ನಮ್ಮ ದೇಹ ಸಣ್ಣ ಸಣ್ಣ ಜೀವಕೋಶಗಳಿಂದ ಸೇರಿಕೊಂಡು ನಿರ್ಮಾಣವಾಗಿರುತ್ತದೆ. ಈ ಚಿಕ್ಕ ಪುಟ್ಟ ಜೀವಕೋಶಗಳು ಪ್ರೋಟೀನ್ ನಿಂದ ನಿರ್ಮಾಣವಾಗಿರುತ್ತವೆ. ಹೀಗಾಗಿ ದೇಹವನ್ನು ಅತ್ಯಂತ ಗಟ್ಟಿಗೊಳಿಸಲು ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅತ್ಯಂತ ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ.
ಆದರೆ ಕೇವಲ ಪ್ರೋಟೀನ್ ತೆಗೆದುಕೊಂಡರಷ್ಟೇ ಸಾಲದು, ಯಾವ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಬೇಕು ಎನ್ನುವುದನ್ನು ಕೂಡ ತಿಳಿದುಕೊಳ್ಳುವುದು ಅತ್ಯವಶ್ಯ. ಏಕೆಂದರೆ ಆ ವ್ಯಕ್ತಿಯ ಅಗತ್ಯಗಳು ಪೂರ್ತಿ ಆಗುವುದರ ಜೊತೆ ಜೊತೆಗೆ ಆದರೆ ಲಾಭ ಕೂಡ ಸಿಗುವಂತಾಗಬೇಕು.
ಈ ಕುರಿತಂತೆ ಏಷಿಯನ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ನ ಡಯೇಟಿಶಿಯನ್ ಡಾ. ವಿಭಾ ಏನು ಹೇಳುತ್ತಾರೆ ಕೇಳಿ :
ಪ್ರೋಟೀನ್ ಏಕೆ ಅತ್ಯವಶ್ಯಕ?
ನಮ್ಮ ದೇಹದ ಶೇ.18-19 ರಷ್ಟು ಭಾರ ಪ್ರೋಟೀನ್ ನ ಕಾರಣದಿಂದ ಆಗಿರುತ್ತದೆ. ಪ್ರೋಟೀನ್ ನಮ್ಮ ಸ್ನಾಯುಗಳು, ರಕ್ತ, ಹೃದಯ, ಶ್ವಾಸಕೋಶಗಳು ಮತ್ತು ಜೀವಕೋಶಗಳನ್ನು ಆರೋಗ್ಯದಿಂದಿಡಲು ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬೂಸ್ಟ್ ಮಾಡುವ ಕೆಲಸ ಮಾಡುತ್ತದೆ. ಅದರಿಂದಾಗಿ ನಮಗೆ ರೋಗಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ. ಇದು ಎಂತಹ ಮೈಕ್ರೋನ್ಯೂಟ್ರಿಯೆಂಟ್ ಆಗಿರುತ್ತದೆಂದರೆ, ಅದು ನಮ್ಮ ದೇಹಕ್ಕೆ ಶಕ್ತಿ ದೊರಕಿಸಿ ಕೊಡಲು ಅವಶ್ಯಕವಾಗಿರುತ್ತದೆ.
ಹೀಗಾಗಿ ನಮ್ಮ ಡಯೆಟ್ ನಲ್ಲಿ ಪ್ರೋಟೀನ್ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ, ಅಗತ್ಯ ಉಂಟಾಗುತ್ತದೆ. ಆದರೆ ಇಂಡಿಯನ್ ಮಾರ್ಕೇಟ್ ರಿಸರ್ಚ್ ಬ್ಯೂರೋದ ಪ್ರಕಾರ, ಇತ್ತೀಚೆಗೆ ಜನರು ತಮ್ಮ ಡಯೆಟ್ ನಲ್ಲಿ ಅನ್ ಹೆಲ್ದೀ ಆಹಾರದ ಪ್ರಮಾಣ ಹೆಚ್ಚಾಗಿ ಸೇನೆವೆ ಮಾಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ಪ್ರೋಟೀನ್ ನ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಈ ಕಾರಣದಿಂದ ಅವರು ದೈನಂದಿನ ಕೆಲಸ ಕಾರ್ಯಗಳನ್ನು ಚಾಕಚಕ್ಯತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ. ಇದು ಅವರ ಉತ್ಪಾದಕತೆಯ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನೀವು ನಿಮ್ಮ ಆಹಾರದಲ್ಲಿ ಪ್ರೋಟೀನ್ ನ್ನು ನಿರ್ಲಕ್ಷಿಸುವ ತಪ್ಪು ಮಾಡಬೇಡಿ.
ರೋಗ ನಿರೋಧಕ ಶಕ್ತಿಯ ಹೆಚ್ಚಳ
ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ, ರೋಗಗಳೊಂದಿಗೆ ಹೋರಾಡಬಹುದು ಎಂಬುದನ್ನು ನೀವು ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಪ್ರೋಟೀನ್ ಆ್ಯಂಟಿಬಾಡೀಸ್ ನಿರ್ಮಾಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಅದರಿಂದ ದೇಹ ಯಾವುದೇ ಬಗೆಯ ಸೋಂಕಿನ ವಿರುದ್ಧ ಹೋರಾಡಲು ಸಮರ್ಥವಾಗುತ್ತದೆ. ನಮ್ಮ ರಕ್ತದಲ್ಲಿ ಆ್ಯಂಟಿಬಾಡೀಸ್ ಒಂದು ಬಗೆಯ ಪ್ರೋಟೀನ್ ಆಗಿರುತ್ತದೆ. ಅದು ದೇಹದ ಮೇಲೆ ಅಪಾಯಕಾರಿಯಾಗಿ ಹಲ್ಲೇ ಮಾಡುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಈ ಬಾಹ್ಯ ಸಂಗತಿಗಳು ಜೀವಕೋಶಗಳಲ್ಲಿ ಪ್ರವೇಶಿಸುತ್ತವೆ. ಇಂತಹದರಲ್ಲಿ ಪ್ರೋಟೀನ್ ಆ್ಯಂಟಿಬಾಡಿಸ್ ಸಿದ್ಧಪಡಿಸಿಕೊಂಡು ಅವನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದರಿಂದಾಗಿ ನಿಮ್ಮ ದೇಹ ರೋಗಗಳಿಂದ ರಕ್ಷಿಸಲ್ಪಡುತ್ತದೆ.
ದ್ರವ ಪದಾರ್ಥದ ಸಮತೋಲನ
ದೇಹ ಸಮರ್ಪಕವಾಗಿ ಕೆಲಸ ಮಾಡಲು ಪ್ರೋಟೀನ್ ದೇಹದಲ್ಲಿನ `ಫ್ಲೂಯೆಡ್ ಬ್ಯಾಲೆನ್ಸ್' ಅಂದರೆ ದ್ರವದ ಸಮತೋಲನದ ಕೆಲಸ ಮಾಡುತ್ತದೆ. ಮಾನವ ದೇಹದ ರಕ್ತದಲ್ಲಿ ಅಲ್ಬುಮಿನ್ ಹಾಗೂ ಗ್ಲೂಬ್ಯುಲಿನ್ ಎಂಬ ಪ್ರೋಟೀನ್ ಗಳು ಇರುತ್ತವೆ. ಅದು ದೇಹದಲ್ಲಿ ಫ್ಲೂಯೆಡ್ ನ್ನು ಬ್ಯಾಲೆನ್ಸ್ ಮಾಡುವ ಕೆಲಸ ಮಾಡುತ್ತವೆ. ಒಂದು ವೇಳೆ ನೀವು ಪ್ರೋಟೀನ್ ನ್ನು ಬೇಕಾದಷ್ಟು ಪ್ರಮಾಣದಲ್ಲಿ ಸೇವನೆ ಮಾಡದೇ ಇದ್ದರೆ, ಆ ಎರಡು ಅಂಗಗಳ ಪ್ರಮಾಣ ದೇಹದಲ್ಲಿ ಕಡಿಮೆ ಆಗುತ್ತದೆ. ಆಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ.