ಗರ್ಲ್ ಯೂ ಆರ್‌ ಮೈ ಛಮ್ಮಕ್‌ ಛಲ್ಲೋ ....' ಹಾಡಿನಲ್ಲಿ ಕರೀನಾ ಕಪೂರ್‌ ಅಚ್ಚಗೆಂಪು ಸೀರೆಯಲ್ಲಿ ತನ್ನ ಸೆಕ್ಸೀ ದೇಹದ ಉಬ್ಬು ತಗ್ಗುಗಳನ್ನು ಕುಣಿಸುವಾಗ, ಯಾವ ಹರೆಯದ ಹುಡುಗಿಗೆ ತಾನೇ ಅವಳಂಥ ಪರ್ಫೆಕ್ಟ್ ಫಿಗರ್‌ ಹೊಂದಲು ಇಷ್ಟವಾಗದು? ಇದೇ ತರಹ `ಮುನ್ನಿ ಬದ್‌ ನಾಮ್ ಹುಯಿ....' ಐಟಂ ಸಾಂಗ್‌ ನಲ್ಲಿ ಮಲೈಕಾ ಅರೋರಾ ಖಾನ್‌ ತನ್ನ ಸಿಂಹಕಟಿಯನ್ನು ಬಳುಕಿಸುತ್ತಾ ಕುಣಿಯತ್ತಿದ್ದರೆ, ಅವಳಂಥ 36-24-36 ಫಿಗರ್‌ ಪಡೆಯಲು ಯಾವ ತರುಣಿ ಬಯಸಲಾರಳು? ಆದರೆ ಇಂಥ ಅದ್ಭುತ ಮೈಕಟ್ಟನ್ನು ಹೊಂದಲು, ಅದನ್ನು ಮೇಂಟೇನ್‌ ಮಾಡಲು ಈ ಸಿನಿ ತಾರೆಯರು ಎಷ್ಟು ಕಷ್ಟಪಡುತ್ತಾರೆ ಎಂಬುದು ಪ್ರೇಕ್ಷಕರಿಗೆ ಸುಲಭವಾಗಿ ಗೊತ್ತಾಗದು.

ಒಂದು ಸಿನಿಮಾದ ನಾಯಕಿ ಎಂದಾಕ್ಷಣ, ಅವಳ ಆಯ್ಕೆಗೆ ಮೂಲಕಾರಣವೇ ಅವಳ ಪರ್ಫೆಕ್ಟ್ ಫಿಗರ್‌ ಆಗಿರುತ್ತದೆ. ಈ ಗ್ಲಾಮರಸ್ ಪ್ರಪಂಚದಲ್ಲಿ ನಟ ಅಥವಾ ನಟಿ ಯಾರೇ ಇರಲಿ, ಅವರ ಪ್ರಾಥಮಿಕ ಅವಶ್ಯಕತೆ ಎಂದರೆ ತಮ್ಮನ್ನು ತಾವು ಪರ್ಫೆಕ್ಟ್ ಆಗಿ ಮೇಂಟೇನ್‌ ಮಾಡಿಕೊಂಡಿರಬೇಕು ಎಂಬುದು. ಇಲ್ಲಿ ಯಾವುದು ಬೆಸ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೋ ಅದು ಮಾತ್ರ ಚೆನ್ನಾಗಿ ಸೇಲ್ ಆಗುತ್ತದೆ. ಹೀಗಾಗಿ ತಮ್ಮ ಬಿಡುವಿಲ್ಲದ ಇಡೀ ದಿನದ ಕಾರ್ಯಕಲಾಪಗಳ ಮಧ್ಯೆ ತಮ್ಮನ್ನು ಸದಾ ಫಿಟ್‌ ಆಗಿರಿಸಿಕೊಳ್ಳಲು, ಈ ನಾಯಕಿಯರು ಪಡುವ ಕಷ್ಟಗಳು ಅಷ್ಟಿಷ್ಟಲ್ಲ.

ಇಷ್ಟು ಮಾತ್ರವಲ್ಲ, ಈ ನಾಯಕಿಯರಿಗೆ ತಮ್ಮ ಪಾತ್ರದ ಅನುಸಾರ, ಒಮ್ಮೊಮ್ಮೆ ತಮ್ಮ ದೇಹವನ್ನು ಬಹಳ ಕುಗ್ಗಿಸಬೇಕಾಗುತ್ತದೆ ಅಥವಾ ಅಪರೂಪಕ್ಕೆ ಹಿಗ್ಗಿಸಬೇಕಾಗುತ್ತದೆ. ಇವೆರಡೂ ಸುಲಭ ಕೆಲಸಗಳಲ್ಲ ಎಂಬುದು ತಿಳಿದ ವಿಚಾರ.

ಈ ನಟಿಯರು ಸಾಮಾನ್ಯವಾಗಿ ಸಂದರ್ಶನಗಳಲ್ಲಿ ತಮ್ಮ ಈ ಬಾಡಿ ಫಿಟ್ನೆಸ್‌ ನ ರಹಸ್ಯವನ್ನು ಪ್ರಶಂಸಕರೊಂದಿಗೆ ಹಂಚಿಕೊಳ್ಳ ಬಯಸುತ್ತಾರೆ. ಅವನ್ನು ಅನುಸರಿಸುವುದು ಅಂಥ ಕಷ್ಟಕರವೇನಲ್ಲ. ನಟಿ ಮಲೈಕಾ ಅರೋರಾ ತನ್ನ ಫಿಟ್ನೆಸ್‌ ಹಾಗೂ ಡಯೆಟ್ ಪ್ಲ್ಯಾನ್‌ ಕುರಿತು ಹೀಗೆ ಹೇಳುತ್ತಾಳೆ, ``ನನ್ನ ಫಿಗರ್‌ ಮೇಂಟೆನೆನ್ಸ್ ಗಾಗಿ ನಾನೆಂದೂ ಉಪವಾಸ ಮಾಡಲಾರೆ. ಪೌಷ್ಟಿಕವಾದ ಎಲ್ಲಾ ಆಹಾರ ಸೇವಿಸಲು ಇಷ್ಟಪಡುತ್ತೇನೆ.

``ಆದರೆ ಒಂದು ಲಿಮಿಟ್‌ ನಲ್ಲಿ ತಿನ್ನುತ್ತೇನೆ ಎಂಬುದು ಮುಖ್ಯ. ನಾನು ಹೆಚ್ಚಾಗಿ ಹುರಿದ ಕರಿದ ಪದಾರ್ಥಗಳನ್ನು ತಿನ್ನುವುದೇ ಇಲ್ಲ. ವಾರದಲ್ಲಿ 6 ದಿನ ನಾನು ಸಮತೋಲಿತ ಆಹಾರವನ್ನೇ ಸೇವಿಸುತ್ತೇನೆ, ಆದರೆ ಭಾನುವಾರ ಮಾತ್ರ ಮನ ಬಯಸಿದ್ದನ್ನು ಹೊಟ್ಟೆ ತುಂಬಾ ತಿನ್ನುತ್ತೇನೆ.

``ಅದೇ ತರಹ ನಾನು ಆಗಾಗ ಧಾರಾಳವಾಗಿ ನೀರು ಕುಡಿಯುತ್ತಿರುತ್ತೇನೆ. ನೀವು ಎಷ್ಟೇ ಪೌಷ್ಟಿಕ ಆಹಾರ ಸೇವಿಸಿದರೂ, ಎಲ್ಲಿಯವರೆಗೂ ನೀವು ಧಾರಾಳವಾಗಿ ನೀರು ಕುಡಿಯುವುದಿಲ್ಲವೋ, ನಿಮ್ಮ ಪೌಷ್ಟಿಕ ಆಹಾರ ಅಪೂರ್ಣವೆಂದೇ ಅರ್ಥ.''

ಸಿಂಹಕಟಿಯ ರಹಸ್ಯ

``ಪ್ರತಿದಿನ ಬೆಳಗ್ಗೆ ನಾನು 1 ಗ್ಲಾಸ್‌ ಬಿಸಿ ನೀರಿಗೆ ನಿಂಬೆರಸ, ಜೇನು ಬೆರೆಸಿ ಕುಡಿಯುತ್ತೇನೆ. ಬ್ರೇಕ್‌ ಫಾಸ್ಟ್ ಗಾಗಿ 1 ಸಣ್ಣ ಬಟ್ಟಲು ಹಣ್ಣಿನ ಹೋಳು (ಆಯಾ ಕಾಲದಲ್ಲಿ ಲಭ್ಯವಿರುವ) ಹಾಗೂ ಜೊತೆಯಲ್ಲಿ ಇಡ್ಲಿ, ಅವಲಕ್ಕಿ, ಉಪ್ಪಿಟ್ಟು ಅಥವಾ ಬೇಯಿಸಿದ ಕಾಳಿನ ನುಚ್ಚು ಇತ್ಯಾದಿ ತೆಗೆದುಕೊಳ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ