ಶ್ವಾಸ ರೋಗಗಳು : ನಿಮಗೆ ಒಸಡುಗಳ ರೋಗವಿದ್ದರೆ, ಬ್ಯಾಕ್ಟೀರಿಯಾಗಳು ರಕ್ತದ ಮುಖಾಂತರ ಶ್ವಾಸಕೋಶವನ್ನು ತಲುಪುವ ಸಾಧ್ಯತೆ ಇರುತ್ತದೆ. ಪರಿಣಾಮ ಶ್ವಾಸಕೋಶದ ಮೇಲೆ ಉಂಟಾಗುತ್ತದೆ. ಇಂತಹದರಲ್ಲಿ ಅಕ್ಯೂಟ್‌ ಬ್ರಾಂಕೈಟಿಸ್‌ ಮತ್ತು ಕ್ರಾನಿಕ್‌ ನ್ಯುಮೋನಿಯಾ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಹೃದ್ರೋಗ ಮತ್ತು ಸ್ಟ್ರೋಕ್‌ : ದಂತ ರೋಗಗಳಿಂದ ತೊಂದರೆಗೀಡಾದವರಲ್ಲಿ ಹೃದ್ರೋಗ ಸಾಧ್ಯತೆ ಅಧಿಕವಾಗಿರುತ್ತದೆ. ಪ್ಲಾಕ್‌ ಮತ್ತು ಬ್ಯಾಕ್ಟೀರಿಯಾ ಒಸಡುಗಳ ಮುಖಾಂತರ ದೇಹದ ಒಳಭಾಗದಲ್ಲಿ ಪ್ರವೇಶಿಸುತ್ತವೆ. ಬ್ಯಾಕ್ಟೀರಿಯಾಗಳಿಂದ ರಕ್ತನಾಳಗಳು ಬ್ಲಾಕ್‌ ಆಗುತ್ತವೆ. ಅದರಿಂದ ಗಂಭೀರ ಹೃದ್ರೋಗಗಳು ಉಂಟಾಗುವ  ಸಾಧ್ಯತೆ ಇರುತ್ತದೆ. ಒಂದು ವೇಳೆ ಮೆದುಳಿಗೆ ರಕ್ತ ತಲುಪಿಸುವ ರಕ್ತನಾಳಗಳಲ್ಲಿ ಬ್ಲಾಕ್‌ ಉಂಟಾದರೆ ಸ್ಟ್ರೋಕ್‌ ಆಗುವ ಸಾಧ್ಯತೆ ಇರುತ್ತದೆ.

ಡಿಮೆನ್ಶಿಯಾ : ನೀವು ಬಾಯಿಯ ಸ್ವಚ್ಛತೆಯ ಬಗ್ಗೆ ಗಮನಕೊಡದೇ ಹೋದರೆ ನೀವು ಹಲ್ಲುಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಇದರ ದುಷ್ಪರಿಣಾಮ ನಿಮ್ಮ ನೆನಪಿನ ಶಕ್ತಿ ಹಾಗೂ ಮೆದುಳಿನ ಹಲವು ಭಾಗಗಳ ಮೇಲೆ ಉಂಟಾಗಬಹುದಾಗಿದೆ. ಇತರೆ ಗಂಭೀರ ಸಮಸ್ಯೆಗಳು : ಬಾಯಿಯ ಆರೋಗ್ಯದ ಬಗ್ಗೆ ಗಮನಹರಿಸದೆ ಇದ್ದರೆ ಕೆಲವು ರೋಗಗಳು ಉಂಟಾಗಬಹುದು. ಉದಾ: ಬಂಜೆತನ, ಅವಧಿಗೆ ಮುನ್ನ ಹೆರಿಗೆ.

ಬಾಯಿಯ ಸ್ವಚ್ಛತೆ ಹೇಗೆ ಕಾಪಾಡುವುದು? ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಮುಂಜಾನೆ-ಸಂಜೆ ಬ್ರಶ್‌ ಮಾಡಿದರಷ್ಟೇ ಸಾಲದು, ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕು. ಅದಕ್ಕಾಗಿ ಕೆಲವು ಸುಲಭ ವಿಧಾನಗಳು.

ಸರಿಯಾಗಿ ಬ್ರಶ್‌ ಮಾಡಿ : ಬ್ರಶ್‌ ಮಾಡುವಾಗ ಹಲ್ಲುಗಳು ಒಸಡಿನಿಂದ 45 ಡಿಗ್ರಿಯಲ್ಲಿರಲಿ. ಒಸಡು ಹಾಗೂ ಹಲ್ಲುಗಳ ಕೆಳಭಾಗವನ್ನು ಬ್ರಶ್‌ ಮುಟ್ಟುವಂತಿರಬೇಕು. ಜೊತೆಗೆ ಹಿಂದೆ ಮುಂದೆ ಮೇಲೆ ಕೆಳಗೆ ಚೆನ್ನಾಗಿ ಬ್ರಶ್‌ನಿಂದ ಉಜ್ಜಿ. ಆದರೆ ನೀವು ಉಜ್ಜುವ ವಿಧಾನ ಹೇಗಿರಬೇಕೆಂದರೆ ಒಸಡಿನಲ್ಲಿ ರಕ್ತ ಹೊರಬರಬಾರದು. ಕೊನೆಯಲ್ಲಿ ನಾಲಿಗೆ ಹಾಗೂ ಬಾಯಿಯ ಮೇಲ್ಭಾಗ ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಹಾಗೂ ದುರ್ಗಂಧ ನಿವಾರಣೆಯಾಗುತ್ತದೆ.

ದಿನಕ್ಕೆ ಕನಿಷ್ಠ 2 ಸಲವಾದರೂ ಹಲ್ಲುಜ್ಜಿ. ಒಂದು ವೇಳೆ ಹಾಗೆ ಮಾಡಲು ಆಗದಿದ್ದರೆ ಬಾಯಿಯನ್ನಾದರೂ ಮುಕ್ಕಳಿಸಬಹುದು. ಹಾಗೆ ಮಾಡದ್ದಿದರೆ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ.

ನಾಲಿಗೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ : ಪ್ರತಿದಿನ ನಾಲಿಗೆ ಸ್ವಚ್ಛಗೊಳಿಸಿ. ಅದಕ್ಕಾಗಿ ಟಂಗ್‌ ಕ್ಲೀನರ್‌ ಬಳಸಿ. ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸದೇ ಇದ್ದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉದ್ಭವಿಸಬಹುದು. ಅದರಿಂದ ಹಲ್ಲುಗಳ ಮತ್ತು ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಅದೇ ಬಾಯಿ ದುರ್ನಾತಕ್ಕೆ ಕಾರಣವಾಗುತ್ತದೆ.

ಫ್ಲಾಸ್‌ : ಫ್ಲಾಸ್‌ನ ಬಳಕೆಯಿಂದ ಬಾಯಿಯಿಂದ ಆಹಾರ ಕಣಗಳು ಹೊರಟುಹೋಗುತ್ತವೆ. ಬ್ರಶ್‌ ಮಾಡುವುದರಿಂದ ಮಾತ್ರ ಅವು ಹೋಗುವುದಿಲ್ಲ. ಫ್ಲಾಸ್‌ ಹಲ್ಲುಗಳ ನಡುವೆ ಪ್ರವೇಶಿಸುತ್ತದೆ. ಅಲ್ಲಿ ಬ್ರಶ್‌ ಅಥವಾ ಮೌತ್‌ ವಾಶ್‌ ತಲುಪುವುದಿಲ್ಲ. ಹೀಗಾಗಿ ದಿನಕ್ಕೆ ಕನಿಷ್ಠ 1 ಸಲ ಫ್ಲಾಸ್‌ನ್ನು ಉಪಯೋಗಿಸಬೇಕು.

ಮೌತ್‌ವಾಶ್‌ : ಉಗುರು ಬೆಚ್ಚಗಿನ ಸಲೈನ್‌ ವಾಟರ್‌ನಿಂದ ಬಾಯಿ ಮುಕ್ಕಳಿಸಿ. ಅದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತುಹೋಗುತ್ತವೆ. ಉಸಿರಿನ ದುರ್ವಾಸನೆ ಕೂಡ ನಿವಾರಣೆ ಆಗುತ್ತದೆ. ಅದರಿಂದ ಹಲ್ಲುಗಳು ಗಟ್ಟಿಯಾಗಿರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ