ಸದಾ ಫಿಟ್ ಆಗಿರಲು ಔಟ್‌ಡೋರ್ ವರ್ಕ್‌ಔಟ್‌ಗೆ ಬದಲು ಇನ್‌ಡೋರ್ ಎಕ್ಸರ್‌ಸೈಜ್‌ಗೆ ಆದ್ಯತೆ ಕೊಡಿ. ಮನೆಯಲ್ಲೇ ಜುಂಬಾ ಎಕ್ಸರ್‌ಸೈಜ್ ಮಾಡಿ ಅಥವಾ ಬೇರೆ ದಾರಿಯೇ ಇಲ್ಲ ಎಂದರೆ ಹೊರಗಿನ ಜಿಮ್ ಸೇರಿರಿ.
ವಾಟರ್ ಏರೋಬಿಕ್ ಕ್ಲಾಸೆಸ್ ಸೇರಿ. ಇದರಿಂದ ಫ್ರೆಶ್‌ನೆಸ್ ಸಿಗುತ್ತದೆ, ಎಕ್ಸ್ ಟ್ರಾ ಕ್ಯಾಲೋರಿ ಸಹ ಬರ್ನ್ ಆಗುತ್ತದೆ.
ದೇಹದಲ್ಲಿ ಆರ್ದ್ರತೆ ಉಳಿಸಿಕೊಳ್ಳಲು ಮತ್ತು ಚರ್ಮವನ್ನು UV ಕಿರಣಗಳಿಂದ ಸುರಕ್ಷಿತವಾಗಿ ಇರಿಸಿಕೊಳ್ಳಲು ಆಲಿವ್ ಆಯಿಲ್ ನೆರವಾಗುತ್ತದೆ. ಹೀಗಾಗಿ ಇದರಿಂದ ಆಗಾಗ ಮಸಾಜ್ ಮಾಡಿಕೊಳ್ಳಿ ಹಾಗೂ ಅಡುಗೆಗೂ ಬಳಿಸಿಕೊಳ್ಳಿ.
ಫ್ರೋಝನ್ ಯೋಗರ್ಟ್ ಯಾ ಐಸ್‌ಕ್ರೀಂ ಬೇಸ್ಡ್ ಸ್ಮೂದಿ ಬಳಸಬೇಡಿ. ಇದರಲ್ಲಿ ಕ್ಯಾಲೋರಿ ಅತ್ಯಧಿಕ ಇರುತ್ತದೆ. ಫ್ರೆಶ್ ಫ್ರೂಟ್ ಜೂಸ್, ನಿಂಬೆ ಪಾನಕ, ಎಳನೀರು, ಕಿತ್ತಳೆ/ಮೂಸಂಬಿ, ಕಲ್ಲಂಗಡಿ ಹಣ್ಣು ಇತ್ಯಾದಿ ಹೆಚ್ಚಾಗಿ ಬಳಸಬೇಕು.
ರೆಡ್ ಮೀಟ್ ಬದಲು ವೈಟ್ ಮೀಟ್ ಬಳಸಿರಿ. ಚಿಕನ್ ಸಹ ಜಾಸ್ತಿ ಬೇಡ. ಸ್ಟೀಮ್ಡ್, ಶ್ಯಾಲೋ ಫ್ರೈಡ್ ಫಿಶ್ ಬಳಸಿಕೊಳ್ಳಿ.
ನಿಮ್ಮ ಆಹಾರದಲ್ಲಿ ಮೊಸರು, ಮಜ್ಜಿಗೆ ಅಗತ್ಯ ಇರಲಿ. ಇದು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಹಿತಕರ. ರುಚಿ ಹೆಚ್ಚಿಸಲು ತುಸು ಪುದೀನಾ, ಕರಿಬೇವು, ಜೀರಿಗೆ, ಉಪ್ಪು, ಶುಂಠಿ ಇತ್ಯಾದಿ ಸೇರಿಸಿ. ಹೊರಗೆ ಹೊರಟಾಗ 2 ಬಾಟಲ್‌ಗಳಲ್ಲಿ ಇದನ್ನು ತುಂಬಿಸಿಕೊಂಡು ಆಗಾಗ ಕುಡಿಯುತ್ತಿರಿ, ಡೀಹೈಡ್ರೇಶನ್ ಬಾಧೆ ತಪ್ಪುತ್ತದೆ.
ಹಾಲು ಕ್ಯಾಲ್ಶಿಯಂನಿಂದ ತುಂಬಿದೆ. ಹೀಗಾಗಿ ಇದನ್ನು ದಿನಕ್ಕೆ 2-3 ಸಲ ಬಳಸಿರಿ. ಇದರಿಂದ ಶೇಕ್, ಸ್ಮೂದಿ ತಯಾರಿಸಿ ರುಚಿ ಹೆಚ್ಚಿಸಿಕೊಳ್ಳಿ.
- ಅಂಬುಜಾ