ನವಜಾತ ಶಿಶುವಿನ ತ್ವಚೆ ಬಹಳ ನಾಜೂಕು ಮತ್ತು ಸಂವೇದನಾಶೀಲ ಗುಣ ಹೊಂದಿರುತ್ತದೆ. ಸೋಪ್‌, ಶ್ಯಾಂಪೂ, ಡಿಟರ್ಜೆಂಟ್ಸ್, ಎಣ್ಣೆ, ಪೌಡರ್‌ ಇತ್ಯಾದಿ ಮಾತ್ರವಲ್ಲದೆ, ಬಟ್ಟೆಗಳಲ್ಲಿನ ರಾಸಾಯನಿಕಗಳಿಂದ ಅದರ ತ್ವಚೆಗೆ ಹಾನಿಯಾಗಬಹುದು. ಇದರಿಂದ ಮಗುವಿನ ತ್ವಚೆಯಲ್ಲಿ ಉರಿ, ಡ್ರೈನೆಸ್‌, ರಾಶೆಸ್‌ ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು. ಇದೇ ತರಹ ಸುಗಂಧಯುಕ್ತ ಬೇಬಿ ಪ್ರಾಡಕ್ಟ್ಸ್ ಬಳಸಲು ಹೋಗಬೇಡಿ. ಮಗುವಿನ ತ್ವಚೆಯನ್ನು ಕೋಮಲವಾಗಿರಿಸಲು ಈ ಸಲಹೆಗಳನ್ನು ಅನುಸರಿಸಿ.

ಸ್ನಾನ : ಮಗು ಹುಟ್ಟಿದ ಮೊದಲ ತಿಂಗಳು, ವಾರಕ್ಕೆ 3-4 ಸಲ ಸ್ಪಂಜ್‌ ಬಾಥ್‌ ಕೊಡಿ. ಹಾಲು ಕುಡಿಸಿದ ನಂತರ ಬಾಯಿಯನ್ನು  ಸ್ಪಂಜ್‌ನಿಂದ ಒರೆಸಿಬಿಡಿ. ಡೈಪರ್‌ ಬದಲಿಸಿದ ನಂತರ ಸ್ಪಂಜ್‌ನಿಂದ ಚೆನ್ನಾಗಿ ಒರೆಸಬೇಕು. 2ನೇ ತಿಂಗಳು ಮಗುವಿಗೆ ಸ್ನಾನ ಮಾಡಿಸುವಾಗ, ಬೆಚ್ಚಗಿನ ನೀರು ಬಳಸಿ. ಮೈಲ್ಡ್ ಸೋಪ್‌, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪುಗಳನ್ನು ಬಳಸಲೇಬೇಡಿ. ಇಲ್ಲದಿದ್ದರೆ ಅವು ಮಗುವಿನ ಸೆನ್ಸಿಟಿವ್ ‌ಸ್ಕಿನ್‌ಗೆ ಹಾನಿ ಮಾಡಬಹುದು. ಸ್ನಾನದ ನಂತರ ಕಾಟನ್ನಿನ ಮೃದು ಟವೆಲ್‌ನಿಂದ ನಿಧಾನವಾಗಿ ಒರೆಸಿರಿ. ಆಗ ಮಗುವಿನ ತ್ವಚೆಗೆ ಹಾನಿ ಆಗುವುದಿಲ್ಲ.

ಪೌಡರ್‌ ಹಾಕುವಿಕೆ : ಮಕ್ಕಳಿಗಾಗಿಯೇ ತಯಾರಾಗಿರುವ ಟಾಲ್ಕಂ ಪೌಡರನ್ನೇ ಅವರಿಗಾಗಿ ಬಳಸಿರಿ. ಸುಗಂಧಯುಕ್ತ ಅಥವಾ ಇತರ ರಾಸಾಯನಿಕಗಳ ಪೌಡರ್‌ ಬಳಸದಿರಿ. ಡೈಪರ್‌ ಏರಿಯಾದಲ್ಲಿ ಹೆಚ್ಚು ಪೌಡರ್‌ ಉದುರಿಸಬಾರದು.

ಮಸಾಜ್‌ : ನವಜಾತ ಶಿಶುಗಳು ಬಲು ನಾಜೂಕು. ಆದ್ದರಿಂದ ಅವಕ್ಕೆ ಮಸಾಜ್‌ ಮಾಡುವ ಮುನ್ನ, ಮಸಾಜ್‌ನ ಟೆಕ್ನಿಕ್, ಎಂಥ ಬೇಬಿ ಆಯಿಲ್ ‌ಬಳಸಬೇಕು, ಎಷ್ಟು ಹೊತ್ತು ಮಸಾಜ್‌ ಮಾಡಬೇಕು ಹಾಗೂ ಯಾವಾಗ ಮಾಡಬೇಕು ಇತ್ಯಾದಿ ವಿಷಯಗಳನ್ನು ತಿಳಿದಿರಬೇಕು. ಈ ಸಣ್ಣ ಮಕ್ಕಳ ವಿಶೇಷ ಅಗತ್ಯಗಳ ಅನುಸಾರ, ಮಸಾಜ್‌ನ ಬೇರೆ ಬೇರೆ ಟೆಕ್ನಿಕ್ಸ್ ಬಳಸಿಕೊಳ್ಳಿ.

ಮಸಾಜ್‌ನ ಸಾಮಾನ್ಯ ವಿಧಾನ ಬಳಸುವುದೇ ಸರಿ. ಅದನ್ನು ತಾಯಿ ಅಥವಾ ಅಜ್ಜಿ ಮನೆಯಲ್ಲಿಯೇ ಮಾಡುವುದು ಲೇಸು. ಮಕ್ಕಳ ತ್ವಚೆ ಸೆನ್ಸಿಟಿವ್ ‌ಆಗಿರುವುದರಿಂದ ಯಾವ ಎಣ್ಣೆಯಲ್ಲಿ ಕೆಮಿಕಲ್ಸ್ ಬಳಸಲಾಗಿದೆಯೋ ಅಂಥವನ್ನು ಮನೆಗೆ ತರಬೇಡಿ. ಸನ್ ಫ್ಲವರ್‌ ಆಯಿಲ್ ‌ಮಗುವಿನ ತ್ವಚೆಗೆ ಬಲು ಉಪಕಾರಿ. ಮಗುವನ್ನು ದಪ್ಪ ಟರ್ಕಿ ಟವೆಲ್ ‌ಮೇಲೆ ಮಲಗಿಸಿ ಮೃದುವಾಗಿ ಮಸಾಜ್ ಮಾಡಿ.

ಡೈಪರ್‌ ನ್ಯಾಪೀಸ್‌ : ಮಗುವಿಗಾಗಿ ನ್ಯಾಪಿಯ ಆಯ್ಕೆ ಬಲು ಎಚ್ಚರಿಕೆಯಿಂದ ಮಾಡಬೇಕು. ಇದನ್ನು ಕೊಳ್ಳುವಾಗ ಅದರ ಫಿಟಿಂಗ್ಸ್ ಸರಿ ಇದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅದರ ಹೀರಿಕೊಳ್ಳುವಿಕೆಯ ಗುಣ ಉತ್ತಮವಾಗಿರಬೇಕು. ಅದರ ಫ್ಯಾಬ್ರಿಕ್ಸ್ ಮಗುವಿನ ಸೆನ್ಸಿಟಿವ್ ‌ಸ್ಕಿನ್‌ಗೆ ಹಾನಿ ಮಾಡದಂತಿರಬೇಕು.

ಯಾವುದೇ ಸೀಸನ್‌ ಇರಲಿ, ಕಾಟನ್‌ ಯಾ ಲಿನೆನ್‌ ನ್ಯಾಪಿ ಎಲ್ಲಕ್ಕೂ ಉತ್ತಮ. ಈ ಫ್ಯಾಬ್ರಿಕ್‌ ಆರ್ದ್ರತೆಯನ್ನು ಬೇಗ ಹೀರಿಕೊಳ್ಳುತ್ತದೆ. ಹಲವು ಬಗೆಯ ಉತ್ತಮ ಗುಣಮಟ್ಟದ ಡಿಸ್‌ಪೋಸೆಬಲ್ ನ್ಯಾಪಿ ಮಾರುಕಟ್ಟೆಯಲ್ಲಿ ಲಭ್ಯ. ನ್ಯಾಪಿಯನ್ನು ಪ್ರತಿ 3-4 ಗಂಟೆಗೆ ಒಮ್ಮೆ ಬದಲಿಸುತ್ತಿರಬೇಕು, ಗರಿಷ್ಠ 6 ಗಂಟೆಗಳಷ್ಟೇ ಎಂದು ನೆನಪಿಡಿ. ಎಷ್ಟು ಬೇಗ ನ್ಯಾಪಿ ಬದಲಿಸುತ್ತೀರೋ ಸೋಂಕಿನ ಬಾಧೆ ಅಷ್ಟು ಕಡಿಮೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ