ಕೆಲವೊಮ್ಮೆ ಯುವಕರಂತೆ ಹೊಳೆಯುವ ಉಡುಪುಗಳನ್ನು ತೊಟ್ಟು ಅವರಂತೆ ವರ್ತಿಸುವ 40-45 ವಯಸ್ಸಿನವರನ್ನು ಕಾಣುತ್ತೇವೆ. ಕೆಲವರು ಇನ್ನೂ ಮುಂದೆ ಹೋಗಿ ತಮಗಿಂತ ಚಿಕ್ಕ ವಯಸ್ಸಿನವರತ್ತ ಆಕರ್ಷಿತರಾಗುತ್ತಾರೆ ಮತ್ತು ಅವರನ್ನೂ ತಮ್ಮತ್ತ ಆಕರ್ಷಿಸಲು ವಿಧವಿಧವಾದ ಉಪಾಯಗಳನ್ನು ಅನುಸರಿಸುತ್ತಾರೆ.

ಸಹಜತೆಯ ಸೀಮೆ ಉಲ್ಲಂಘಿಸುವ ಇಂತಹ ಮನಸ್ಥಿತಿಗಳನ್ನು ಮಿಡ್‌ ಲೈಫ್‌ ಕ್ರೈಸಿಸ್‌ ಮಿಡ್‌ ಲೈಫ್‌ ಸಿಂಡ್ರೋಮ್ ಅಥವಾ  ಮಿಡ್‌ಏಜ್‌ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆಗಳು ಆಗಿವೆ.

ಏನಾಗುತ್ತದೆ?

40-45 ವಯಸ್ಸಾಗುತ್ತಲೇ ವ್ಯಕ್ತಿ ಕೆರಿಯರ್‌, ಸಂಸಾರ ಇತ್ಯಾದಿಗಳಲ್ಲಿ ಒಂದು ಹಂತದವರೆಗೆ ಸೆಟಲ್ ಆಗುತ್ತಾನೆ. ಆಗ ಅವನಿಗೆ ತನ್ನ ಬಗ್ಗೆ ಯೋಚಿಸಲು, ವಿಚಾರ ಮಾಡಲು ಸಮಯ ಇರುತ್ತದೆ. ಹೀಗಿರುವಾಗ ಒಮ್ಮೊಮ್ಮೆ ತನ್ನ ತಾರುಣ್ಯ ಜಾರಿಹೋಗುತ್ತಿದೆ ಎಂದು ಅನ್ನಿಸುತ್ತದೆ. ದಿನನಿತ್ಯದ ಜಂಜಾಟದಲ್ಲಿ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆದ್ದರಿಂದ ಅದನ್ನು ವಿವಿಧ ರೀತಿಯಲ್ಲಿ ತಡೆದು ನಿಲ್ಲಿಸಲು ಹಾಗೂ ತುಂಬು ಜೀವನವನ್ನು ನಡೆಸಲು ಬಯಸುತ್ತಾನೆ. ಹೀಗಿರುವಾಗ ಸಮಾಜದ ಮಾನ್ಯತೆಗಳು, ಆಲೋಚನೆಗಳು, ಮಿತಿಗಳು ಅವನ ಈ ಮನಸ್ಥಿತಿಗೆ ಅಡ್ಡಿಯುಂಟು ಮಾಡುತ್ತವೆ. ಅವನ ಅಂತರ್ಮನಸ್ಸು ಮತ್ತು ಬಾಹ್ಯ ಮನಸ್ಸಿನಲ್ಲಿ ದ್ವಂದ್ವ ಉಂಟಾಗುತ್ತದೆ. ಅದನ್ನು ಮಿಡ್‌ ಲೈಫ್‌ ಕ್ರೈಸಿಸ್‌ ಎನ್ನುತ್ತಾರೆ.

ಪುರುಷರಲ್ಲಿ ಹೆಚ್ಚು ಕ್ರೈಸಿಸ್

ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಇದ್ದರೂ, ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಕಡಿಮೆ ಹಾಗೂ ತಡವಾಗಿ ಉಂಟಾಗುತ್ತದೆ ಮತ್ತು ಕಡಿಮೆ ಸಮಯ ಇರುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಪರಿಸ್ಥಿತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಅವರು ತಮ್ಮ ಮರ್ಜಿಯಂತೆ ಬದುಕಲು ಬಯಸುತ್ತಾರೆ. ವಯಸ್ಸು ಹೆಚ್ಚುತ್ತಿದ್ದಂತೆ ಅವರ ಇಚ್ಛೆಗಳನ್ನೂ ಹೆಚ್ಚಿಸುತ್ತದೆ.

ಮನೋವೈದ್ಯ ಡಾ. ಸಂಜಯ್‌ ಪ್ರಕಾರ, ಈ ಕ್ರೈಸಿಸ್‌ನಲ್ಲಿ ವ್ಯಕ್ತಿಗೆ ತನ್ನ ಅರ್ಧ ಆಯುಸ್ಸು ಕಳೆದುಹೋಗಿದೆಯೆಂದು ಅನ್ನಿಸುತ್ತದೆ. ಉಳಿದಿರುವ ಬದುಕಿನಲ್ಲಿ ಅವನು ತನ್ನ ಮರ್ಜಿಯಂತೆ ಬದುಕಬಹುದು. ಅವನು ತನ್ನ ಉಡುಗೆ ತೊಡುಗೆ, ಫಿಟ್ನೆಸ್‌ ಇತ್ಯಾದಿಗಳಿಗೆ ವಿಶೇಷ ಗಮನ ಕೊಡಲು ತೊಡಗುತ್ತಾನೆ ಜೊತೆಗೆ ಯುವಕನಂತೆ ಕಾಣಿಸಲು ಸಾಕಷ್ಟು ಪ್ರಯತ್ನಿಸುತ್ತಾನೆ. ತನ್ನ ಬದುಕಿನಲ್ಲಿ ಬಂದ ಶೂನ್ಯವನ್ನು ತುಂಬಲು ಅದರಲ್ಲಿ ಎಗ್ಸೈಟ್‌ಮೆಂಟ್‌ ತರಲು ಬಯಸುತ್ತಾನೆ. ಆ ನಿಟ್ಟಿನಲ್ಲಿ ಅವನು ರೊಮ್ಯಾನ್ಸ್ ಮತ್ತು ಫ್ಲರ್ಟಿಂಗ್‌ ಮಾಡಲು ತೊಡಗುತ್ತಾನೆ. ಅವನ ವರ್ತನೆ ಕಿಶೋರಾವಸ್ಥೆಯಲ್ಲಿನ ವರ್ತನೆಯಂತಿರುತ್ತದೆ.

ಬರೀ ಮನೋವೈಜ್ಞಾನಿಕ ಕಾರಣಗಳಷ್ಟೇ ಅಲ್ಲ, ಹಾರ್ಮೋನ್‌ ಬದಲಾವಣೆಯೂ ಅದಕ್ಕೆ ಕಾರಣವಾಗಿರುತ್ತದೆ. ಸ್ತ್ರೀಯರಲ್ಲಿ ಕಡಿಮೆಯೇಕೆ? ಮನೋವೈದ್ಯರ ಪ್ರಕಾರ ಮಹಿಳೆಯರು ಜೀವನದ ಒತ್ತಡಗಳು, ಸಂಘರ್ಷಗಳು ಮತ್ತು ಹಾರ್ಮೋನ್‌ಬದಲಾವಣೆಗಳನ್ನು ಸಹಜ ಮತ್ತು ಪ್ರಾಕೃತಿಕ ರೂಪದಲ್ಲಿ ಎದುರಿಸುತ್ತಾರೆ. ಅನೇಕ ಕೆಲಸಗಳಲ್ಲಿ ಕಾರ್ಯ ವಿಧಾನಗಳಲ್ಲಿ ಬದುಕನ್ನು ವ್ಯಸ್ತಗೊಳಿಸುತ್ತಾರೆ. ಏಕಾಕಿತನ ಅವರನ್ನು ಕಾಡುವುದಿಲ್ಲ. ಅದನ್ನು ಹೇಗಾದರೂ ತುಂಬಿಕೊಳ್ಳುತ್ತಾರೆ. ಈ ವಿಷಯವಾಗಿ ಹಲವು ಮಹಿಳೆಯರೊಂದಿಗೆ ಮಾತಾಡಿದಾಗ ಅವರು ಹೀಗೆ ಹೇಳಿದರು.

ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ ವಿಜ್ಞಾನ ಬೋಧಿಸುವ ಡಾ. ಸುನಂದಾ, ``ನಾವು ಆ ವಯಸ್ಸನ್ನು ದಾಟಿ ಬಿಟ್ಟಿದ್ದೇವೆ. ನಮಗೆ ಈ ಕ್ರೈಸಿಸ್‌ನ ಅನುಭವ ಏಕೆ ಆಗಲಿಲ್ಲವೆಂದರೆ ನಮಗೆ ಮಕ್ಕಳ ಕೆರಿಯರ್‌ ಮತ್ತು ಜೀವನದ ಇತರ ಗುರಿಗಳೂ ಮಹತ್ವಪೂರ್ಣವಾಗಿವೆ,'' ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ