ನವಜಾತ ಶಿಶುವಿಗೆ ತಾಯಿಯ ಹಾಲಿಗಿಂತ ಹೆಚ್ಚು ಆರೋಗ್ಯಕರ ಹಾಗೂ ಪೋಷಕಾಂಶ ಆಹಾರ ಬೇರಾವುದೂ ಇಲ್ಲ. ಇಂದಿನ  ತಾಯಂದಿರಿಗೆ ಮಗುವಿಗೆ ಹಾಲೂಡಿಸುವುದೆಂದರೆ ಕಷ್ಟಕರ ಕೆಲಸ ಎಂದೆನಿಸುತ್ತದೆ. ಅಮ್ಮನ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಅದು ಅಮೃತಕ್ಕೆ ಸರಿಸಮ.

ಸ್ತ್ರೀ ರೋಗ ತಜ್ಞೆ ಡಾ. ಕಿರಣ್ಮಾಯಿ ಪ್ರಕಾರ, ಸ್ತನ್ಯಪಾನದ ಕುರಿತು ಈಗಲೂ ನಗರದ ಮಹಿಳೆಯರಲ್ಲಿ ಜಾಗರೂಕತೆ ಕಡಿಮೆ ಇದೆ. ಶಿಶುವಿಗೆ ಹಾಲುಣಿಸುವುದರಿಂದ ಸ್ತನ ಕ್ಯಾನ್ಸರ್‌ ನ ಸಾಧ್ಯತೆ ಕಡಿಮೆಯಾಗುತ್ತದೆ. ಯಾವ ಮಹಿಳೆಯರು ತಮ್ಮ ಕೂಸುಗಳಿಗೆ ಸ್ತನ್ಯಪಾನ ಮಾಡಿಸುವುದಿಲ್ಲವೋ, ಅವರಿಗೆ ಸ್ತನ ಕ್ಯಾನ್ಸರ್‌ ನ ರಿಸ್ಕ್ ಹೆಚ್ಚುತ್ತದೆ.

ಬ್ರೆಸ್ಟ್ ಕ್ಯಾನ್ಸರ್ನಿಂದ ರಕ್ಷಿಸಿ

ಇತ್ತೀಚೆಗೆ ನಡೆಸಲ್ಪಟ್ಟ ಸಂಶೋಧನೆಯಿಂದ ಕಂಡುಕೊಂಡ ಸಂಗತಿಯೆಂದರೆ, ಯಾವ ಮಹಿಳೆಯರಿಗೆ ಮುಟ್ಟು ನಿಂತ ಬಳಿಕ ಬ್ರೆಸ್ಟ್ ಕ್ಯಾನ್ಸರ್‌ ಆಗಿದೆಯೋ, ಅವರು ಎಂದೂ ಸ್ತನ್ಯಪಾನ ಮಾಡಿಸಿರಲಿಲ್ಲ. ಯಾವ ಮಹಿಳೆಯರು 30ರ ಆಸುಪಾಸಿನಲ್ಲಿ ಸ್ತನ್ಯಪಾನ ಮಾಡಿಸಿದ್ದರೊ, ಅವರಿಗೆ ಸ್ತನ ಕ್ಯಾನ್ಸರ್‌ ಆಗುವ ಸಾಧ್ಯತೆ ಕಡಿಮೆ.

ಹೀಗಾಗಿ ತಾಯಿಯಾದ ಪ್ರತಿಯೊಬ್ಬ ಮಹಿಳೆ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸುವುದು ಅತ್ಯವಶ್ಯ. ಅದರಿಂದ ಮಗುವಿನ ಆರೋಗ್ಯದ ಜೊತೆಗೆ ತಾಯಿಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಮಗುವಿಗೆ ಹಾಲುಣಿಸುವುದರಿಂದ ಏನೇನು ಲಾಭ ಎನ್ನುವುದನ್ನೊಮ್ಮೆ ತಿಳಿದುಕೊಳ್ಳಿ :

ಹೆರಿಗೆಯ ಬಳಿಕ ಮಗುವನ್ನು ತಾಯಿಯ ಮಡಿಲಿಗೆ ಕೊಡಲಾಗುತ್ತದೊ, ಆಗಿನಿಂದಲೇ ತಾಯಿ ಮಗುವಿನ ನಡುವಿನ ಅನುಬಂಧ ಸ್ತನ್ಯಪಾನದ ಮುಖಾಂತರ ಶುರುವಾಗುತ್ತದೆ.

ತಾಯಿಯ ಹಾಲಿನಲ್ಲಿ ಕಂಡುಬರುವ ಪ್ರೋಟೀನ್‌ ಹಾಗೂ ಅಮೀನೊ ಆ್ಯಸಿಡ್‌ ಮಗುವಿನ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿರುತ್ತವೆ. ಅದು ಮಗುವನ್ನು ಅಪೌಷ್ಟಿಕತೆಯಿಂದ ಪಾರು ಮಾಡುತ್ತದೆ.

ಮಗುವಿನ ಜನನದ ಬಳಿಕ ತಕ್ಷಣವೇ ಕುಡಿಸುವ ಅಮ್ಮನ ಹಾಲನ್ನು ಕೊಲೆಸ್ಟ್ರಮ್ ಎಂದು ಕರೆಯಲಾಗುತ್ತದೆ. ಅದರಲ್ಲಿ ಆ್ಯಂಟಿ ಬಯೋಟಿಕ್‌ ನ ಪ್ರಮಾಣ ಹೇರಳವಾಗಿರುತ್ತದೆ.

ಅಮ್ಮನ ಪ್ರಥಮ ಎದೆ ಹಾಲು ಮಗುವಿನ ಕರುಳು ಹಾಗೂ ಶ್ವಾಸ ಪ್ರಕ್ರಿಯೆಯನ್ನು ಬಲಗೊಳಿಸುತ್ತದೆ.

ಮಗುವಿನ ಮೂಳೆಗಳು ಗಟ್ಟಿಗೊಳ್ಳಲು ಅಮ್ಮನ ಹಾಲು ಬೇಕೇಬೇಕು.

ಅಮ್ಮ ಮಗುವಿಗೆ ಹಾಲು ಕುಡಿಸುವಾಗೆಲ್ಲ ಅದಕ್ಕೆ ಹಾಲಿನ ಮುಖಾಂತರ ಆ್ಯಂಟಿ ಬಯಾಟಿಕ್‌ ಪೂರೈಕೆಯಾಗುತ್ತದೆ. ಅದು ಮಗುವನ್ನು ಯಾವುದೇ ಬಗೆಯ ಸೋಂಕಿನಿಂದ ರಕ್ಷಿಸುತ್ತದೆ.

ಅಮ್ಮನ ಎದೆ ಹಾಲು ಮಗುವಿಗೆ ಸುಲಭವಾಗಿ ಪಚನವಾಗುತ್ತದೆ. ಹೀಗಾಗಿ ಮಗುವಿಗೆ ಮಲಬದ್ಧತೆಯ ತೊಂದರೆ ಕಾಣಿಸದು.

ಯಾವ ಮಕ್ಕಳು ಸತತ 6 ತಿಂಗಳ ತನಕ ಅಮ್ಮನ ಎದೆ ಹಾಲು ಕುಡಿಯುತ್ತಾರೊ, ಅವರು ಇತರ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರಾಗಿರುತ್ತಾರೆ.

ಅಮ್ಮನಿಗೆ ಏನೇನು ಲಾಭ?

ಮಗುವಿಗೆ ಹಾಲುಣಿಸುವುದರಿಂದ ಮಗುವಿನ ಜೊತೆ ಜೊತೆಗೆ ಅಮ್ಮನಿಗೆ ಕೂಡ ಸಾಕಷ್ಟು ಲಾಭಗಳಿವೆ.

ಸ್ತನ್ಯಪಾನದಿಂದ ಗರ್ಭಾವಸ್ಥೆಯಲ್ಲಿ ಹೆಚ್ಚಿನ ದೇಹತೂಕ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ಮಗುವಿಗೆ ಹಾಲು ಕುಡಿಸುವ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯ ಗರ್ಭಕೋಶ ಸಂಕುಚಿತಗೊಳ್ಳುವ ಪ್ರಕ್ರಿಯೆ ಶುರುವಾಗುತ್ತದೆ. ಹೆರಿಗೆಯ ಬಳಿಕ ಬ್ಲೀಡಿಂಗ್‌ ಚೆನ್ನಾಗಿ ಆಗಿಬಿಡುತ್ತದೆ. ಅದರಿಂದಾಗಿ ಮಹಿಳೆಗೆ ಸ್ತನ ಹಾಗೂ ಅಂಡಕೋಶದ ಕ್ಯಾನ್ಸರ್‌ ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ