಲ್ಲಿ ಪ್ರತಿ ವರ್ಷ ಹೃದ್ರೋಗಗಳಿಂದ ನರಳಿ ಸಾಯುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದಂತೂ ದೇಶದಲ್ಲಿ ಹೆಚ್ಚಿನ ಸಾವಿಗೆ ಕಾರಣವಾಗಿದೆ. 2016ರಲ್ಲಿ `ಗ್ಲೋಬಲ್ ಬರ್ಡನ್‌ ಆಫ್‌ ಡಿಸೀಸ್‌'ನ ವರದಿ ಪ್ರಕಾರ, ನಮ್ಮ ದೇಶದಲ್ಲಿ ಹೃದ್ರೋಗದ ಕಾರಣ ಸಾಯುವವರ ಸಂಖ್ಯೆ 1.7 ವಿಲಿಯನ್‌ ಹಾಗೂ ಇಡೀ ವಿಶ್ವದಲ್ಲಿ ಇದು 19.3 ಮಿಲಿಯನ್‌ ಆಗಿದೆ. ಹೀಗಾಗಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅಗತ್ಯ. ನೀವು ಆರೋಗ್ಯಕರ ಹೃದಯ ಬಯಸುವಿರಾದರೆ, ಕಡಲೆಹಿಟ್ಟಿನೊಂದಿಗೆ ದೋಸ್ತಿ ಬೆಳೆಸಿರಿ. ಏಕೆಂದರೆ ಇದರಲ್ಲಿ ಕರಗುವ ನಾರಿನಂಶ ಹೆಚ್ಚಿದ್ದು ಇದು ಹೃದಯಕ್ಕೆ ಹೆಚ್ಚು ಲಾಭಕಾರಿ ಎಂದು ಸಿದ್ಧವಾಗಿದೆ. ಇದರಿಂದ ಬಿ.ಪಿ. ಕಂಟ್ರೋಲ್ ಆಗುವ ಜೊತೆ ಜೊತೆಗೆ, ಹೊಟ್ಟೆಯಲ್ಲಿ ಉರಿ ಮತ್ತು ಅಸಿಡಿಟಿ ಎರಡನ್ನೂ ತಗ್ಗಿಸುತ್ತದೆ. ಇದರಲ್ಲಿ ಲಭ್ಯವಿರುವ ನಾರು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ರಕ್ತ ಸಂಚಾರ ಚುರುಕಾಗಿಸಿ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಇದರಿಂದ ಹೃದ್ರೋಗಗಳು ದೂರಾಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ