ಇಂದಿನ ಅತ್ಯಂತ ವ್ಯಸ್ತ ಜೀವನಶೈಲಿಯ ನಮ್ಮ ಡಯೆಟ್‌ ನಲ್ಲಿ ಪ್ರೋಸೆಸ್ಡ್ ಅಂದರೆ ಸಂಸ್ಕರಿತ ಆಹಾರಗಳ ಸೇವನೆ ಅಧಿಕಗೊಂಡಿದೆ. ನಾವು ನಮ್ಮ ಆಹಾರದಲ್ಲಿ ಫೈಬರ್‌ ಅಂದರೆ ನಾರಿನಂಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಡಯೆಟರಿ ಫೈಬರ್ ಅಂದರೇನು, ನಮ್ಮನ್ನು ಫಿಟ್‌ ಆಗಿಡಲು ಫೈಬರ್‌ ನ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಡಯೆಟರಿ ಫೈಬರ್

ಆಹಾರದಲ್ಲಿ ಲಭ್ಯವಿರುವ ಕಾರ್ಬೊಹೈಡ್ರೇಟ್‌ ಆಗಿದ್ದು, ಅದು ನಮ್ಮ ಪಚನಾಂಗದಲ್ಲಿರುವ ಕಿಣ್ವಗಳಿಂದ ಪಚನವಾಗಲಾರದು. ಆದಾಗ್ಯೂ ನಮ್ಮನ್ನು ಆರೋಗ್ಯದಿಂದಿಡಲು ಇದರ ಪಾತ್ರ ಮುಖ್ಯವಾಗಿದೆ. ಒಂದು ವೇಳೆ ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇದ್ದರೆ, ನಮಗೆ ಹಲವು ರೋಗಗಳಿಂದ ರಕ್ಷಣೆ ದೊರಕುತ್ತದೆ. ನಾರಿನಂಶದ ಕುರಿತಂತೆ ಇಲ್ಲಿದೆ ವಿವರವಾದ ಮಾಹಿತಿ :

ಆರೋಗ್ಯಕರ ಪಚನಾಂಗಕ್ಕೆ

ನಮ್ಮ ದೇಹದಲ್ಲಿ ನಾರಿನಂಶದ ಪ್ರಾಥಮಿಕ ಕೆಲಸಿಂದರೆ, ಆರೋಗ್ಯಕರ ಪಚನ ್ಯಸ್ಥೆಯನ್ನು ದೃಢಪಡಿಸುದು. ಇತರೆ ಕಾರ್ಬೋಸ್‌ ಗೆ ತದ್ವಿರುದ್ಧವೆಂಬಂತೆ ಫೈಬರ್‌ ನಮ್ಮ ದೇಹದಲ್ಲಿ ಪಚನವಾಗುವುದಿಲ್ಲ. ಅದು ನೀರನ್ನು ಹೀರಿಕೊಂಡು ಸ್ಪಂಜ್‌ ನಂತೆ ವರ್ತಿಸುತ್ತದೆ. ನೀರಿನಲ್ಲಿ ಕರಗಲಾರದಂತಹ ಫೈಬರ್‌ ಮಲವನ್ನು ಮೃದುಗೊಳಿಸುತ್ತದೆ. ಹೀಗಾಗಿ ಕರುಳಿನ ಕಾರ್ಯವೈಖರಿ ನಿಯಮಿತವಾಗಿರುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಉನ್ನತ ಗುಣಮಟ್ಟದ ಫೈಬರ್ ಡಯೆಟ್‌ ಹೆಮರೈಸ್ಡ್, ಇರ್ರಿಟೆಬಲ್ ಡಿಸೀಸ್‌ ಗಳಂತಹ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಫೈಬರ್‌ ನಮ್ಮ ಆಹಾರದಲ್ಲಿರುವ ಕೊಸ್ಟ್ರಾಲ್ ನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತದೆ. ಅದು ತಾನೂ ಸ್ವತಃ ಪಚನಗೊಳ್ಳದೆ ಕೊಲೆಸ್ಟ್ರಾಲ್ ನ ಪಚನಗೊಳ್ಳುವಿಕೆಯನ್ನು ತಡೆಯುತ್ತದೆ. ಇದರ ಎರಡನೇ ಪ್ರಕ್ರಿಯೆಯೆಂದರೆ, ರಕ್ತದಲ್ಲಿ ಬೈಲ್ ‌ಸಾಲ್ಟ್ (ಪಿತ್ತದ ಸೋಡಿಯಂ ಗ್ಲೈಕೊಕೊಲೆಟ್‌ ಹಾಗೂ ಟೆರಾಕೊಲೆಟ್‌ ಕ್ಷಾರ ಲವಣ) ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಪುನಃ ಅದರ ಹೀರುವಿಕೆಯನ್ನು ತಡೆಯುವುದು. ಈ ಕಾರಣದಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಮಾಣ ಕಡಿಮೆಗೊಳ್ಳುತ್ತದೆ. ಕರಗಬಲ್ಲ ನಾರಿನಂಶ ಓಟ್‌ ಬ್ರಾನ್‌, ಓಟ್‌ ಮೀಲ್‌, ಬೀನ್ಸ್, ಬಟಾಣಿ, ಅಕ್ಕಿತೌಡು, ಹಣ್ಣು ಮುಂತಾದವುಗಳಲ್ಲಿ ಕಂಡುಬರುತ್ತದೆ. ನಾರಿನಂಶವಿರುವ ಆಹಾರದಿಂದ ನಮಗೆ ಹೃದ್ರೋಗದಿಂದ ರಕ್ಷಣೆ ದೊರೆಯುತ್ತದೆ.

ಮಧುಮೇಹ ನಿಯಂತ್ರಣದಲ್ಲಿ ಸಹಾಯಕ

ನಾರಿನಂಶವುಳ್ಳ ಆಹಾರ ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಕಡಿಮೆಯಾಗುತ್ತದೆ. ಕ್ಯಾನ್ಸರ್‌ ನಿಂದ ರಕ್ಷಣೆ ಕ್ಯಾನ್ಸರಿನ ರಕ್ಷಣೆಯಲ್ಲಿ ಸಹಾಯಕ ಫೈಟೊ ಕೆಮಿಕಲ್ಸ್ ಎಂಬ ಅಂಶ ನಾರಿನಂಶವುಳ್ಳ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ನಾರಿನಂಶ ಕ್ಯಾನ್ಸರ್‌ ಉಂಟು ಮಾಡುವ ಕೆಲವು ಪದಾರ್ಥಗಳ ಡೀಟಾಕ್ಸಿಫಿಕೇಶನ್‌ ಮಾಡುವಲ್ಲಿ ಸಹಾಯಕವಾಗಿದೆ.

ಲೋ ಫೈಬರ್ಯುಕ್ತ ಡಯೆಟ್

ಕ್ಯಾನ್ಸರ್‌ ನಿಂದ ರಕ್ಷಣೆ ಮಾಡುವಲ್ಲಿ ಸಹಾಯಕವಾಗಿದೆ.

ತೂಕ ಕಡಿಮೆಗೊಳಿಸುವುದು ಸಾಮಾನ್ಯವಾಗಿ ನಾರಿನಂಶವುಳ್ಳ ಆಹಾರ ಪದಾರ್ಥಗಳು ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ. ಏಕೆಂದರೆ ಇನ್ನು ಹೆಚ್ಚು ಹೊತ್ತಿನ ತನಕ ಅಗಿಯಬೇಕಾಗುತ್ತದೆ. ಅಲ್ಲಿಯವರೆಗೆ ನಮ್ಮ ದೇಹಕ್ಕೆ ಸಂತೃಪ್ತಿಯ ಸಂಕೇತ ದೊರೆಯುತ್ತದೆ. ಜೊತೆಗೆ, ನಾರಿನಂಶದ ಆಹಾರಗಳು ದೀರ್ಘ ಅವಧಿಯ ತನಕ ನಮಗೆ ಸಂತೃಪ್ತಿ ನೀಡುತ್ತವೆ. ಈ ಆಹಾರ ಪದಾರ್ಥಗಳಲ್ಲಿ ಶಕ್ತಿಯ ಘನತ್ವ ಕಡಿಮೆಯಾಗಿರುವ ಕಾರಣದಿಂದ ಸಮಾನ ಪ್ರಮಾಣದಲ್ಲಿ ತಿನ್ನಬಹುದಾದ ಪದಾರ್ಥಗಳೆಂದರೆ ಹೋಲ್ ವೀಟ್‌ ಬ್ರೆಡ್‌, ಹೋಲ್ ‌ವೀಟ್‌ ಪಾಸ್ತಾ, ಬ್ರೌನ್‌ ರೈಸ್‌, ಎಲೆಕೋಸು, ಬೀಟ್‌ ರೂಟ್‌, ಕ್ಯಾರೆಟ್‌, ಹೂಕೋಸು ಹಾಗೂ ಸೇಬಿನ ಸಿಪ್ಪೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ