ಮುಟ್ಟಿನ ದಿನಗಳಲ್ಲಿ ಸಮಾಗಮದ ಕಲ್ಪನೆಯೇ ಬಹಳಷ್ಟು ಜನರಿಗೆ ಅಸಹಜ ಎನಿಸುತ್ತದೆ. ಇದರ ಹಿಂದೆ ಧಾರ್ಮಿಕ ಕಟ್ಟುಪಾಡುಗಳು ಹಾಗೂ ಸಾಂಸ್ಕೃತಿಕ ನಂಬಿಕೆಗಳು ಕೂಡ ಕಾರಣವಾಗಿವೆ. ಇದರ ಜೊತೆಗೆ ನೈರ್ಮಲ್ಯದ ವಿಷಯಗಳು ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ಕೆಲವು ವಿಚಾರಗಳು ಕೂಡ ಸೇರಿವೆ. ಆದರೆ ಮಹಿಳೆಯ ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ ಹಾಗೂ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಸಂಬಂಧಪಟ್ಟಿದೆ. ಹೀಗಾಗಿ ಈ ಅವಧಿಯ ಬಗ್ಗೆ ಅಷ್ಟು ಗಂಭೀರರಾಗುವ ಅಗತ್ಯವಿಲ್ಲ.

ಬಹಳಷ್ಟು ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸಮಾಗಮ ಚಟುವಟಿಕೆ ನಡೆಸಬೇಕೋ, ಬೇಡವೋ ಎಂಬ ಬಗ್ಗೆ ಗೊತ್ತೇ ಇರುವುದಿಲ್ಲ. ಮುಟ್ಟಿನ ದಿನಗಳಲ್ಲಿ ಸಮಾಗಮ ಕ್ರಿಯೆ ನಡೆಸುವುದು ತಪ್ಪು ಎಂದು ಅನೇಕ ಮಹಿಳೆಯರು ಭಾವಿಸಿದ್ದಾರೆ. ಆದರೆ ವಾಸ್ತವ ಸಂಗತಿ ಏನೆಂದರೆ, ಬೇರೆ ದಿನಗಳ ಹಾಗೆ ಪೀರಿಯಡ್ಸ್ ಸೆಕ್ಸ್ ಕೂಡ ಸಾಮಾನ್ಯವಾಗಿರುತ್ತದೆ.

ಮುಟ್ಟಿನ ದಿನಗಳಲ್ಲಿ ದೈಹಿಕ ಸಂಬಂಧದಿಂದ ಏನೇನು ಅನುಕೂಲಗಳಿವೆ ಎನ್ನುವುದನ್ನು ಗಮನಿಸಿ :

ಮುಟ್ಟಿನ ದಿನಗಳಲ್ಲಿ ಸಮಾಗಮ ನಡೆಸುವುದರಿಂದ ಯಾವುದಾದರೂ ತೊಂದರೆ ಆಗಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಲಭ್ಯವಾಗಿಲ್ಲ.

ಮುಟ್ಟಿನ ಸಮಯದಲ್ಲಿ ಸಮಾಗಮ ಅತ್ಯಂತ ಸಹಜ ಹಾಗೂ ಆರಾಮದಾಯಕ ಎನಿಸುತ್ತದೆ. ಏಕೆಂದರೆ ಆಗ ಮಹಿಳೆಯ ಅಂಗದಲ್ಲಿ ಸಾಕಷ್ಟು ಸ್ನಿಗ್ಧತೆ ಇರುತ್ತದೆ.

PeriodsSex1

ಪೀರಿಯಡ್ಸ್ ಸೆಕ್ಸ್ ನಿಂದ ಎಂಡಾರ್ಫಿನ್‌ ಮತ್ತು ಆಕ್ಸಿಟೋಸಿನ್‌ ಹಾರ್ಮೋನ್‌ ಗಳು ಹೊರಹೊಮ್ಮುತ್ತವೆ. ಇದರ ಪರಿಣಾಮವೆಂಬಂತೆ ಮೆದುಳಿನಲ್ಲಿ ಲೇಸರ್‌ ಸೆಂಟ್ಸ್ ಸಕ್ರಿಯಾಗುತ್ತವೆ. ಅದರಿಂದ ಆನಂದದ ಅನುಭವ ಉಂಟಾಗುತ್ತದೆ. ಅದರ ಜೊತೆ ಜೊತೆಗೆ ಒತ್ತಡ ಕೂಡ ನಿವಾರಣೆ ಆಗುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಲೈಂಗಿಕೇಚ್ಛೆ ತೀವ್ರವಾಗಿರುತ್ತದೆ. ಹೀಗಾಗಿ ಆಗ ಸಮಾಗಮ ನಡೆಸುವುದರಿಂದ ಯಾವುದೇ ಅಪಾಯವಿಲ್ಲ, ಬದಲಿಗೆ ಹೆಚ್ಚಿನ ಆನಂದಾನುಭವ ಉಂಟಾಗುತ್ತದೆ.

ದಂಪತಿಗಳು ಲೈಂಗಿಕ ಅಂಗಗಳ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು.

ಸಮಾಗಮದ ಮುಂಚೆ ಹಾಗೂ ನಂತರ ಲೈಂಗಿಕ ಅಂಗಗಳನ್ನು ನೀರಿನಿಂದ ಸ್ವಚ್ಛಗೊಳಿಸುವುದು ಅವಶ್ಯ. ಏಕೆಂದರೆ ಯಾವುದೇ ಸೋಂಕಿನ ಸಾಧ್ಯತೆ ಇರಬಾರದು. ಮುಟ್ಟಿನ ಸಂದರ್ಭದಲ್ಲಿ ಸಮಾಗಮ ನಡೆಸುವ ಮುಂಚೆ ಕೆಲವು ಸಂಗತಿಗಳನ್ನು ಗಮನಿಸಿಬೇಕು :

ನೈಸರ್ಗಿಕ ಲ್ಯೂಬ್ರಿಕೆಂಟ್‌ : ಮುಟ್ಟಿನ ದಿನಗಳಲ್ಲಿ ಮಹಿಳೆಯರ ಗುಪ್ತಾಂಗ ನೈಸರ್ಗಿಕ ಲ್ಯೂಬ್ರಿಕೆಂಟ್‌ ನಂತಿರುತ್ತದೆ. ಹೀಗಾಗಿ ಸಮಾಗಮ ಆರಾಮದಾಯಕ ಎನಿಸುತ್ತದೆ. ತಜ್ಞರು ಹೇಳುವುದೇನೆಂದರೆ ಈ ಅವಧಿಯಲ್ಲಿ ಈಸ್ಟ್ರೋಜನ್‌ ಹಾರ್ಮೋನ್‌ ಗರಿಷ್ಠ ಮಟ್ಟದಲ್ಲಿರುತ್ತದೆ. ಆಗ ನೋವಿನ ಅನುಭವ ಕೂಡ ಕಡಿಮೆ ಎನಿಸುತ್ತದೆ.

ಕಾಂಡೋಮ್ ಉಪಯೋಗಿಸಿ : ಪೀರಿಯಡ್ಸ್ ನಲ್ಲಿ ಸಮಾಗಮದಿಂದ ಯಾವುದೇ ಅಪಾಯವಿಲ್ಲ. ಆದರೆ ಮಹಿಳೆಯ ಗುಪ್ತಾಂಗದಲ್ಲಿ ಹೆಚ್ಚು ತೇವಾಂಶ ಇರುವುದರಿಂದ ಸೆಕ್ಶುಲಿ ಟ್ರಾನ್ಸ್ ಮಿಟೆಡ್‌ ಡಿಸೀಸ್‌ ಉಂಟಾಗುವ ಅಪಾಯ ಹೆಚ್ಚಿಗೆ ಇರುತ್ತದೆ. ಹೀಗಾಗಿ ಕಾಂಡೋಮ್ ಇಲ್ಲದೆ ಸಮಾಗಮ ನಡೆಸಬೇಡಿ.

ಸಂಗಾತಿಯ ಇಚ್ಛೆ : ಪೀರಿಯಡ್ಸ್ ಸಂದರ್ಭದಲ್ಲಿ ಸೆಕ್ಸ್ ಬಗ್ಗೆ ನೀವು ಯೋಚಿಸುವ ರೀತಿಯಲ್ಲಿಯೇ ಸಂಗಾತಿ ಕೂಡ ಯೋಚಿಸುತ್ತಾನೆಂದೇನಿಲ್ಲ. ಹಾಗಾಗಿ ಸಂಗಾತಿಯ ಜೊತೆ ನೀವು ಮನಬಿಚ್ಚಿ ಮಾತನಾಡಬಹುದು.

ಅಸ್ವಚ್ಛತೆಯ ಚಿಂತೆ ಬೇಡ : ಬಹಳಷ್ಟು ಮಹಿಳೆಯರು ಪೀರಿಯಡ್ಸ್ ಸಂದರ್ಭದಲ್ಲಿ ಸಮಾಗಮ ನಡೆಸುವುದರಿಂದ ತಮ್ಮ ಹಾಸಿಗೆ ಗಲೀಜಾಗುತ್ತದೆ ಎಂದು ಭಾವಿಸುತ್ತಾರೆ. ಈ ಬಗ್ಗೆ  ಒಬ್ಬ ಮಹಿಳೆ ಹೀಗೆ ಹೇಳುತ್ತಾರೆ, ನನ್ನ ಮದುವೆಯಾಗಿ 8 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನಾನು ಈಗಲೂ ಪೀರಿಯಡ್ಸ್ ಸೆಕ್ಸ್ ನ್ನು ಎಂಜಾಯ್‌ ಮಾಡುತ್ತೇನೆ ಎಂದು ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ