ಇಂದು ಮಹಾನಗರಗಳಲ್ಲಿ ವಾಸಿಸುವ ಯುವಜನತೆ ಹಲವು ವ್ಯಾಯಾಮಗಳ ಮೂಲಕ ತಮ್ಮನ್ನು ತಾವು ಪರ್ಫೆಕ್ಟ್ ಫಿಟ್ ಆಗಿರಿಸಿಕೊಳ್ಳಲು ಹಲವಾರು ಪ್ರಯಾಸಗಳನ್ನು ಮಾಡುತ್ತಿದೆ. ಜಿಮ್ ಮತ್ತು ಪಾರ್ಕುಗಳಲ್ಲಿ ಹೆಚ್ಚುತ್ತಿರುವ ಅವರ ಜನಸಂದಣಿ ಇದನ್ನು ಸೂಚಿಸುತ್ತದೆ. ಆದರೆ ಎಲ್ಲರೂ ಇದೇ ತರಹ ಇರುವುದಿಲ್ಲ.`ನಾನಂತೂ ಸರಿಯಾಗಿದ್ದೀನಿ, ತಿಂದದ್ದು ಚೆನ್ನಾಗಿ ಜೀರ್ಣವಾಗುತ್ತದೆ, ಹಾಯಾಗಿ ನಿದ್ದೆ ಬರುತ್ತದೆ. ಹಾಗಿರುವಾಗ ಅಷ್ಟೆಲ್ಲ ಕಷ್ಟಪಟ್ಟು ಬೆವರುಹರಿಸಿ ವ್ಯಾಯಾಮ, ಆಟೋಟಗಳಲ್ಲಿ ಪಾಲ್ಗೊಳ್ಳಬೇಕಾದ ಅಗತ್ಯವೇನು?' ಹೀಗೆ, ವಿತಂಡವಾದ ಮಾಡುವ ಒಂದು ವಿಲಕ್ಷಣ ತಂಡವೇ ಇದೆ. ಇಂಥ ಮಂದಿ ಮುಂದೆ ಏನೆಲ್ಲ ಕಷ್ಟಪಡಬೇಕಾಗುತ್ತದೋ ಹೇಳಲಾಗದು. ಇಂಥವರು ತಮ್ಮ ಆಹಾರದ ವಿಷಯದಲ್ಲೂ ಅಷ್ಟೇ ನಿರ್ಲಕ್ಷ್ಯ ವಹಿಸುತ್ತಾರೆ, ಅತ್ತ ಹೆಲ್ದಿ ಡಯೆಟ್‌ ಗೂ ಮಹತ್ವ ಕೊಡುವುದಿಲ್ಲ, ಇತ್ತ ವ್ಯಾಯಾಮದ ಗೊಡವೆಯೂ ಇರುವುದಿಲ್ಲ.

ವ್ಯಾಯಾಮ ಎಂದರೆ ಅಲರ್ಜಿ

ಎಕ್ಸ್ ಪರ್ಟ್ಸ್ ಹೇಳುವ ಪ್ರಕಾರ, ಇಂದು ತೆಳುಕಾಯ ಅಥವಾ ಆರೋಗ್ಯಕರವಾಗಿ ಕಂಡುಬರುವ ಇಂಥ ಯುವಜನತೆ, ಮುಂದೆ ಭವಿಷ್ಯದಲ್ಲೂ ಹಾಗೆಯೇ ಇರುತ್ತಾರೆ ಎಂದೇನೂ ಹೇಳಲಾಗದು. ಸಾಮಾನ್ಯವಾಗಿ ಕಂಡುಬರುವ ವಿಚಾರವೆಂದರೆ ಹಿಂದೆ ಸ್ಲಿಮ್ ಟ್ರಿಮ್ ಆಗಿದ್ದ ಜನ, ಮುಂದೆ ದಪ್ಪ ಆಗಿ ಬೊಜ್ಜು ಹೊಂದಬಹುದು ಅಥವಾ ಬೇರಾವುದೇ ಬಗೆಯ ರೋಗಗಳಿಗೆ ತುತ್ತಾಗಬಹುದು. ಆದ್ದರಿಂದ ಇಂಥ ಮಂದಿ ವ್ಯಾಯಾಮದಿಂದ ತಮಗೇನು ಲಾಭ ಎಂಬ ವಿತಂಡವಾದ ಬಿಟ್ಟುಬಿಡುವುದೇ ಸರಿ.

ಫಿಟ್‌ ನೆಸ್‌ ಎಕ್ಸ್ ಪರ್ಟ್ಸ್ ಪ್ರಕಾರ, ಯಾರು ತೆಳುಕಾಯ ಹೊಂದಿದ್ದಾರೋ ಅವರು 100% ಪರಿಪೂರ್ಣ ಆರೋಗ್ಯವಂತರೆಂದು ಹೇಳಲಾಗದು. ಯೌವನವನ್ನು ಮುಂದಿನ ಎಷ್ಟೋ ವರ್ಷ ಹಾಗೇ ಉಳಿಸಿಕೊಳ್ಳಲು ಹಾಗೂ ರೋಗಗಳನ್ನು ದೂರವಿರಿಸಲು ವ್ಯಾಯಾಮ ಅತ್ಯುತ್ತಮ ಸಾಧನವಾಗಿದೆ.

ವಾಕಿಂಗ್‌, ಬ್ರಿಸ್ಕ್ ವಾಕ್‌, ಜಾಗಿಂಗ್‌, ಸ್ವಿಮ್ಮಿಂಗ್‌, ಸ್ಕಿಪ್ಪಿಂಗ್‌, ವ್ಯಾಯಾಮ, ಯೋಗಾಭ್ಯಾಸ.... ಎಲ್ಲರಿಗೂ ಒಳ್ಳೆಯದೇ. ಇದನ್ನು ಇಂಥ ವಯಸ್ಸಿನವರೇ ಮಾಡಬೇಕು ಎಂಬ ನಿರ್ಬಂಧವಿಲ್ಲ. ಈ ಎಲ್ಲಾ ವ್ಯಾಯಾಮಗಳನ್ನೂ ಕಿಶೋರಾವಸ್ಥೆಯಿಂದಲೇ ರೂಢಿಸಿಕೊಂಡುಬಿಟ್ಟರೆ, ಮುಂದೆ ಜೀವನಪರ್ಯಂತ ಅದು ಆರಾಮ ನೀಡುತ್ತದೆ, ಭವಿಷ್ಯದಲ್ಲಿ ಹೆಚ್ಚಿನ ಲಾಭವಿದೆ.

ಯೌವನದಲ್ಲೇ ಕಾಡುವ ಹೃದ್ರೋಗಗಳು

ಹಿಂದೆಲ್ಲ ಕೇವಲ 50-60 ವಯಸ್ಸಿನವರು ಮಾತ್ರವೇ ಹೃದ್ರೋಗಗಳಿಗೆ ಈಡಾಗುತ್ತಿದ್ದರು. ಆಗೆಲ್ಲ ತುಂಬು ಯೌವನದ ಜನತೆಗೆ ಹೃದ್ರೋಗ ಕಾಡಬಹುದು ಎಂಬ ಪರಿಕಲ್ಪನೆಯೂ ಇರುತ್ತಿರಲಿಲ್ಲ. ಮುಖ್ಯವಾಗಿ ಅಂದಿನ ಕಾಲದಲ್ಲಿ ಆಹಾರ ಅಷ್ಟು ಪೌಷ್ಟಿಕವಾಗಿ ಇರುತ್ತಿತ್ತು. ಆದರೆ ಕಲಬೆರಕೆಯೇ ಪ್ರಧಾನವಾಗಿರುವ ಇಂದಿನ ಆಹಾರದಲ್ಲಿ ಏನನ್ನು ತಾನೇ ಒಳ್ಳೆಯದನ್ನು ಬಯಸಲು ಸಾಧ್ಯ?

ಆದರೆ ಇಂದಿನ ಆಧುನಿಕ ಯುಗದಲ್ಲಿ ಹೆಲ್ದಿ ಡಯೆಟ್‌ ಹಾಗೂ ವ್ಯಾಯಾಮವನ್ನು ನಿರ್ಲಕ್ಷಿಸುವ ಯುವಜನತೆ 30ರ ಹರೆಯದಲ್ಲೇ ಹೃದ್ರೋಗಗಳಿಗೆ ತುತ್ತಾಗುವ ಎಲ್ಲಾ ಸಾಧ್ಯತೆಗಳೂ ಉಂಟು.

ಇಂದಿನ ಆಧುನಿಕ ವೈದ್ಯಕೀಯದ ಪ್ರಕಾರ, ರಾತ್ರಿ ನಿದ್ರಿಸುವಾಗ ಅತಿಯಾಗಿ ಬೆವರುವಿಕೆ, ಬಹಳ ಸುಸ್ತು ಸಂಕಟ ಅನುಭವಿಸುವುದು, ಎದೆಯಲ್ಲಿ ಕ್ರಮೇಣ ನೋವು ಹೆಚ್ಚಾಗುವಿಕೆ..... ಇತ್ಯಾದಿಗಳನ್ನು ಕೇಲವು ಹಾರ್ಮೋನ್‌ ಇಂಬ್ಯಾಲೆನ್ಸ್ ಎಂದು ತಳ್ಳಿಹಾಕುವಂತಿಲ್ಲ. ಈ ಲಕ್ಷಣ ಕಾಣಿಸಿಕೊಂಡ ಕೂಡಲೇ ಅಗತ್ಯವಾಗಿ ಸೂಕ್ತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ