ಮನೆಗೊಬ್ಬ ಹೊಸ ಅತಿಥಿ ಬರಲಿರುವ ಸೂಚನೆ ದೊರೆತೊಡನೆ ತಂದೆತಾಯಿಯರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ. ಅವರು ಪೌಷ್ಟಿಕ ಆಹಾರ ಸೇವನೆಯಲ್ಲಿ ತೊಡಗುತ್ತಾರೆ. ಈ ಕಾಳಜಿಯಲ್ಲಿ ತಮ್ಮ ಪುಟ್ಟ ಕಂದನ ಆರೋಗ್ಯದ ಭವಿಷ್ಯಕ್ಕಾಗಿ ಇಷ್ಟು ಮಾಡುವುದಲ್ಲದೆ, ತಂದೆ ತಾಯಿಯರು ಮತ್ತೊಂದು ಕೆಲಸವನ್ನೂ ಅಗತ್ಯವಾಗಿ ಮಾಡಬೇಕು.

ಅಂತಹ ಅಗತ್ಯವಾದ ಕೆಲಸವೇನೆಂದರೆ, ಮಗು ಜನಿಸಿದಾಗ ಸ್ಟೆಮ್ ಜೀವಕೋಶಗಳ ಸಂರಕ್ಷಣೆ. ಭಾರತದಲ್ಲಿ ಸುಮಾರು 15 ಸ್ಟೆಮ್ ಸೆಲ್ಸ್ ಬ್ಯಾಂಕ್‌ಗಳಿವೆ. ಇಲ್ಲಿ ಶಿಶುವಿನ ಗರ್ಭನಾಳವನ್ನು ಸುರಕ್ಷಿತಾಗಿರಿಸಿ ತನ್ಮೂಲಕ ನೀವು ಮಗುವಿಗೊಂದು ಉತ್ತಮ ಉಡುಗೊರೆಯನ್ನು ನೀಡುವಂತಾಗಲು ಇದೊಂದು ವಿಶಿಷ್ಟ ಮಾರ್ಗವಾಗಿದೆ.

ಸ್ಟೆಮ್ ಸೆಲ್ಸ್ ನಿಂದ ಸಮೃದ್ಧವಾಗಿರುವ ಗರ್ಭನಾಳ : ಶರೀರದ ವಿವಿಧ ಅಂಗಾಂಗಗಳಲ್ಲಿ ಸ್ಟೆಮ್ ಸೆಲ್ಸ್ ಇರುತ್ತವೆ. ಆದರೆ ಗರ್ಭನಾಳ ಸ್ವಚ್ಛ ಹಾಗೂ ಹೊಸ ಜೀವಕೋಶಗಳ ಸಮೃದ್ಧ ಭಂಡಾರವಾಗಿದೆ. ಈ ಸ್ಟೆಮ್ ಸೆಲ್ಸ್ ‌ಗಳನ್ನು ಮಾಸ್ಟರ್‌ ಸೆಲ್ಸ್ ಎನ್ನಬಹುದು. ಇವು ಇಡೀ ಶರೀರದಲ್ಲಿ ಬಿಲ್ಡಿಂಗ್‌ ಬ್ಲಾಕ್ಸ್ ನಂತೆ ಕೆಲಸ ಮಾಡುತ್ತವೆ. ಜನನದ ಸಮಯದಲ್ಲಿ ಗರ್ಭನಾಳದಿಂದ ಸಂಗ್ರಹಿಸಿದ ಸ್ಟೆಮ್ ಸೆಲ್ಸ್ ಗಳು 80ಕ್ಕೂ ಹೆಚ್ಚು ಸಮಸ್ಯೆಗಳಿಗೆ ಚಿಕಿತ್ಸಾಕಾರಿ ಆಗಬಲ್ಲವು. ಇವುಗಳಿಗೆ ಹಾನಿಗೊಂಡ ಜೀವಕೋಶಗಳನ್ನು ಬದಲಿಸುವ ಅಥವಾ ಸರಿಪಡಿಸುವ ಸಾಮರ್ಥ್ಯವಿರುತ್ತದೆ. ಪ್ರಕೃತಿಯ ಈ ಅಮೂಲ್ಯ ಕೊಡುಗೆಯನ್ನು ಸಂರಕ್ಷಿಸುವ ಅವಕಾಶ ಕೇವಲ ಶಿಶುವಿನ ಜನನದ ಸಮಯದಲ್ಲಿ ಮಾತ್ರ ಸಿಗುತ್ತದೆ.

ಗರ್ಭನಾಳದ ಸ್ಟೆಮ್ ಸೆಲ್ಸ್ ನ ಸುಲಭ ಸಂಗ್ರಹಣೆ : ಸ್ಟೆಮ್ ಸೆಲ್ಸ್ ಗಳನ್ನು ಸಂಗ್ರಹಿಸುವ ಸುಲಭ ವಿಧಾನವೆಂದರೆ, ಮಗುವಿನ ಜನನವಾದ ಕೂಡಲೇ ಗರ್ಭನಾಳವನ್ನು ಕ್ಲಾಂಪ್‌ ಮಾಡಿ ಅಲ್ಲಿನ ರಕ್ತ ಮತ್ತು ಟಿಶ್ಶೂಗಳನ್ನು ತ್ವರಿತವಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಒಟ್ಟುಗೂಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ತಾಯಿ ಅಥವಾ ಮಗುವಿಗೆ ಯಾವುದೇ ಅಪಾಯವಿರುವುದಿಲ್ಲ. ಹೀಗೆ ಸಂಗ್ರಹಿಸಿದ ಸ್ಯಾಂಪಲ್ಸ್ ನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿ ಭವಿಷ್ಯದ ಬಳಕೆಗಾಗಿ ಅದನ್ನು ಸಂರಕ್ಷಿಸಿ ಇಡಲಾಗುವುದು. ಅಗತ್ಯ ಬಿದ್ದಾಗ ಈ ಸ್ಟೆಮ್ ಸೆಲ್ಸ್ ಯೂನಿಟ್‌ನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಶಿಶುವಿನ ಜನನದ ಸಮಯದಲ್ಲಿ ಬುದ್ಧಿವಂತಿಯಿಂದ ಸ್ಟೆಮ್ ಸೆಲ್ಸ್ ನ್ನು ಸಂರಕ್ಷಿಸಿದ್ದರೆ, ಮುಂದೆ ಡೋನರ್‌ ಸ್ಟೆಮ್ ಸೆಲ್ಸ್ ನ್ನು ಹುಡುಕುವ ಪ್ರಮೇಯ ಬರುವುದಿಲ್ಲ. ಸ್ಟೆಮ್ ಸೆಲ್ಸ್ ‌ಗಳ ಮೇಲ್ಪದರದಲ್ಲಿರುವ ಹ್ಯೂಮನ್‌ ಆಲ್ಯೂಕೊಸೈಟ್‌ ಆ್ಯಂಟಿಜೆನ್‌ ಒಂದು ಬಗೆಯ ಪ್ರೋಟೀನ್‌ ಆಗಿದ್ದು, ಅದರ ಆಧಾರದ ಮೇಲೆ ಸ್ಟೆಮ್ ಸೆಲ್ಸ್ ‌ಗಳನ್ನು ಮ್ಯಾಚ್‌ ಮಾಡಲಾಗುತ್ತದೆ. ಗರ್ಭನಾಳದ ಸ್ಟೆಮ್ ಸೆಲ್ಸ್ ‌ಗಳಿಗೆ 4/6 ಭಾಗದ ಎಚ್‌ಎಲ್ಎ ಮ್ಯಾಚ್‌ ಅಗತ್ಯವಾಗುತ್ತದೆ.

ಸ್ಟೆಮ್ ಸೆಲ್ಸ್ ನ ಸಂರಕ್ಷಣೆಯ ಬಗೆ : ಪ್ರಯೋಗಾಲಯಕ್ಕೆ ಸ್ಯಾಂಪಲ್ ಬಂದಾಗ ಅದನ್ನು ಪರೀಕ್ಷೆ ಮಾಡಲಾಗುತ್ತದೆ. ಜೀವಕೋಶಗಳು ಸಾಂಕ್ರಾಮಿಕ ರೋಗಗಳಿಂದ ಮುಕ್ತಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಾಯಿಯ ರಕ್ತದ ಸ್ಯಾಂಪಲ್‌ನ್ನು ತೆಗೆದುಕೊಳ್ಳಲಾಗುವುದು. ಅವು ಸಕ್ರಿಯವಾಗಿದ್ದು ಸಂರಕ್ಷಣೆಗೆ ಯೋಗ್ಯವಾಗಿರುವುದನ್ನು ನಿಶ್ಚಿತಗೊಳಿಸಲು ಗರ್ಭನಾಳದ ರಕ್ತದ ಸ್ಯಾಂಪಲ್‌ನ್ನು ಪಡೆದು ಪರೀಕ್ಷಿಸಲಾಗುವುದು. ಸ್ಟೆಮ್ ಸೆಲ್ಸ್ ‌ಗಳನ್ನು ಕೆಂಪು ರಕ್ತಕಣಗಳಿಂದ ಬೇರ್ಪಡಿಸಲು ಸೆಂಟ್ರಿಪ್ಯಗೇಶನ್‌ ಮತ್ತು ಇತರೆ ಪ್ರಕ್ರಿಯೆಗಳನ್ನು ಮಾಡಲಾಗುದು.

ಉತ್ತಮ ಸ್ಟೆಮ್ ಸೆಲ್ಸ್ ಎಕ್ಸ್ ಟ್ರಾಕ್ಷನ್‌ ಪ್ರಕ್ರಿಯೆಯು 2 ಅಂಶಗಳ ಮೂಲಕ ನಿರ್ಧರಿತವಾಗುತ್ತದೆ.

  1. ಹೆಚ್ಚಿನ ಸ್ಟೆಮ್ ಸೆಲ್ಸ್ ರಿಕವರಿ ಸ್ಯಾಂಪಲ್‌ನಿಂದ ಪಡೆಯಲಾದ ಸ್ಟೆಮ್ ಸೆಲ್ಸ್ ಗಳ ಸಂಖ್ಯೆಯನ್ನು ಸ್ಟೆಮ್ ಸೆಲ್ಸ್ ಎಣಿಕೆ ವಿಧಾನದ ಮೂಲಕ ತಿಳಿಯಬಹುದಾಗಿದೆ.
  2. ಆರ್‌ಬಿಸಿ ಕೊರತೆ ಸ್ಯಾಂಪಲ್‌ನಿಂದ ಪಡೆದ ಸ್ಟೆಮ್ ಸೆಲ್ಸ್ ಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿ ಅವುಗಳ ಸಕ್ರಿಯತೆಯನ್ನು ನಿಶ್ಚಯಪಡಿಸಿಕೊಳ್ಳಲಾಗುವುದು.

ಸ್ಟೆಮ್ ಸೆಲ್ಸ್ ಗಳ ಸಂರಕ್ಷಣೆ : ಸ್ಟೆಮ್ ಸೆಲ್ಸ್ ಗಳ ಸಂಖ್ಯೆ ಮತ್ತು ಗುಣಮಟ್ಟ ಉತ್ತಮವಾಗಿರುವುದೆಂದು ನಿರ್ಧರಿತವಾದ ನಂತರ ಅವುಗಳನ್ನು ಕ್ರಯಾಯ್‌ನಲ್ಲಿ ಹಾಕಿ ಕ್ರೂಪ್ರಿಸರ್ವೇಶನ್‌ ಏರಿಯಾದಲ್ಲಿ ಇರಿಸಲಾಗುವುದು. ದೀರ್ಘಕಾಲ ಸಂರಕ್ಷಣೆಗಾಗಿ ವಿಶೇಷ ಎಚ್ಚರಿಕೆ ವಹಿಸಲಾಗುದು ಸ್ಟೆಮ್ ಸೆಲ್ಸ್ ಬ್ಯಾಂಕ್‌ ತಾಯಿಗೆ ಪ್ರಿಸರ್ವೇಶನ್‌ ಸರ್ಟಿಫಿಕೇಟ್‌ ನೀಡುತ್ತದೆ. ಅದರಲ್ಲಿ ಸ್ಟೆಮ್ ಸೆಲ್ಸ್ ಕೌಂಟ್‌, ಪ್ರಿಸರ್ವೇಶನ್‌ ಡೇಟ್‌ ಮುಂತಾದ ಮಾಹಿತಿ ಇರುತ್ತದೆ.

ವೈದ್ಯರ ಆಶ್ವಾಸನೆ : ಶರೀರದ ಇತರೆ ಮೂಲಗಳ ಸ್ಟೆಮ್ ಸೆಲ್ಸ್ ‌ಗಳಿಗಿಂತ ಗರ್ಭನಾಳದ ಸ್ಟೆಮ್ ಸೆಲ್ಸ್ ‌ಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇವುಗಳಲ್ಲಿ ಶುದ್ಧತೆ, ಹೊಂದಾಣಿಕೆಯ ಸೌಕರ್ಯ, ರೋಗಿಗಳ ಶರೀರದಲ್ಲಿ ಹೆಚ್ಚಿನ ಮಟ್ಟದ ಸ್ವೀಕಾರ ಗುಣ, ವರ್ಗಾವಣೆಯ ಸಂದರ್ಭದಲ್ಲಿ ಉತ್ತಮ ಪರಿಣಾಮ ಮುಂತಾದ ಅಸಾಮಾನ್ಯ ಗುಣಗಳಿರುತ್ತವೆ. ಈ ಮೂಲಕ ರೋಗಿಯು ಆರೋಗ್ಯವಂತನಾಗುವನೆಂದು ವೇದ್ಯರು ಆಶ್ವಾಸನೆ ನೀಡುತ್ತಾರೆ.

ಸ್ಟೆಮ್ ಸೆಲ್ಸ್ ಬ್ಯಾಂಕಿಂಗ್‌ ಮಿತ್ಯಯಕಾರಿ

ಶಿಶುವಿನ ಜನನವಾದ ಸಮಯದಲ್ಲಿ ನೀವು ಗರ್ಭನಾಳದ ಸಂರಕ್ಷಣೆ ಮಾಡಿರದಿದ್ದರೆ, ನಿಮಗೆ ಅಗತ್ಯವಾದ ಡೋನರ್‌ ಸ್ಟೆಮ್ ಸೆಲ್ಸ್ ಪಡೆಯಲು ಸುಮಾರು 15-20 ಲಕ್ಷ ರೂಪಾಯಿಗಳನ್ನು ತೆರಬೇಕಾಗಬಹುದು. ವಾಸ್ತವವಾಗಿ ನಿಮ್ಮ ಶಿಶುವಿನ ಗರ್ಭನಾಳದ ಸ್ಟೆಮ್ ಸೆಲ್ಸ್ ಸಂರಕ್ಷಣೆಯನ್ನು ಕೇವಲ 60 ಸಾವಿರ ರೂಪಾಯಿಗಳಲ್ಲಿ ಮಾಡಿ ಇಡೀ ಕುಟುಂಬ ಅದರ ಲಾಭ ಪಡೆಯಬಹುದು. ಈ ರೀತಿ ಗರ್ಭನಾಳ ಸಂರಕ್ಷಣೆಯು ಮಿತವ್ಯಯಕಾರಿ ಮತ್ತು ಪ್ರಯೋಜನಕಾರಿ ಆಗಿರುತ್ತದೆ.

ನಿಮ್ಮ ಶಿಶುವಿನ ಗರ್ಭನಾಳ ಸ್ಟೆಮ್ ಸೆಲ್ಸ್ ಗಳನ್ನು ಸಂರಕ್ಷಿಸುವ ಒಳ್ಳೆಯ ತೀರ್ಮಾನ ತೆಗೆದುಕೊಂಡ ನಂತರ ಸೂಕ್ತ ಸ್ಟೆಮ್ ಸೆಲ್ಸ್ ಬ್ಯಾಂಕ್‌ನ್ನು ಆರಿಸಿಕೊಂಡು ಹೆಚ್ಚಿನ ಪ್ರಯೋಜನ ಪಡೆಯಿರಿ. ಉತ್ತಮ ಸ್ಟೆಮ್ ಸೆಲ್ಸ್ ಬ್ಯಾಂಕ್‌ ಆರಿಸಲು ಈ ಕೆಲವು ಅಂಶಗಳನ್ನು ಗಮನಿಸಿ :

– ಎಎಬಿಬಿ, ಐಎಸ್‌ಓ, ಡಿಜಿಸಿಇಐ, ಸಿಎಪಿನಂತಹ ಸಂಸ್ಥೆಗಳಿಂದ ಮಾನ್ಯತೆ.

– ಸ್ಟೆಮ್ ಸೆಲ್ಸ್ ಬ್ಯಾಂಕ್‌ನ ಆರ್ಥಿಕ ಸದೃಢತೆ.

– ಸ್ಟೆಮ್ ಸೆಲ್ಸ್ ಬ್ಯಾಂಕ್‌ನಲ್ಲಿ ತಮ್ಮ ಮಗುವಿನ ಸ್ಟೆಮ್ ಸೆಲ್ಸ್ ಇರಿಸಿರುವವರ ಸಂಪರ್ಕ.

– ಸ್ಟೆಮ್ ಸೆಲ್ಸ್ ನ ರಿಕವರಿ ರೇಟ್‌ ನೀಡುವ ಪ್ರೊಸೆಸಿಂಗ್‌ ಟೆಕ್ನಾಲಜಿ.

– ಕಮ್ಯುನಿಟಿ ಸ್ಟೆಮ್ ಸೆಲ್ಸ್ ‌ ಬ್ಯಾಂಕ್‌ ಮಾಡೆಲ್. ಇದು ತಮ್ಮಲ್ಲಿ ಸ್ಟೆಮ್ ಸೆಲ್ಸ್ ಇರಿಸುವ ತಂದೆತಾಯಿಯರ ಸಮೂಹದೊಂದಿಗೆ ಸ್ಟೆಮ್ ಸೆಲ್ಸ್ ‌ಗಳ ಪಾಲುದಾರಿಕೆ ಮಾಡುವ ಕಾನ್ಸೆಪ್ಟ್ ನೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಮಗು ಮತ್ತು ಅದರ ಸೋದರ ಸೋದರಿಯರು, ತಂದೆ ತಾಯಿ, ಅಜ್ಜ ಅಜ್ಜಿ ಮುಂತಾದ ಎಲ್ಲರಿಗೂ ಪ್ರಯೋಜನ  ಆಗುತ್ತದೆ. ನಿಮ್ಮ ಶಿಶುವಿನ ಸ್ಟೆಮ್ ಸೆಲ್ಸ್ ‌ಗಳ ಸಂರಕ್ಷಣೆಯ ಮೂಲಕ ಇಡೀ ಕುಟುಂಬ ಜೀವನವಿಡೀ ಆರೋಗ್ಯಪೂರ್ಣವಾಗಿ, ಸಂತೋಷಮಯವಾಗಿ ಬಾಳಲು ಸಹಕಾರಿಯಾಗುತ್ತದೆ.

– ಡಾ. ಮಧುರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ