ಸಾಲ್ಮನ್‌ ಫಿಶ್‌ : ಇದರಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಮುಂತಾದ ಘಟಕಗಳು ಧಾರಾಳ ಅಡಗಿವೆ. ಇದರಿಂದಾಗಿ ನಮ್ಮ ಮೆದುಳಿನಲ್ಲಿ ಡೋಪಾಮೈನ್‌ನ ಸ್ತರ ಹೆಚ್ಚುತ್ತದೆ, ಅದರಿಂದ ಸಹಜವಾಗಿ ಕಾಮುಕ ಉತ್ತೇಜನ ಹೆಚ್ಚುತ್ತದೆ. ಒಮೇಗಾ 3ಯಿಂದಾಗಿ ಡೋಪಾಮೈನ್‌ನನ್ನು ಉತ್ಪಾದಿಸುವ ಶಕ್ತಿ ಹೆಚ್ಚುತ್ತದೆ. ಇದು ನಮ್ಮ ಮೆದುಳಿನ ಮಹತ್ವಪೂರ್ಣ ರಾಸಾಯನಿಕವಾಗಿದ್ದು, ವ್ಯಕ್ತಿಯ ಲೈಂಗಿಕ ಪರಾಕಾಷ್ಠೆಯನ್ನು ಟ್ರಿಗರ್‌ ಮಾಡುವಲ್ಲಿ ಪೂರಕ.

ಕುಂಬಳ ಬೀಜ : ಇದು ಝಿಂಕ್‌ನ ನೈಸರ್ಗಿಕ ಮೂಲವಾಗಿದ್ದು, ಟೆಸ್ಟೊಸ್ಟೆರಾನ್‌ ಹೆಚ್ಚಿಸುವಲ್ಲಿ ಪೂರಕ. ಇದರಲ್ಲಿ ಅತ್ಯಗತ್ಯ ಮಾನೋ ಅನ್‌ಸ್ಯಾಚುರೇಟೆಡ್‌ ಕೊಬ್ಬು ಸಹಿತ ಇರುತ್ತದೆ, ಇದರಿಂದ ದೇಹಕ್ಕೆ ಉತ್ತಮ ಕೊಲೆಸ್ಟ್ರಾಲ್ ಲಭ್ಯವಾಗುತ್ತದೆ. ಲೈಂಗಿಕ ಹಾರ್ಮೋನ್ಸ್ ಸರಿಯಾಗಿ ಕೆಲಸ ಮಾಡಲು ಇದು ಪೂರಕ.

ಬೆರೀಸ್‌ : ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ, ಬ್ಲೂಬೆರಿ ಇತ್ಯಾದಿ ನೈಸರ್ಗಿಕ ಮೂಡ್‌ ಬೂಸ್ಟರ್ಸ್ ಎನಿಸಿವೆ. ಸ್ಟ್ರಾಬೆರಿಯಲ್ಲಿ ಧಾರಾಳ ವಿಟಮಿನ್ಸ್ ಇರುತ್ತದೆ. ಬ್ಲ್ಯಾಕ್‌ಬೆರಿ, ಬ್ಲೂಬೆರಿಗಳಲ್ಲಿ ಫೈಟೋಕೆಮಿಕಲ್ಸ್ ಇರುತ್ತವೆ. ಇದು ವ್ಯಕ್ತಿಯ ಮೂಡ್‌ನ್ನು ರೊಮ್ಯಾಂಟಿಕ್‌ಗೊಳಿಸುತ್ತವೆ.

ಬಾಳೆಹಣ್ಣು : ಇದರಲ್ಲಿ ಪೊಟ್ಯಾಶಿಯಂ ನೈಸರ್ಗಿಕವಾಗಿ ದೊರೆಯುತ್ತದೆ. ಪೊಟ್ಯಾಶಿಯಂ ಒಂದು ಮಹತ್ವಪೂರ್ಣ ಪೋಷಕಾಂಶವಾಗಿದ್ದು ಮಾಂಸಖಂಡಗಳು ಹಿಗ್ಗುವಲ್ಲಿ ಹೆಚ್ಚು ನೆರವಾಗುತ್ತವೆ. ಹೀಗಾಗಿ ಖಾಸಗಿ ಕ್ಷಣಗಳು ಹೆಚ್ಚು ಸುಖಕರ ಎನಿಸುತ್ತದೆ. ಜೊತೆಗೆ ಬಾಳೆಯಲ್ಲಿ ಬ್ರೂಮೆಲೈನ್‌ ಧಾರಾಳ ಅಡಗಿದ್ದು, ಟೆಸ್ಟೊಸ್ಟೆರಾನ್‌ ಉತ್ಪನ್ನದಲ್ಲಿ ಹೆಚ್ಚು ಪೂರಕ.

ಕಲ್ಲಂಗಡಿ ಹಣ್ಣು : ಇದರಲ್ಲಿ 92% ನೀರಿನಂಶ ಇರುತ್ತದೆ. ಬಾಕಿ 8% ಪೋಷಕಾಂಶಗಳಿಂದ ತುಂಬಿರುತ್ತದೆ. ಕಲ್ಲಂಗಡಿಯ ಈ ಶಾಂತ ಗುಣ, ನಮ್ಮ ರಕ್ತನಾಳಗಳ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಇದು ನಮ್ಮ ರಕ್ತಪ್ರವಾಹ ಸುಧಾರಿಸಿ, ಬಿ.ಪಿ. ತಗ್ಗಿಸುತ್ತದೆ.

ಬೆಳ್ಳುಳ್ಳಿ : ದಿನಂಪ್ರತಿ ನಾವು ಬಳಸುವ ಮಾಮೂಲಿ ಪದಾರ್ಥ ಈ ಬೆಳ್ಳುಳ್ಳಿ. ಇದರಲ್ಲಿನ ಆ್ಯಲಿಕಿನ್‌ ಎಂಬ ರಾಸಾಯನಿಕ ಸ್ತ್ರೀ-ಪುರುಷರಿಬ್ಬರಲ್ಲೂ ಲೈಂಗಿಕತೆ ಉದ್ರೇಕಿಸಿ, ರಕ್ತಪ್ರಾಹ ಹೆಚ್ಚುವಂತೆ ಮಾಡುತ್ತದೆ. ಹಿಂದಿನ ರಾತ್ರಿ ಜೇನುತುಪ್ಪದಲ್ಲಿ ನೆನೆಸಿದ ಹಸಿ ಬೆಳ್ಳುಳ್ಳಿಯನ್ನು ಮಾರನೇ ಬೆಳಗ್ಗೆ ಇಬ್ಬರೂ ಸೇವಿಸುವುದರಿಂದ ಹೆಚ್ಚಿನ ಲಾಭವಿದೆ.

ಕೇಸರಿ : ಇದೊಂದು ಪ್ರಾಕೃತಿಕ ಕಾಮೋದ್ದೀಪಕ. ಇದು ಸ್ತ್ರೀ-ಪುರುಷರಿಬ್ಬರಿಗೂ ಆ ಕ್ಷಣದ ಆನಂದ ಹೆಚ್ಚಿಸುವಲ್ಲಿ ಪೂರಕ. ಹೀಗಾಗಿಯೇ ನವವಧು ಕೇಸರಿ ಬೆರೆತ ಬಿಸಿ ಹಾಲನ್ನು ಸಜ್ಜೆಮನೆಗೆ ಕೊಂಡೊಯ್ಯುವ ರೂಢಿ ಬಂದಿದೆ. ಅತಿ ದುಬಾರಿ ಮಸಾಲೆಗಳಲ್ಲಿ ಒಂದೆನಿಸುವ ಕೇಸರಿಯಲ್ಲಿ ಕ್ರಾಕಟೋನ್‌ ಎಂಬ ಅಂಶವಿದ್ದು ಇದು ಮೆದುಳಿನಲ್ಲಿ ಉತ್ತೇಜನಕಾರಿ ಹಾರ್ಮೋನ್‌ನ್ನು ಟ್ರಿಗರ್‌ ಮಾಡುತ್ತದೆ. ಕೇಸರಿಯಲ್ಲಿ ಪಿಕೋ ಕ್ರಾಕಿನ್‌ ಎಂಬ ಮತ್ತೊಂದು ಅಂಶವಿದ್ದು, ಸ್ಪರ್ಶದಿಂದ ಸಂವೇದನೆಯನ್ನು ಹೆಚ್ಚಿಸುತ್ತದೆ.

ಲವಂಗ : ಹಲವು ದಶಕಗಳಿಂದ ಗಂಡಸರ ಲೈಂಗಿಕ ರೋಗ ಚಿಕಿತ್ಸೆಯಲ್ಲಿ ನಮ್ಮ ದೇಶದಲ್ಲಿ ಲವಂಗಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ನಿಯಮಿತ ರೂಪದಲ್ಲಿ ಲವಂಗ ಸೇವಿಸುವುದರಿಂದ, ಲೈಂಗಿಕ ಚಟುವಟಿಕೆ ಚುರುಕಾಗುತ್ತದೆ. ಜೊತೆಗೆ ಅದು ಉಸಿರಿನ ದುರ್ವಾಸನೆ ನಿವಾರಿಸಿ, ವಸಡು ನೋವನ್ನೂ ತಗ್ಗಿಸುತ್ತದೆ. ಇದರ ಜೊತೆ ಜೀರಿಗೆ, ದಾಲ್ಚಿನ್ನಿ ಕೂಡಿದರೆ ಅದು ಹೆಚ್ಚು ಕಾಮೋದ್ದೀಪಕ ಎನಿಸುತ್ತದೆ.

ಡಾರ್ಕ್‌ ಚಾಕಲೇಟ್‌ : ಇದು ಆ್ಯಂಟಿಆಕ್ಸಿಡೆಂಟ್ಸ್ ನಿಂದ ಸಮೃದ್ಧವಾಗಿದೆ. ಹೆಚ್ಚು ಹೊತ್ತಿನ ಲೈಂಗಿಕ ಸುಖ ಬಯಸುವವರಿಗೆ ಇದೊಂದು ಉತ್ತಮ ಸಾಧನ, ಅಷ್ಟೇ ಸ್ವಾದಿಷ್ಟಕರ ಹೌದು. ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ಮರೆಮಾಚುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಪಾಲಕ್‌ಸೊಪ್ಪು : ಈ ತರಹದ ತಾಜಾ ಹಸಿರು ಸೊಪ್ಪುಗಳಲ್ಲಿ ಧಾರಾಳವಾಗಿ ಫಾಲಿಕ್‌ ಆ್ಯಸಿಡ್‌ ಇರುತ್ತದೆ. ಇದು ಶಕ್ತಿ ಮತ್ತು ಕಾಮೇಚ್ಛೆ ಹೆಚ್ಚಿಸುವಲ್ಲಿ ಸಹಾಯಕ.

ಮೊಟ್ಟೆ : ಇದರಲ್ಲಿ ಉಚ್ಚ ಮಟ್ಟದ ಪ್ರೋಟೀನ್ಸ್ ತುಂಬಿರುತ್ತವೆ. ಅತ್ಯಧಿಕ ಶಕ್ತಿಗೆ ಇದು ಮೂಲ. ಇದನ್ನು ಬೇಯಿಸಿ, ಆಮ್ಲೆಟ್‌ ರೂಪದಲ್ಲಿ ಹೇಗಾದರೂ ಸೇವಿಸಬಹುದು. ಸೇವನೆ ಮುಖ್ಯ ಅಷ್ಟೇ, ಅದು ಅಧಿಕ ಶಕ್ತಿ ಒದಗಿಸಿ ಆನಂದ  ಹೆಚ್ಚಿಸುತ್ತದೆ.

– ಎಸ್‌. ಸೌಮ್ಯಾ

और कहानियां पढ़ने के लिए क्लिक करें...